ಅರೆಮಲ್ಲಾಪುರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಬೆಡ್ ವಿತರಣೆ: ಎಸ್ಎಫ್ಐ ಮನವಿಗೆ ಬಿಸಿಎಮ್ ಇಲಾಖೆ ಸ್ಪಂದನೆ

ರಾಣೇಬೆನ್ನೂರ: ತಾಲ್ಲೂಕಿನ ಅರೆಮಲ್ಲಾಪುರ ಗ್ರಾಮದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಗಾಗಿ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ರಾಣೇಬೆನ್ನೂರ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಇತ್ತೀಚೆಗೆ ವಸತಿ ನಿಲಯದ ಮೇಲ್ವಿಚಾರಕರಿಗೆ ವಿದ್ಯಾರ್ಥಿಗಳ ಸಭೆ ಮಾಡಿ ಮನವಿ ಪತ್ರ ಸಲ್ಲಿಸಿದ್ದರು. ಹಾಸ್ಟೆಲ್

ವಿದ್ಯಾರ್ಥಿಗಳ ಪರವಾಗಿ ಎಸ್ಎಫ್ಐ ಮನವಿಗೆ ವಸತಿ ನಿಲಯದ ಮೇಲ್ವಿಚಾರಕರು ಸ್ಪಂದಿಸಿ ವಸತಿ ನಿಲಯದಲ್ಲಿ ಶೌಚಾಲಯ, ಸ್ನಾನದ ಕೊಠಡಿ, ಅಡುಗೆ ಕೊಠಡಿ, ವಸತಿ ಕೊಠಡಿಗಳನ್ನು ಸ್ವಚ್ಛತೆ ಮಾಡಿಸಿ ಎಲ್ಲಾ ವಿದ್ಯಾರ್ಥಿಗಳ ಪ್ರತಿ ರೂಮ್ ಗೂ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದ್ದಾರೆ. ಬೆಡ್ ಕೊರತೆ ಇದ್ದು ತ್ವರಿತವಾಗಿ ಸ್ಪಂದಿಸುವಂತೆ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಪ್ರತಿ ವಿದ್ಯಾರ್ಥಿಗಳಿಗೂ ಬೆಡ್ ವಿತರಣೆ ಮಾಡಲಾಗಿದ್ದು ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಡೆಸಿದ ಹೋರಾಟ ಜಯ ಸಿಕ್ಕಿದೆ ಎಂದು ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಸಂಚಾಲಕ ಅರುಣ್ ನಾಗವತ್ ಹೇಳಿದ್ದಾರೆ.

ಇದನ್ನೂ ಓದಿ: ದಿಕ್ಕುಗಾಣದ ಜನತೆಯೂ ದಾರಿ ತೋರದ ಪ್ರಹಸನವೂ

ವಸತಿ ನಿಲಯದ ಮೂಲಭೂತ ಸೌಲಭ್ಯಗಳಿಗಾಗಿ ಸಲ್ಲಿಸಿದ ಮನವಿಗೆ ವಸತಿ ನಿಲಯದ ಮೇಲ್ವಿಚಾರಕರು ಶೀಘ್ರವಾಗಿ ಸ್ಪಂದಿಸಿದ್ದಾರೆ. ಇನ್ನೂ ಉಳಿದ ಎಲ್ಲಾ ಸಮಸ್ಯೆಗಳಿಗೂ ಮೇಲಾಧಿಕಾರಿಗಳು ಈತ ಗಮನ ಹರಿಸಬೇಕು. ಆದಷ್ಟು ಶೀಘ್ರವಾಗಿ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಎಲ್ಲಾ ಹಾಸ್ಟೆಲ್ ಗಳಿಗೂ ಸ್ವಂತ ಕಟ್ಟಡ ಒದಗಿಸಲು, ಆಹಾರ ಭತ್ಯೆ ಹೆಚ್ಚಿಸಲು ಮುಖ್ಯಮಂತ್ರಿಗಳು, ಸಚಿವರು, ಶಾಸಕರ ಮುಂದಾಗಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ತಾಲ್ಲೂಕು ಸಮಿತಿ ಒತ್ತಾಯಿಸುತ್ತದೆ ಎಸ್ಎಫ್ಐ ಕಾರ್ಯದರ್ಶಿ ಕೃಷ್ಣ ನಾಯ್ಕ್ ಹೇಳಿದರು.

ಈ ಸಂದರ್ಭದಲ್ಲಿ ಸಚಿನ್ ಎನ್ ಎಸ್, ಬಸವರಾಜ ಕೆ, ಕೃಷ್ಣ ಎಚ್, ಭರತ್ ಎಸ್, ಪ್ರತೀಕ ಎಸ್ ಆರ್,  ಯೋಗೀಶ್, ಮಾಲತೇಶ, ಪ್ರವೀಣ್, ಭರಮಪ್ಪ, ಅಭಿಶೇಕ ಸೇರಿದಂತೆ ಅನೇಕ ವಿದ್ಯಾರ್ಥಿಗಳು ನೀಡಿದ ಸೌಲಭ್ಯಗಳನ್ನು ಸ್ವೀಕರಿಸಿದರು.

ಇದನ್ನೂ ನೋಡಿ: ಯುಡಿಆರ್‌ನಲ್ಲಿ ಹೂತ ಸತ್ಯಗಳು, ಎಫ್‌ಐಆರ್‌ನಲ್ಲಿ ಹೊರಬರಲಿವೆಯೇ? Janashakthi Media

Donate Janashakthi Media

Leave a Reply

Your email address will not be published. Required fields are marked *