ಬೆಂಗಳೂರು: ಪರಿಸರವನ್ನು ಹಸಿರೀಕರಣ ಮಾಡುತ್ತೇವೆ, ಗ್ರೀನ್ ಬೆಂಗಳೂರು ಮಾಡುತ್ತೇವೆ ಎಂದೆಲ್ಲಾ ಎಂದಿದ್ದ ಬಿಬಿಎಂಪಿಯೇ ಪರಿಸರಕ್ಕೆ ಕಂಟಕವನ್ನುಂಟು ಮಾಡುವಂತಾಗಿದೆ.ಬ್ಯಾನ್ ಮಾಡಲಾದ “ದುಬೈ ಗಿಡ”ವನ್ನು ನೆಡುವ ಮೂಲಕ ಅರಣ್ಯ ಇಲಾಖೆ ಮತ್ತು ಬಿಬಿಎಂಪಿ ಎಡವಟ್ಟು ಮಾಡಿಕೊಂಡಿವೆ. ಬಿಬಿಎಂಪಿಯ
ಪರಿಸರ ಹಾಗೂ ಮಾನವನ ಆರೋಗ್ಯಕ್ಕೆ ಮಾರಕವಾಗುವ ಕೋನೋ ಕಾರ್ಪಸ್ ಎಂಬ ಗಿಡಗಳನ್ನು ರಸ್ತೆಬದಿ ನೆಡಲಾಗಿದೆ. ಆಕ್ಸಿಜನ್ ಬದಲು ಕಾರ್ಬನ್ ಉತ್ಪಾದಿಸುವ ಈ ಸಸ್ಯಪ್ರಭೇದವನ್ನು ಈಗಾಗಲೇ ಹಲವು ದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ. ದುಬೈ ಗಿಡ ಎಂತಲೂ ಕರೆಯಲ್ಪಡುವ ಈ ಸಸ್ಯ, ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣವಾಗುವುದಲ್ಲದೇ, ಮನುಷ್ಯರಿಗೆ ಆಸ್ತಮಾ, ಉಸಿರಾಟದ ಸಮಸ್ಯೆಗಳನ್ನ ತಂದಿಡುತ್ತದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಇಂದು ಮತ್ತೆ ನ್ಯಾಯಾಲಯದ ಮುಂದೆ
ಸ್ಥಳೀಯ ಕೀಟ ಪಕ್ಷ ಹಾಗೂ ಪ್ರಾಣಿಗಳ ಆರೋಗ್ಯಕ್ಕೂ ಹಾನಿಕಾರಕವಾಗಿದೆ. ಚಳಿಗಾಲದಲ್ಲಿ ಈ ಗಿಡ- ಮರದಿಂದ ಹೆಚ್ಚು ದುಷ್ಟಪರಿಣಾಮವಾಗುತ್ತದೆ. ಅತಿ ಹೆಚ್ಚು ಬೇರು ಬಿಡುವುದರಿಂದ ನೆಲದಡಿಯಲ್ಲಿ ಕೇಬಲ್ ಹಾಗೂ ಕೊಳವೆ ಮಾರ್ಗಗಳಿಗೂ ಅಧಿಕ ಹಾನಿಯಾಗುತ್ತದೆ.
ನಮ್ಮ ದೇಶದ ಗುಜರಾತ್, ತೆಲಂಗಾಣದಲ್ಲೂ ಈ ಗಿಡಗಳನ್ನು ನಿಷೇಧಿಸಲಾಗಿದೆ. ಆದರೆ, ಬಿಬಿಎಂಪಿ ಕೆಂಗೇರಿ ಮುಖ್ಯರಸ್ತೆ, ಯಲಹಂಕ ಸೇರಿದಂತೆ ಹಲವೆಡೆ ಬಿಬಿಎಂಪಿ ರಸ್ತೆಯುದ್ದಕ್ಕೂ ಈ ಗಿಡಗಳನ್ನು ನೆಟ್ಟಿದೆ. ಈ ಮೂಲಕ ಉಸಿರು ನೀಡಬೇಕಿದ್ದ ಹಸಿರೇ ಕುತ್ತು ತುರುವಂತಾಗಿದೆ.
ಇದನ್ನೂ ನೋಡಿ: ಕದವ ತಟ್ಟಿದರು ಕವಿ – ಸು.ರಂ. ಎಕ್ಕುಂಡಿ, ವಾಚನ Janashakthi Media