ಬಿಬಿಎಂಪಿ ವ್ಯಾಪ್ತಿಯಲ್ಲಿ 94 ಲಕ್ಷ ಮತದಾರರು: ಪರಿಷ್ಕೃತ ಮತದಾರರ ಪಟ್ಟಿ ಪ್ರಕಟ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ 23 ವಿಧಾನಸಭಾ ಕ್ಷೇತ್ರಗಳ ಪರಿಷ್ಕೃತ ಮತದಾರರ ಪಟ್ಟಿ ಬಿಡುಗಡೆಗೊಂಡಿದ್ದು, ಈ ವ್ಯಾಪ್ತಿಯಲ್ಲಿ ಒಟ್ಟು 94,39,416 ಮತದಾರರು ಇದ್ದಾರೆ.

ಮತದಾರರ ವಿವರ:
ಪುರುಷ ಮತದಾರರ ಸಂಖ್ಯೆ: 49,09,042
ಮಹಿಳಾ ಮತದಾರರ ಸಂಖ್ಯೆ: 45,28,728
ಇತರೆ (ಟ್ರಾನ್ಸ್ಜೆಂಡರ್) ಮತದಾರರು: 1,646
ಒಟ್ಟು: 94,39,416

ಜನವರಿ 1, 2021 ರಂತೆ, 93,76,004 ಮತದಾರರು ಮತ್ತು ನವೆಂಬರ್ 8, 2021 ರಂತೆ 94,39,416 ಮತದಾರರಿದ್ದಾರೆ. ಇದುವರೆಗೆ 63,612 ಮತದಾರರು ನೋಂದಾಯಿಸಿಕೊಂಡಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ʻʻಮತದಾರರ ಪಟ್ಟಿ-2022ರ ಚುನಾವಣೆಯ ವಿಶೇಷ ಸಾರಾಂಶದ ಭಾಗವಾಗಿ, ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಮತ್ತು ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಲಾಗಿದೆ. ಯಾವುದೇ ದೋಷಗಳು ಅಥವಾ ಬದಲಾವಣೆಗಳನ್ನು ಮಾಡಬೇಕಾದರೆ ನಾಗರಿಕರು ಪರಿಶೀಲಿಸಬಹುದಾಗಿದೆ. ಎಂದು ಹೇಳಿದ್ದಾರೆ.

ವಿಶೇಷ ಆಯುಕ್ತ(ಆಡಳಿತ) ದಯಾನಂದ ಮಾತನಾಡಿ ʻʻಪರಿಷ್ಕೃತ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಹೆಸರು ಕಾಣೆಯಾಗಿದ್ದಲ್ಲಿ ಮತ್ತೆ ಸೇರಿಸಬಹುದಾಗಿದೆ. ವಿಳಾಸದಲ್ಲಿ ಬದಲಾವಣೆ ಅಥವಾ ಪಟ್ಟಿಯಿಂದ ಯಾರಾದರ ವಿವರವನ್ನು ತೆಗೆದುಹಾಕಬೇಕಾದ್ದಲ್ಲಿ ಸಹ ನವೀಕರಿಸಬಹುದು. ಯಾವುದೇ ಬದಲಾವಣೆಗಳಿಗೆ, ನಾಗರಿಕರು ಭರ್ತಿ ಮಾಡಿದ ನಮೂನೆಗಳೊಂದಿಗೆ ನೋಡಲ್ ಅಧಿಕಾರಿಗಳು ಅಥವಾ ನೋಂದಣಿ ಅಧಿಕಾರಿಗಳು, ಸಹಾಯಕ ಅಧಿಕಾರಿಗಳ ಕಚೇರಿ ಅಥವಾ ಬೂತ್ ಮಟ್ಟದ ಅಧಿಕಾರಿಗಳನ್ನು ಡಿಸೆಂಬರ್ 8, 2021 ರೊಳಗೆ ಸಂಪರ್ಕಿಸಬಹುದುʼʼ ಎಂದು ತಿಳಿಸಿದರು.

ಪರಿಷ್ಕೃತ ಮತದಾರರ ಪಟ್ಟಿಯನ್ನು www.ceokarnataka.kar.nic.in ಮತ್ತು www.bbmp.gov.in ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗಿದೆ. ಮತದಾರರ ಸಹಾಯವಾಣಿ ಆಪ್‌ ಅಥವಾ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ಮೂಲಕವೂ ಬದಲಾವಣೆ ಮಾಡಲು ಅವಕಾಶವಿದೆ ಮತ್ತು ಇ-ಇಪಿಐಸಿ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

Donate Janashakthi Media

Leave a Reply

Your email address will not be published. Required fields are marked *