ಬಿಬಿಸಿ ಇಸ್ರೇಲ್ ಪರವಾಗಿ ಪಕ್ಷಪಾತಿ ವರದಿ ಮಾಡುತ್ತಿದೆ | ಅದೇ ಸಂಸ್ಥೆಯ ಪತ್ರಕರ್ತರಿಂದಲೆ ಆರೋಪ

ಲಂಡನ್: ತಾನು ಕೆಲಸ ಮಾಡುತ್ತಿರುವ ಮಾಧ್ಯಮವು ಪ್ಯಾಲೆಸ್ತೀನೀಯರಿಗಿಂತ ಇಸ್ರೇಲಿಗರ ಜೀವಕ್ಕೆ ಹೆಚ್ಚಿನ ಬೆಲೆಯನ್ನು ನೀಡುತ್ತಿದೆ ಎಂದು ಅಂತಾಷ್ಟ್ರೀಯ ಸುದ್ದಿ ಮಾಧ್ಯಮ ಬಿಬಿಸಿಯಲ್ಲಿ ಕೆಲಸ ಮಾಡುತ್ತಿರುವ ಅನಾಮಧೇಯ ಎಂಟು ಪತ್ರಕರ್ತರು ಹೇಳಿದ್ದಾರೆ. ಖ್ಯಾತ ಮಾಧ್ಯಮ ಅಲ್ ಜಜೀರಾಗೆ ಪತ್ರ ಬರೆದಿರುವ ಈ ಎಂಟು ಪತ್ರಕರ್ತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, “ಇಸ್ರೇಲ್-ಹಮಾಸ್ ಸಂಘರ್ಷದ ಬಗ್ಗೆ BBC ಪಕ್ಷಪಾತದ ವರದಿ ಮಾಡುತ್ತಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪ್ಯಾಲೆಸ್ತೀನ್ ಪ್ರತಿರೋಧ ಪಡೆಯಾದ ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷವನ್ನು ವರದಿ ಮಾಡುವಾಗ ಬಿಬಿಸಿ ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ ಎಂದು ಈ ಪತ್ರಕರ್ತರು ಆರೋಪಿಸಿದ್ದಾರೆ. ಮಾಧ್ಯಮವು ಪ್ಯಾಲೆಸ್ತೀನಿಯನ್ನರಿಗಿಂತ ಇಸ್ರೇಲಿ ಸಂತ್ರಸ್ತರನ್ನು ಮಾನವೀಯಗೊಳಿಸುವಲ್ಲಿ ಹೆಚ್ಚಿನ ಪ್ರಯತ್ನ ಮಾಡುತ್ತದೆ ಮತ್ತು ನಿರ್ಣಾಯಕ ಐತಿಹಾಸಿಕ ಸಂದರ್ಭವನ್ನು ಬಿಟ್ಟುಬಿಡುತ್ತದೆ ಎಂದು ಪತ್ರಕರ್ತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಉತ್ತರಕಾಶಿ ಸುರಂಗ ಅಪಘಾತ: ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚಿಸಿ, ಕಾರ್ಮಿಕರ ಸುರಕ್ಷತೆಯನ್ನು ಖಾತ್ರಿಪಡಿಸಿ: CWFI ಆಗ್ರಹ

ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಹೋಲಿಸಿದರೆ ಉಕ್ರೇನ್‌ನಲ್ಲಿ ರಷ್ಯಾದ ಯುದ್ಧ ಅಪರಾಧಗಳನ್ನು ವರದಿ ಮಾಡುವಲ್ಲಿ ಬಿಬಿಸಿಯ ದ್ವಂದ್ವ ಕಾಣುತ್ತದೆ. BBC ಸಂಪಾದಕೀಯ ನಿಲುವು ಗಾಜಾದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಿಖರವಾಗಿ ಚಿತ್ರಿಸಲು ವಿಫಲವಾಗಿದೆ ಎಂದು ಪತ್ರಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ. ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಹತ್ಯಾಕಾಂಡದಿಂದ ಕನಿಷ್ಠ 6,000 ಮಕ್ಕಳನ್ನು ಒಳಗೊಂಡಂತೆ 14,500 ಪ್ಯಾಲೆಸ್ಟೀನಿಯನ್ನರು ಹತ್ಯೆಗೀಡಾಗಿದ್ದಾರೆ.

ದಕ್ಷಿಣ ಇಸ್ರೇಲ್‌ನ ಮೇಲೆ ಪ್ಯಾಲೇಸ್ತೀನಿ ಪ್ರತಿರೋಧ ಪಡೆ ಹಮಾಸ್ ನಡೆಸಿದ ದಾಳಿಯ ನಂತರ ಇಸ್ರೇಲ್ ಹಮಾಸ್ ವಿರುದ್ಧ ಯುದ್ಧ ಘೋಷಿಸಿತ್ತು. ಹಮಾಸ್‌ನ ಈ ದಾಳಿಯಲ್ಲಿ ಸುಮಾರು 1,200 ಇಸ್ರೇಲಿಗಳು ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ. ಅಲ್ಲದೆ 200 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳಾಗಿ ಹಮಾಸ್ ತೆಗೆದುಕೊಂಡು ಹೋಗಿದೆ.

ಇದನ್ನೂ ಓದಿ: ಎರಡು ವರ್ಷಗಳ ಕಾಲ ಬಂಧನದಲ್ಲಿದ್ದ ಕಾಶ್ಮೀರಿ ಪತ್ರಕರ್ತ ಫಹಾದ್ ಶಾ ಮರಳಿ ಮನೆಗೆ!

ಬಿಬಿಸಿ ಹಮಾಸ್ ಅನ್ನು ಮಾತ್ರವೆ ‍‍ಘರ್ಷಣೆಗೆ ಕಾರಣ ಎಂದು ಬಿಂಬಿಸುತ್ತಿದೆ ಎಂಬವುದನ್ನು ಪತ್ರಕರ್ತರು BBC ಯನ್ನು ಟೀಕಿಸಿದ್ದು, ಹಿಂಸಾಚಾರಕ್ಕೆ ಬಳಸುವ “ಹತ್ಯಾಕಾಂಡ” ಮತ್ತು “ದೌರ್ಜನ್ಯ” ದಂತಹ ಪದಗಳನ್ನು ಪ್ಯಾಲೆಸ್ತೀನಿ ಗುಂಪಿಗೆ ಮಾತ್ರವೆ ಪ್ರತ್ಯೇಕವಾಗಿ ಬಳಸಲಾಗುತ್ತಿದೆ ಎಂದು ಪತ್ರಕರ್ತರು ದೂರಿದ್ದಾರೆ.

ಪ್ಯಾಲೇಸ್ತೀನಿಯನ್ ನಾಗರಿಕರನ್ನು ಮಾನವೀಯಗೊಳಿಸುವಲ್ಲಿ BBC ಯ ಪ್ರಸಾರವು ಅಸಮಂಜಸವಾಗಿದೆ ಎಂದು ಪತ್ರಕರ್ತರು ವಾದಿಸಿದ್ದು, ಅವರ ಕಡೆಯ ವರದಿಗಳನ್ನು ಮಾಡುವಾಗ ಅದನ್ನು ಕಡಿಮೆ ಮಾಡಲಾಗಿದೆ. ಇಸ್ರೇಲಿ ಬಲಿಪಶುಗಳನ್ನು ಹೈಲೈಟ್ ಮಾಡಲಾಗಿದ್ದರೂ, ಅದೇ ಮಟ್ಟದ ಅನುಭೂತಿಯನ್ನು ಪ್ಯಾಲೆಸ್ತೀನಿಯನ್ನರ ಮೇಲೆ ಬಿಬಿಸಿ ವಿಸ್ತರಿಸಿಲ್ಲ ಎಂದು ಪತ್ರಕರ್ತರು ದೂರಿದ್ದಾರೆ. ನಾಗರಿಕ ಜೀವವನ್ನು ಪರಿಗಣಿಸುವಲ್ಲಿ BBC ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ ಎಂದು ಪತ್ರಕರ್ತರು ಆರೋಪಿಸಿದ್ದಾರೆ. ಅಂದರೆ ಇಸ್ರೇಲಿಗರ ಜೀವವು ಇತರರಿಗಿಂತ ಹೆಚ್ಚು ಯೋಗ್ಯವಾಗಿದೆ ಎಂಬಂತೆ ತನ್ನ ವರದಿ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ವಿಡಿಯೊ ನೋಡಿ: ರಾಜ್ಯದಲ್ಲಿ ಸರ್ಕಾರ ಬದಲಾಗಿದೆ, ನಿಲುವುಗಳಲ್ಲಿ ಬದಲಾವಣೆ ಇಲ್ಲ – ಬಿ.ಸುರೇಶ್‌ Janashakthi Media

Donate Janashakthi Media

Leave a Reply

Your email address will not be published. Required fields are marked *