ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಖಾಸಗಿ ಚಾನಲ್‌ಗೆ ನೀಡಿದ ವಿಡಿಯೊ ಪ್ರತಿಕ್ರಿಯೆ ಆಧರಿಸಿ ಈ ವರದಿ ಮಾಡಲಾಗಿದೆ.
ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು, ಈ ನಡುವೆ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ವಿದ್ಯಾರ್ಥಿ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ವಿರೋಧ ಪಕ್ಷಗಳ ನಾಯಕರು ಪಠ್ಯಪುಸ್ತಕಗಳನ್ನು ಕೇಸರೀಕರಣಗೊಳಿಸಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಇದೇ ವೇಳೆ ರಾಜ್ಯ ಸರಕಾರ ಮತ್ತು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದೆ.
ವಿದ್ಯಾರ್ಥಿಗಳಲ್ಲಿ ಇಲ್ಲಸಲ್ಲದ್ದನ್ನು ತಲೆಗೆ ತುಂಬುತ್ತಿದ್ದಾರೆ ಮತ್ತು ಪ್ರಕಟವಾದ ಪುಸ್ತಕದಲ್ಲಿ ಹೆಚ್ಚುದೋಷವಿದೆ. ಪಠ್ಯಪುಸ್ತಕಗಳಿಂದ ಭಗತ್ ಸಿಂಗ್ ಅವರ ಗದ್ಯ ತೆಗೆದು, ಹೆಡ್ಗೆವಾರ್ ಗದ್ಯ ಸೇರಿಸಲಾಗಿದೆ ಎಂಬಿತ್ಯಾದಿ ವಿಚಾರಗಳು ಸಾರ್ವಜನಿಕವಾಗಿ ಚರ್ಚೆಯಾಗುತ್ತಿವೆ. ಬರಗೂರು ರಾಮಚಂದ್ರಪ್ಪನವರು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿದ್ದ ವಿಚಾರವನ್ನು ಈ ವೇಳೆ ಚರ್ಚೆ ಮಾಡಲಾಗುತ್ತಿದೆ. ಈ ಕುರಿತಾಗಿ ಅವರು ಖಾಸಗಿ ಯೂಟ್ಯೂಬ್ ಚಾನಲ್ ಒಂದಕ್ಕೆ ನೀಡಿದ ವಿಡಿಯೋ ಪ್ರತಿಕ್ರಿಯೆ ನೀಡಿದ್ದು, ಅದನ್ನು ಆಧರಿಸಿ ಈ ವರದಿಯನ್ನು ಮಾಡಲಾಗಿದೆ.
“ಎಲ್ಲಾ ಪಠ್ಯಪುಸ್ತಕಗಳನ್ನು ನಾನೊಬ್ಬನೇ ಪರಿಷ್ಕರಿಸಿಲ್ಲ. 27 ಸಮಿತಿಗಳು ಸೇರಿ 117 ಜನ ತಜ್ಞರು ಪ್ರಾಧ್ಯಾಪಕರು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿದ್ದರು. 27 ಸಮಿತಿಗಳಿಗೂ ಒಬ್ಬೊಬ್ಬರು ಅಧ್ಯಕ್ಷರು. ಈ ಸಮಿತಿಗಳ ಆಚೆಗೂ ಪ್ರಾಧ್ಯಾಪಕರುಗಳ ಸಂಘದ ಜೊತೆ , ಪ್ರಾಂಶುಪಾಲರು, ವಿಷಯ ಪರೀಕ್ಷಕರು ಮತ್ತು ಎಲ್ಲಪಠ್ಯ ಪರಿಣಿತರ ಜೊತೆ ಮುವತ್ತಕ್ಕೂ ಹೆಚ್ಚು ಸಭೆ ನಡೆಸಿ ಸಲಹೆ ಪಡೆದ ನಂತರವೇ ಪರಿಷ್ಕರಣೆ ಮಾಡಲಾಗುವದು ಇಷ್ಟಾಗಿಯೂ ಅರಿವಿಲ್ಲದ ಮಾಹಿತಿ ಕೊರತೆ ಮತ್ತು ದೋಷಗಳು ಉಳಿದಿದ್ದರೆ, ಮುಂದೆ ಮರುಪರಿಷ್ಕರಿಸಬಹುದು ಎಂದು ಹೇಳಿದರು.
ಹಲವು ಭಾಷೆಗಳಲ್ಲಿ ಕನ್ನಡದ ಕವಿಗಳು,ಕರ್ನಾಟಕದ ವೈವಿಧ್ಯತೆಯನ್ನು ಪರಿಚಯಿಸಲು ಪ್ರಯತ್ನ ಮಾಡಿದ್ದೇವೆ. ಮರಾಠಿ ಪಠ್ಯದಲ್ಲಿ ಭಾಷಾವಾರು ಗದ್ಯ,ತಮಿಳಿನಲ್ಲಿ ಪಂಪನ ಪದ್ಯ , ಸಂಸ್ಕೃತದಲ್ಲಿ ಬಸವಣ್ಣನ ವಿಚಾರ, ಇಂಗ್ಲಿಷ್ ನಲ್ಲಿ ವಿಕೃ ಗೋಕಾಕರ ಇಂಗ್ಲಿಷ್ ಅನುವಾದ ಗದ್ಯ ಹೀಗೆ ಹಲವಾರು ವಿಷಯಗಳನ್ನು ಬರಗೂರು ಪಠ್ಯಗಳಲ್ಲಿ ವಿಚಾರಗಳನ್ನು ಭಾಷಾ ವೈವಿಧ್ಯತೆಗಾಗಿ ಸೇರಿಸಲಾಗಿದೆ. ವಿಜ್ಞಾನ ಗಣಿತ ಪಠ್ಯಪುಸ್ತಕದಲ್ಲಿ ಖಾಲಿ ಸ್ಥಳದಲ್ಲಿದ್ದಂತಹ ಅನವಶ್ಯಕ ಪುರಾತನ ಐತಿಹಾಸಿಕ ವಿಚಾರಗಳು,ಶ್ಲೋಕ ತೆಗೆದು ವಿಜ್ಞಾನಿಗಳ ಹೇಳಿಕೆಗಳನ್ನು ಅಳವಡಿಸಲಾಗಿದೆ.
ವ್ಯಕ್ತಿಗಳ ವಿಚಾರಣೆ, ಕ್ರಿಯಾಶೀಲತೆ,ಅವರುಗಳ ಪ್ರಾತಿನಿಧ್ಯ ನೋಡಬೇಕೆ ವಿನಃ ಅವರ ಪಂಥ, ಪಕ್ಷವನ್ನಲ್ಲಎಂದು ತಿಳಿಸಿದ್ದಾರೆ. ಸಂವಿಧಾನದ ಆಶಯದ ಅನುಗುಣವಾಗಿ, ಮಾನವ ಹಕ್ಕುಗಳ ಗದ್ಯ, ಲಿಂಗ ಸಮಾನತೆಯ ಬಗೆಗೆ ಮಹಿಳಾ ಹೋರಾಟಗಾರ್ತಿಯರ ಬಗ್ಗೆ, ಸೂಫಿಸಂತರ ಬಗ್ಗೆ ಪಠ್ಯಗಳಿವೆ. ಕುವೆಂಪು ಅವರ ಬರಹಗಳು 7ನೇ ತರಗತಿ ಮತ್ತು 10ನೇ ತರಗತಿಯ ಕನ್ನಡ ಪಠ್ಯಪುಸ್ತಕಗಳಲ್ಲಿವೆ. ಹೈಸ್ಕೂಲ್ ಪಠ್ಯಕ್ರಮದಲ್ಲಿದ್ದ ‘ಭರತ ಭೂಮಿ ನಮ್ಮ ತಾಯಿ’ದೇಶ ಪ್ರೇಮ ತುಂಬಲಿ ಎಂದು 7 ನೇ ತರಗತಿ ಪಠ್ಯದಲ್ಲಿ ಸೇರಿಸಲಾಗಿದೆ. 7 ಮತ್ತು 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಗಾಂಧಿ ಬಗ್ಗೆ ಮಾಹಿತಿ ಇದ್ದರೆ, 8, 9 ಮತ್ತು 10ನೇ ತರಗತಿಯ ಪಠ್ಯಪುಸ್ತಕಗಳಲ್ಲಿ ಅಂಬೇಡ್ಕರ್ ಕುರಿತು ಪಾಠವಿದೆ ಎಂದು ತಿಳಿಸಿದ್ದಾರೆ.
ಪೆರಿಯಾರ್, ಎನ್.ಎಂ. ಶ್ರೀನಿವಾಸ್, ಪಾರ್ವತಮ್ಮ ಅವರ ಬಗ್ಗೆ , ಮಹಿಳಾ ಸುಧಾರಕರುಗಳ ವಿಚಾರ ಹಾಗೂ ಸಾರ್ವಜನಿಕ ಆಡಳಿತದ ಬಗ್ಗೆ, ಸರ್ಕಾರದ ಅಧಿಕಾರಗಳ ಬಗ್ಗೆ ಒಂದಿಷ್ಟು ತಿಳುವಳಿಕೆ ನೀಡುವುದು ಮಾತ್ರ ನಮ್ಮ ಧ್ಯೇಯ. ಸತ್ಯವನ್ನು ಬೋಧಿಸಲು ಪ್ರಯತ್ನಿಸಿದ್ದೇವೆ. ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಮನೋಭಾವ, ರಾಷ್ರ್ಟೀಯ ಭದ್ರತೆ, ಜಾತ್ಯತೀತತೆ ಬೆಳೆಸುವುದು ನಮ್ಮ ಉದ್ದೇಶ ಅದನ್ನು ಹೊರತು ಪಡೆಸಿ ಪಕ್ಷಾಂತರಗೊಳಿಸುವುದು ಅಥವಾ ಕೋಮುವಾದ ಬೆಳೆಸುವುದು ನಮ್ಮ ಗುರಿಯಲ್ಲ ಎಂದು ಬರಗೂರು ರಾಮಚಂದ್ರಪ್ಪರವರು ಮಾತನಾಡಿದ್ದಾರೆ.