ಬ್ಯಾಂಕುಗಳ ಸಾಲ ಮನ್ನಾ ! ಇದ್ಯಾವ ನ್ಯಾಯ !

ಕೇವಲ ನಾಲ್ಕೂವರೆ ವರ್ಷದಲ್ಲಿ, ಏಪ್ರಿಲ್ 1, 2020 ರಿಂದ ಸೆಪ್ಟೆಂಬರ್ 30, 2024 ರವರೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳು ಮನ್ನಾ ಮಾಡಿದ ಸಾಲದ ಒಟ್ಟು ಮೊತ್ತ ರೂ.5,23,127 ಕೋಟಿ.

ವಿಚಿತ್ರವೆಂದರೆ, ಬ್ಯಾಂಕುಗಳಲ್ಲಿನ ಸುಸ್ತಿದಾರರ ಪಟ್ಟಿಯನ್ನು ಬಹಿರಂಗಪಡಿಸಬಾರದು ಎಂದು ಬ್ಯಾಂಕಿಂಗ್ ಸೀಕ್ರೆಸಿ ಆಕ್ಟ್ (ಬ್ಯಾಂಕುಗಳ ರಹಸ್ಯ ಕಾಯಿದೆ) ಹೇಳುತ್ತದೆ.

ಇದನ್ನೂ ಓದಿ : ಸಾಹಿತ್ಯ ಸಮ್ಮೇಳನ – ಯಶಸ್ಸು ಸಾಫಲ್ಯಗಳ ನಡುವೆ

ಆದರೆ, ಗ್ರಾಮೀಣ ಸಹಕಾರ ಬ್ಯಾಂಕು / ಸೊಸೈಟಿಗಳಲ್ಲಿ ಸಾಲ ತೀರಿಸಲಾಗದ ಸಾಮಾನ್ಯ ರೈತರ ಹೆಸರುಗಳನ್ನು ಆಯಾಯ ಕಛೇರಿಗಳ ನೋಟಿಸ್ ಬೋರ್ಡಿನಲ್ಲಿ ಪ್ರಕಟಿಸುವುದಲ್ಲದೆ, ಹಳ್ಳಿ / ಪಟ್ಟಣದಲ್ಲಿ ಸುಸ್ತಿದಾರರ ಹೆಸರುಗಳನ್ನು ಡಂಗುರ ಸಾರಿ ಬಹಿರಂಗಪಡಿಸುತ್ತಾರೆ.

ಆಗರ್ಭ ಶ್ರೀಮಂತರಿಗೊಂದು ಕಾನೂನು, ಸಾಮಾನ್ಯ ಜನರಿಗೊಂದು ಕಾನೂನು ! ಇದು ಸಂವಿಧಾನದಲ್ಲಿ ನಮಗೆ ಇರುವ ‘ಸಮಾನತೆ’ಯ ಅಣಕವಲ್ಲದೇ ಮತ್ತೇನು ? ಇದು ತಾರತಮ್ಯದ ಪರಾಕಾಷ್ಠೆಯಲ್ಲವೆ ?

ಇದನ್ನೂ ನೋಡಿ : ‘ಪುರುಷರ ಸಾವಿನ ಸುತ್ತ’ – 498A ಏನು – ಎತ್ತ? Janashakthi Media

Donate Janashakthi Media

Leave a Reply

Your email address will not be published. Required fields are marked *