ಬೆಂಗಳೂರು: ಭಾರತದಾದ್ಯಂತ ಹರಡಿ ಹಂಚಿರುವ ಅಲೆಮಾರಿ ಸಮುದಾಯವಾದ ಬಂಜಾರ ಸಂಸ್ಕೃತಿ ಮತ್ತು ಕಲೆಯು ದೇಶದಲ್ಲಿಯೇ ವಿಶಿಷ್ಠವಾದುದೆಂದು ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಟಿ.ಎಂ. ಭಾಸ್ಕರ್ ಅಭಿಪ್ರಾಯಪಟ್ಟರು.
ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸಂಘ ಮತ್ತು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಂಜಾರ ಕಸೂತಿ ಕಲಿಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಮಧ್ಯ ಏಷ್ಯಾದಿಂದ ವಲಸೆ ಬಂದ ಬಂಜಾರ ಸಮುದಾಯದವರು ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲಸಿದ್ದಾರೆ. ವಿವಿಧ ಕುಶಲ ಕಲೆಗಳಲ್ಲಿ ನಿಷ್ಣಾತರಾದ ಇವರು ಸ್ಥಳೀಯರೊಂದಿಗೆ ಬೆರೆತೂ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದಾರೆಂದು ಅಭಿಪ್ರಾಯಪಟ್ಟರು.
ಭಾರತೀಯ ಸಂಸ್ಕೃತಿಯಲ್ಲಿ ಉಡುಗೆ ತೊಡುಗೆಯಿಂದ ಆಕರ್ಷಿಸುವ ಸಮುದಾಯ ಬಂಜಾರವಾಗಿದ್ದು, ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುತ್ತಾ ರಾಷ್ಟಿçÃಯ ಭಾವೈಕ್ಯತೆಗೆ ಗಮನಾರ್ಹವಾದ ಕೊಡುಗೆಯನ್ನು ನೀಡಿದೆಯೆಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಏಕೀಕೃತ ಪಿಂಚಣಿ ಯೋಜನೆಯ (UPS) ಕುರಿತು ಒಂದಷ್ಟು ವಿಮರ್ಶೆ: ಹಳೆಯ ಪಿಂಚಣಿ ಯೋಜನೆ(OPS) ಎಂದೆಂದಿಗೂ ಉತ್ತಮ
ಪ್ರಾಸ್ತಾವಿಕವಾಗಿ ಮಾತನಾಡಿದ ಬಂಜಾರ ಸಂಸ್ಕೃತಿ ಮತ್ತು ಬಾಷಾ ಅಕಾಡೆಮಿ ಅಧ್ಯಕ್ಷ ಡಾ. ಗೋವಿಂದಸ್ವಾಮಿಯವರು ಪ್ರಕೃತಿಯ ನಡುವೆ ಬದುಕುವ ನಮ್ಮ ಬಂಜಾರ ಸಮುದಾಯವು ಹೈನುಗಾರಿಕೆಯ ಜೊತೆಗೆ ಹಲವಾರು ಕುಶಲಕಲೆಗಳನ್ನು ಮಾಡುತ್ತೇವೆ. ವ್ಯಾಪಾರವು ಮೊದಲಿನಿಂದಲೂ ವೃತ್ತಿಯಾಗಿದೆ. ನಮ್ಮಲ್ಲಿ ಗಾದೆ, ನುಡಿಗಟ್ಟು, ಶಾಸ್ತ್ರ, ನಂಬಿಕೆ, ಮಾಟ, ಕಣಿ, ಬೇಟೆ ಹೀಗೆ ಹಲವು ವೈವಿಧ್ಯಗಳಿಂದ ಕೂಡಿರುವ ಸಮುದಾಯವು ಸ್ವಾತಂತ್ರ್ಯ ನಂತರದಲ್ಲಿ ದೊರಕಿದ ಅವಕಾಶಗಳನ್ನು ಬಳಸಿಕೊಂಡು ಶಿಕ್ಷಿತರಾಗುತ್ತಿದ್ದಾರೆ ಎಂದರು.
ಬಂಜಾರ ಸಮುದಾಯದಲ್ಲಿನ ನ್ಯಾಯಪಂಚಾಯಿತಿಯ ಕೆಲವು ಅಂಶಗಳನ್ನು ನ್ಯಾಯಾಂಗದಲ್ಲಿಯೂ ಅಳವಡಿಸಿಕೊಳ್ಳಲಾಗಿದೆ. ಹಾಡು, ನೃತ್ಯ, ಕಸೂತಿ, ಹಚ್ಚೆ, ತೊಗಲುಗೊಂಬೆಯAಥ ಕಲೆಗಳಿವೆ. ಇವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಅಕಾಡೆಮಿಯದಾಗಿದೆ. ಈ ನಿಟ್ಟಿನಲ್ಲಿ ಬಂಜಾರ ಸಮುದಾಯದ ವಿಶಿಷ್ಠವಾದ ಕಸೂತಿ ಕಲೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆಯೆಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಂಗಕರ್ಮಿ ಮತ್ತು ವಸ್ತçವಿನ್ಯಾಸಕಿ ಶ್ರೀಮತಿ ಎನ್. ಮಂಗಳ ಅವರು ನಮ್ಮ ಪರಂಪರೆಯಿಂದ ಬಂದ ಹಲವಾರು ಕಲೆಗಳು ಆಧುನಿಕ ಕಾಲದಲ್ಲಿ ಹೊಸ ರೂಪವನ್ನು ಪಡೆಯುತ್ತಿವೆ. ಸಂಚಿ ಚೀಲವು ಇಂದು ಮೊಬೈಲ್ ಚೀಲವಾಗಿದೆ. ಅಲ್ಲದೆ ನಮ್ಮ ಪಾರಂಪರಿಕ ಕಸೂತಿ ಕಲೆಗೆ, ಹಚ್ಚೆಗೆ, ಹಾಡು – ನೃತ್ಯ ಹಾಗೂ ಸಾಂಪ್ರದಾಯಿಕ ಉಡುಗೆ – ತೊಡುಗೆಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇವುಗಳನ್ನು ಕೆಲವರು ತಮ್ಮ ವ್ಯಾವಹಾರಿಕತೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಇಂಥ ಸಂದರ್ಭದಲ್ಲಿ ಬಂಜಾರ ಅಕಾಡೆಮಿ ಎಚ್ಚರವನ್ನು ವಹಿಸಿ ಅವರ ಕಲೆಯ ರಕ್ಷಣೆಯನ್ನೂ ಮಾಡಬೇಕೆಂದು ಕಿವಿಮಾತು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ.ಟಿ. ಶ್ರೀನಿವಾಸ ನಾಯಕರು ಅಧ್ಯಕ್ಷತೆ ವಹಿಸಿದ್ದರು. ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಮಾನ್ಪಡೆ ಉಪಸ್ಥಿತರಿದ್ದರು. ಕನ್ನಡ ಸಂಘದ ಸಂಚಾಲಕ ಡಾ. ರುದ್ರೇಶ್ ಅದರಂಗಿ ಸ್ವಾಗತಿಸಿದರು. ಪ್ರಶಾಂತ್ ಹೆಬಸೂರು ವಿದ್ಯಾರ್ಥಿಗಳಿಗೆ ಕಸೂತಿ ಕಲೆಯನ್ನು ಪ್ರಾತ್ಯಕ್ಷಿಕವಾಗಿ ತರಬೇತಿ ನೀಡಿದರು. ಇದರಲ್ಲಿ ತರಬೇತಿ ಪಡೆದವರಿಗೆ ಪ್ರಶಸ್ತಿಪತ್ರವನ್ನು ವಿತರಿಸಲಾಗುವುದು ಎಂದರು.
ಇದನ್ನೂ ನೋಡಿ: ಕಾಂಗ್ರೆಸ್ ಸರ್ಕಾರದ ಕೆಲವು ತಪ್ಪುಗಳು.. ತಿದ್ದಿಕೊಳ್ಳಲು ಇನ್ನೂ ಕಾಲ ಮಿಂಚಿಲ್ಲ.. Janashakthi Media