ಬೆಂಗಳೂರು | 2 ದಿನಗಳ ಕಾಲ ವಿದ್ಯುತ್ ಕಡಿತ; ಪಟ್ಟಿ ಇಲ್ಲಿದೆ…

ಬೆಂಗಳೂರು: ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಡಿಸೆಂಬರ್ 20 ಬುಧವಾರದಿಂದ ಡಿಸೆಂಬರ್ 21 ಗುರುವಾರದವರೆಗೆ ನಿಗದಿತ ವಿದ್ಯುತ್ ಕಡಿತವನ್ನು ಘೋಷಿಸಿದೆ. ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳ್ಳುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.

ಬೆಸ್ಕಾಂ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಹಲವಾರು ನಿಯತಕಾಲಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಂಡಿರುವ ಕಾರಣಕ್ಕೆ ವಿದ್ಯುತ್ ಕಡಿತ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.  ಬೆಂಗಳೂರು

ಇದನ್ನೂ ಓದಿ: ಸಂಸತ್ ಭವನ ಅಲ್ಲ, ‘ಸಸ್ಪೆಂಡ್ ಭವನ’ | ಒಟ್ಟು 141 ಸಂಸದರು ಅಮಾನತು!

ಯಾವ ದಿನ ಯಾವ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ ಎಂಬ ಮಾಹಿತಿ ಕೆಳಗಿದೆ:

ಡಿಸೆಂಬರ್ 20, ಬುಧವಾರ:

ಬುಧವಾರ ಅಂಗವಿಕಲ ಆಶಾಕಿರಣ ಟ್ರಸ್ಟ್, ಎಸ್.ಎಸ್.ಲೇಔಟ್ ಎ ಬ್ಲಾಕ್, ಬಸವನಗುಡಿ, ಎಸ್.ಎಸ್.ಮಾಲ್, ಗ್ಲಾಸ್ ಹೌಸ್ ಏರಿಯಾ, ಶಾಮನೂರು ರಸ್ತೆ, ಲಕ್ಷ್ಮಿ ಫ್ಲೋರ್ ಮಿಲ್, ಸಿದ್ದವೀರಪ್ಪ ಬಡವಾಣೆ, ಕುವೆಂಪು ನಗರ, ಮಾವಿನ ತೋಪು, ಜಿ.ಎಚ್.- ಪಾರ್ಕ್, ಗ್ಲೋಬಲ್ ಮಾಲ್, ಶೋಭಾ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್, ಓಕಳಿಪುರಂ, ಬೇವಿನಹಳ್ಳಿ, ನಂದಿಹಳ್ಳಿ, ಬಹದೂರಘಟ್ಟ ಮತ್ತು ಕೋಗುಂಡೆ ಭಾಗದಲ್ಲಿ ಬುಧವಾರ ವಿದ್ಯುತ್ ಕಡಿತವಾಗಲಿದೆ. ಬೆಂಗಳೂರು

ಡಿಸೆಂಬರ್ 21, ಗುರುವಾರ:

ಮರುದಿನ ಮೌನೇಶ್ವರ ಬಡಾವಣೆ, ಜಯನಗರ, ಹೊಂಡದ ಸರ್ಕಲ್, ಜಾಲಿ ನಗರ, ಶಿವಾಜಿ ನಗರ, ಎಂ.ಬಿ.ಕೇರಿ, ಚಲುವಾದಿ ಕೇರಿ, ಮಂಜುನಾಥ ನಗರ, ತಿಮ್ಮಯ್ಯ ರಸ್ತೆ, ಭೋವಿ ಕಾಲೋನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್‌ಮೆಂಟ್, ಶಿವನಹಳ್ಳಿ ಪಾರ್ಕ್, ಆದರ್ಶ ನಗರ, ಆದರ್ಶ ಲೇಔಟ್, ಯುನಿಕ್ಸ್ ಕಾಲೊನಿ, ಇಂದಿರಾ ನಗರ, ಮಂಜುನಾಥ ನಗರ 3ನೇ ಹಂತ 1ನೇ ಬ್ಲಾಕ್, ಟೊಯೊಟಾ ಶೋ ರೂಂ, ಎಸ್ಟೀಮ್ ಕ್ಲಾಸಿಕ್ ಅಪಾರ್ಟ್‌ಮೆಂಟ್, ಲುಮೋಸ್ ಅಪಾರ್ಟ್‌ಮೆಂಟ್, ಐಗೂರು, ಲಿಂಗದಹಳ್ಳಿ ಮತ್ತು ಒಡ್ಡನಹಳ್ಳಿಯಲ್ಲಿ ಗುರುವಾರ ವಿದ್ಯುತ್ ಕಡಿತವಾಗಲಿದೆ ಎಂದು ಬೆಸ್ಕಾಂ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ವಿಡಿಯೊ ನೋಡಿ: ಜನಸಾಮಾನ್ಯರ ನಡಿಗೆ ಅಭಿವೃದ್ಧಿಯ ಕಡೆಗೆ : ತುಳುನಾಡಿನ ದುಸ್ಥಿತಿಗೆ 3 ದಶಕಗಳ ಬಿಜೆಪಿಯ ದುರಾಡಳಿತವೇ ಕಾರಣ

Donate Janashakthi Media

Leave a Reply

Your email address will not be published. Required fields are marked *