ಪತಂಜಲಿ ಜಾಹೀರಾತುಗಳ ಮೇಲೆ ನಿಷೇಧ; ಬಾಬಾ ರಾಮ್‌ದೇವ್ ವಿರುದ್ಧ ಸುಪ್ರೀಂ ವಾಗ್ದಾಳಿ

ನವದೆಹಲಿ: ಸ್ವಯಂ ಘೋಷಿತ ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ ಔಷಧಿಗಳ ಜಾಹೀರಾತುಗಳ ಮೇಲೆ ನಿಷೇಧ ಹೇರುವ ಮಧ್ಯಂತರ ಆದೇಶವನ್ನು ಮಂಗಳವಾರ ಸುಪ್ರೀಂ ಕೋರ್ಟ್ ನೀಡಿದೆ. ಈ ಹಿಂದೆ ನ್ಯಾಯಾಲಯದಿಂದ ಛೀಮಾರಿ ಹಾಕಿದ್ದರೂ ತಪ್ಪಾಗಿ ನಿರೂಪಿಸುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ರಾಮದೇವ್ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದೆ. ಪತಂಜಲಿ ಜಾಹೀರಾತು

ಕೋವಿಡ್-19 ವ್ಯಾಕ್ಸಿನೇಷನ್ ಅಭಿಯಾನ ಮತ್ತು ಆಧುನಿಕ ಔಷಧದ ವಿರುದ್ಧ ರಾಮ್‌ದೇವ್ ಮತ್ತು ಅವರ ಕಂಪನಿಯ ಅಭಿಯಾನವನ್ನು ಆರೋಪಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಪತಂಜಲಿ ಸಂಸ್ಥಾಪಕರಾದ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ: ಈ ಹಿಂದೆ ಗುಹೆಗೆ, ಈಗ ನೀರಿಗೆ, ಮುಂದಿನ ಬಾರಿ ಚಂದ್ರನಲ್ಲಿಗೆ – ಪ್ರಕಾಶ ರೈ

“ನ್ಯಾಯಾಲಯದ ಆದೇಶದ ನಂತರ ಕೂಡಾ ಜಾಹೀರಾತು ನೀಡಿ ನೀವು ಧೈರ್ಯ ತೋರಿಸಿದ್ದೀರಿ! ತದನಂತರ ನೀವು ಈ ಜಾಹೀರಾತಿನೊಂದಿಗೆ ಬಂದಿರಿ. ಶಾಶ್ವತ ಪರಿಹಾರ, ಶಾಶ್ವತ ಪರಿಹಾರ ಎಂದರೆ ಏನು? ಇದು ಚಿಕಿತ್ಸೆಯೇ?… ನಾವು ಅತ್ಯಂತ ಕಠಿಣ ಆದೇಶವನ್ನು ರವಾನಿಸಲಿದ್ದೇವೆ. ನೀವು ನ್ಯಾಯಾಲಯಕ್ಕೆ ಪ್ರಚೋದನೆ ಮಾಡುತ್ತಿದ್ದೀರಿ” ಎಂದು ನ್ಯಾಯಮೂರ್ತಿ ಅಮಾನುಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯಾಯಾಲಯವು ಆರಂಭದಲ್ಲಿ ಪತಂಜಲಿಯ ಎಲ್ಲಾ ಜಾಹೀರಾತುಗಳ ಮೇಲೆ ನಿಷೇಧದ ಬಗ್ಗೆ ಪ್ರಸ್ತಾಪಿಸಿದಾಗ, ಕಂಪನಿಯ ವಕೀಲ ವಿಪಿನ್ ಸಂಘಿ ಈ ನಿರ್ಧಾರವು ಕಂಪೆನಿಯ ವಾಣಿಜ್ಯ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ಕಾಯ್ದೆಯಡಿ ನಿರ್ದಿಷ್ಟಪಡಿಸಿದ ರೋಗಗಳಿಗೆ ಸಂಬಂಧಿಸಿದ ಉತ್ಪನ್ನಗಳಿಗೆ ನಿಷೇಧ ಅನ್ವಯಿಸುತ್ತದೆ ಎಂದು ನ್ಯಾಯಾಲಯವು ನಂತರ ಹೇಳಿದೆ.

ಇದನ್ನೂ ಓದಿ: ಸುಳ್ಳು ಹೇಳಿದ ಬಿಜೆಪಿ ನಾಯಕರು; ಅದನ್ನು ಹರಡಿದ ಪ್ರಜಾವಾಣಿ ಸಹಿತ ಕನ್ನಡದ ಮಾಧ್ಯಮಗಳು!

2022 ರಲ್ಲಿ ಪ್ರಸ್ತುತ ಅರ್ಜಿಯನ್ನು ಸಲ್ಲಿಸಲಾಗಿದ್ದರೂ ತಪ್ಪಾಗಿ ಬಿಂಬಿಸುವ ಜಾಹೀರಾತುಗಳನ್ನು ನಿಭಾಯಿಸದ ಕೇಂದ್ರ ಸರ್ಕಾರವನ್ನು ನ್ಯಾಯಾಲಯ ಟೀಕಿಸಿದೆ. “ಇಡೀ ದೇಶದ ಮೇಲೆ ಸವಾರಿ ಮಾಡಲಾಗಿದೆ. ಇದನ್ನು ನಿಷೇಧಿಸಲಾಗಿದೆ ಎಂದು ಡ್ರಗ್ಸ್ ಆಕ್ಟ್ ಹೇಳಿದಾಗಲೂ ನೀವು ಎರಡು ವರ್ಷಗಳವರೆಗೆ ಕಾಯುತ್ತೀರಾ?” ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರಿಂಕೋರ್ಟ್ ಚಾಟಿ ಬೀಸಿದೆ.

2022ರ ಜುಲೈ 10ರಂದು, ಪತಂಜಲಿ ತನ್ನ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಾ, ‘ಅಲೋಪತಿ ಹರಡಿದ ತಪ್ಪುಗ್ರಹಿಕೆಗಳು: ಫಾರ್ಮಾ ಮತ್ತು ವೈದ್ಯಕೀಯ ಉದ್ಯಮವು ಹರಡಿರುವ ತಪ್ಪು ಕಲ್ಪನೆಗಳಿಂದ ನಿಮ್ಮನ್ನು ಮತ್ತು ದೇಶವನ್ನು ಉಳಿಸಿ’ ಎಂಬ ಅರ್ಧ ಪುಟದ ಜಾಹೀರಾತನ್ನು ಪ್ರಕಟಿಸಿತ್ತು. ಈ ಜಾಹಿರಾತಿನ ವಿರುದ್ಧ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ನ್ಯಾಯಾಲಯದ ಕದ ತಟ್ಟಿತ್ತು ಮತ್ತು ಪತಂಜಲಿ ಮಾಡಿದ ಆಧಾರರಹಿತ ಪ್ರತಿಪಾದನೆಗಳು ಡ್ರಗ್ಸ್ ಕಾಯಿದೆ-1954 ಮತ್ತು ಗ್ರಾಹಕ ಸಂರಕ್ಷಣಾ ಕಾಯ್ದೆ-2019 ರ ನೇರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿತ್ತು.

ವಿಡಿಯೊ ನೋಡಿ: ನಿರುದ್ಯೋಗ ಸಮಸ್ಯೆಗೂ ಕೋಮುವಾದಕ್ಕೂ ಲಿಂಕ್ ಇದೆ: ಜಸ್ಟೀಸ್ ಎಚ್.ಎನ್ ನಾಗಮೋಹನದಾಸ್ Janashakthi Media

Donate Janashakthi Media

Leave a Reply

Your email address will not be published. Required fields are marked *