ನವದೆಹಲಿ: ಎಲ್ಗರ್ ಪರಿಷತ್ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಸುಮಾರು ಆರು ವರ್ಷಗಳಿಂದ ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತೆ ಮತ್ತು ಪ್ರೊಫೆಸರ್ ಶೋಮಾ ಸೇನ್ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಶೋಮಾ ಸೇನ್ಗೆ
ಶೋಮಾ ಸೇನ್ ನಾಗ್ಪುರ ವಿಶ್ವವಿದ್ಯಾನಿಲಯದ ಮಾಜಿ ಪ್ರೊಫೆಸರ್ ಆಗಿದ್ದು, ಈ ಪ್ರಕರಣದಲ್ಲಿ ಮಾವೋವಾದಿ ಸಂಪರ್ಕವಿದೆ ಎಂದು ಆರೋಪಿಸಿ ಪುಣೆ ಪೊಲೀಸರು,2018 ರ ಜೂನ್ ೬ ರಂದು ಸೇನ್ ಅನ್ನು ಬಂಧಿಸಿತ್ತು. ಅಂದಿನಿಂದ ಸೇನ್, ನ್ಯಾಯಾಂಗ ಬಂಧನದಲ್ಲಿದ್ದರು. ಈ ಮಧ್ಯೆ ರಾಷ್ಟ್ರೀಯ ತನಿಖಾ ದಳ (ಎಎನ್‌ಐ) ಸೇನ್ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಈ ಪ್ರಕರಣದ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ. ಶೋಮಾ ಸೇನ್ಗೆ
ಲೈವ್ ಲಾ ವರದಿಯ ಪ್ರಕಾರ, ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ಯುಎಪಿಎಯ ಸೆಕ್ಷನ್ 43 ಡಿ (5) ಅಡಿಯಲ್ಲಿ ಜಾಮೀನು ನೀಡುವ ನಿಷೇಧವು ಸೇನ್ ಪ್ರಕರಣದಲ್ಲಿ ಅನ್ವಯಿಸುವುದಿಲ್ಲ.ಸೇನ್‌ಗೆ ವಯಸ್ಸಾಗಿದ್ದು, ಅನೇಕ ಕಾಯಿಲೆಗಳಿವೆ ಎಂದು ಪೀಠ ಹೇಳಿದೆ.ಅಲ್ಲದೇ ಸೇನ್, ಸುದೀರ್ಘ ಕಾಲ ಜೈಲಿನಲ್ಲಿ ಕಳೆದಿದ್ದಾರೆ. ಜಾಮೀನು ನೀಡುವಾಗ ವಿಚಾರಣೆಯ ವಿಳಂಬ ಮತ್ತು ಆರೋಪಗಳ ಸ್ವರೂಪವನ್ನೂ ಪರಿಗಣಿಸಲಾಗಿದೆ. ಶೋಮಾ ಸೇನ್ಗೆ
ಇದನ್ನು ಓದಿ : ಉತ್ತರ ಪ್ರದೇಶದ ಮದರಸಾ ಕಾನೂನನ್ನು ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಸುಪ್ರೀಂಕೋರ್ಟ್
ವಿಶೇಷ ನ್ಯಾಯಾಲಯಕ್ಕೆ ತಿಳಿಸದೆ ಮಹಾರಾಷ್ಟ್ರವನ್ನು ತೊರೆಯಬಾರದು. ಪಾಸ್‌ಪೋರ್ಟ್ ಒಪ್ಪಿಸಬೇಕು. ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ತನಿಖಾಧಿಕಾರಿಗೆ ನೀಡಬೇಕು. ಜಾಮೀನು ಅವಧಿಯಲ್ಲಿ ಅವರ ಮೊಬೈಲ್ ಫೋನ್‌ನ ಸ್ಥಳ ಮತ್ತು ಜಿಪಿಎಸ್ ಟ್ರ್ಯಾಕರ್ ಅನ್ನು ಸಕ್ರಿಯವಾಗಿರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಪೀಠ ಸೇನ್‌ಗೆ ಸೂಚಿಸಿದೆ
ಇದಕ್ಕೂ ಮುನ್ನ ಎನ್‌ಐಎ ನ್ಯಾಯಾಲಯಕ್ಕೆ ಸೋಮ ಸೇನ್‌ಗೆ ಹೆಚ್ಚಿನ ಕಸ್ಟಡಿ ಅಗತ್ಯವಿಲ್ಲ ಎಂದು ತಿಳಿಸಿತ್ತು. ಡಿಸೆಂಬರ್ 2023 ರಲ್ಲಿ ಏಜೆನ್ಸಿಯು ಸಹ, ಜಾಮೀನು ಅರ್ಜಿಯನ್ನು ಕೆಳ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಬಲವಾಗಿ ವಿರೋಧಿಸಿತ್ತು. ಶೋಮಾ ಸೇನ್ಗೆ
ಶೋಮಾ ಸೇನ್ಗೆ
ಎಲ್ಗಾರ್ ಪರಿಷತ್ ಪ್ರಕರಣದಲ್ಲಿ 16 ಪ್ರಸಿದ್ಧ ಬುದ್ಧಿಜೀವಿಗಳು ಮತ್ತು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂಬುದು ಗಮನಾರ್ಹ. ಅವರನ್ನು ಬಹುಕಾಲ ಜೈಲಿನಲ್ಲಿಟ್ಟಿರುವ ಬಗ್ಗೆ ಟೀಕೆ ಜಗತ್ತಿನಾದ್ಯಂತ ಕಂಡು ಬರುತ್ತಿದೆ.