ಗೋಡೌನ್​ನಲ್ಲಿ ಗೋದಿ ಮೂಟೆಗಳು ಕುಸಿದು ಓರ್ವ ಕಾರ್ಮಿಕ ಸಾವು

ಗಾಂಧಿನಗರ: ಗೋಣಿ ಚೀಲಗಳು ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್‌ನ ಅಮ್ರೇಲಿಯಲ್ಲಿ ನಡೆದಿದೆ. ಗೋದಿ

ಗೋಡೌನ್‌ನಲ್ಲಿ ಗೋಧಿಯ ಮೂಟೆಗಳನ್ನು ಇಳಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಮೂಟೆಗಳು ಕಾರ್ಮಿಕರ ಮೇಲೆ ಬಿದ್ದ ವಿಡಿಯೋ ಸಾಮಾಜಿಕ ಜಲತಾಣದಲ್ಲಿ ಹರಿದಾಡುತ್ತಿದ್ದು,”ಕಾರ್ಮಿಕರನ್ನು ಸಾಯಿಸುವುದು ಗುಜರಾತ್ ಮಾಡಲ್ ಎಂದು ಬಿಜೆಪಿ ಸರ್ಕಾರದ ಕಾಲೆಳೆದಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ಅರ್ಚನಾ ಪುಷ್ಪೇಂದ್ರ ಎಂಬ ಹೆಸರಿನ ಬಳಕೆದಾರರು ಗೋಡೌನ್​ ಒಂದರಲ್ಲಿ ನಡೆದಿರುವ ಅವಘಡದ 15 ಸೆಕೆಂಡ್‌ಗಳ ವಿಡಿಯೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಒಳನಾಡಿನಲ್ಲಿ ಸಾಧಾರಣದೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ: ಹವಾಮಾನ ಇಲಾಖೆ ಮುನ್ಸೂಚನೆ

ವರದಿಗಳ ಪ್ರಕಾರ, ಮೂಟೆಗಳ ಅಡಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಲು ತಕ್ಷಣವೇ ಧಾವಿಸಿದರು, ಆದರೆ ಅವರನ್ನು ಹೊರತೆಗೆಯುವ ವೇಳೆಗೆ ಒಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದನು. ಗಾಯಾಳುಗಳನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರಂಭಿಕ ಪೊಲೀಸ್ ತನಿಖೆಯ ಪ್ರಕಾರ, ಗೋಧಿ ಚೀಲಗಳ ಅಸಮರ್ಪಕ ನಿರ್ವಹಣೆ ಮತ್ತು ಗೋಡೌನ್​ನಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ವೇಳೆ ಐವರು ಕಾರ್ಮಿಕರು ಇದ್ದರು, ಚೀಲವನ್ನು ಇಳಿಸಲು ಯತ್ನಿಸಿದಾಗ ಕೆಳಭಾಗದಲ್ಲಿ ಒಬ್ಬರು ಜಾರಿಬಿದ್ದು ಕುಸಿತಕ್ಕೆ ಕಾರಣವಾಗಿದೆ. ಪೊಲೀಸರು ಮೃತ ಕಾರ್ಮಿಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ನೋಡಿ: ನೀರಿನ ಬಿಕ್ಕಟ್ಟು | ಹವಾಮಾನ ಬದಲಾವಣೆ | ಕೃಷಿ ಮೇಲಿನ ಪರಿಣಾಮಗಳು | ವಿಚಾರ ಸಂಕಿರಣ

Donate Janashakthi Media

Leave a Reply

Your email address will not be published. Required fields are marked *