ಚೀನಾ ಬಡತನದ ವಿರುದ್ಧ ‘ಪೂರ್ಣ ವಿಜಯ’ ಸಾಧಿಸಿದೆ ಎಂದು ಚೀನಾದ ಅಧ್ಯಕ್ಷ ಕ್ಸಿಜಿಂಪಿಂಗ್ ಘೋಷಿಸಿದ್ದಾರೆ. ಚೀನಾಕ್ಕೆ ಕಳೆದ 8 ವರ್ಷಗಳಲ್ಲಿ ಕೊನೆಯ 10 ಕೋಟಿ ಜನರನ್ನು ಬಡತನದ ರೇಖೆಯಿಂದ ಮೇಲೆತ್ತಲು ಸಾಧ್ಯವಾಗಿದೆ. 1978ರ ಸುಧಾರಣೆಗಳ ನಂತರ 77 ಕೋಟಿ ಗ್ರಾಮೀಣ ಬಡವರನ್ನು ಬಡತನದ ರೇಖೆಗಿಂತ ಮೆಲೆತ್ತಲು ಸಾಧ್ಯವಾಗಿದೆ. ಅಂತರರಾಷ್ಟ್ರೀಯ ಬಡತನದ ರೇಖೆಯ ಪ್ರಕಾರ 1970 ದಶಕದ ಕೊನೆಯಿಂದ ಜಾಗತಿಕವಾಗಿ ಬಡತನ ನಿವಾರಣೆಯ ಶೇ. 70 ಪಾಲು ಚೀನಾದ ಕೊಡುಗೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಬಡತನದ ಪೂರ್ಣ ನಿವಾರಣೆಯ ಗುರಿಯನ್ನು 2030ರ ಒಳಗೆ ಮಾಡಬೇಕೆಂದು ವಿಶ್ವಸಂಸ್ಥೆ ನಿಗದಿಸಿತ್ತು. ಚೀನಾ 10 ವರ್ಷಗಳ ಮೊದಲೇ ಅದನ್ನು ಸಾಧಿಸಿದೆ. ಅಭಿವೃದ್ಧ ಬಂಡವಾಳಶಾಹಿ ದೇಶಗಳ ಪ್ರಭುತ್ವಗಳಿಗೆ ಬಡತನದ ಪೂರ್ಣ ನಿವಾರಣೆಯ ಚೀನಾದ ಈ ಸಾಧನೆ ನುಂಗಲಾರದ ತುತ್ತಾಗಿದೆ. ಹಾಗಾಗಿ ಚೀನಾದ ಈ ಸಾಧನೆ ಹುಸಿ. ಚೀನಾದ ಯಾವ ಆರ್ಥಿಕ ಅಂಕೆ ಸಂಖ್ಯೆಗಳೂ ವಿಶ್ವಾಸಾರ್ಹವಲ್ಲ. ಬಡತನ ರೇಖೆಯನ್ನು ಬದಲಾಯಿಸಿ ಬಡತನ ನಿವಾರಣೆಯಘೋಷಣೆ ಮಾಡಲಾಗಿದೆ ಎಂದು ಸಾಮ್ರಾಜ್ಯಶಾಹಿ ಮಾಧ್ಯಮಗಳು ಅಪಪ್ರಚಾರ ಆರಂಭಿಸಿವೆ. ಆದರೆ ಅದಕ್ಕೆ ಯಾವುದೇ ಆಧಾರಗಳನ್ನು ಒದಗಿಸಿಲ್ಲ.
– ವಸಂತರಾಜ ಎನ್.ಕೆ.
ಚೀನಾ ಬಡತನದ ವಿರುದ್ಧ ‘ಪೂರ್ಣ ವಿಜಯ’ಸಾಧಿಸಿದೆ ಎಂದು ಫೆಬ್ರುವರಿ 25, 2021 ರಂದು ಚೀನಾದ ಅಧ್ಯಕ್ಷ ಕ್ಸಿಜಿಂಪಿಂಗ್ ಘೋಷಿಸಿದ್ದಾರೆ. ಇಂದಿನ ಬಡತನದ ರೇಖೆಯ ಕೆಳಗೆ ಇರುವ ಕೊನೆಯ 9.9 ಕೋಟಿ ಗ್ರಾಮೀಣ ಬಡವರು, 832 ಬಡ ಕೌಂಟಿಗಳು, 1.28 ಲಕ್ಷ ಬಡ ಹಳ್ಳಿಗಳು ತಮ್ಮ ಜೀವನದ ಮಟ್ಟವನ್ನು ಬಡತನದ ರೇಖೆಗಿಂತ ಏರಿಸುವಲ್ಲಿ ಸಫಲರಾಗಿದ್ದಾರೆ. ಕೊವಿಡ್ ಮಹಾಸೋಂಕಿನ ಪರಿಣಾಮವಾಗಿ ಜಗತ್ತಿನಲ್ಲಿ ಇನ್ನೂ 20.7 ಕೋಟಿ ಜನ ಬಡತನದ ರೇಖೆಯ ಕೆಳಗೆ ಹೋಗಲಿದ್ದಾರೆ. ಇದರೊಂದಿಗೆ ಜಗತ್ತಿನ ಒಟ್ಟು ಬಡವರ ಸಂಖ್ಯೆ 100 ಕೋಟಿ ಮೀರಬಹುದು. ಹಾಗಾಗಿ, 2030ರ ಹೊತ್ತಿಗೆ ಜಗತ್ತಿನಲ್ಲಿ ಬಡತನವನ್ನು ಪೂರ್ಣವಾಗಿ ಹೋಗಲಾಡಿಸುವ ಗುರಿ ತಲುಪಲು ಅಸಾಧ್ಯವಾಗಬಹುದು, ಎಂದು ವಿಶ್ವಸಂಸ್ಥೆಯ ಬೆಳವಣಿಗೆ ಕುರಿತ ಅಂಗಸಂಸ್ಥೆ ಯು.ಎನ್.ಡಿ.ಪಿ ಅಂದಾಜು ಮಾಡಿದ್ದರ ಹಿನ್ನೆಲೆಯಲ್ಲಿ ಚೀನಾದ ಈ ಸಾಧನೆ ಗಮನಾರ್ಹವಾದದ್ದು.
ಚೀನಾಕ್ಕೆ ಕಳೆದ 8 ವರ್ಷಗಳಲ್ಲಿ ಕೊನೆಯ 10 ಕೋಟಿ (ಈಗಿನ ಬಡತನದ ರೇಖೆಯ ಪ್ರಕಾರ) ಜನರನ್ನು ಬಡತನದ ರೇಖೆಯಿಂದ ಮೇಲೆತ್ತಲು ಸಾಧ್ಯವಾಗಿದೆ. 1978ರ ಸುಧಾರಣೆಗಳ ನಂತರ 77ಕೋಟಿ ಬಡವರನ್ನು ಬಡತನದ ರೇಖೆಗಿಂತ ಮೆಲೆತ್ತಲು ಸಾಧ್ಯವಾಗಿದೆ. ಅಂತರರಾಷ್ಟ್ರೀಯ ಬಡತನದ ರೇಖೆಯ ಪ್ರಕಾರ 1970 ದಶಕದ ಕೊನೆಯಿಂದ ಜಾಗತಿಕವಾಗಿ ಬಡತನ ನಿವಾರಣೆಯ ಶೇ. 70 ಪಾಲು ಚೀನಾದ ಕೊಡುಗೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ಇದನ್ನೂ ಓದಿ : ಬೇರೆ ದೇಶಗಳ ಒಂದಿಂಚು ಪ್ರದೇಶವನ್ನೂ ಆಕ್ರಮಿಸಿಲ್ಲ: ಚೀನಾ
ಚೀನಾದ ಪ್ರತಿ ಶೇ.1 ಜಿಡಿಪಿ ಏರಿಕೆಯೊಂದಿಗೆ, ಗ್ರಾಮೀಣ ಬಡತನ ಶೇ.0.8 ರಷ್ಟು ಕಡಿಮೆಯಾಗುತ್ತಾ ಬಂದಿದೆ. ಈ ಚೀನ ಅವಧಿಯಲ್ಲಿ ಪ್ರತಿ ತಿಂಗಳು 10 ಲಕ್ಷ ಜನರ ಬಡತನ ನಿವಾರಣೆಯಾಗುತ್ತಾ ಬಂದಿದೆ. ಚೀನಾದ ಬಡವರ (ಬಡತನದ ಕೆಳಗಿರುವವರ) ಆದಾಯ 2015ರಲ್ಲಿ ಸರಾಸರಿ 2,982 ಯುವಾನ್ (ಚೀನಾದ ನಾಣ್ಯ : 1 ಯುವಾನ್ = 11.26 ರೂಪಾಯಿ) ನಿಂದ 2020ರಲ್ಲಿ 10,740 ಯುವಾನ್ ಗೆ ಏರಿದೆ. ಕೊವಿಡ್ ನ ದುಷ್ಪರಿಣಾಮಗಳು ಇದ್ದಾಗ್ಯೂ ಚೀನಾದ ಈ ಸಾಧನೆ ಗಮನಾರ್ಹವಾದದ್ದು.
ಚೀನಾದ ಈಗಿನ ಬಡತನದ ರೇಖೆಯು ಬಹು ಆಯಾಮದ್ದಾಗಿದ್ದುಅದನ್ನುಅಂತರರಾಷ್ಟ್ರೀಯ ಸಂಘಟನೆಗಳ ಮಾನದಂಡ ಮತ್ತು ರಾಷ್ಟ್ರೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ನಿಗದಿ ಮಾಡಲಾಗಿದೆ. ಬಡತನ ರೇಖೆಯನ್ನು ನಿಗದಿ ಮಾಡುವಾಗ ಆದಾಯ, ಶಿಕ್ಷಣ, ಆರೋಗ್ಯ ಮತ್ತು ಜೀವನ ಮಟ್ಟಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ರೇಖೆಯನ್ನು 2010ರ ಸ್ಥಿರ ಮೌಲ್ಯದಲ್ಲಿ 2300 ಯುವಾನ್ ವಾರ್ಷಿಕ ಆದಾಯ ಅಥವಾ ಪ್ರತಿ ವ್ಯಕ್ತಿಗೆ ಪ್ರತಿ ದಿನ 2.3 (ಕೊಳ್ಳುವ ಶಕ್ತಿಯ ಸಮನಾದ) ಡಾಲರುಗಳಿಗೆ ಸಮನಾಗಿತ್ತು. 2020ರಲ್ಲಿ 4000 ಯುವಾನ್ ವಾರ್ಷಿಕ ಆದಾಯಕ್ಕೆ ಸಮನಾಗಿತ್ತು. ಬಡತನದ ರೇಖೆ ಜೀವನಾವಶ್ಯಕ ವಸ್ತುಗಳ ನಿಜ ಬೆಲೆಗೆ ತಳಕು ಹಾಕಿಕೊಂಡಿದ್ದು ಹಣದುಬ್ಬರದ ಪರಿಣಾಮ ಇದರ ಮೇಲಾಗುವುದಿಲ್ಲ. ಇಂದಿನ ಪೂರ್ಣ ವಿಜಯದ ಆಧಾರವನ್ನು ಚೀನಾದ ಕ್ರಾಂತಿಯ ನಂತರ ಜಾರಿ ಮಾಡಲಾದ ಸಮಗ್ರ ಭೂಸುಧಾರಣೆಗಳು ಮತ್ತುಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಕೃಷಿಯಲ್ಲಿ ಸಾಧಿಸಲಾದ ವ್ಯಾಪಕ ಬದಲಾವಣೆಗಳು ಹಾಕಿದ್ದವು ಎಂದು ಮರೆಯುವಂತಿಲ್ಲ. ಕಾಲ ಕಾಲಕ್ಕೆ ಗ್ರಾಮೀಣ ಆರ್ಥಿಕ ಸುಧಾರಣೆಗಳು, ಪ್ರಾದೇಶಿಕ ಬೆಳವಣಿಗೆಯ ಬಡತನದ ನಿವಾರಣೆಗೆ ಯೋಜನೆಗಳನ್ನು ಹಾಕಲಾಯಿತು.
2020ರ ಹೊತ್ತಿಗೆ ‘ಎಲ್ಲ ಆಯಾಮಗಳಲ್ಲಿ ಸಾಕಷ್ಟು ಸಮೃಧ್ಧ ಸಮಾಜ’ ಆಗುವ ಗುರಿಯ ಭಾಗವಾಗಿ, ಅದನ್ನು ಸಾಧಿಸಲು ಬಡತನ ನಿವಾರಣೆಯ ಮೂಲಭೂತ ಅಗತ್ಯ ಎಂದು ಪರಿಗಣಿಸಲಾಗಿತ್ತು. ಹಾಗಾಗಿ, ಬಡತನದ ಪ್ರಮಾಣವನ್ನು ಅರ್ಧದಷ್ಟುಕಡಿತ ಮಾಡುವ ವಿಶ್ವಸಂಸ್ಥೆಯ ೨೦೧೫ ರ ಸಹಸ್ರಮಾನಅಭಿವೃದ್ಧಿ ಗುರಿಗಳನ್ನು ಸಾಧಿಸಿದ ಮೊದಲ ದೇಶವಾಗಿಚೀನಾ ಹೊಮ್ಮಿತ್ತು. ಆ ನಂತರಚೀನಾ ಆಳವಾದ ಬಡ ಪ್ರದೇಶಗಳು, ಆಳವಾದ ಬಡತನದಲ್ಲಿರುವಜನವಿಭಾಗಗಳ ಬಡತನ ನಿವಾರಣೆ ಮೇಲೆ ಗಮನ ಕೇಂದ್ರೀಕರಿಸಿತ್ತು.
ಚೀನಾ ಬಡತನ ನಿವಾರಣೆಯೋಜನೆಯನ್ನು ‘ಆರು ನಿಖರ ಕ್ರಮಗಳು’ ಮತ್ತು ‘ಐದು ಬ್ಯಾಚ್‌ಗಳು’ – ಇವುಗಳ ಸಹಾಯದಿಂದ ಜಾರಿ ಮಾಡಲಾಯಿತು. ‘ಆರು ನಿಖರ ಕ್ರಮಗಳು’ ಹೀಗಿದ್ದವು : 1. ಬಡವರನ್ನು ನಿಖರವಾಗಿ ಗುರುತಿಸುವುದು 2. ನಿಖರಪ್ರಾಜೆಕ್ಟುಗಳನ್ನು ಏರ್ಪಡಿಸುವುದು 3. ನಿಧಿಯ ಸೂಕ್ತ ಬಳಕೆ 4. ಕುಟುಂಬಗಳನ್ನು ಗುರಿಯಾಗಿಟ್ಟುಕೊಂಡ ಕ್ರಮಗಳು 5. ಗ್ರಾಮಗಳಲ್ಲಿ ಬಡತನ-ನಿವಾರಣೆ ಅಧಿಕಾರಿಗಳನ್ನು ಇರಿಸುವುದು 6. ಬಡತನ ಪರಿಹಾರ/ನಿರ್ವಹಣೆಗಳ ಅಳೆಯಬಹುದಾದ ಪರಿಣಾಮಗಳು. ‘ಐದು ಬ್ಯಾಚ್‌ಗಳು’ ಹೀಗಿದ್ದವು : 1. ಉದ್ಯೋಗ ದೊರಕಿಸಲು ಉತ್ಪಾದನೆ ಹೆಚ್ಚಿಸುವುದು 2. ಸ್ಥಳಾಂತರಗಳ ಮೂಲಕ 3. ಪ್ರಾಕೃತಿಕ ಪರಿಸರದ ಸಂರಕ್ಷಣೆಯ ಉದ್ಯೋಗ ಒದಗಿಸುವುದು 4. ಶಿಕ್ಷಣದ ಮೂಲಕ 5. ಜೀವನಾವಶ್ಯಕ ಭತ್ಯೆಗಳ ಮೂಲಕ. 2014ರಲ್ಲಿ ಬಡವರನ್ನುಗುರುತಿಸಲು 8 ಲಕ್ಷ ಸಿಬ್ಬಂದಿಯನ್ನು ನೇಮಿಸಿತು. 2015ರಲ್ಲಿ ಇದು 20 ಲಕ್ಷಕ್ಕೆ ಏರಿತು. ಬಡವರನ್ನು ಗುರುತಿಸಲು ಮನೆ, ಆಹಾರ, ಕೆಲಸದ ಸಾಮರ್ಥ್ಯ ಮತ್ತು ಶಾಲಾ ಮಕ್ಕಳ ಸಂಖ್ಯೆ ಗಳನ್ನು ಮಾನದಂಡವಾಗಿ ಬಳಸಲಾಯಿತು.
ಇದನ್ನೂ ಓದಿ : 5ಜಿ ರಣರಂಗ: ಚೀನಾದ ಮೇಲೆ ಅಮೆರಿಕಾದ ಟೆಕ್ ಸಮರ
ಚೀನಾ ಕಮ್ಯುನಿಸ್ಟ್ ಪಕ್ಷದ 18ನೇ ಮಹಾಧಿವೇಶನದಲ್ಲಿ ಪ್ರದೇಶಗಳ ನಡುವೆ, ನಗರ-ಗ್ರಾಮಗಳ ನಡುವೆ ಅಭಿವೃದ್ಧಿಯ ಅಸಮಾನತೆಗಳನ್ನು ಹೋಗಲಾಡಿಸವುದು ಎಲ್ಲ ಹಂತಗಳ ಪಕ್ಷದ ಮತ್ತು ಸರಕಾರದ ಜವಾಬ್ದಾರಿ ಎಂದು ವಿಧಿಸಿತು. ತೀವ್ರ ಮತ್ತು ಆಳ ಬಡತನದ ಪ್ರದೇಶಗಳು ಮತ್ತು ಜನವಿಭಾಗಗಳನ್ನು ಗುರುತಿಸಿ ಬಡತನ ಪರಿಹಾರ-ನಿವಾರಣೆ ಕ್ರಮಗಳನ್ನು ಕೈಗೊಳ್ಳುವುದು 13ನೇ ಪಂಚವಾರ್ಷಿಕ ಯೋಜನಾ (2016-20) ಅವಧಿಯಲ್ಲಿಆದ್ಯತೆಯಾಯಿತು. ಪ್ರಾಂತೀಯ ಪಕ್ಷ ಮತ್ತು ಸರಕಾರಗಳ ಜವಾಬ್ದಾರಿ ಕೇಂದ್ರೀಯಯೋಜನೆ ಮತ್ತು ಉಳಿದ ಹಂತಗಳ ಪಕ್ಷ ಮತ್ತು ಸರಕಾರಗಳ ಜವಾಬ್ದಾರಿ ಅದರ ಜಾರಿಯೆಂದು ನಿಗದಿ ಮಾಡಲಾಯಿತು. ಪಕ್ಷದ ಸಮಿತಿ ಸದಸ್ಯರು ಮತ್ತು ಸರಕಾರದ ಅಧಿಕಾರಿಗಳಿಗೆ ಯೋಜನೆ, ಜಾರಿ ಮತ್ತು ಸಾಮಾಜಿಕ ಅಣಿನೆರೆಸುವಿಕೆಯ ಜವಾಬ್ದಾರಿಗಳನ್ನು ಹಂಚಲಾಯಿತು. ಈ ಜವಾಬ್ದಾರಿ ಕೊಡಲಾದ ಆಳ ಮತ್ತು ತೀವ್ರ ಬಡತನದ ಪ್ರದೇಶಗಳ ಅಧಿಕಾರಿಗಳು ಈ ಯೋಜನೆ ಮೂಗಿಯುವ ವರೆಗೆ ವರ್ಗಾವಣೆಯನ್ನು ತಡೆ ಹಿಡಿಯಲಾಯಿತು. 5 ಲಕ್ಷ ಆಯ್ದ ಪಕ್ಷದ ಗ್ರಾಮೀಣ ಶಾಖೆಗಳ ಕಾರ್ಯದರ್ಶಿಗಳನ್ನು ಈ ಯೋಜನೆಯಲ್ಲಿ ತೊಡಗಿಸಲಾಯಿತು. ಈ ಯೋಜನೆಯ ಜಾರಿಗೆ ಲಕ್ಷಾಂತರ ಸ್ಥಳೀಯ ಸಂಗಾತಿಗಳಿಗೆ ಅಗತ್ಯ ಬೆಂಬಲ ನೀಡಲು 2.5 ಲಕ್ಷ ತಂಡಗಳು ಮತ್ತು 30 ಲಕ್ಷ ಸಂಗಾತಿಗಳನ್ನು ಕಳಿಸಲಾಯಿತು. ಕಳೆದ 8 ವರ್ಷಗಳಲ್ಲಿ ಬಡತನ ನಿವಾರಣೆಗೆ 1600 ಶತಕೋಟಿ ಯುವಾನ್ ಹೂಡಿಕೆ ಮಾಡಲಾಯಿತು. 2016-2020 ಅವಧಿಯಲ್ಲಿ 832 ತೀವ್ರ ಬಡತನದ 832 ಪ್ರದೇಶಗಳ ಬಡತನ ನಿವಾರಣೆಗೆ ವಾರ್ಷಿಕ ನಿಧಿ ಕೆಲವು ಕೋಟಿಯುವಾನ್ ಗಳಿಂದ 36 ಕೋಟಿ ಯುವಾನ್ ಗಳಿಗೆ ಏರಿತು. ಬಡತನ ನಿವಾರಣೆಯಾಗಿದೆಯೆ ಇಲ್ಲವೆ ಎಂಬ ನಿರ್ಣಯವನ್ನು ಸ್ವತಂತ್ರ ವಿವಿ ಸಾಮಾಜಿಕ ಸಂಘಟನೆಗಳ ತಂಡಗಳು ಮಾಡಿದವು. ಒಂದು ಪ್ರದೇಶ, ಹಳ್ಳಿ ಅಥವಾ ಕುಟುಂಬದಲ್ಲಿ ಬಡತನ ನಿವಾರಣೆಯಾಗಿದೆಯೆ ಇಲ್ಲವೆ ಎಂದು ನಿರ್ಣಯಿಸಲು – ಬಡತನ ರೇಖೆಗಿಂತ ಹೆಚ್ಚಿರುವ ಸ್ಥಿರ ವಾರ್ಷಿಕ ಆದಾಯ, ಅಗತ್ಯ ಆಹಾರ, ಬಟ್ಟೆ, ಶಿಕ್ಷಣ ಆರೋಗ್ಯ ಸೇವೆಗೆ ಅವಕಾಶ ಮುಂತಾದ ಮಾನದಂಡಗಳನ್ನು ನಿಗದಿಸಲಾಯಿತು. ಈ ತಂಡಗಳು ಬಡತನ ನಿವಾರಣೆ ಅಧಿಕಾರಗಳ ಸಾಧನೆಗಳ ಮೂಲ್ಯಾಂಕನವನ್ನೂ ಮಾಡಿದವು.
ಬಡತನ ನಿವಾರಣೆ ಅಂತಿಮ ಗುರಿಯಲ್ಲ. ಗ್ರಾಮೀಣ ಪುನರುಜ್ಜೀವನ ಮತ್ತು ಸತತ ಅಭಿವೃದ್ಧಿಯ ಗುರಿಯತ್ತ ಪಯಣದ ಆರಂಭ, ಎಂದು ಚೀನಾ ಅಧ್ಯಕ್ಷ ಹೇಳಿದ್ದಾರೆ. ಬಡತನದ ಪೂರ್ಣ ನಿವಾರಣೆಯ ಗುರಿಯನ್ನು 2030ರ ಒಳಗೆ ಮಾಡಬೇಕೆಂದು ವಿಶ್ವಸಂಸ್ಥೆ ನಿಗದಿಸಿತ್ತು. ಚೀನಾ 10 ವರ್ಷಗಳ ಮೊದಲೇ ಅದನ್ನು ಸಾಧಿಸಿದೆ.
ಕೊವಿದ್ ವೈರಾಣು ಒಡ್ಡಿದ ಸವಾಲುಗಳನ್ನು ಎದುರಿಸಲಾಗದೆ ಕುಸಿದ ಅಭಿವೃದ್ಧ ಬಂಡವಾಳಶಾಹಿ ದೇಶಗಳ ಪ್ರಭುತ್ವಗಳು ಅದರ ದೀರ್ಘಕಾಲೀನ ಆರ್ಥಿಕ ದುಷ್ಪರಿಣಾಮಗಳನ್ನು ಎದುರಿಸಲಾಗದೆ ಬಂಡವಾಳಶಾಹಿ ಜಗತ್ತಿನಲ್ಲಿ ಬಡತನದ ತೀವ್ರ ಏರಿಕೆಯ ಸಾಧ್ಯತೆಯನ್ನುಎದುರು ನೋಡುತ್ತಿವೆ. ಅವರಿಗೆ ಬಡತನದ ಪೂರ್ಣ ನಿವಾರಣೆಯ ಚೀನಾದ ಈ ಸಾಧನೆ ನುಂಗಲಾರದ ತುತ್ತಾಗಿದೆ. ಹಾಗಾಗಿ ಚೀನಾದ ಈ ಸಾಧನೆ ಹುಸಿ. ಚೀನಾದಯಾವ ಆರ್ಥಿಕ ಅಂಕೆಸಂಖ್ಯೆಗಳೂ ವಿಶ್ವಾಸಾರ್ಹವಲ್ಲ. ಬಡತನ ರೇಖೆಯನ್ನು ಬದಲಾಯಿಸಿ ಬಡತನ ನಿವಾರಣೆಯ ಘೋಷಣೆ ಮಾಡಲಾಗಿದೆಎಂದು ಸಾಮ್ರಾಜ್ಯಶಾಹಿ ಮಾಧ್ಯಮಗಳು ಅಪಪ್ರಚಾರ ಆರಂಭಿಸಿವೆ. ಆದರೆ ಅದಕ್ಕೆ ಯಾವುದೇ ಆಧಾರಗಳನ್ನು ಒದಗಿಸಿಲ್ಲ.