ಬಾಬು ಜಗಜೀವನ್ ರಾಮ್ ಅವರಿಗೆ ರಾಜಕೀಯ ತಿರುವಿನಲ್ಲಾದ ವಂಚನೆಯ ಘಟ್ಟಗಳು

ಹಾರೋಹಳ್ಳಿ ರವೀಂದ್ರ

ಇಂದು ಜುಲೈ 6, ಅಂದರೆ ಭಾರತದ ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಅವರು ಗತಿಸಿದ ದಿನ. ಈ ಸಂದರ್ಭದಲ್ಲಿ ಅವರ ರಾಜಕೀಯ ಜೀವನದ ಕೆಲವು ಘಟ್ಟಗಳನ್ನು ನಾನಿಲ್ಲಿ ಹೇಳಬೇಕಿದೆ. ಬಾಬು ಜಗಜೀವನ್ ರಾಮ್ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ರಾಜಕಾರಣಿಗಳಲ್ಲಿ ಇವರು ಕೂಡ ಒಬ್ಬರಾಗಿದ್ದವರು. ಇವರನ್ನು ಪ್ರಧಾನಿ ಮಾಡುತ್ತೇನೆಂದು ಶ್ರೀಯುತ ಇಂದಿರಾಗಾಂಧಿ ಅವರು ಸಂಪೂರ್ಣವಾಗಿ ಬಳಸಿಕೊಂಡು ಕೊನೆಗೂ ಇವರನ್ನು ಪ್ರಧಾನಿ ಮಾಡಲೇ ಇಲ್ಲ.

ಕೊನೆಗೆ ಬೇಸರವಾಗಿ 1975 ರಲ್ಲಿ ಕಾಂಗ್ರೆಸ್ ತೊರೆದರು. ಅದು ತುರ್ತುಪರಿಸ್ಥಿಯ ಸಂದರ್ಭ ಬೇರೆ. ಬಾಬು ಜಗಜೀವನ್ ರಾಮ್ ಅವರು ಕಾಂಗ್ರೆಸ್ ನಿಂದ ಹೊರನಡೆದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪ ಹಿನ್ನೆಡೆಯಾಯಿತು. ಇವರನ್ನು ಹೇಗಾದರೂ ಮಾಡಿ ಬಗ್ಗು ಬಡಿಯಬೇಕೆಂದು, ಬಾಬು ಜಗಜೀವನ್ ರಾಮ್ ಅವರ ಮಗನು ಮೆಡಿಕಲ್ ಹುಡುಗಿಯ ಜೊತೆ ಇದ್ದ ಲೈಂಗಿಕ ಸಂಬಂಧವನ್ನು ಸಂಜಯ್ ಗಾಂಧಿ ಬಯಲಿಗೆಳೆದರು. ಸಂಜಯ್ ಗಾಂಧಿ ಆ ಸಂದರ್ಭದಲ್ಲಿ ಕಂಪನಿ ಹಗರಣಗಳಲ್ಲಿ ಜೈಲಿನಲ್ಲಿದ್ದರು. ಜೈಲಿನಲ್ಲಿದ್ದುಕೊಂಡೆ ಅವರ ಮಗನ ಲೈಂಗಿಕ ಸಂಬಂಧ ರಾಷ್ಟ್ರ ಮಟ್ಟದಲ್ಲಿ ಮುಖಪುಟದಲ್ಲಿ ಬರೆಸಲಾಯಿತು. ಆ ಪತ್ರಿಕೆಯ ಸಂಪಾದಕರಾಗಿದ್ದವರು ಸಂಜಯ್ ಗಾಂಧಿ ಹೆಂಡತಿ ಮೇನಕಾ ಗಾಂಧಿ.

ಅಷ್ಟೊತ್ತಿಗಾಗಲೇ ಕಾಂಗ್ರೆಸ್‌ನಲ್ಲಿದ್ದ ಎಲ್ಲಾ ಬ್ರಾಹ್ಮಣರು ಹೊರಬಂದು ಆರ್‌ಎಸ್ಎಸ್ ಹಾಗೂ ಜನತಾ ಪಕ್ಷವನ್ನು ಬೆಂಬಲಿಸಿದರು. ಜಯಪ್ರಕಾಶ್ ನಾರಾಯಣ್ ಅವರ ಜನತಾ ಪಕ್ಷಕ್ಕೆ ಆರ್‌ಎಸ್ಎಸ್ ಸಂಪೂರ್ಣವಾಗಿ ಬೆಂಬಲಿಸಿತು. ಯಾಕೆಂದರೆ ಭಾರತೀಯ ಜನತಾ ಪಕ್ಷ ಬರುವ ಮುನ್ನ ಜನತಾ ಪಕ್ಷವನ್ನೆ ಅವರು ಅವಲಂಭಿಸಿಕೊಂಡಿದ್ದರು. ಕಾಂಗ್ರೆಸ್ ನಿಂದ ಹೊರಬಂದಿದ್ದ ಬಾಬು ಜಗಜೀವನ್ ರಾಮ್ ಸ್ವತಂತ್ರ್ಯವಾಗಿ ಕಾಂಗ್ರೆಸ್ ಫಾರ್ ಡೆಮಾಕ್ರಸಿ ಎಂಬ ಪಕ್ಷ ಕಟ್ಟಿಕೊಂಡು 1977 ರಲ್ಲಿ 38 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ಅದರಲ್ಲಿ 28 ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಕಾಂಗ್ರೆಸ್ ನಿಂದ ಹೊರಬಂದು 28 ಅಭ್ಯರ್ಥಿಗಳನ್ನು ಗೆಲ್ಲಿಸಿದ್ದ ಬಾಬು ಜಗಜೀವನ್ ರಾಮ್ ಅವರ ಕಾಂಗ್ರೆಸ್ ಫಾರ್ ಡೆಮಾಕ್ರಸಿ ಪಾರ್ಟಿಯನ್ನು ನಿಮ್ಮನ್ನೆ ಪ್ರಧಾನಿ ಮಾಡುತ್ತೇವೆಂದು ಜನತಾ ಪಕ್ಷ ವಿಲೀನ ಮಾಡಿಕೊಂಡಿತು. ಅನಂತರ ಇವರನ್ನು ಪ್ರಧಾನಿ ಮಾಡಲು ಆರ್‌ಎಸ್ಎಸ್ ತೀವ್ರವಾಗಿ ವಿರೋಧಿಸಿತು. ಆರ್‌ಎಸ್ಎಸ್ ಬೆಂಬಲದಿಂದ ಮೊರಾರ್ಜಿ ದೇಸಾಯಿ ಪ್ರಧಾನಿಯಾದರು. ಇವರು ಉಪಪ್ರಧಾನಿಗಷ್ಟೆ ಸೀಮಿತವಾದರು.

ಹೀಗೆ ಬಾಬು ಜಗಜೀವನ್ ರಾಮ್ ಅವರನ್ನು ಕಾಂಗ್ರೆಸ್ ಮತ್ತು ಆರ್‌ಎಸ್ಎಸ್ ಎರಡು ಸೇರಿ ಬಳಸಿಕೊಂಡು ಬಿಸಾಡಿಬಿಟ್ಟವು. ಅವರ ಕೊನೆಯ ಕ್ಷಣಗಳಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ದಲಿತರನ್ನು ವಂಚಿಸುತ್ತವೆ. ಕಾಂಗ್ರೆಸ್ ಮತ್ತು ಆರ್‌ಎಸ್ಎಸ್ ಇವು ಒಂದೇ ನಾಣ್ಯದ ಎರಡು ಮುಖಗಳು ಎಂದು ಸ್ವತಹ ಅವರೇ ರಾಷ್ಟ್ರೀಯ ಇಂಗ್ಲೀಷ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಉಲ್ಲೇಕವಾಗಿದೆ. ಇಂದು ಅವರು ಗತಿಸಿದ ದಿನವಾದ್ದರಿಂದ ಅವರ ನೆನಪಿನಾರ್ಥಕವಾಗಿ ಅವರ ರಾಜಕೀಯ ತಿರುವಿನ ಘಟ್ಟವನ್ನು ಪ್ರಸ್ತಾಪಿಸಬೇಕಾಯಿತು.

Donate Janashakthi Media

Leave a Reply

Your email address will not be published. Required fields are marked *