ಬಾಬರಿ ಮಸೀದಿ ಧ್ವಂಸದ ವೇಳೆ ಪ್ರಧಾನಿಯಾಗಿದ್ದ ಕಾಂಗ್ರೆಸ್‌ನ ಪಿ. ವಿ. ನರಸಿಂಹ ರಾವ್‌ಗೆ ಭಾರತ ರತ್ನ ಘೋಷಣೆ

ನವದಹೆಲಿ: ಬಿಜೆಪಿ ಪ್ರೇರಿತ ಸಂಘಪರಿವಾರ ಬಾಬರಿ ಮಸೀದಿ ಒಡೆಯುವ ವೇಳೆ ಭಾರತದ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹ ರಾವ್‌ ಅವರಿಗೆ ಶುಕ್ರವಾರ ಭಾರತ ರತ್ನ ಪ್ರಶಸ್ತಿ ಘೋಷಣೆಯಾಗಿದೆ. ಈ ಬಗ್ಗೆ ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಘೋಷಿಸಿದ್ದಾರೆ. “ನಮ್ಮ ಮಾಜಿ ಪ್ರಧಾನಿ ಶ್ರೀ ಪಿ.ವಿ. ನರಸಿಂಹರಾವ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಾಗುವುದು ಎಂಬುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷವಿದೆ” ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷದ ನಾಯಕರಾದ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್‌ ಅವರ ನಾಯಕತ್ವವನ್ನು ಶ್ಲಾಘಿಸಿದ ಪ್ರಧಾನಿ ಮೋದಿ, “ರಾವ್ ಅವರ ಅಧಿಕಾರಾವಧಿಯು ಜಾಗತಿಕ ಮಾರುಕಟ್ಟೆಗಳಿಗೆ ಭಾರತವನ್ನು ತೆರೆದ ಮಹತ್ವದ ಕ್ರಮಗಳಿಂದ ಗುರುತಿಸಲ್ಪಟ್ಟಿದೆ. ಇದು ಆರ್ಥಿಕ ಅಭಿವೃದ್ಧಿಯ ಹೊಸ ಯುಗವನ್ನು ಉತ್ತೇಜಿಸಿತು. ಇದಲ್ಲದೆ, ಭಾರತದ ವಿದೇಶಾಂಗ ನೀತಿ, ಭಾಷೆ ಮತ್ತು ಶಿಕ್ಷಣಕ್ಕೆ ಅವರ ಕೊಡುಗೆಗಳು ಅಪಾರವಾಗಿದೆ. ವಿಮರ್ಶಾತ್ಮಕ ರೂಪಾಂತರಗಳ ಮೂಲಕ ಭಾರತವನ್ನು ಮುನ್ನಡೆಸಿದ್ದಲ್ಲದೆ ಅದರ ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಯನ್ನು ಶ್ರೀಮಂತಗೊಳಿಸಿದ ನಾಯಕನಾಗಿ ಅವರ ಬಹುಮುಖಿ ಪರಂಪರೆಯನ್ನು ವಲಯಗಳು ಒತ್ತಿಹೇಳುತ್ತವೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರತಿಭಟನೆಗೆ ಬೆದರಿ ದೆಹಲಿ-ನೋಯ್ಡಾ ಗಡಿ ಬಂದ್ | ರೈತರ ಭೇಟಿಗೆ ಒಪ್ಪಿದ ಕೇಂದ್ರ ಸರ್ಕಾರ

ವಾರದ ಹಿಂದೆಯಷ್ಟೆ ದೇಶದಾದ್ಯಂತ ರಥುಯಾತ್ರೆ ನಡೆಸಿ ಕೋಮುಗಲಭೆಗೆ ಕಾರಣರಾಗಿದ್ದ ಮಾಜಿ ಉಪ ಪ್ರಧಾನಿ ಎಲ್‌.ಕೆ. ಅಡ್ವಾನಿಗೆ ಭಾರತ ರತ್ನ ಘೋಷಣೆಯಾಗಿತ್ತು. ಅವರು ಮುನ್ನಡೆಸಿದ್ದ ರಥಯಾತ್ರೆಯ ನಂತರ ದೇಶವ್ಯಾಪಿ ಕೋಮುಗಲಭೆ ನಡೆದು ಹಲವಾರು ಜನರು ಮೃತಪಟ್ಟಿದ್ದರು. ಈ ಕೋಮು ದ್ರುವೀಕರಣ ಬಾಬರಿ ಮಸೀದಿ ಒಡೆಯಲು ಕಾರಣವಾಗಿ, ದೇಶದಾದ್ಯಂತ ಕೋಮು ರಾಜಕಾರಣಕ್ಕೆ ಮುನ್ನುಡಿ ಬರೆಯುತು. ಇದೀಗ ಬಾಬರಿ ಮಸೀದಿ ಒಡೆಯುವ ವೇಳೆ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್ ಅವರಿಗೆ ಭಾರತ ರತ್ನ ಘೋಷಿಸಲಾಗಿದೆ.

ಪ್ರಶಸ್ತಿ ಘೋಷಣೆಯ ಬಗ್ಗೆ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ನಮ್ಮ ಮಾಜಿ ಪ್ರಧಾನಿ ಶ್ರೀ ಪಿ ವಿ ನರಸಿಂಹ ರಾವ್‌ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಾಗುವುದು ಎಂಬುವುದು ಸಂತೋ‍ಷದ ವಿಚಾರವಾಗಿದೆ. ಒಬ್ಬ ಪ್ರಖ್ಯಾತ ವಿದ್ವಾಂಸ ಮತ್ತು ರಾಜನೀತಿಜ್ಞರಾಗಿ, ನರಸಿಂಹ ರಾವ್ ಅವರು ಭಾರತಕ್ಕಾಗಿ ವಿವಿಧ ಹುದ್ದೆಗಳಲ್ಲಿ ವ್ಯಾಪಕವಾಗಿ ಸೇವೆ ಸಲ್ಲಿಸಿದರು. ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಹಲವು ವರ್ಷಗಳ ಕಾಲ ಸಂಸತ್ ಮತ್ತು ವಿಧಾನಸಭೆ ಸದಸ್ಯರಾಗಿ ಅವರು ಮಾಡಿದ ಕೆಲಸಗಳನ್ನು ಸಮಾನವಾಗಿ ನೆನಪಿಸಿಕೊಳ್ಳಲಾಗುತ್ತದೆ. ಅವರ ದೂರದೃಷ್ಟಿಯ ನಾಯಕತ್ವವು ಭಾರತವನ್ನು ಆರ್ಥಿಕವಾಗಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿತು, ದೇಶದ ಸಮೃದ್ಧಿ ಮತ್ತು ಬೆಳವಣಿಗೆಗೆ ಭದ್ರ ಬುನಾದಿ ಹಾಕಿತು” ಎಂದು ಹೇಳಿದ್ದಾರೆ.

“ಪ್ರಧಾನ ಮಂತ್ರಿಯಾಗಿ ನರಸಿಂಹ ರಾವ್ ಅವರ ಅಧಿಕಾರಾವಧಿಯು ಭಾರತವನ್ನು ಜಾಗತಿಕ ಮಾರುಕಟ್ಟೆಗಳಿಗೆ ತೆರೆದು ಆರ್ಥಿಕ ಅಭಿವೃದ್ಧಿಯ ಹೊಸ ಯುಗವನ್ನು ಉತ್ತೇಜಿಸುವ ಮಹತ್ವದ ಕ್ರಮಗಳಿಂದ ಗುರುತಿಸಲ್ಪಟ್ಟಿದೆ. ಇದಲ್ಲದೆ, ಭಾರತದ ವಿದೇಶಾಂಗ ನೀತಿ, ಭಾಷೆ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಅವರ ಕೊಡುಗೆಗಳು ಅವರ ಬಹುಮುಖಿ ಪರಂಪರೆಯನ್ನು ಒತ್ತಿಹೇಳುತ್ತವೆ. ಅವರು ನಿರ್ಣಾಯಕ ರೂಪಾಂತರಗಳ ಮೂಲಕ ಭಾರತವನ್ನು ಮುನ್ನಡೆಸಿದರು ಮಾತ್ರವಲ್ಲದೆ ಅದರ ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಯನ್ನು ಶ್ರೀಮಂತಗೊಳಿಸಿದರು” ಎಂದು ಪ್ರಧಾನಿ ಹೇಳಿದ್ದಾರೆ.

ವಿಡಿಯೊ ನೋಡಿ: ಕೇರಳಕ್ಕೆ ಅನ್ಯಾಯ :ಕೇಂದ್ರ ಸರ್ಕಾರದ ವಿರುದ್ಧ ಕೇರಳ ಸರ್ಕಾರದ ಪ್ರತಿಭಟನೆ

Donate Janashakthi Media

Leave a Reply

Your email address will not be published. Required fields are marked *