ವಸತಿ ಇಲಾಖೆಯಲ್ಲಿ ನಡೆದ ಹಗರಣಗಳನ್ನು ಬಿಚ್ಚಿಟ್ಟ ಬಿ ಆರ್ ಪಾಟೀಲ್

ಬೆಂಗಳೂರು: ವಸತಿ ಇಲಾಖೆಯಲ್ಲಿ ಏನೆಲ್ಲಾ ಹಗರಣ ನಡೆದಿದೆ. ವಸತಿ ಹಂಚಿಕೆಯ ಸಂದರ್ಭದಲ್ಲಿ ಲಂಚದ ಬೇಡಿಕೆ ಯಾವ ರೀತಿಯಲ್ಲಿ ಇದೆ. ಹಿರಿಯ ಶಾಸಕನಾದರೂ ನನಗೆ ಯಾವ ರೀತಿಯಲ್ಲಿ ಅನ್ಯಾಯ ಆಗ್ತಿದೆ? ಹೀಗೆ ವಸತಿ ಇಲಾಖೆಯ ಮನೆ ಹಂಚಿಕೆಯ ಸಂದರ್ಭದಲ್ಲಿ ಅನುಭವಿಸಿದ ತೊಂದರೆಗಳನ್ನು ಬಿ ಆರ್ ಪಾಟೀಲ್ ರಣದೀಪ್ ಸಿಂಗ್ ಸುರ್ಜೇವಾಲ ಮುಂದೆ ಜೂನ್‌ 30 ಸೋಮವಾರದಂದು ಬಿಚ್ಚಿಟ್ಟಿದ್ದಾರೆ. ಹಗರಣ

ಕೆಪಿಸಿಸಿ ಕಚೇರಿಯಲ್ಲಿ ಶಾಸಕರ ಜೊತೆಗೆ ರಣದೀಪ್ ಸಿಂಗ್ ಸುರ್ಜೇವಾಲ ಅವರ ಒನ್ ಟು ಒನ್ ಮಾತುಕತೆ ನಡೆಯಿತು. ಬಿ ಆರ್ ಪಾಟೀಲ್ ಜೊತೆಗೆ ಸುರ್ಜೇವಾಲ ಒನ್ ಟು ಒನ್ ಮಾತುಕತೆ ನಡೆಸಿದರು. ಹಗರಣ

ಒಟ್ಟು 35 ನಿಮಿಷಗಳ ಕಾಲ ಮಾತುಕತೆ ನಡೆಯಿತು. ಈ ವೇಳೆ ಬಿ ಆರ್ ಪಾಟೀಲ್ ಅವರು ವಸತಿ ಇಲಾಖೆ ಕುರಿತ ತಮ್ಮ ಮಾಹಿತಿಯನ್ನು ಸುರ್ಜೆವಾಲಾ ಮುಂದೆ ಬಿಚ್ಚಿಟ್ಟರು. ಕೆಲವೊಂದು ದಾಖಲೆಗಳನ್ನು ನೀಡಿ ತಮ್ಮ ಆರೋಪವನ್ನು ಸಮರ್ಥಿಸಿಕೊಂಡರು. ಹಗರಣ

ಇದನ್ನೂ ಓದಿ: ಆರೆಸ್ಸೆಸ್‌ನ ನಿಜ ಆಶಯ ಬಯಲಾಗಿದೆ- ಸಿಪಿಐ(ಎಂ) ಪೊಲಿಟ್‍ ಬ್ಯುರೊ

ಸೈಲೆಂಟಾಗಿ ಸಮಸ್ಯೆ ಆಲಿಸಿದ ಸುರ್ಜೇವಾಲ

ಬಿ ಆರ್ ಪಾಟೀಲ್ ಆರೋಪಗಳನ್ನು ರಣದೀಪ್ ಸಿಂಗ್ ಸುರ್ಜೇವಾಲ ಸೈಲೆಂಟಾಗಿ ಆಲಿಸಿದರು. ದಾಖಲೆಗಳನ್ನು ನೋಟ್ ಮಾಡಿಕೊಂಡರು. ಅಲ್ಲದೆ ಬೇರೆ ಏನಾದರೂ ಸಮಸ್ಯೆಗಳು ಇದೆಯೇ ಎಂದು ಪ್ರಶ್ನಿಸಿದರು.

ಬಹಿರಂಗ ಚರ್ಚೆ ಬೇಡವೆಂದು ಸಲಹೆ

ಬಿ ಆರ್ ಪಾಟೀಲ್ ಆರೋಪಗಳನ್ನು ನೋಟ್ ಮಾಡಿಕೊಂಡ ಅವರು, ನಿಮ್ಮ ಎಲ್ಲಾ ಮಾತುಗಳನ್ನು ಹೈಕಮಾಂಡ್ ಗಮನಕ್ಕೆ ತರುತ್ತೇನೆ. ಸರ್ಕಾರದ ವರ್ಚಸ್ಸು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಸಮಸ್ಯೆ ಬಗೆಹರಿಸೋಣ. ಆದರೆ, ಬಹಿರಂಗವಾಗಿ ಚರ್ಚೆ ಮಾಡುವುದು ಬೇಡ ಎಂದು ಸಲಹೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಏನಂದ್ರು ಬಿ ಆರ್ ಪಾಟೀಲ್?

ಭೇಟಿ ಬಳಿಕ ಮಾತನಾಡಿದ ಅವರು, ಹೈಕಮಾಂಡ್ ನಾಯಕರು ಕರೆದಿದ್ದರು. ರಣದೀಪ್ ಸಿಂಗ್ ಸುರ್ಜೇವಾಲ ಅವರ ಜೊತೆ ದೀರ್ಘ ಚರ್ಚೆ ಆಗಿದೆ.ನಾನು ಹೇಳಬೇಕಾದದ್ದು ಹೇಳಿದ್ದೇನೆ. ಅವರು ಎಲ್ಲ ವಿಚಾರಗಳನ್ನು ನೋಟ್ ಮಾಡಿಕೊಂಡಿದ್ದಾರೆ. ಮುಂದಿನ ತೀರ್ಮಾನ ಅವರಿಗೆ ಬಿಟ್ಟಿದೆ ಎಂದರು.

ಹೈಕಮಾಂಡ್ ಸೂಚನೆಯಂತೆ ರಾಜ್ಯ ಕಾಂಗ್ರೆಸ್ ಭಿನ್ನಮತ ಶಮನ ಮಾಡಲು ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿಗೆ ಆಗಮಿಸಿದರು. ಮೂರು ದಿನಗಳ ಕಾಲ ಅವರು ಕೆಪಿಸಿಸಿ ಕಚೇರಿಯಲ್ಲಿ ಬೀಡು ಬಿಡಲಿದ್ದು, ಪಕ್ಷದ ಸಂಘಟನೆಯಲ್ಲಿ ಉಂಟಾದ ಬಿರುಕು, ಶಾಸಕರ ಅಸಮಾಧಾನದ ಬಗ್ಗೆ ಒನ್ ಟು ಒನ್ ಮಾತುಕತೆ ನಡೆಸಲಿದ್ದಾರೆ.

ಬೆಂಗಳೂರು ಭೇಟಿ ಹಾಗೂ ಸರಣಿ ಸಭೆಗಳ ಕುರಿತಾಗಿ ಮಾತನಾಡಿದ ಅವರು, ಇದು ಸಂಘಟನಾತ್ಮಕ ಚಟುವಟಿಕೆಯಾಗಿದೆ. ಎಐಸಿಸಿ ಹಾಗೂ ಕೆಪಿಸಿಸಿ ಜಂಟಿಯಾಗಿ ಸಂಘಟನೆ ಕೆಲಸ ಮಾಡಬೇಕಿದೆ. ಎಂಎಲ್‌ಎ ಗಳು ಪಕ್ಷ ಸಂಘಟನೆಗೆ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಭೆ ನಡೆಸುತ್ತಿದ್ದೇನೆ ಎಂದರು.

ನಾಯಕತ್ವ ಬದಲಾವಣೆ ಊಹಾಪೋಹ!

ಮಾಧ್ಯಮದಲ್ಲಿ ಬರುತ್ತಿರುವ ನಾಯಕತ್ವ ಬದಲಾವಣೆ ಕೇವಲ ಊಹಾಪೋಹವಾಗಿದೆ. ಅದೆಲ್ಲ ನಿಮ್ಮ ಕಲ್ಪನೆಮಾತ್ರವಾಗಿದೆ ಎಂದು ಸಿಎಂ ಬದಲಾವಣೆ ಚರ್ಚೆಯನ್ನು ನಿರಾಕರಿಸಿದರು

ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಶಾಸಕರಿಂದ ಮಾಹಿತಿ ಪಡೆಯುತ್ತಿದ್ದೇವೆ. ಕಾಂಗ್ರೆಸ್ ಸಂಘಟನೆ ಅವರವರ ಕ್ಷೇತ್ರದಲ್ಲಿ ಹೇಗಿದೆ ಎಂಬ ವರದಿ ಪಡೆಯುತ್ತಿದ್ದೇವೆ. ಮುಂಚೂಣಿ ಘಟಕಗಳು ಹೇಗೆ ಕೆಲಸ ಮಾಡುತ್ತಿವೆ ಎಂಬ ರಿವ್ಯೂ ಮಾಡುತ್ತಿದ್ದೇವೆ. ಎಷ್ಟು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿವೆ ಮಾಹಿತಿಯನ್ನು ಸಭೆಯಲ್ಲಿ ಪಡೆಯುತ್ತೇವೆ ಎಂದು ತಿಳಿಸಿದರು.

ಸಿಎಂ ಹಾಗೂ ಸಚಿವರಿಗೆ ಇದರಿಂದ ಮಾಹಿತಿ ನೀಡಲು ಅರ್ಥ ಮಾಡಿಕೊಳ್ಳಲು ಅನುಕೂಲ ಆಗಲಿದೆ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಶಾಸಕರಿಂದ ಮಾಹಿತಿ ಪಡೆಯುತ್ತಿದ್ದೇವೆ ಎಂದು ಸುರ್ಜೇವಾಲ ತಿಳಿಸಿದರು.

ಇದನ್ನೂ ನೋಡಿ: ಭೂಸ್ವಾಧೀನ ವಿರೋಧಿಸಿ ಅನ್ನದಾತರಿಂದ ಅಹೋರಾತ್ರಿ ಧರಣಿ Janashakthi Media

Donate Janashakthi Media

Leave a Reply

Your email address will not be published. Required fields are marked *