ಅವತಾರ ಪುರುಷನ ಅವತಾರಕ್ಕೆ ಸ್ಯಾಂಡಲ್‌ವುಡ್ ವಿಕ್ಟ್ರಿ

ಶರಣ್ ಹಾಗೂ ಆಶಿಕಾ ರಂಗನಾಥ್ ಅಭಿನಯದ ʻಅವತಾರ ಪುರುಷʼ ಮೇ 6ರಂದು ಬಿಡುಗಡೆಯಾಗಿದ್ದು, ಚಿತ್ರವು ಪ್ರೇಕ್ಷಕರ ಗಮನ ಸೆಳೆದಿದೆ. ಶರಣ್ ನ ಚಿತ್ರಗಳು ಎಂದಿಗೂ ಮನರಂಜಿಸುವಲ್ಲಿ, ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವಲ್ಲಿ ಮೇಲುಗೈ.

‘ಅವತಾರ ಪುರುಷ’ ಸಿನಿಮಾ ಈಗಾಗಲೇ ಹಲವು ವಿಷಯಗಳಿಂದಾಗಿ ಸದ್ದು ಮಾಡುತ್ತಿದೆ. ಕೋವಿಡ್‌ನಿಂದಾಗಿ ಚಿತ್ರ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿತ್ತು. ಇದೀಗ ಈ ಚಿತ್ರ ಬಿಡುಗಡೆಯಾಗಿದೆ. ಬ್ಲ್ಯಾಕ್‌ ಮ್ಯಾಜಿಕ್‌ ಕಥೆಯಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರುತ್ತಿದ್ದು, ಈಗ ಮೊದಲ ಭಾಗ ತೆರೆಕಂಡಿದೆ. ಚಿತ್ರದ ವಿಶೇಷತೆಯೆಂದರೆ, ವೆಬ್‌ ಸಿರೀಸ್‌ನ ಕಥೆಯನ್ನು ಸಿನಿಮಾವನ್ನಾಗಿಸಿದ್ದಾರೆ ನಿರ್ದೇಶಕ ಸುನಿ. ಶರಣ್‌ ಮೊದಲ ಬಾರಿಗೆ ಇಂತಹ ಸಬ್ಜೆಕ್ಟ್‌ನಲ್ಲಿ ನಟಿಸಿರುವುದರಿಂದ ಜನರ ಪ್ರತಿಕ್ರಿಯೆಯ ಬಗ್ಗೆ ಚಿತ್ರತಂಡಕ್ಕೆ ಹೆಚ್ಚಿನ ಕುತೂಹಲವಿದೆ.

ಕಳೆದುಹೋದ ಮಗನಿಗಾಗಿ ಕಾಯುತ್ತಿರುವ ತಾಯಿಯ ಕಣ್ಣೀರಿನ ಆಧಾರ, ಮಾಟ-ಮಂತ್ರದ ಕಪ್ಪು ಪ್ರಪಂಚದ ಹಿನ್ನೆಲೆ, ಕಣ್ಣಲ್ಲೇ ಮಾತನಾಡುವ ಕಲಾವಿದರ ಪರಿಪೂರ್ಣ ಅಭಿನಯ, ಲವಲವಿಕೆಯ ಮಾತುಗಾರಿಕೆ, ಕ್ಲೈಮ್ಯಾಕ್ಸ್‌ನಲ್ಲೊಂದು ವಿಶಿಷ್ಟ ತಿರುವು, ಎರಡನೇ ಭಾಗ ನೋಡಲು ಕುತೂಹಲ ಹುಟ್ಟಿಸುವ ಹಲವು ಪ್ರಶ್ನೆಗಳು.

ಚಿತ್ರದ ಹಿನ್ನೆಲೆ ಸಂಗೀತದ ಮೂಲಕ ಸಿನಿಮಾದ ಥ್ರಿಲ್‌ ಹೆಚ್ಚಿಸಿರುವ ಅರ್ಜುನ್‌ ಜನ್ಯಾ, ಕ್ಯಾಮೆರಾದ ಮೂಲಕ ವಿಶಿಷ್ಟ ಜಗತ್ತನ್ನು ಸೃಷ್ಟಿಸಿರುವ ವಿಲಿಯಂ ಡೇವಿಡ್‌, ತನ್ನೆಲ್ಲಾ ಲೈವ್ಲಿನೆಸ್‌ ಅನ್ನು ಸಿನಿಮಾದಲ್ಲಿ ತರಲು ಯತ್ನಿಸಿರುವ ನಿರ್ದೇಶಕ ಸಿಂಪಲ್‌ ಸುನಿ, ಧ್ವನಿ ಮತ್ತು ತನ್ನ ಇರುವಿಕೆಯ ಮೂಲಕವೇ ಮಂತ್ರಮುಗ್ಧಗೊಳಿಸುವ ಶ್ರೀನಗರ ಕಿಟ್ಟಿ, ಪಾತ್ರವೇ ಹಾಗೇ ಮನಸ್ಸಲ್ಲಿ ಉಳಿಯುವ ಪ್ರತಿಯೊಬ್ಬ ಕಲಾವಿದರಿಂದ ಈ ಸಿನಿಮಾ ಹೆಚ್ಚು ಆಪ್ತವಾಗಿದೆ. ಅವತಾರ ಪುರುಷ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ.

Donate Janashakthi Media

Leave a Reply

Your email address will not be published. Required fields are marked *