ಕಲಾ ವಿಮರ್ಶಕ, ಕೂಲಿಕಾರರ ರಾಷ್ಟ್ರ ನಾಯಕ ಸುನಿತ್‌ಚೋಪ್ರಾ ನಿಧನ

ನವದೆಹಲಿ : ಭಾರತದ ಕೃಷಿ ಕೂಲಿಕಾರರ ಆಂದೋಲನದ ಹಿರಿಯ ಮುಖಂಡ ಸುನಿತ್‌ಚೋಪ್ರಾ  ಎಪ್ರಿಲ್ ೫ರಂದು ನಿಧನರಾಗಿದ್ದಾರೆ. ದಿಲ್ಲಿಯ ಹೊರವಲಯದಲ್ಲಿರುವ ಗುರ್ಗಾಂವ್‌ ನಿಂದ ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿದ್ದ ಮಜ್ದೂರ್-ಕಿಸಾನ್‌ಸಂಘರ್ಷ ರ‍್ಯಾಲಿಯ ಸಿದ್ಧತೆಯಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾಗ ಕುಸಿದುಬಿದ್ದ ಸುನೀತ್‌ಚೋಪ್ರಾ ಅವರ ನಿಧನಕ್ಕೆ ಸಿಪಿಐ(ಎಂ) ಪೊಲಿಟ್ ಬ್ಯೂರೋ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಸುನೀತ್‌ಚೋಪ್ರಾಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಚಳವಳಿಯಲ್ಲಿ ಸಕ್ರಿಯರಾಗಿದ್ದರು ಮತ್ತುಎಸ್‌ಎಫ್‌ಐನ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾದರು. ಅವರು ೧೯೭೨ ರಲ್ಲಿ ಸಿಪಿಐಎಂ ಪಕ್ಷಕ್ಕೆ ಸೇರಿದರು.

ಸುನೀತ್‌ ಅವರು ಮುಂದೆ ಯುವ ಸಂಘಟನೆಯಾದ ಡಿವೈಎಫ್‌ಐ ನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದರು.

ಅವರು ಕೃಷಿ ಕಾರ್ಮಿಕರ ಚಳವಳಿಯ ಸಮರ್ಪಿತ ಕಾರ್ಯಕರ್ತರಾಗಿ ಭಾರತದ ವಾಯುವ್ಯ ಭಾಗದಲ್ಲಿ ಕೃಷಿ ಕಾರ್ಮಿಕರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಸುದೀರ್ಘ ಕಾಲ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದಜಂಟಿ ಕಾರ್ಯದರ್ಶಿಯಾಗಿದ್ದರು. ಸುನೀತ್‌ಚೋಪ್ರಾಅವರು ೧೯೯೫ ರಲ್ಲಿ ೧೫ ನೇ ಮಹಾಧಿವೇಶನದಲ್ಲಿ ಸಿಪಿಐ(ಎಂ) ಕೇಂದ್ರ ಸಮಿತಿಗೆ ಆಯ್ಕೆಯಾದರು ಮತ್ತು ೨೦೧೫ ರವರೆಗೆ ಆ ಸ್ಥಾನದಲ್ಲಿ ಇದ್ದರು. ಕಲೆಯ ಬಗ್ಗೆ ತಮ್ಮ ವ್ಯಾಪಕ ಓದು ಮತ್ತು ಜ್ಞಾನದಿಂದಾಗಿ ಅವರೊಬ್ಬ ಪ್ರಸಿದ್ಧ ಕಲಾ ವಿಮರ್ಶಕರಾದರು. ಅವರ ನಿಧನದಿಂದ ಪಕ್ಷವುಒಬ್ಬ ಬದ್ಧ ಮಾರ್ಕ್ಸವಾದಿಯನ್ನು ಕಳೆದುಕೊಂಡಿದೆ ಎನ್ನುತ್ತ ಪೊಲಿಟ್‌ ಬ್ಯುರೊ ಅವರ ಕುಟುಂಬದ ಎಲ್ಲ ಸದಸ್ಯರಿಗೆ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸಿದೆ.

ಕಾಂ. ಸುನೀತ್‌ಚೋಪ್ರಾ ಅರ್ಧ ಶತಮಾನದ ಕಾಲ ಹೋರಾಟಗಳಲ್ಲಿ ಸಂಗಾತಿಯಾಗಿದ್ದರು ಎಂದಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ, ೧೯೭೩ರಲ್ಲಿ ಜೆಎನ್‌ಯು ನಲ್ಲಿ ಭೇಟಿಯಾದಾಗಿನಿಂದ ಸಮಾಜವಾದಕ್ಕಾಗಿ ಜನಗಳ ಹೋರಾಟಗಳ ಏಳು-ಬೀಳುಗಳಲ್ಲಿ ಜತೆಯಾಗಿ ಪಯಣಿಸಿದ್ದೆವು , ಅವರು ಅವಿರತವಾಗಿ ಜನತೆಯ ಹಿತಾಸಕ್ತಿಗಳನ್ನು ಪ್ರತಿಪಾದಿಸಿಕೊಂಡು ಬಂದಿದ್ದರು ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಸಮಸ್ತ ಪ್ರಜಾಪ್ರಭುತ್ವವಾದಿ-ಪ್ರಗತಿಶೀಲ ಚಳುವಳಿಗೆ ನಷ್ಟ- ಎಐಎಡಬ್ಲೂಯು
ಕಾಂ. ಸುನಿತ್‌ಚೋಪ್ರಾ ನಿಧನ ದೇಶದ ಕಮ್ಯುನಿಸ್ಟ್ಆಂ ದೋಲನಕ್ಕೆ ಮಾತ್ರವಲ್ಲ, ಸಮಸ್ತ ಪ್ರಜಾಪ್ರಭುತ್ವವಾದಿ ಮತ್ತು ಪ್ರಗತಿಶೀಲ ಚಳುವಳಿಗೂ ಆಗಿರುವ ನಷ್ಟ ಎಂದು ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ( ಎಐಎಡಬ್ಲೂಯು ) ದ ಕೇಂದ್ರೀಯ ಕಾರ್ಯಕಾರಿ ಸಮಿತಿ ಶ್ರದ್ಧಾಂಜಲಿ ಅರ್ಪಿಸುತ್ತ ಹೇಳಿದೆ.
ಸುನಿತ್‌ಚೋಪ್ರಾ ೧೯೯೧ರಿಂದ ಇತ್ತೀಚೆಗೆ ೨೦೨೩ರಲ್ಲಿ ನಡೆದ ೧೦ನೇ ರಾಷ್ಟ್ರೀಯ ಸಮ್ಮೆಳನದಲ್ಲಿ ಬಿಡುಗಡೆ ಪಡೆಯುವವರೆಗೆ ಎಐಎಡಬ್ಲೂಯು  ಜಂಟಿ  ಕಾರ್ಯದರ್ಶಿಯಾಗಿ ನೇತೃತ್ವ ನೀಡಿದ್ದರು. ಅವರದ್ದು ದೇಶದ ಕೃಷಿ ಕೂಲಿಕಾರರ ಮತ್ತುಗ್ರಾಮೀಣ ಬಡವರ ಹೋರಾಟಗಳಲ್ಲಿ ಚಿರಪರಿಚಿತ ಮುಖ ಎಂದು ಎಐಎಡಬ್ಲೂಯು  ಕೇಂದ್ರಕಾರ್ಯಕಾರಿ ಸಮಿತಿ ಹೇಳಿದೆ. ಕಮ್ಯುನಿಸ್ಟ್  ಚಳುವಳಿಗೆ ಅವರ ಪ್ರವೇಶ ಲಂಡನಿನ ಸ್ಕೂಲ್‌ ಆಫ್‌ ಓರಿಯೆಂಟಲ್‌ ಅಂಡ್‌ ಆಫ್ರಿಕನ್ ಸ್ಟಡೀಸ್ ನಲ್ಲಿ ವಿದ್ಯಾರ್ಥಿಯಾಗಿದ್ದಾಗ ನಡೆದಿತ್ತು. ಅಲ್ಲಿಅಧ್ಯಯನ ಮುಗಿಸಿದ ಕೂಡಲೇಅವರು ಪ್ಯಾಲೆಸ್ತೇನ್‌ ವಿಮೋಚನಾ ಚಳುವಳಿ ಸೇರಿದರು. ನಂತರ ಭಾರತಕ್ಕೆ ಹಿಂದಿರುಗಿದ ಅವರು ಜೆಎನ್‌ಯು ನ ಪ್ರಾದೇಶಿಕ ಅಭಿವೃದ್ಧಿಅಧ್ಯಯನ ಕೇಂದ್ರವನ್ನು ಸೇರಿದರು. ಅಲ್ಲಿ ತಮ್ಮನ್ನು ವಿದ್ಯಾರ್ಥಿ ಚಳುವಳಿಯಲ್ಲಿ ತೊಡಗಿಸಿಕೊಂಡರು. ಅವರು ಎಸ್‌ಎಫ್‌ಐನ ಸಂವಿಧಾನಕರಡು ರಚಿಸಿದವರಲ್ಲಿ ಒಬ್ಬರಾಗಿದ್ದರು. ಅವರು ೧೯೮೦ರಲ್ಲಿ ಯುವಜನ ಚಳುವಳಿಯಲ್ಲಿ ಡಿವೈಎಫ್‌ಐನ ಸಂಸ್ಥಾಪಕ ಖಜಾಂಚಿಯಾಗಿ ಚುನಾಯಿತರಾದರು, ಅವರು ಭಾರತ-ಕೊರಿಯ ಮೈತ್ರಿಸಂಘದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು ಎಂದು ಅವರ ಎಐಎಡಬ್ಲೂಯು ಸೇವೆಯನ್ನು ನೆನಪಿಸಿಕೊಂಡಿದೆ.

ಪ್ರತಿಟನ್‌ಕಬ್ಬಿಗೆ ೫೦೦೦ರೂ., ಮುಚ್ಚಿದ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ತೆರೆಯಲು ಬಡ್ಡಿರಹಿತ ಸಾಲ – ಅಖಿಲ ಭಾರತಕಬ್ಬುರೈತರಒಕ್ಕೂಟದಆಗ್ರಹ
ಕರ್ನಾಟಕ ಸೇರಿದಂತೆ ೯ ರಾಜ್ಯಗಳಿಂದ ಬಂದ ಕಬ್ಬು ಬೆಳೆಗಾರರು ಎಪ್ರಿಲ್ ೬ರಂದು ತಮ್ಮ ಬೇಡಿಕೆಗಳ ಮೇಲೆ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಿದರು. ಎಐಕೆಎಸ್‌ಗೆ ಸೇರಿರುವ ಅಖಿಲ ಭಾರತ ಕಬ್ಬು ರೈತರ ಒಕ್ಕೂಟ(ಎಐಎಸ್‌ಎಫ್‌ಎಫ್) ಇದಕ್ಕೆ ನೇತೃತ್ವ ನೀಡಿತ್ತು. ಕೇಂದ್ರ ಸರಕಾರದಕಬ್ಬು ಬೆಳಗಾರರ-ವಿರೋಧಿ ಧೋರಣೆಗಳನ್ನು ಪ್ರತಿಭಟಿಸಿ ಈ ಧರಣಿ ನಡೆಸಲಾಯಿತು ಎಂದು ಎಐಎಸ್‌ಎಫ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಸಕ್ತ ಹಂಗಾಮಿಗೆ ೯.೫% ರಿಕವರಿಯಲ್ಲಿ ಕ್ವಿಂಟಾಲಿಗೆ ೫೦೦ರೂ ಅಥವಟನ್ನಿಗೆ ೫೦೦೦ ರೂ. ನಿಗದಿ ಮಾಡಬೇಕು ಮತ್ತು೧೯೬೬ರ ಸಕ್ಕರೆ ಹತೋಟಿ ಆದೇಶದಂತೆ, ಸರಬರಾಜು ಮಾಡಿದ ಕಬ್ಬಿಗೆ ೧೪ ದಿನಗಳಲ್ಲಿ ಹಣ ಪಾವತಿಸಬೇಕು ಮತ್ತುಎಲ್ಲಾ ಬಾಕಿಗಳನ್ನು ತಕ್ಷಣವೇ ಚುಕ್ತಾ ಮಾಡಬೇಕು ಎಂಬುದು ಈ ಧರಣಿಯ ಮುಖ್ಯ ಬೇಡಿಕೆಗಳು. ಎಐಎಸ್‌ಎಫ್‌ಎಫ್‌ ಅಧ್ಯಕ್ಷ ಡಿ.ರವೀಂದ್ರನ್ ಮತ್ತು ಪ್ರಧಾನ ಕಾರ್ಯದರ್ಶಿ ಎನ್ ಕೆ ಶುಕ್ಲ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯನ್ನು ಉದ್ದೇಶಿಸಿ ಎಐಕೆಎಸ್ ಪ್ರಧಾನ ಕಾರ್ಯದರ್ಶಿ ವಿಜುಕೃಷ್ಣನ್, ಉಪಾಧ್ಯಕ್ಷರಾದ ಹನ್ನನ್ ಮೊಲ್ಲ ಮತ್ತು ಹಣಕಾಸು ಕಾರ್ಯದರ್ಶಿ ಕೃಷ್ಣ ಪ್ರಸಾದ್ ಮಾತನಾಡಿದರು.

ದೇಶದ ಕಬ್ಬು ಬೆಳೆಗಾರರ ಪ್ರಮುಖ ಬೇಡಿಕೆಗಳನ್ನು ಕುರಿತಂತೆ ಕೇಂದ್ರ ಕೃಷಿ ಮಂತ್ರಿಗಳಿಗೆ ಸ್ಮರಣ ಪತ್ರವನ್ನು ಸಲ್ಲಿಸಲಾಯಿತು. ಇದಕ್ಕೆ ಮೊದಲು ಅಖಿಲ ಭಾರತ ಕಬ್ಬು ರೈತರ ಒಕ್ಕೂಟ (ಎಐಎಸ್‌ಎಫ್‌ಎಫ್) ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಒಕ್ಕೂಟದ ಎಂ.ಡಿ.ಯವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಮುಚ್ಚಿದ ಸಹಕಾರಿ ಮತ್ತು ಸಾರ್ವಜನಿಕ ವಲಯದ ಸಕ್ಕರೆ ಕಾರ್ಖಾನೆಗಳನ್ನು ತೆರೆಯಲು ಮತ್ತು ನಿರ್ವಹಿಸಲು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದಿಂದ ಬಡ್ಡಿ ರಹಿತ ಸಾಲವನ್ನು ಒದಗಿಸಬೇಕೆಂದು, ಅವರ ಮೂಲಕ ಭಾರತ ಸರಕಾರವನ್ನುಕೋರಲಾಗಿತ್ತು.

೪೦ ವರ್ಷಗಳ ಹಿಂದೆ ಸ್ಥಾಪಿಸಲಾದ ಸಹಕಾರಿ ಮತ್ತು ಸಾರ್ವಜನಿಕ ವಲಯದ ಕಾರ್ಖಾನೆಗಳನ್ನು ನವೀಕರಿಸಬೇಕು ಮತ್ತು ಆಧುನೀಕರಿಸಬೇಕು. ಇದಕ್ಕಾಗಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದಿಂದ ನಿಧಿಯನ್ನು ನೀಡಬೇಕೆಂದೂ ಈ ಮನವಿಯಲ್ಲಿ ಕೋರಲಾಗಿದೆ. ಕೇಂದ್ರ ಸರ್ಕಾರವು ೨೦೨೫ ರ ವೇಳೆಗೆ ಎಥೆನಾಲ್‌ ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆಯನ್ನು ಪ್ರಕಟಿಸಿದೆ. ಇದಕ್ಕಾಗಿ ದೇಶಾದ್ಯಂತ ಸಹಕಾರಿ ಸಕ್ಕರೆ ಕಾರ್ಖಾನೆಗಳಲ್ಲಿ ಎಥೆನಾಲ್ ಸ್ಥಾವರಗಳನ್ನು ಸ್ಥಾಪಿಸಬೇಕೆಂದು ವಿನಂತಿಸಿರುವ ಮನವಿ ಪತ್ರ ಮಹಾರಾಷ್ಟ್ರವು ಗರಿಷ್ಠ ಸಂಖ್ಯೆಯ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದು, ಅದಕ್ಕೆ ಆದ್ಯತೆ ನೀಡಬೇಕು ಎಂದು ಕೇಳಿದೆ. ೧೯೬೬ರ ಸಕ್ಕರೆ ಹತೋಟಿ ಆದೇಶದಂತೆ, ಸರಬರಾಜು ಮಾಡಿದ ಕಬ್ಬಿಗೆ ೧೪ ದಿನಗಳಲ್ಲಿ ಹಣಪಾವತಿಸಬೇಕು ಮತ್ತುಎಲ್ಲಾ ಬಾಕಿಗಳನ್ನು ತಕ್ಷಣವೇ ಚುಕ್ತಾ ಮಾಡಬೇಕೆಂದೂ ಮನವಿ ಪತ್ರದಲ್ಲಿಎಐಎಸ್‌ಎಫ್‌ಎಫ್ ಸರಕಾರವನ್ನು ಆಗ್ರಹಿಸಿದೆ.

ಪ್ರಸಕ್ತ ಹಂಗಾಮಿಗೆ ೯.೫% ರಿಕವರಿಯಲ್ಲಿ ಕ್ವಿಂಟಾಲಿಗೆ ೫೦೦ ರೂ ಅಥವಟನ್ನಿಗೆ ೫೦೦೦ರೂ. ನಿಗದಿ ಮಾಡಬೇಕು ಎಂದೂ ಎಐಎಸ್‌ಎಫ್‌ಎಫ್‌ನ ಪ್ರಧಾನ ಕಾರ್ಯದರ್ಶಿ ಎನ್.ಕೆ.ಶುಕ್ಲ ಮತ್ತು ಅಧ್ಯಕ್ಷರಾದಡಿ.ರವೀಂದ್ರನ್ ಈ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *