ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯನ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಾಕ್ಸರ್‌ಗಳು ದಾಖಲೆಯ ಪದಕವನ್ನು ಗೆಲ್ಲುವುದರೊಂದಿಗೆ ಮತ್ತೊಂದು ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ದೇಶವು ಅಗ್ರಗಣ್ಯ ಸಾಧನೆ ಮಾಡಿದೆ.
ಭಾರತದ ಜೂನಿಯರ್ ಬಾಕ್ಸರ್‌ಗಳು ಏಷ್ಯನ್ ಜೂನಿಯರ್ ಮತ್ತು ಯೂತ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 8 ಚಿನ್ನ ಸಹಿತ ಒಟ್ಟು ದಾಖಲೆಯ 21 ಪದಗಳನ್ನು ಪಡೆದಿದ್ದಾರೆ. ಭಾನುವಾರ ನಡೆದ ಫೈನಲ್ಸ್ನಲ್ಲಿ ಭಾರತದ 13 ಜೂನಿಯರ್(ಬಾಲಕ ಮತ್ತು ಬಾಲಕಿ) ಬಾಕ್ಸರ್‌ಗಳು ಕಾದಾಟ ನಡೆಸಿದರು. ಈವರುಗಳಲ್ಲಿ 8 ಮಂದಿ ಚಿನ್ನ ಗೆದ್ದರೆ, ಐವರು ಮಂದಿ ಬೆಳ್ಳಿ ಗೆದ್ದರು. ಇದಕ್ಕೂ ಮೊದಲೇ 6 ಬಾಕ್ಸರ್‌ಗಳು ಸೆಮಿಫೈನಲ್ನಲ್ಲಿ ಸೋತು ಕಂಚು ಪಡೆದರು.
ಇದನ್ನು ಓದಿ: ಚಿನ್ನಕ್ಕೆ ಗುರಿಯಿಟ್ಟ ಶೂಟರ್ : ಇತಿಹಾಸ ನಿರ್ಮಿಸಿದ ಅವನಿ ಲೇಖರಾ
ಬಾಲಕರ ಫೈನಲ್ಸ್ನಲ್ಲಿ ಒಟ್ಟು 3 ಮಂದಿ ಸ್ಪರ್ಧಿಸಿದರು ಹಾಗೂ 10 ಬಾಲಕಿಯರು ಫೈನಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬಾಲಕರ ವಿಭಾಗದಲ್ಲಿ ರೋಹಿತ್ ಚಮೋಲಿ(48 ಕೆಜಿ), ಭರತ್ ಜೂನ್(81+ಕೆಜಿ) ಚಿನ್ನ ಗೆದ್ದರೆ, ಗೌರವ್ ಸೈನಿ(70ಕೆಜಿ) ಬೆಳ್ಳಿಗೆ ತೃಪ್ತಿಪಟ್ಟುಕೊಂಡರು.
ಜೂನಿಯರ್ ಬಾಲಕಿಯರ ವಿಭಾಗದಲ್ಲಿ ವಿಶು ರಥಿ(48ಕೆಜಿ), ತನು(52ಕೆಜಿ), ನಿಕಿತಾ ಚಾಂದ್(60ಕೆಜಿ), ಮಹಿ ರಾಘವ್(63ಕೆಜಿ), ಪ್ರಂಜಾಲ್ ಯಾದವ್(75ಕೆಜಿ) ಮತ್ತು ಕೀರ್ತಿ(81+ಕೆಜಿ) ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಸಂಜನಾ(81ಕೆಜಿ) ರುದ್ರಿಕಾ(70 ಕೆಜಿ) ಮುಸ್ಕಾನ್(46ಕೆಜಿ) ಮತ್ತು ಆಂಚಲ್ ಸೈನಿ(57ಕೆಜಿ) ಫೈನಲ್ನಲ್ಲಿ ಸೋಲು ಕಂಡು ಬೆಳ್ಳಿಗೆ ಕೊರೊಳೊಡ್ಡಿದರು.
ಒಟ್ಟಾರೆ ಭಾರತ ಬಾಲಕರ ವಿಭಾಗದಲ್ಲಿ 2 ಚಿನ್ನ, 1 ಬೆಳ್ಳಿ ಮತ್ತು 3 ಕಂಚು ಗೆದ್ದರೆ, ಬಾಲಕಿಯರ ವಿಭಾಗದಲ್ಲಿ 6 ಚಿನ್ನ, 4 ಬೆಳ್ಳಿ ಮತ್ತು 3 ಕಂಚು ಗೆದ್ದರು. ಒಟ್ಟು 19 ಪದಕ ತಮ್ಮದಾಗಿಸಿಕೊಂಡರು. 63 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ಮಹಿ ರಾಘವ್ ಬಾಲಕಿಯರ ವಿಭಾಗದಲ್ಲಿ ಅತ್ಯುತ್ತಮ ಬಾಕ್ಸರ್ ಎನಿಸಿಕೊಂಡಿದ್ದಾರೆ.
ಪಂದ್ಯಾವಳಿಯಲ್ಲಿ, ಯುವ ವಿಭಾಗದಲ್ಲಿ, ವಿಜೇತರಿಗೆ $6000, ಬೆಳ್ಳಿ ಪದಕ ವಿಜೇತರಿಗೆ 3000 ಮತ್ತು ಕಂಚಿನ ಪದಕ ವಿಜೇತರಿಗೆ $ 1500 ನೀಡಲಾಗುತ್ತದೆ. ಅದೇ ಸಮಯದಲ್ಲಿ, ಜೂನಿಯರ್ ಚಾಂಪಿಯನ್‌ಗೆ $ 4000 ರೂ ಚಿನ್ನದ ಪದಕಕ್ಕೆ, ಬೆಳ್ಳಿ ಪದಕಕ್ಕೆ 2000 ಮತ್ತು ಕಂಚಿನ ಪದಕಕ್ಕೆ $ 1000 ಸಿಗುತ್ತದೆ. ಕೊರೊನಾ ವೈರಸ್‌ನಿಂದಾಗಿ ಈ ವರ್ಷ ಹಲವು ದೇಶಗಳು ಈ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿಲ್ಲ.