ಈ ಬಾರಿ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದಿಂದ ಬರೋಬರಿ 303 ಅಥ್ಲೀಟ್‌ಗಳು

ಹಾಂಗ್‌ಝೋ : ಈ ಬಾರಿ ನಡೆಯಲಿರುವ 4ನೇ ಆವೃತ್ತಿ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದಿಂದ ಬರೋಬರಿ 303 ಅಥ್ಲೀಟ್‌ಗಳು ಸ್ಪರ್ಧಿಸಲಿದ್ದಾರೆ. ಕ್ರೀಡಾ ಸಚಿವಾಲಯ ಈ ಬಾರಿ 191 ಪುರುಷರು, 112 ಮಹಿಳಾ ಕ್ರೀಡಾಪಟುಗಳನ್ನು ಕಳುಹಿಸಲು ಸಿದ್ದವಾಗಿದೆ. ಚೀನಾದಲ್ಲಿ ಅ.22ರಿಂದ 28ರ ವರೆಗೆ ನಡೆಯಲಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದಿಂದ ದಾಖಲೆಯ 303 ಅಥ್ಲೀಟ್‌ಗಳು ಸ್ಪರ್ಧಿಸುತ್ತಿರುವುದು, ಈ ವರೆಗಿನ ಗರಿಷ್ಠ ಸಂಖ್ಯೆಯಾಗಿದೆ.

ಜಕಾರ್ತದಲ್ಲಿ ನಡೆದಿದ್ದ 2018ರ ಪ್ಯಾರಾ ಏಷ್ಯಾಡ್‌ನಲ್ಲಿ ಭಾರತದ 190 ಮಂದಿ ಸ್ಪರ್ಧಿಸಿದ್ದರು. ಇದೇ ಮೊದಲ ಬಾರಿಗೆ ಭಾರತದಿಂದ 300ಕ್ಕೂ ಹೆಚ್ಚು ಸ್ಪರ್ಧಿಗಳು ಪ್ಯಾರಾ ಏಷ್ಯಾಡ್‌ನಲ್ಲಿ ಕಾಳಗಕ್ಕಿಳಿಯುತ್ತಿದ್ದಾರೆ. ಕರ್ನಾಟಕದಿಂದ 26 ಸ್ಪರ್ಧಿಗಳು ಸಹ ಭಾರತ ತಂಡದಲ್ಲಿ ಇದ್ದು, ಈಜು, ಅಥ್ಲೆಟಿಕ್ಸ್, ಪವರ್‌ಲಿಫ್ಟಿಂಗ್, ಬೋಸಿಯಾ ಸೇರಿ ಇನ್ನೂ ಕೆಲ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ.

ಭಾರತೀಯರು 17 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದು, 123 ಮಂದಿ ಅಥ್ಲೆಟಿಕ್ಸ್‌ನಲ್ಲೇ ಕಣಕ್ಕಿಳಿಯಲಿದ್ದಾರೆ. ಈ ಬಾರಿ ಅ.19ರಿಂದಲೇ ಸ್ಪರ್ಧೆಗಳು ಆರಂಭಗೊಳ್ಳಲಿದ್ದು, ಅ.22ಕ್ಕೆ ಅಧಿಕೃತವಾಗಿ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ. 2018ರಲ್ಲಿ ಭಾರತ 72 ಪದಕ ಗೆದ್ದಿತ್ತು. ಈ ಬಾರಿ ಇನ್ನು ಹೆಚ್ಚು ಪದಕಗಳನ್ನು ಗೆಲ್ಲುವ ನಿರೀಕ್ಷೆಯಿದೆ.

Donate Janashakthi Media

Leave a Reply

Your email address will not be published. Required fields are marked *