ಬೆಂಗಳೂರು : ಕೊಟ್ಯಂತರ ರೂಪಾಯಿಯಷ್ಟು ಹಣವನ್ನು ನುಂಗಿ ಬಿಬಿಎಂಪಿಗೆ ವಂಚನೆ ಮಾಡಿರುವ ಸಹಾಯಕ ಪ್ರಾಧ್ಯಾಪಕ ಚಿರಾಗ್ ಎಸ್ ಬಂಧನಕ್ಕೆ ಅಗ್ರಹಿಸಿ ದಲಿತ ಪರ ಸಂಘಟನೆಗಳು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಒಕ್ಕೊರಲಿನ ಮನವಿ ಮಾಡಿವೆ.
ಜ್ಯೋತಿ ನಿವಾಸ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಚಿರಾಗ್ ಅವರು ಪೌರ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ವಂಚಿಸಿ ಪೋರ್ಜರಿ ದಾಖಲೆ ಸೃಷ್ಟಿಸಿ ಬಿಬಿಎಂಪಿ ಬೊಕ್ಕಸಕ್ಕೆ ಒಂದು ಕೋಟಿ ರೂ.ಗಳಿಗೂ ಹೆಚ್ಚು ಣ ವಂಚಿಸಿದ್ದಾರೆ ಎಂದು ನ್ಯಾಯಕ್ಕಾಗಿ ಹೋರಾಟ ಸಮಿತಿ ಆರೋಪಿಸಿದೆ.
ಈ ಕುರಿತಂತೆ ಸಭೆ ನಡೆಸಿದ ದಲಿತ ಸಂಘಟನೆಗಳ ಮುಖಂಡರುಗಳು ಅಪರಾಧ ಮಾಡಿರುವ ಚಿರಾಗ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿ : ನೈತಿಕತೆ ಇದ್ರೆ ಸಿಎಂ ಸಿದ್ದರಾಮಯ್ಯ ರಿಂದ 4 ಸಚಿವರು ರಾಜೀನಾಮೆ ಪಡೆಯಲಿ: ಆರ್. ಅಶೋಕ್ ಸವಾಲ್
ಪೌರ ಕಾರ್ಮಿಕರ ಅವಲಂಬಿತರ ಒಕ್ಕೂಟದ ಅಧ್ಯಕ್ಷ ಮೋಹನ್ , ರಾಜ್ಯಾಧ್ಯಕ್ಷ ಎಂ.ಸಿ. ಶ್ರೀನಿವಾಸ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ದಾಸ್, ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಜನಜಾಗತಿ ಸಮಿತಿ ರಾಜ್ಯಾಧ್ಯಕ್ಷ ಸೂರ್ಯಚಂದ್ರ ಮಂಜಣ್ಣ, ಜೈಭೀಮ್ ನೀಲಿ ಸೇನೆಯ ಜಿಲ್ಲಾಧ್ಯಕ್ಷ ತ್ಯಾಗರಾಜು, ಸುವರ್ಣ ಕರ್ನಾಟಕ ರಾಜ್ಯದಲಿತ ಕ್ರಿಯ ಸಮಿತಿ ಅಧ್ಯಕ್ಷ ಜಿ.ವೇಲು, ದಲಿತ ಸಫಾಯಿ ಕರ್ಮಚಾರಿ ಸಂಘ ರಾಜ್ಯಾಧ್ಯಕ್ಷರಾದ ಚಂದ್ರು, ದಲಿತ ಪರ ಹೋರಾಟಗಾರ ವಿಜಯ್ ಕುಮಾರ್, ದಲಿತ ಸಂರಕ್ಷಣೆ ವೇದಿಕೆ ಅಧ್ಯಕ್ಷ ರಾಬರ್ಟ್, ಬಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವದ್ಧಿ ಸಂಘ ಅಧ್ಯಕ್ಷ ಎ.ಅಮತ್ ರಾಜ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಚಿರಾಗ್ ಅವರು ಕೊರೊನಾ ಕಾಲದ ಸಂದರ್ಭದಲ್ಲಿ ಬಿಬಿಎಂಪಿಯಲ್ಲಿ ಕಾನೂನು ಬಾಹಿರವಾಗಿ ಗುತ್ತಿಗೆ ಪಡೆದುಕೊಂಡು ಯಾವುದೇ ಕೆಲಸ ನಿರ್ವಹಿಸದೆ ನಕಲಿ ಸಂಸ್ಥೆಯ ಮುಖಾಂತರ ಕೋಟ್ಯಾಂತರ ರೂ ವಂಚಿಸಿರುವುದರಿಂದ ಪೌರಕಾರ್ಮಿಕರು ಅವಲಂಬಿತರು ಮತ್ತು ನಿರುದ್ಯೋಗಿಗಳು ಕಾಮಗಾರಿ ಸೌಲಭ್ಯವನ್ನು ಪಡೆಯಲು ವಂಚಿತರಾಗಿರುತ್ತಾರೆ. ಎಸ್.ಚಿರಾಗ್ ರವರು ಪಾಲಿಕೆಗೆ ಈ ಕೆಳಕಂಡಂತೆ ನಕಲಿ ದಾಖಲೆ ನೀಡಿ ಪಾಲಿಕೆಗೆ ಕೋಟ್ಯಾಂತರ ರೂ ವಂಚಿಸಿರುತ್ತಾರೆ.
ಇದನ್ನು ನೋಡಿ : ಮುಡಾ ಹಗರಣ : ಸಿದ್ದರಾಮಯ್ಯ ಸರ್ಕಾರವನ್ನು ಉರುಳಿಸುವ ಪಿತೂರಿ Janashakthi Media