ಪ್ರೀಮಿಯರ್ ಶೋನಲ್ಲೇ ಪ್ರೇಕ್ಷಕರ ಮೆಚ್ಚುಗೆ ಪಡೆದ ಮತ್ತೊಂದು ಕನ್ನಡ ಸಿನಿಮಾ “ಅರಸಯ್ಯನ ಪ್ರೇಮಪ್ರಸಂಗ”

ಬೆಂಗಳೂರು: ಜನರು ಪ್ರೀಮಿಯರ್ ಶೋಗಳಲ್ಲಿ ಸಿನಿಮಾ ನೋಡಿ ಮೆಚ್ಚಿಕೊಂಡರೆ ನಂತರದ ದಿನಗಳಲ್ಲಿ ನೋಡಲು ಬರುವ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತದೆ. ಈ ವರ್ಷ ಸೂಪರ್ ಹಿಟ್ ಆದ ‘ಸು ಫ್ರಮ್ ಸೋ’ ಚಿತ್ರವೇ ಈ ಮಾತಿಗೆ ಸಾಕ್ಷಿ. ಈಗ ಕನ್ನಡದಲ್ಲಿ ಮತ್ತೊಂದು ಸಿನಿಮಾ ಅದೇ ರೀತಿ ಪ್ರೀಮಿಯರ್ ಶೋನಲ್ಲೇ ಜನರನ್ನು ಸೆಳೆದುಕೊಂಡಿದೆ. ಮೆಚ್ಚುಗೆ

‘ಅರಸಯ್ಯನ ಪ್ರೇಮಪ್ರಸಂಗ’ ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಪ್ರೀಮಿಯರ್ ಶೋ ನೋಡಿದ ಜನರು ನಕ್ಕು ಎಂಜಾಯ್ ಮಾಡಿದ್ದಾರೆ. ಹಾಸ್ಯ ನಟ ಮಹಂತೇಶ್ ಹಿರೇಮಠ ಅವರು ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಮೆಚ್ಚುಗೆ

ಒಂದು ಡಿಫರೆಂಟ್ ಕಥೆಯನ್ನು ‘ಅರಸಯ್ಯನ ಪ್ರೇಮಪ್ರಸಂಗ’ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಸಿನಿಮಾದ ಥೀಮ್ ಏನು ಎಂಬುದು ಟ್ರೇಲರ್ ಮೂಲಕವೇ ಗೊತ್ತಾಗಿದೆ. ಟ್ರೇಲರ್ ನೋಡಿದ ಎಲ್ಲರೂ ಚಿತ್ರತಂಡದ ಬೆನ್ನು ತಟ್ಟಿದ್ದರು. ಅದರಿಂದಲೇ ಜನರು ಪ್ರೀಮಿಯರ್ ಶೋಗಳಿಗೆ ಬರುವಂತಾಯಿತು. ಚಿತ್ರವು ಫ್ಯಾಮಿಲಿ ಪ್ರೇಕ್ಷಕರಿಗೆ ಬಹಳ ಇಷ್ಟ ಆಗಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

‘ಸಿನಿಮಾದಲ್ಲಿ ಕಾಮಿಡಿ ತುಂಬ ಚೆನ್ನಾಗಿದೆ. ಕ್ಲೈಮ್ಯಾಕ್ಸ್ ಎಮೋಷನಲ್ ಆಗಿದೆ. ಆಗ ನಮಗೆ ಅಳುಬಂತು. ಪ್ರೀತಿಗೆ ಮೇಲು-ಬೀಳು ಎಂಬ ಭೇದ ಇಲ್ಲ ಎಂಬುದನ್ನು ಈ ಸಿನಿಮಾ ತೋರಿಸಿದೆ. ಸಮಯ ಹೇಗೆ ಕಳೆಯಿತು ಎಂಬುದೇ ಗೊತ್ತಾಗುವುದಿಲ್ಲ. ಅಷ್ಟು ಎಂಜಾಯ್ ಮಾಡಬಹುದು. ಮೊದಲಿನಿಂದ ಕೊನೆಯವರೆಗೆ ಸ್ವಲ್ಪ ಕೂಡ ಬೋರ್ ಆಗಲಿಲ್ಲ’ ಎಂಬಿತ್ಯಾದಿ ಪ್ರತಿಕ್ರಿಯೆಗಳು ಪ್ರೇಕ್ಷಕರಿಂದ ಸಿಕ್ಕಿವೆ.

ಚಿತ್ರತಂಡದವರು ಸೋಶಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ‘ಫ್ಯಾಮಿಲಿ ಪ್ರೇಕ್ಷಕರು ಸಿನಿಮಾವನ್ನು ನೋಡಿ ಎಂಜಾಯ್ ಮಾಡಿದ್ದಾರೆ. ಅರಸಯ್ಯನಿಗೆ ಪ್ರೇಯಸಿ ಸಿಗುತ್ತಾಳೋ ಇಲ್ಲವೋ ಎಂಬುದನ್ನು ನೀವು ಕೂಡ ಚಿತ್ರಮಂದಿರಕ್ಕೆ ಬಂದು ನೋಡಿ’ ಎಂದು ಮಹಂತೇಶ್ ಅವರು ಸಿನಿಪ್ರಿಯರಿಗೆ ಆಹ್ವಾನ ನೀಡಿದ್ದಾರೆ.

‘ರಾಜ್ ಕಮಲ ಪಿಕ್ಚರ್ಸ್’ ಮೂಲಕ ‘ಅರಸಯ್ಯನ ಪ್ರೇಮಪ್ರಸಂಗ’ ಸಿನಿಮಾ ನಿರ್ಮಾಣ ಆಗಿದೆ. ಜೆವಿಆರ್​ ದೀಪು ಅವರು ನಿರ್ದೇಶನ ಮಾಡಿದ್ದಾರೆ. ಶ್ರೀಮತಿ ಮೇಘಶ್ರೀ ರಾಜೇಶ್ ಅವರು ಬಂಡವಾಳ ಹೂಡಿದ್ದಾರೆ. ಮಹಂತೇಶ್ ಹಿರೇಮಠ ಅವರ ಜೊತೆ ರಶ್ಮಿತಾ, ವಿಜಯ್ ಚಂಡೂರು, ಪಿಡಿ ಸತೀಶ್ ಚಂದ್ರ, ರಘು ರಾಮನಕೊಪ್ಪ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನ ನೋಡಿ: ಧರ್ಮಸ್ಥಳ ಪ್ರಕರಣ | “ಕೊಂದವರು ಯಾರು ?” ಮಹಿಳಾ ಸಂಘಟನೆಗಳಿಂದ ಅಭಿಯಾನ Janashakthi Media

Donate Janashakthi Media

Leave a Reply

Your email address will not be published. Required fields are marked *