ಬೆಂಗಳೂರು| 50 ಹೊಸ ಮೌಲಾನಾ ಆಜಾದ್ ಮಾದರಿ ಶಾಲೆ ಪ್ರಾರಂಭಿಸಲು ಮಂಜೂರಾತಿ

ಬೆಂಗಳೂರು: 2025-26ನೇ ಸಾಲಿಗೆ ʻ50 ಹೊಸ ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಪ್ರಾರಂಭಿಸಲುʼ ಸರ್ಕಾರ ಜುಲೈ 8ರಂದು ಮಂಜೂರಾತಿ ನೀಡಿದೆ. ಬೆಂಗಳೂರು

ಮೊದಲ ಹಂತದಲ್ಲಿ 2024-25 ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ 60 ಸಂಖ್ಯಾಬಲದ 50 ಹೊಸ ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಪ್ರಾರಂಭಿಸಲು ಮಂಜೂರಾತಿ ನೀಡಿ, ಪ್ರತಿ ಹೊಸ ಮೌಲಾನಾ ಆಜಾದ್ ಮಾದರಿ ಶಾಲೆಗೆ 07 ಹುದ್ದೆಗಳಂತೆ ಒಟ್ಟು 350 ಬೋಧಕ ಹುದ್ದೆಗಳನ್ನು ಸೃಜಿಸಿ ಭರ್ತಿ ಮಾಡಿಕೊಳ್ಳಲು ಅನುಮೋದನೆ ನೀಡಿ ಆದೇಶಿಸಿದೆ. ಬೆಂಗಳೂರು

ಇದನ್ನೂ ಓದಿ: ಇಸ್ರೇಲ್ ವಿರುದ್ಧ ಡಿಜಿಟಲ್ ಪ್ರತಿಭಟನೆ – ‘ಗಾಝಾಕ್ಕಾಗಿ ಮೌನ’

2025-26ನೇ ಸಾಲಿನಲ್ಲಿ 50 ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಅಲ್ಪಸಂಖ್ಯಾತ ಸಮುದಾಯದ ಜನಸಂಖ್ಯೆ, ಜನಪ್ರತಿನಿಧಿಗಳ ಬೇಡಿಕೆ, ಜಿಲ್ಲಾ ಕಛೇರಿಗಳ ವರದಿ ಹಾಗೂ ಇತರ ಅಂಶಗಳನ್ನು ಕೂಲಂಕಶವಾಗಿ ಪರಿಶೀಲಿಸಿ, ಗಣನೆಗೆ ತೆಗೆದುಕೊಂಡು ಹಾಗೂ ಸಂಬಂಧಪಟ್ಟ ಜಿಲ್ಲಾ ಅಧಿಕಾರಿಗಳ ಜೊತೆ ಚರ್ಚಿಸಿ ಅಂತಿಮವಾಗಿ ಸ್ಥಳಾವಕಾಶ ಲಭ್ಯವಿರುವ 50 ಸ್ಥಳಗಳಲ್ಲಿ ಹೊಸ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸಬಹುದಾಗಿರುತ್ತದೆ ಎಂದು ತಿಳಿಸಿದೆ.

50 ಮೌಲಾನಾ ಆಜಾದ್ ಮಾದರಿ ಶಾಲೆಗಳ ಪೈಕಿ ವಿವಿಧ ಜಿಲ್ಲೆಗಳ ಸ್ಥಳಗಳಲ್ಲಿ 42 ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಪ್ರಾರಂಭಿಸಲು ಹಾಗೂ 50 ಹೊಸ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ ಅಗತ್ಯ ಹುದ್ದೆಗಳನ್ನು ಸೃಜಿಸಿ, ಭರ್ತಿ ಮಾಡಲು ಹಾಗೂ ಸದರಿ ಹುದ್ದೆಗಳ ಭರ್ತಿಯಾಗುವವರೆಗೆ ಇಲಾಖೆ ಮಾರ್ಗಸೂಚಿಗಳನ್ನಯ ಅತಿಥಿ ಶಿಕ್ಷಕರುಗಳನ್ನು ಹಾಗೂ ಉಳಿದ ಇತರೆ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅಗತ್ಯ ಅನುದಾನವನ್ನು ಬಿಡುಗಡೆ ಮಾಡಿ ಸರ್ಕಾರಿ ಆದೇಶವನ್ನು ಹೊರಡಿಸಬೇಕೆಂದು ಕೋರಿ ಮೇಲೆ ಓದಲಾದ ಕ್ರ.ಸಂ(3)ರಲ್ಲಿನ ಏಕ ಕಡತದಲ್ಲಿ ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ ಇವರು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಇದನ್ನೂ ನೋಡಿ: ರೈತರನ್ನು ಎದುರು ಹಾಕಿಕೊಂಡು ರಾಜ್ಯಭಾರ ಮಾಡ್ತೀರಾ.. ಸಿದ್ರಾಮಯ್ಯನವರೇ? ಎಸ್‌ ವರಲಕ್ಷ್ಮೀ ಪ್ರಶ್ನೆ Janashakthi

Donate Janashakthi Media

Leave a Reply

Your email address will not be published. Required fields are marked *