ಅಮರಾವತಿ: ಮೃಗಾಲಯದಲ್ಲಿ ಸಿಂಹದ ಜೊತೆಗೆ ಸೆಲ್ಫಿ ಕ್ಲಿಕ್ಕಿಸಲು ತೆರಳಿದ್ದ ವ್ಯಕ್ತಿಯನ್ನು ಸಿಂಹ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ತಿರುಪತಿಯ ತಿರುಪತಿಯ ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್‌ನಲ್ಲಿ ಗುರುವಾರ ಸಂಭವಿಸಿದೆ. ಮೃತರನ್ನು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಬನ್ಸೂರ್ ನಿವಾಸಿ ಪ್ರಹ್ಲಾದ್ ಗುಜ್ಜರ್ (34) ಎಂದು ಗುರುತಿಸಲಾಗಿದೆ.
ಸಿಂಹ ಮತ್ತು ಎರಡು ಸಿಂಹಿಣಿಗಳನ್ನು ಹೊಂದಿರುವ ಆವರಣದ ಸುತ್ತಲಿನ ಬಫರ್ ವಲಯಕ್ಕೆ ಗುಜ್ಜರ್ ಜಿಗಿದಿದ್ದಾರೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಸೆಕ್ಯುರಿಟಿ ಗಾರ್ಡ್ ಎಚ್ಚರಿಕೆ ನೀಡಿ ಅವರ ಹಿಂದೆ ಓಡಿದರೂ, ನೀರಿನ ಟ್ಯಾಂಕ್‌ಗೆ ಹಾರಿ ಆವರಣದ ಸುತ್ತಲಿನ 12 ಅಡಿ ಎತ್ತರದ ಗೋಡೆಯ ಏಕಾಂತ ವಲಯಕ್ಕೆ ವ್ಯಕ್ತಿ ಹಾರಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕರ್ನಾಟಕ ಬಜೆಟ್ 2024 LIVE: ವಿಪಕ್ಷಗಳ ಗದ್ದಲದ ನಡುವೆ ಬಜೆಟ್ ಮಂಡಿಸಿದ ಸಿದ್ದರಾಮಯ್ಯ
ವ್ಯಕ್ತಿಯು ಸಿಂಹವನ್ನು ಆರೈಕೆ ಮಾಡುವವರಿಗೆ ಮಾತ್ರ ಪ್ರವೇಶಿಸಬಹುದಾದ ಗೇಟ್ ಅನ್ನು ತಲುಪಿ ಆವರಣವನ್ನು ಪ್ರವೇಶಿಸಿದ್ದರು. ಆದರೆ ಈ ವೇಳೆ ಸಿಂಹವು ಗುಜ್ಜರ್ ಮೇಲೆ ದಾಳಿ ಮಾಡಿದ್ದು, ಅವರ ಕುತ್ತಿಗೆಯನ್ನು ಹಿಡಿದುಕೊಂಡಿದೆ. ಈ ವೇಳೆ ಸಿಂಹ ಅವರನ್ನು ಸುಮಾರು 100 ಮೀಟರ್ ದೂರ ಎಳೆದೊಯ್ದಿದೆ. ಪರಿಣಾಮ ಗುಜ್ಜರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
“ನಮ್ಮ ಪ್ರಾಣಿ ಪಾಲಕರು ಗುಜ್ಜರ್‌ಗೆ ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸುವುದನ್ನು ಗಮನಿಸಿ ಎಚ್ಚರಿಕೆ ನೀಡಿದರೂ, ಅವರು ಆರು ಅಡಿ ಎತ್ತರದ ಬೇಲಿಯನ್ನು ದಾಟಿ ಸಿಂಹಗಳ ಆವರಣಕ್ಕೆ ಹಾರಿದ್ದಾರೆ” ಎಂದು ತಿರುಪತಿ ಮೃಗಾಲಯದ ಕ್ಯೂರೇಟರ್ ಸಿ ಸೆಲ್ವಂ ಪಿಟಿಐಗೆ ತಿಳಿಸಿದ್ದಾರೆ. ನಂತರ ಗುಜ್ಜರ್ ದೇಹವನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಉಪ್ಪು ಹುಳಿ ಖಾರ ಇಲ್ಲದ ಜನ ವಿರೋಧಿ ಬಜೆಟ್: ಸಿಎಂ ನಿಲುವು ಖಂಡಿಸಿ ಬಿಜೆಪಿ ಸಭಾತ್ಯಾಗ
ತಿರುಪತಿ ಎಸ್ಪಿ ಮಲ್ಲಿಕಾ ಗಾರ್ಗ್ ಮಾತನಾಡಿ, ಬಲಿಪಶುವಿನ ಜೇಬಿನಲ್ಲಿ ಸಿಕ್ಕ ಆಧಾರ್ ಕಾರ್ಡ್ ಅನ್ನು ಗುರುತಿಸಲಾಗಿದೆ. ಆತನ ಜೇಬಿನಲ್ಲಿ ಬಸ್ ಟಿಕೆಟ್ ಕೂಡ ಪತ್ತೆಯಾಗಿದ್ದು, ಇದು ಫೆಬ್ರವರಿ 13 ರಂದು ಹೈದರಾಬಾದ್‌ನಿಂದ ತಿರುಪತಿಗೆ ಅವರು ತಲುಪಿದ್ದರು ಎಂದು ಸೂಚಿಸುತ್ತದೆ. ಅವರು ಒಬ್ಬರೇ ಬಂದಿದ್ದು, ಮೃಗಾಲಯಕ್ಕೆ ಪ್ರವೇಶಿಸಲು ಒಂದೇ ಟಿಕೆಟ್ ಖರೀದಿಸಿದ್ದರು ಎಂದು ಹೇಳಿದ್ದಾರೆ.
ಗುಜ್ಜರ್‌ಗೆ ಯಾವುದಾದರೂ ಮಾನಸಿಕ ಸಮಸ್ಯೆ ಇದೆಯೇ ಎಂದು ಕಂಡುಕೊಳ್ಳಲು ಪೊಲೀಸರು ಆತನ ಕುಟುಂಬವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ. ವ್ಯಕ್ತಿ ಕುಡಿದ ಸ್ಥಿತಿಯಲ್ಲಿದ್ದನೋ ಅಥವಾ ಇಲ್ಲವೋ ಎಂಬುದು ಕೂಡ ತಿಳಿದುಬಂದಿಲ್ಲ, ಶವಪರೀಕ್ಷೆ ವರದಿ ಬಂದ ನಂತರ ಇದು ಖಚಿತವಾಗಲಿದೆ.
ವಿಡಿಯೊ ನೋಡಿ:ಕರ್ನಾಟಕದ 2024-25 ಬಜೆಟ್ ನ ಆಳ ಅಗಲವೇನು? Janashakthi Media