ಔರಂಗಜೇಬನ ಸಮಾಧಿ: ಅವಾಸ್ತವ ವಿವಾದ – ಧರ್ಮ ರಾಜಕೀಯ

‘ಚಾವಾ’ ಸಿನಿಮಾ ಭಾವೋದ್ವೇಗಗಳನ್ನು ಕೆರಳಿಸಿದ್ದರಿಂದ ಜನರು ಔರಂಗಜೇಬ್ ಮೇಲೆ ಆಕ್ರೋಶಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿಧಾನಸಭೆಯಲ್ಲಿ ಹೇಳಿದ್ದಾರೆ. ಮತ್ತೊಂದೆಡೆ, ಇಡೀ ಸಚಿವ ಸಂಪುಟ ಭದ್ರತೆಯಲ್ಲಿ ಹೋಗಿ ‘ಚಾವಾ’ ಸಿನಿಮಾ ನೋಡಿ ಭಾರೀ ಪ್ರಚಾರವಾಗುವಂತೆ ನೋಡಿಕೊಂಡರು. ಶಿವಾಜಿಯ ಮಗನಾದ ಸಂಭಾಜಿ ರಾಜೇ ವಂಶಸ್ಥರೆಂದು ಹೇಳಿಕೊಂಡು ಬಿಜೆಪಿ ಸಂಸದ ಉದಯನ್ ರಾಜೇ ಭೋಂಸ್ಲೆ ಈಗ ಸಮಾಧಿಯನ್ನು ದ್ವಂಸ ಮಾಡಬೇಕೆನ್ನುತ್ತಾರೆ. ಆದರೆ, ನಿಖರವಾಗಿ ಏನಿದೆ ಎಂದು ದ್ವಂಸ  ಮಾಡುತ್ತಿದ್ದಾರೆ? ಸಂಘಪರಿವಾರಕ್ಕೆ ದ್ವೇಷ ರಾಜಕಾರಣ ಮಾಡಲು ಒಂದು ಆಟಿಕೆ ಬೇಕು. ಒಂದು ಕಥೆ ಬೇಕು. ಟಿಪ್ಪು ಸುಲ್ತಾನನಿಂದ, ಬಾಬರ್ ಮತ್ತು ಔರಂಗಜೇಬನವರೆಗೆ ಎಲ್ಲರನ್ನೂ ಬದ್ಧವೈರಿಗಳೆಂದು ಚಿತ್ರಿಸುವುದು ಹಿಂದುತ್ವದ ರಾಜಕೀಯ ಅಸ್ತ್ರ ಮಾತ್ರ. ಅದಕ್ಕೆ ಚರಿತ್ರೆಯಲ್ಲಿ ಖಚಿತವಾದ ಯಾವುದೇ ಪುರಾವೆಗಳಿಲ್ಲ. ಸಮಾಧಿ

-ಸಿಚಿ

ಛತ್ರಪತಿ ಶಂಭಾಜಿ ನಗರ ಜಿಲ್ಲೆ ಎಂದು ಮರುನಾಮಕರಣಗೊಂಡಿರುವ ಔರಂಗಾಬಾದ್ ನಿಂದ ಪ್ರಸಿದ್ಧವಾದ ಎಲ್ಲೋರಾ ಗುಹೆಗಳಿಗೆ ಹೋಗುವ ಹಾದಿಯ ಮಧ್ಯದಲ್ಲಿ ಖುಲ್ದಾಬಾದ್ ಅನ್ನು  ನೋಡಬಹುದು. ಮಕ್ಕಳ ಆಟಿಕೆ ಅಂಗಡಿಗಳನ್ನು ದಾಟಿ ನಡೆದರೆ ಸೂಫಿ ಸಂತ ಸೈಯದ್ ಜಿಯಾನುದ್ದೀನ್ ಶೇರ್ಜಿಯವರ ದರ್ಗಾ. ಆ ದರ್ಗಾದಲ್ಲಿ ಇರುವುದು 17 ನೇ ಶತಮಾನದಲ್ಲಿ ಭಾರತೀಯರನ್ನು ಆಳಿದ ಚಕ್ರವರ್ತಿ ಔರಂಗಜೇಬನ ಸಮಾಧಿ. ಅದು ಪ್ರಶಾಂತವಾದ ಪ್ರದೇಶ. ತನ್ನ ತಂದೆ ಷಹಜಹಾನ್ ತನ್ನ ಸುಂದರ ಪ್ರೇಮಿಯ ಜ್ಞಾಪಕಾರ್ಥವಾಗಿ ಭವ್ಯವಾದ ತಾಜ್ ಮಹಲ್ ಕಟ್ಟಿದರೂ, ಔರಂಗಜೇಬನು ತನ್ನ ಸಮಾಧಿ ತುಂಬಾ ಸರಳವಾಗಿರಬೇಕೆಂದು, ಅದನ್ನು ಆಕಾಶಕ್ಕೆ ತೆರೆದುಕೊಳ್ಳುವಂತೆ ನಿರ್ಮಿಸಬೇಕೆಂದು ಕೇಳಿಕೊಂಡನು. ಸಮಾಧಿ

ಅಲ್ಲಿ ಸ್ವಲ್ಪ ಮಣ್ಣನ್ನು ತೇವಗೊಳಿಸಿ ಒಂದು ಗಿಡ ನೆಡಲು ಹೇಳಿದನು. ಆ ನಂತರದ ಕಾಲದಲ್ಲಿ, ಲಾರ್ಡ್ ಕರ್ಜನ್ ಅಲ್ಲಿ ಅಮೃತಶಿಲೆಯನ್ನು ಮಾಡಿ ಅದರ ಮೇಲೆ ಜಾಲರಿ ಹಾಕಿದ. ಈಗ ಅಲ್ಲಿ ಬ್ಯಾರಿಕೇಡ್‌ ಗಳನ್ನು ಹಾಕಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಯಾತ್ರಿಕರು ಬಂದು ಭೇಟಿ ನೀಡಿ ಹೂವುಗಳನ್ನು ಇಡುವುದು ನಡೆಯುತ್ತಲೇ ಇದೆ.  ಶಿವಾಜಿಯ ಮಗನಾದ ಸಂಭಾಜಿ ರಾಜೇ ವಂಶಸ್ಥರೆಂದು ಹೇಳಿಕೊಂಡು ಬಿಜೆಪಿ ಸಂಸದ ಉದಯನ್ ರಾಜೇ ಭೋಂಸ್ಲೆ ಈಗ ಸಮಾಧಿಯನ್ನು ದ್ವಂಸ ಮಾಡಬೇಕೆನ್ನುತ್ತಾರೆ. ಆದರೆ, ನಿಖರವಾಗಿ ಏನಿದೆ ಎಂದು ದ್ವಂಸ  ಮಾಡುತ್ತಿದ್ದಾರೆ ಎಂದು ಚಾರ್ಮಿ ಹರಿಕಿಶನ್ ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು| ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಅನುಮೂದನೆ: ರಾಜ್ಯ ಸರ್ಕಾರ

ಮೋದಿಯವರ ಮೂರನೇ ಅವಧಿಯ ಆಡಳಿತದಲ್ಲಿ ನಾಗ್ಪುರದಲ್ಲಿನ ಹಿಂಸಾಚಾರವು ಈ ದೇಶದ ಪ್ರಜೆಗಳಿಗೆ  ಆಶ್ಚರ್ಯ ಅನಿಸದಿರಬಹುದು. ಇಂತಹ ವಿಷಯಗಳನ್ನು ಚರ್ಚೆ ಮಾಡುವುದು ಬಿಜೆಪಿಗೆ ಲಾಭವಾಗುತ್ತದೆ ಎಂದು ವಿವಿಧ ರಾಜಕೀಯ ನಾಯಕರು ಹೇಳಬಹುದು. ಗಾಂಧಿ ಹತ್ಯೆಯ ಕುರಿತಾದ ಪಾಠ ಇಂದಿಗೂ ಅಗತ್ಯವೇನಿದೆ? ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇತ್ತೀಚೆಗೆ ಲೋಕಸಭೆಯಲ್ಲಿ ಹೇಳಿದರು. ಆದರೆ, 400 ವರ್ಷಗಳ ಹಿಂದಿನ ಔರಂಗಜೇಬನ ಬಗ್ಗೆ ಮಾತ್ರ ಆಶಕ್ತಿಗಳನ್ನು ಹೆಚ್ಚಿಸುತ್ತಾರೆಂದರೆ, ಇದರ ಮರ್ಮವೇನು ಎಂಬುದನ್ನು ನೋಡಬೇಕಿದೆ. ಸಮಾಧಿ

ನಾಗ್ಪುರದ ಮಧ್ಯದಲ್ಲೇ!

ಕರ್ಫ್ಯೂ ಹೇರಲಾಗಿದ್ದ ನಾಗ್ಪುರದಲ್ಲಿ ಮತ್ತೆ ಪರಿಸ್ಥಿತಿ ಸಹಜ ಸ್ಥಿತಿ ಮರಳಿದೆ. ಔರಂಗಜೇಬ್ ಗೆ ಈಗ ಪ್ರಾಮುಖ್ಯತೆ ಇಲ್ಲ ಎಂದು ಆರ್‌ಎಸ್‌ಎಸ್ ನಾಯಕರೊಬ್ಬರು ಬೆಂಗಳೂರಿನಲ್ಲಿ ನೀಡಿದ ಹೇಳಿಕೆಯನ್ನು ಮಾಧ್ಯಮಗಳು ಪ್ರಮುಖವಾಗಿ ಪ್ರಕಟಿಸಿದವು. ಅಂದರೆ, ಸೂಕ್ತ ಸಮಯದಲ್ಲಿ ಈ ವಿಷಯವನ್ನು ತೆಗೆದುಕೊಂಡಿದ್ದೇವೆ ಎಂಬುದು ಅವರ ಮಾತುಗಳ ಸಂಕೇತವಾಗಿದೆ. ‘ಚಾವಾ’ ಸಿನಿಮಾ ಭಾವೋದ್ವೇಗಗಳನ್ನು ಕೆರಳಿಸಿದ್ದರಿಂದ ಜನರು ಔರಂಗಜೇಬ್ ಮೇಲೆ ಆಕ್ರೋಶಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿಧಾನಸಭೆಯಲ್ಲಿ ನೇರವಾಗಿಯೇ ಹೇಳಿದ್ದಾರೆ.  ಫಡ್ನವೀಸ್ ನಾಗ್ಪುರ ಪಶ್ಚಿಮ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ನಾಗ್ಪುರ ಲೋಕಸಭಾ ಕ್ಷೇತ್ರದವರು. ಗಲಭೆಗಳು ನಡೆಯುತ್ತಿರುವ ಪ್ರಸ್ತುತ ಸ್ಥಳವು ಆರ್‌ಎಸ್‌ಎಸ್‌ನ ರಾಷ್ಟ್ರೀಯ ಪ್ರಧಾನ ಕಚೇರಿಯಾದ ಹೆಗ್ಡೇವರ್ ಭವನಕ್ಕೆ ಹತ್ತಿರದಲ್ಲಿಯೇ ಇದೆ. ಸಮಾಧಿ

ಚಾವಾ’ ಸಿನಿಮಾ ನೋಡಲು ಇಡೀ ಸಚಿವ ಸಂಪುಟ!!

“ಶಂಭಾಜಿ ಮಹಾರಾಜರಿಗೆ ಔರಂಗಜೇಬ್ ಹಿಂಸೆ ಮಾಡಿದ ರೀತಿಯನ್ನು ‘ಚಾವಾ’ ಸಿನಿಮಾದಲ್ಲಿನ ಅತ್ಯಂತ ವಿವರವಾದ ದೃಶ್ಯೀಕರಣವು ಸಾರ್ವಜನಿಕ ಆಕ್ರೋಶವನ್ನು ಹುಟ್ಟುಹಾಕಿತು” ಎಂದು ಹೇಳಿದ ಮುಖ್ಯಮಂತ್ರಿ “ಜನರು ಕಾನೂನು ಸುವ್ಯವಸ್ಥೆಯನ್ನು ತಮ್ಮ ಕೈಗೆ ತೆಗೆದುಕೊಳ್ಳಬಾರದು” ಎಂದು ಪ್ರಕಟಣೆ ಹೊರಡಿಸುತ್ತಾರೆ. ಸಂಘಪರಿವಾರದ ನಾಯಕರ ಇಂತಹ ಹೇಳಿಕೆಗಳನ್ನು ಗಮನಿಸಿದರೆ, ಇದರ ಹಿಂದೆ ಆಳವಾದ ಯೋಜನೆ ಇರುವಂತೆ ಕಾಣುತ್ತಿದೆ. ಒಂದು ಸಮೂದಾಯವನ್ನು ಪ್ರಚೋದಿಸುವ ಉದ್ದೇಶದಿಂದ ಕಾಶ್ಮೀರ ಫೈಲ್ಸ್, ಕೇರಳ ಫೈಲ್ಸ್, ರಜಾಕರ್ ನಂತಹ ಸಿನೆಮಾಗಳನ್ನು ನಿರ್ಮಿಸಲು ಪ್ರೋತ್ಸಾಹ ನೀಡಿದವರು ಮತ್ತು ಆ ಸಿನೆಮಾಗಳು ಭಾರೀ ಪ್ರಚಾರವಾಗುವಂತೆ ನೋಡಿಕೊಂಡಿದ್ದು ಯಾರು ಎಂಬುದು ಗೊತ್ತೇ ಇದೆ. ಸಮಾಧಿ

ಇಡೀ ಸಚಿವ ಸಂಪುಟ ಭದ್ರತೆಯಲ್ಲಿ ಹೋಗಿ ‘ಚಾವಾ’ ಸಿನಿಮಾ ನೋಡಿ ಭಾರೀ ಪ್ರಚಾರವಾಗುವಂತೆ ನೋಡಿಕೊಂಡರು.  500 ಕೋಟಿ ರೂ. ಗಳಿಸಿದ ಈ ಸಿನಿಮಾ ಎಷ್ಟರ ಮಟ್ಟಿಗೆ ಜನರನ್ನು ಕೆರಳಿಸಿತೆಂದರೆ, ಕುದುರೆಯ ಮೇಲೆ ಒಬ್ಬ ವ್ಯಕ್ತಿ “ಹರ ಹರ ಮಹಾದೇವ್” ಎಂದು ಕೂಗುತ್ತಾ ಥಿಯೇಟರ್‌ ಒಳಗೆ ಜನರನ್ನು ತಳ್ಳಿಕೊಂಡು ಹೋಗುವ ವಿಡಿಯೋ ವೈರಲ್ ಆಯಿತು. ಅನೇಕ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ವಿವಿಧ ರೀತಿಯ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿರುವ ಸುದ್ದಿ ಮಹಾರಾಷ್ಟ್ರ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ‘ಪ್ರತಿ ಮರಾಠಿ ವ್ಯಕ್ತಿಯೂ ಈ ಕಥೆಯನ್ನು ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ತನ್ನ ಹತ್ತು ವರ್ಷದ ಮಗನನ್ನು ಕರೆತಂದಿದ್ದೇನೆ’ ಎಂದು ಆ ಜಿಲ್ಲೆಯ ವಾಹನ ಚಾಲಕನೊಬ್ಬ ಮಾಧ್ಯಮಗಳಿಗೆ ತಿಳಿಸಿದ. ಸಮಾಧಿ

ಆಳುವ ವರ್ಗಗಳ ಹಿತಾಸಕ್ತಿಗಳ ಮೇಲೆ

ಈ ಚಾಲಕ ಹೇಳಿದ್ದು ಸರಿ, ಆದರೆ ಯಾವುದು ಇತಿಹಾಸ? ಯಾವುದು ಪ್ರಸ್ತುತ? ಪ್ರಖ್ಯಾತ ಇತಿಹಾಸಕಾರ ರೋಮಿಲಾ ಥಾಪರ್ ತಾನು ಬರೆದ 750 ಪುಟಗಳ ಪುಸ್ತಕಕ್ಕೆ ‘ನಮ್ಮ ಮುಂದಿರುವ ಭೂತಕಾಲ’ (The past before us) ಎಂದು ಶೀರ್ಷಿಕೆ ನೀಡಿದ್ದಾರೆ. ‘ಮುಂದಿರುವ’ ಎಂಬ ಪದಕ್ಕೆ ಇಲ್ಲಿ ಎರಡು ಅರ್ಥಗಳನ್ನು ತೆಗೆದುಕೊಳ್ಳಬೇಕು.  ಗತಿಸಿಹೋದ ಎಂದು, ಇನ್ನು ಮುಂದೆ ಎಂದು. ಭೂತಕಾಲವನ್ನು ಹೇಗೆ ನೋಡುತ್ತೇವೆ, ಅದರಿಂದ ಯಾವುದನ್ನು ತೆಗೆದುಕೊಂಡು ಹೇಗೆ ಹೇಳುತ್ತೇವೆ ಎಂಬುದು ಪ್ರಸ್ತುತ ಆಳುವ ವರ್ಗಗಳ ಹಿತಾಸಕ್ತಿಗಳ ಮೇಲೆ ಅವಲಂಬಿತವಾಗಿದೆ.

ಔರಂಗಜೇಬನು ಕ್ರೂರ ಆಡಳಿತಗಾರನಷ್ಟೇ ಅಲ್ಲದೆ, ದೇವಾಲಯಗಳಿಗೆ ನಿಧಿಗಳನ್ನು ಕೊಟ್ಟ ಬಗ್ಗೆ ಕೂಡಾ ಐತಿಹಾಸಿಕ ಪುರಾವೆಗಳು ಹೇಳುತ್ತವೆ, ಈ ಸಿನಿಮಾದಲ್ಲಿ ಔರಂಗಜೇಬನನ್ನು ಭಾಗಶಃ ಚಿತ್ರಿಸಿದ್ದಾರೆಂದು ಟೀಕಿಸಿದ್ದಕ್ಕೆ ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ, ಔರಂಗಜೇಬನ ಪರವಾಗಿ ಮಾತನಾಡಿದ ಯಾರನ್ನೂ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಮತ್ತು ಇತರ ಸಚಿವರು ಸದನದಲ್ಲಿ ಘೋಷಿಸಿದರು.

ಸಮಾಧಿಯನ್ನು ತೆಗೆದುಹಾಕಬೇಕೆಂಬ ಭೋಂಸ್ಲೆ  ಮಾಡುತ್ತಿರುವ ವಾದದಲ್ಲಿನ ಭಾವನೆಯನ್ನು ತಾನೂ ಕೂಡ ಒಪ್ಪುವುದಾಗಿ ಫಡ್ನವೀಸ್ ಹೇಳಿದರು. ಆ ಸಮಾಧಿಯು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ನಿಯಂತ್ರಣದಲ್ಲಿ ಇರುವುದರಿಂದ, ಕಾನೂನಿನ ಪ್ರಕಾರವೇ ವ್ಯವಹರಿಸಬೇಕಾಗುತ್ತದೆ ಎಂದು ಸನ್ನೆಯ ಗುಂಡಿಗಳನ್ನು ಒತ್ತಿದರು.

ಕಳೆದುಕೊಳ್ಳುವವರು ಯಾರು?

ಈ ಗಲಭೆಗಳ ಸಮಯದಲ್ಲಿ ಪವಿತ್ರ ಚಾದರ್‌ ಗಳನ್ನು ಸುಡುವುದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ವಿಎಚ್‌ ಪಿ ನಿರಾಕರಿಸುತ್ತದೆ. ಆದರೆ ಪೊಲೀಸರು ತಮ್ಮ ಬಳಿ ವಿಡಿಯೋ ದೃಶ್ಯಾವಳಿಗಳಿವೆ ಎಂದು ಹೇಳುತ್ತಾರೆ. ಚಾದರ್‌ ಗಳು ಸುಡುವುದನ್ನು ತಾವು ನೋಡಿದ್ದೇವೆಂದು ಸ್ಥಳೀಯರು ಹೇಳುತ್ತಾರೆ. ಆದರೆ ಮುಖ್ಯಮಂತ್ರಿಗಳು ಕುರಾನ್ ಸೂಕ್ತಗಳಿರುವ ಚಾದರ್ ಅನ್ನು ಸುಟ್ಟುಹಾಕಲಾಗಿದೆ ಎಂಬುದು ನಿಜವಲ್ಲ ಎಂದು ಪ್ರಕಟಿಸಿದರು. ಔರಂಗಜೇಬನ ಪ್ರತಿಕೃತಿಗಳನ್ನು ಸುಡುವುದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಕುರಾನ್ ಸೂಕ್ತಗಳಿಂದ ಕೂಡಿರುವ ಚಾದರ್ ಅನ್ನು ಗುರಿಯಾಗಿಸಿಕೊಂಡಿರುವುದು ಸರಿಯಲ್ಲ ಎಂದು ಸ್ಥಳೀಯ ಮುಸ್ಲಿಂ ನಾಯಕರು ಖಂಡಿಸುತ್ತಿದ್ದಾರೆ. ವಾಸ್ತವವಾಗಿ, ಆ ಸಮುದಾಯಗಳಲ್ಲಿಯೂ ಅಸಮಾಧಾನ ಬೆಳೆಯಲು ಅದೇ ಕಾರಣವಾಯಿತು.

ಖುಲ್ದಾಬಾದ್‌ ನಲ್ಲಿ ಮೊದಲಿನಿಂದಲೂ ಎಲ್ಲಾ ಧರ್ಮದ ಜನರು ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ನಡುವೆಯೂ ಸಾಮರಸ್ಯದಿಂದ ಇದ್ದಾರೆ ಎಂದು ಚಕ್ರವರ್ತಿಯ ಸಮಾಧಿ ಸಂರಕ್ಷಣೆ  ನೋಡಿಕೊಳ್ಳುತ್ತಿರುವ ನಿಸ್ಸಾರ್ ಅಹ್ಮದ್ ಮಾಧ್ಯಮಗಳಿಗೆ ತಿಳಿಸಿದರು. ಕೆಲವು ಕಿಡಿಗೇಡಿಗಳು ಧಾರ್ಮಿಕ ಕಲಹವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿರುವುದರಿಂದ ಇದೆಲ್ಲವೂ ನಡೆಯುತ್ತಿದೆ. ಈ ಗಲಭೆಗಳಲ್ಲಿ ಯಾವಾಗಲೂ ಬಡವರು ಮತ್ತು ನಿರುದ್ಯೋಗಿ ಯುವಕರನ್ನು ಮುಂದಕ್ಕೆ ತಳ್ಳುತ್ತಾರೆ. ದ್ವೇಷ ಹುಟ್ಟುಹಾಕುವವರು ಒಬ್ಬರಾದರೆ, ನೋವು ಅನುಭವಿಸುವವರು, ನಷ್ಟಕ್ಕೆ ಒಳಗಾಗುವವರು ಈ ಯುವಕರೇ.

ಪವಿತ್ರ ರಂಜಾನ್ ಮಾಸದಲ್ಲಿ ಇಂತಹ ಘಟನೆ ನಡೆದಿರುವುದು ತುಂಬಾ ದುಃಖಕರವಾಗಿದೆ. ಮೊಘಲರ ಇತಿಹಾಸವನ್ನು ಸಂಪೂರ್ಣವಾಗಿ ಅಳಿಸಿಹಾಕಬಹುದು ಎಂದು ಯಾರಾದರೂ ಅಂದುಕೊಂಡರೆ, ಅವರು ಭಾರತ ದೇಶದ ಇತಿಹಾಸವನ್ನೇ ಪುನಃ ಬರೆಯಬೇಕಾಗುತ್ತದೆ. ಅದು ತುಂಬಾ ಅಪಾಯಕಾರಿ ಕೆಲಸ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಈ ಸಾಮಾನ್ಯ ಮನುಷ್ಯನ ಮಾತುಗಳನ್ನು ಕೇಳಿಸಿಕೊಂಡ ಯಾರೇ ಆದರೂ, ಇತಿಹಾಸದ ಬಗ್ಗೆ ಆಧಾರರಹಿತ ದ್ವೇಷದಿಂದ ಜನರಲ್ಲಿ ಧಾರ್ಮಿಕ ಬೆಂಕಿ ಹಚ್ಚುವುದು ಸರಿಯಲ್ಲ ಎನ್ನುತ್ತಾರೆ.

ಚರಿತ್ರೆಯಲ್ಲಿ ಇರುವುದಾದರೂ ಏನು?

ಸಂಘ ಪರಿವಾರವು ಮೊದಲಿನಿಂದಲೂ ಔರಂಗಜೇಬನನ್ನು ತಮ್ಮ ಧಾರ್ಮಿಕ ರಾಜಕೀಯಕ್ಕೆ ಇಂಧನವಾಗಿ ಬಳಸುತ್ತಿದೆ. ಈ ದೇಶ ರಾಮನದೇ ಹೊರತು ಔರಂಗಜೇಬನದಲ್ಲ ಎಂದು ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರಂತವರು ಹೇಳಿದ್ದಾರೆ. ನಿಜವಾದ ಜಾತ್ಯತೀತರೆಲ್ಲರೂ “ಔರಂಗಜೇಬನ ಸಂತತಿ” (ಔರಂಗಜೇಬ್ ಕೆ ಔಲಾದ್) ಎಂಬುದು ಅವರಿಗೆ ತುಂಬಾ ಚಿರಪರಿಚಿತ ವಾಕ್ಯ. ದ್ವೇಷ ರಾಜಕಾರಣಕ್ಕೆ ಯಾವಾಗಲೂ ಒಂದು ಬೊಂಬೆ ಬೇಕು. ಒಂದು ಕಥೆ ಬೇಕು.

ಟಿಪ್ಪು ಸುಲ್ತಾನನಿಂದ, ಬಾಬರ್ ಮತ್ತು ಔರಂಗಜೇಬನವರೆಗೆ ಎಲ್ಲರನ್ನೂ ಬದ್ಧವೈರಿಗಳೆಂದು ಚಿತ್ರಿಸುವುದು ಹಿಂದುತ್ವದ ರಾಜಕೀಯ ಅಸ್ತ್ರ ಮಾತ್ರ. ಅದಕ್ಕೆ ಚರಿತ್ರೆಯಲ್ಲಿ ಖಚಿತವಾದ ಯಾವುದೇ ಪುರಾವೆಗಳಿಲ್ಲ. ಧಾರ್ಮಿಕ ಮೂಲಭೂತವಾದಿಗಳು ಹೇಳುವಂತೆ ಭಾರತದಲ್ಲಿ ಮುಸ್ಲಿಮರು ಅಥವಾ ಇಸ್ಲಾಂ ಚರಿತ್ರೆ ಎಲ್ಲವೂ ಒಂದೇ ಅಲ್ಲ. ಅಫಘಾನ್, ಟರ್ಕಿ ಮತ್ತು ಪರ್ಷಿಯನ್ ತಳಹದಿಗಳಿವೆ. ಇಸ್ಲಾಮಿಕ್ ಇತಿಹಾಸ ಎಂಬ ಏಕ ಖಂಡವಾಗಿಯೇನೂ ಇರುವುದಿಲ್ಲ. ಇರುವುದರಲ್ಲಿಯೂ ಭಾರತೀಯ ಸಾಂಪ್ರದಾಯಿಕ ಪದ್ಧತಿಯು ಸಂಯೋಜಿಸಲ್ಪಟ್ಟಿಯೇ ಇರುತ್ತದೆ.

13ನೇ ಶತಮಾನದಲ್ಲಿ ಘಿಯಾಜುದ್ದೀನ್ ಬಾಲ್ಬನ್ (1255-65) ಕಾಲಕ್ಕೆ ಸಂಭಂದಿಸಿ ದೆಹಲಿಯಲ್ಲಿ ದೊರೆತ ಒಬ್ಬ ಹಿಂದೂ ಭಕ್ತನ ಶಾಸನವನ್ನು ನೋಡಿದರೆ, ಸುಲ್ತಾನ್ ಬಾಲ್ಬನ್ ಆಳ್ವಿಕೆಯಲ್ಲಿ ವಿಷ್ಣುಮೂರ್ತಿ ಸುರಕ್ಷಿತವಾಗಿತ್ತು ಎಂದು ಹೇಳುತ್ತದೆ. ಹರಿಯಾಣದಲ್ಲಿ ಪತ್ತೆಯಾದ ನಾರಾಯಣ ಶಿಲಾ ಶಾಸನವು ಮುಹಮ್ಮದ್ ಬಿನ್ ತುಘಲಕ್ ಅವರನ್ನು ಭೂಮಂಡಲದ ಮೇಲಿನ ಆಡಳಿತಗಾರರಲ್ಲಿನ ರತ್ನ ಎಂದು ಹೊಗಳುತ್ತದೆ. 1369ರ ಕಾಶ್ಮೀರ ಶಾಸನವು ರಾಜ ಶಹಾಬುದ್ದೀನ್ ನನ್ನು ಕ್ಷತ್ರಿಯ ವಂಶಸ್ಥನಂತೆ ಪಾಂಡವ ಕುಟುಂಬದವನಂತೆ ಪ್ರಶಂಸಿಸುತ್ತದೆ.

ನಿಜವೇನೆಂದರೆ, ರಾಜರು ಯಾರಾದರೂ ದೈವ ನಿರ್ಣಯದ ಪ್ರಕಾರವೇ ಆಳ್ವಿಕೆ ನಡೆಸುತ್ತಿದ್ದರು ಎನ್ನುವಂತೆ ಆ ಕಾಲದ ಅನೇಕ ಗ್ರಂಥಗಳು ಮತ್ತು ಶಾಸನಗಳು ಹೇಳುತ್ತವೆ. ರಾಜರುಗಳ ನಡುವೆ, ರಾಜ್ಯಗಳ ನಡುವೆ ಯುದ್ಧಗಳು, ರಾಜ್ಯದ ದಬ್ಬಾಳಿಕೆಗಳು ಇದ್ದಂತೆ ಮುಸ್ಲಿಂ ಆಳ್ವಿಕೆಯಲ್ಲಿಯೂ ಯುದ್ಧಗಳು ನಡೆದಿವೆ. ಕೆಲವರಲ್ಲಿ ಅದು ಹೆಚ್ಚು ಇರಬಹುದೇ ವಿನಃ ಬ್ರಿಟಿಷರು ಹಿಂದೂ ಯುಗ, ಮುಸ್ಲಿಂ ಯುಗ ಎಂದು ವಿಂಗಡಿಸಿದ ನಂತರವೇ ಎರಡೂ ಧರ್ಮಗಳ ನಡುವೆ ಪ್ರತ್ಯೇಕವಾಗಿ ನೋಡುವ ಪ್ರವೃತ್ತಿ ಹೆಚ್ಚಾಯಿತು. 1808ರಲ್ಲಿ ಮೃತ್ಯುಂಜಯ ವಿದ್ಯಾಲಂಕಾರ ಬರೆದ ‘ರಾಜವಳಿ’ ಅಕ್ಬರ್ ಅವರನ್ನು ಹೊಗಳುತ್ತ, ಔರಂಗಜೇಬನು ದೇವಾಲಯಗಳನ್ನು ನಾಶಮಾಡಿದ್ದಲ್ಲದೆ, ಆತನಿಂದ ದೇವಾಲಯಗಳ ಪೋಷಣೆಯೂ ನಡೆದಿದೆ ಎಂದು ಹೇಳುತ್ತದೆ.

ಆದರೆ 1878 ರಲ್ಲಿ ಬಂದ ಭೋಲನಾಥ ಚಕ್ರವರ್ತಿಯ ಭಾರತೇಶ್ವರ ಇತಿಹಾಸದಲ್ಲಿ ದೀರ್ಘಕಾಲದ ಮುಸ್ಲಿಂ ಆಳ್ವಿಕೆಯಿಂದಾಗಿ ಹಿಂದೂ ಸಮಾಜ ಪತನಗೊಂಡಿತು ಮತ್ತು ಮೌಲ್ಯಗಳು ಕ್ಷೀಣಿಸಿಹೋದವು ಎಂದು, ಆ ನಂತರ  ಯವನರ (ಇಂಗ್ಲಿಷರ) ಆಗಮನದೊಂದಿಗೆ ಅವನತಿ ಇನ್ನಷ್ಟು ತೀವ್ರವಾಯಿತು ಎಂದು ಅವರು ಬರೆಯುತ್ತಾರೆ. ಇದನ್ನು ಅನುಸರಿಸಿಯೇ ನೂರು ವರ್ಷಗಳ ಹಿಂದೆ ಆರ್‌ಎಸ್‌ಎಸ್ ಹುಟ್ಟಿಕೊಂಡಾಗ, ತಮ್ಮ ಧಾರ್ಮಿಕ ರಾಜಕೀಯಕ್ಕಾಗಿ ಔರಂಗಜೇಬ್‌ ನನ್ನು ವಿಶೇಷವಾಗಿ ಆಯ್ಕೆ ಮಾಡಿಕೊಂಡರು.

ಅವರು ಹಿಂದುಗಳ ಮೇಲೆ ಜಿಜ್ಯಾ ತೆರಿಗೆ ವಿಧಿಸುವ ಬಗ್ಗೆ ಮಾತನಾಡುತ್ತಾರೆ. ಇದಕ್ಕೆ ಧಾರ್ಮಿಕ ದ್ವೇಷವೇ ಕಾರಣವಾಗಿದ್ದರೆ, ಅಧಿಕಾರ ವಹಿಸಿಕೊಂಡು ಇಪ್ಪತ್ತು ವರ್ಷಗಳ ನಂತರ ಈ ತೆರಿಗೆಯನ್ನು ಜಾರಿಗೆ ತರಲು ಅವರು ಎರಡು ದಶಕಗಳ ಕಾಲ ಏಕೆ ಕಾಯುತ್ತಿದ್ದರು ಎಂದು ಇತಿಹಾಸಕಾರರು ಪ್ರಶ್ನಿಸುತ್ತಾರೆ. ಕೆಲವು ವಿಷಯಗಳಲ್ಲಿ ಔರಂಗಜೇಬ್ ಇತರರಿಗಿಂತ ಉತ್ತಮನಾಗಿದ್ದನೆಂದು ಕೆಲವರು ಹೇಳುತ್ತಾರೆ, ಆದರೆ ಅದು ಅನಾವಶ್ಯಕ ವಾದ, ಏನೇ ಆದರೂ ಇತಿಹಾಸ ಇತಿಹಾಸವೆ.

ಚುನಾವಣಾ ದಾಳಗಳು

ವಾಸ್ತವವಾಗಿ, ಬಿಜೆಪಿ ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಔರಂಗಜೇಬ್ ನನ್ನು ರಂಗಕ್ಕೆ ತಂದಿತು. ಆದರೆ ಗೆಲುವು ಸಾಧಿಸಿದ ನಂತರ ಸಮಸ್ಯೆಗಳನ್ನು ಮತ್ತಷ್ಟು ತೀವ್ರವಾಗಿ ಎದುರಿಸುತ್ತಿದೆ. ಮಹಾರಾಷ್ಟ್ರದಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ರೈತರ ಆತ್ಮಹತ್ಯೆಗಳು, ಗಂಭೀರ ಆರ್ಥಿಕ ಸಮಸ್ಯೆಗಳು ಉಂಟಾಗಿವೆ. ಇವುಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಆಳುವ ಕೂಟವು ಬೇಕೆಂತಲೇ ಶತಮಾನಗಳಷ್ಟು ಹಳೆಯದಾದ ಈ ಸಮಾಧಿ ವಿವಾದವನ್ನು ಪ್ರೋತ್ಸಾಹಿಸಿದೆ ಎಂದು ದಿ ಹಿಂದೂ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಸ್ಪಷ್ಟವಾಗಿ ಟೀಕಿಸಿದೆ.

ವಿಧಾನಸಭಾ ಚುನಾವಣೆಯಲ್ಲಿಯೇ ಬಿಜೆಪಿ ನಾಯಕರು ಔರಂಗಾಬಾದ್ ಅನ್ನು ಚುನಾವಣಾ ವಿಷಯವನ್ನಾಗಿ ಮಾಡಿ ಮತಗಳನ್ನು ಗಳಿಸಿತು. ಗುಡಿ ಪಾಡ್ವ (ವರ್ಷದ) ಮೊದಲ ದಿನದ ಉತ್ಸವಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 30 ರಂದು ನಾಗ್ಪುರಕ್ಕೆ ಬರುತ್ತಿದ್ದಾರೆ. ಮೊದಲ ಬಾರಿಗೆ ಪ್ರಧಾನಿಯೊಬ್ಬರು ಹೆಗ್ಡೇವರ್ ಮತ್ತು ಗೋಲ್ವಾಲ್ಕರ್ ಸ್ಮೃತಿ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಈ ಘರ್ಷಣೆಗಳು ಮೋದಿ ಆಗಮನದ ಹಿನ್ನೆಲೆಯಲ್ಲಿ ನಡೆದಿವೆಯೇ ಎಂಬ ಅನುಮಾನವಿದೆ. ಮುಂದಿನ ಎರಡು ವರ್ಷಗಳಲ್ಲಿ ಬಿಹಾರ, ಉತ್ತರ ಪ್ರದೇಶ ಮತ್ತು ಗುಜರಾತ್ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ.

ಔರಂಗಜೇಬನ ವಂಶಸ್ಥರು ಈಗ ರಿಕ್ಷಾ ಎಳೆಯುತ್ತಾ ಬದುಕುತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಗೇಲಿ ಮಾಡಿದರು. ತಮ್ಮ ವಿಧಾನಸಭಾ ಚುನಾವಣೆ ಬಂದಾಗ ಅವರಂತವರು ಮತ್ತೆಷ್ಟು ವಿವಾದಗಳನ್ನು ಮುಂದೆ ತರುತ್ತಾರೋ? ಬಹಳಷ್ಟು ಜನರು ಇದನ್ನು ಮತ್ತೊಂದು ಅಯೋಧ್ಯ ವಿವಾದಂತೆ ನೋಡುತ್ತಿದ್ದಾರೆಂದರೆ ಕಾರಣ ಇದೇ ಆಗಿದೆ.  ಸದ್ಯದಲ್ಲೇ ಬರಲಿರುವ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ‘ಹರಿಹರ ವೀರಮಲ್ಲು’ ಸಿನೆಮಾ ಕೂಡ ಔರಂಗಜೇಬನ ವಿರುದ್ಧ ಕೇಸರಿ ಶೈಲಿಯ ಹೋರಾಟವಾಗಿದೆ!

(ಕೃಪೆ: ಪ್ರಜಾಶಕ್ತಿ)

ಇದನ್ನೂ ನೋಡಿ: ಕನಿಷ್ಠ ವೇತನ ಹಾಗೂ ಕಾಯಂಗೆ ಆಗ್ರಹಿಸಿ ವಿಕಲಚೇತನರ ಗೌರವಧನ ಕಾರ್ಯಕರ್ತರ ಧರಣಿ Janashakthi Media

Donate Janashakthi Media

Leave a Reply

Your email address will not be published. Required fields are marked *