ಸೀತಾರಾಮ್ ಯೆಚೂರಿ ಅವರೊಂದಿಗೆ ಸಂದರ್ಶನ – ಆ ವಾಕ್ಯವೇ ಅಧ್ಯಯನಕ್ಕೆ ಪ್ರೇರೇಪಿಸಿತು

-ಕೃಪೆ: ಪ್ರಜಾಶಕ್ತಿ
-ಕನ್ನಡಕ್ಕೆ:ಸಿ.ಸಿದ್ದಯ್ಯ

ಸೀತಾರಾಮ್ ಯೆಚೂರಿ ಅವರೊಂದಿಗೆ ಸಂದರ್ಶನ

ಮಾರ್ಕ್ಸ್‌ವಾದ ಅಧ್ಯಯನದ ಅವಶ್ಯಕತೆ ಎಲ್ಲಿಯವರೆಗೂ ಇರುತ್ತದೆ?

ಮಾರ್ಕ್ಸ್‌ವಾದಿ ಎಂದರೇನೇ ಅಧ್ಯಯನಶೀಲ. ಅಧ್ಯಯನ ಇಲ್ಲದೆ ಇದ್ದರೆ ಮಾರ್ಕ್ಸ್‌ವಾದಿಯಾಗಲು ಎಂದಿಗೂ ಸಾಧ್ಯವಿಲ್ಲ. ಮಾರ್ಕ್ಸ್‌ವಾದಿಗೆ ಅಧ್ಯಯನ ಎಂಬುದು ಸ್ವಾಭಾವಿಕವಾಗಿ ಇರುತ್ತದೆ. ಇರಬೇಕು. ಅದು ಕಮ್ಯುನಿಸಂನ ಅವಿಭಾಜ್ಯ ಅಂಗವಾಗಿರಬೇಕು. ಲೆನಿನ್ ಹೇಳಿದಂತೆ, ‘ಮಾರ್ಕಿಸಂ ಈಸ್ ದಿ ಕಾಂಕ್ರೀಟ್ ಅನಾಲೈಸಿಸ್ ಆಫ್ ಕಾಂಕ್ರಿಟ್ ಕಂಡೀಷನ್ಸ್’ (ನಿರ್ಧಿಷ್ಟ ಪರಿಸ್ಥಿತಿಯನ್ನು ನಿರ್ಧಿಷ್ಟವಾಗಿ ವಿಶ್ಲೇಷಣೆ ಮಾಡುವುದು).  ಅಧ್ಯಯನವು ಜೀವನ ಪರ್ಯಂತ ಇರಬೇಕು. ಇದನ್ನು ಗುರುತಿಸದೇ ಹೋದರೆ, ಡೀಜನರೇಷನ್ (ಅವನತಿ)ಗೆ… ಹಾಗಾಗಿ ಡೀವಿಯೇಷನ್ಸ್ (ವಿಚಲನೆಗಳು) ಗೂ ಗುರಿಯಾಗುತ್ತೇವೆ. ತಪ್ಪು ದಾರಿ ಹಿಡಿಯುತ್ತೇವೆ. ಈ ಎರಡನ್ನು ಸರಿ ಮಾಡಿಕೊಳ್ಳಬೇಕು. ಮತ್ತೊಂದೆಡೆ, ಜನರು ಯಾಕಾಗಿ ಮಾರ್ಕ್ಸ್‌ವಾದದ ಕಡೆಗೆ ಆಕರ್ಷಿತರಾಗಿದ್ದಾರೆಂದು ನೋಡಿದರೆ, ಇಲ್ಲಿಯವರೆಗೆ ಪ್ರಪಂಚದಲ್ಲಿ ಮಾರ್ಕ್ಸ್‌ವಾದವೊಂದೇ ವೈಜ್ಞಾನಿಕ. ಲೆನಿನ್  ಮಾತುಗಳಲ್ಲೇ ನೋಡಿದರೆ ಮಾರ್ಕ್ಸ್‌ವಾದದಲ್ಲಿ ಎರಡು ಅಂಶಗಳಿವೆ. ಒಂದು ಕ್ರಾಂತಿಕಾರಿ ಸ್ವಭಾವ. ಎರಡು ವೈಜ್ಞಾನಿಕ. ಇವೆರಡರಲ್ಲಿ ಯಾವುದಾದರೂ ಒಂದು ಇಲ್ಲದೇ ಹೋದರೆ ಮಾರ್ಕ್ಸ್ ವಾದವೇ ತಪ್ಪುದಾರಿಗೆ ಬೀಳುತ್ತದೆ. ಕಾಮ್ರೇಡ್

ವೈಜ್ಞಾನಿಕ ಅಧ್ಯಯನವನ್ನು ಹೇಗೆ ವ್ಯಾಖ್ಯಾನಿಸಬಹುದು? ಸಮಗ್ರ ಅಧ್ಯಯನ ಹೇಗಿರಬೇಕು?

ಅಧ್ಯಯನಕ್ಕೆ ಓದುವುದು ಮೂಲ ಅಗತ್ಯ, ಆದರೆ ಓದುವುದರಿಂದಲೇ ಅಧ್ಯಯನ ಪೂರ್ಣವಾಗಲಾರದು. ಅಧ್ಯಯನವು ಅನುಭವಗಳ ಮೇಲೆ ಕೂಡಾ ಅವಲಂಬಿತವಾಗಿದೆ. ಮಾರ್ಕ್ಸ್‌ವಾದಿಗೆ ಅನುಭವಗಳು ಚಳುವಳಿಗಳ ಮೂಲಕ ಬರುತ್ತವೆ. ಚಳುವಳಿಗಳೆಂದರೆ ಜನಸಾಮಾನ್ಯರೊಂದಿಗೆ ಇದ್ದು, ಹೋರಾಟ, ಓದು, ಅಧ್ಯಯನ, ಚಳವಳಿಗಳಲ್ಲಿ ಕೆಲಸ ಮಾಡಿದ ಅನುಭವ. ಇವೆಲ್ಲವೂ ಜೊತೆಗೂಡಿದರೆ ಮಾತ್ರ ಸಮಗ್ರ ಅಧ್ಯಯನವಾಗುತ್ತದೆ.  ಪುಸ್ತಕ ಅಧ್ಯಯನ.. . ಸಾಮಾಜಿಕ ಅಧ್ಯಯನ.. . ಚಳುವಳಿಗಳ ಅಧ್ಯಯನ… ಈ ಮೂರರ ಸಮ್ಮಿಶ್ರಣವೇ ಸಮಗ್ರ ಅಧ್ಯಯನ. ಕಾಮ್ರೇಡ್

ಇದನ್ನೂ ಓದಿ: ಆಂಧ್ರಕ್ಕೆ ಎಸ್ಕೇಪ್‌ ಆಗುತ್ತಿದ್ದ ಶಾಸಕ ಮುನಿರತ್ನ ಕೋಲಾರದಲ್ಲಿ ಅರೆಸ್ಟ್‌

ಒಬ್ಬ ಸಾಮಾನ್ಯ ಕಾರ್ಯಕರ್ತ ಅಧ್ಯಯನವನ್ನು ಎಲ್ಲಿಂದ  ಪ್ರಾರಂಭಿಸಬೇಕು? ನಿಮ್ಮ ಅನುಭವಗಳಿಂದ ಹೇಳಿ?

ಪ್ರತಿಯೊಬ್ಬರಿಗೂ ವೈಯಕ್ತಿಕ ಅನುಭವಗಳಿರುತ್ತವೆ. ಅವುಗಳನ್ನು ಸಾಮಾನ್ಯೀಕರಿಸುವುದು ಕಷ್ಟ. ಇದು ಸಾಧ್ಯವೂ ಅಲ್ಲ. ಸಾಮಾಜಿಕ ಪರಿಸ್ಥಿತಿಗಳು ಯಾವುವು, ಹೇಗೆ ಬದಲಾಗುತ್ತಿವೆ? ಈ ರೀತಿ ಏಕೆ ನಡೆಯುತ್ತಿದೆ? ಎಂಬ ಸಂದೇಹಗಳು ಬರುತ್ತವೆ. ಆ ಪ್ರಶ್ನೆಯಿಂದಲೇ ಅಧ್ಯಯನ ಮಾಡಬೇಕೆಂಬ ಅಗತ್ಯ ಮತ್ತು ಆಸಕ್ತಿ ಹುಟ್ಟುತ್ತದೆ. ಮಾರ್ಕ್ಸ್ ಕೂಡ ‘ಡೌಟ್  ಎವೆರಿಥಿಂಗ್’ (ಪ್ರತಿಯೊಂದನ್ನೂ ಅನುಮಾನಿಸು) ಎಂದಿದ್ದರು. ಕುತೂಹಲ ಮತ್ತು ಪ್ರಶ್ನೆಗಳು ಅಧ್ಯಯನವನ್ನು ಉತ್ತೇಜಿಸುತ್ತವೆ. ಆ ಸಂದೇಹ ಎಲ್ಲಿಂದ ಶುರುವಾಗುತ್ತದೆಯೋ ಅಲ್ಲಿಂದ ಅಧ್ಯಯನ ಪ್ರಾರಂಭವಾಗಬೇಕು. ಕಾಮ್ರೇಡ್

ನಾನು ಅರ್ಥಶಾಸ್ತ್ರ  ಪದವಿ(ಎಕಾನಮಿಕ್ಸ್  ಗ್ರ್ಯಾಜುಯೇಷನ್)ಯನ್ನು ಓದುತ್ತಿದ್ದಾಗ ಅರ್ಥಶಾಸ್ತ್ರದಲ್ಲಿ ಮಾರ್ಕ್ಸ್‌ವಾದಿ ತಿಳುವಳಿಕೆಯು ಮೊದಲು ಪರಿಚಯವಾಯಿತು. ಮಾರ್ಕ್ಸ್ ಒಂದೆಡೆ ‘ಆರ್ಥಿಕ ನ್ಯಾಯದ ತತ್ವಗಳು ಸಾಮಾಜಿಕ ಪರಿಸ್ಥಿತಿಗಳಿಗಿಂತ ಮೇಲೇರಲು ಸಾಧ್ಯವೇ ಇಲ್ಲ’ (Principles of Economic Justice Can Never Rise Above the Social Conditions) ಎಂದು ಹೇಳುತ್ತಾರೆ. ಈ ವಾಕ್ಯವೇ ನನ್ನನ್ನು ಅಧ್ಯಯನಕ್ಕೆ ಪ್ರೇರೇಪಿಸಿತು. ನ್ಯಾಯ ಎನ್ನುವುದು ಸಾಮಾಜಿಕ ಪರಿಸ್ಥಿತಿಗಳಿಗೆ ಸಂಬಂಧವನ್ನು ಒಳಗೊಂಡಿರುತ್ತದೆ. ಇಂದಿನ ಆಧುನಿಕ ನಾಗರಿಕ ಸಮಾಜದಲ್ಲಿ ನ್ಯಾಯ ಸಾಧ್ಯವೇ? ‘ನ್ಯಾಯವು ಸಾಪೇಕ್ಷ ಪದವಾಗಿದೆ ಮತ್ತು ಸಾಮಾಜಿಕ ಪರಿಸ್ಥಿತಿಗಳು, ಅವುಗಳು ಸ್ವತಃ ಬದಲಾಗುತ್ತವೆ’ (“Justice Itself is a Relative Term and Social Conditions Change Themselves” ).

ಶೈಕ್ಷಣಿಕ ಅಧ್ಯಯನದಿಂದ ಆಸಕ್ತಿ ಪ್ರಾರಂಭವಾದದು ಒಂದು ಭಾಗವಾದರೆ, ಇನ್ನೊಂದು ಬದಿಯಲ್ಲಿ ನಮ್ಮ ಸಾಮಾಜಿಕ ಪರಿಸ್ಥಿತಿಗಳು ಸಹ ಕಾರಣವಾಗುತ್ತವೆ. ನಾನು ಶಾಲಾ, ಕಾಲೇಜು ಶಿಕ್ಷಣವನ್ನು  ಹೈದರಾಬಾದಿನಲ್ಲಿ ಪಡೆದಿದ್ದೇನೆ. ನಾನು 1967-68ರಲ್ಲಿ ನಕ್ಸಲೀಯರನ್ನು, ಆ ನಂತರ ಪ್ರತ್ಯೇಕ ತೆಲಂಗಾಣ ಚಳವಳಿಯನ್ನು ನೋಡಿದೆ. ಪ್ರತ್ಯೇಕ ತೆಲಂಗಾಣದಿಂದಾಗಿ ಹೈದರಾಬಾದ್  ಅನ್ನು ಬಿಟ್ಟು ಹೋಗಬೇಕಾಗಿ ಬಂತು. ಆ ಸಮಯದಲ್ಲಿ ಒಂದು ವರ್ಷದ ಓದು ಹೋಯಿತು. ಇದಕ್ಕೆಲ್ಲಾ ಕಾರಣಗಳೇನು? ಈ ಚಳುವಳಿಗಳು ಯಾಕಾಗಿ ನಡೆಯುತ್ತಿವೆ? ಎಂದು ಅದರಿಂದಲೂ ನಾನು ಯೋಚಿಸಿದೆ.

ನಮ್ಮ ಸಮಾಜದಲ್ಲಿನ ಬೆಳವಣಿಗೆಗಳನ್ನು ವಿಶ್ಲೇಷಿಸುತ್ತಾ… ಬರುವ ಸಂದೇಹಗಳಿಗೆಲ್ಲ ಪರಿಹಾರವೇನು? ಎಂದು ನಾನು ಯೋಚಿಸುತ್ತಿದ್ದೆ. ಸುತ್ತಲಿನ ಪರಿಸ್ಥಿತಿಗಳು, ಪರಿಣಾಮಗಳಿಗೆ ಕಾರಣವೇನು? ಅವುಗಳಿಗೆ ಪರಿಹಾರ ಏನಿದೆ ಎಂದು ವಿಶ್ಲೇಷಿಸಿಕೊಂಡದ್ದು ನಾನು ಎಡಪಕ್ಷದ ಕಡೆಗೆ ಬರಲು ಕಾರಣವಾಯ್ತು. ಆದರೆ, ನಿಜವಾದ ಅಧ್ಯಯನ ಪ್ರಾರಂಭಿಸಬೇಕಾದ್ದು ಒಂದು ಪುಸ್ತಕದಿಂದ ಅಲ್ಲ ಅನುಭವಗಳಿಂದ. ಕಾಮ್ರೇಡ್

ಎಡಕ್ಕೆ ನೋಡುವ ಆರಂಭಿಕ ಹಂತಗಳಲ್ಲಿ ನೀವು ಯಾವ ಪುಸ್ತಕಗಳನ್ನು ಓದಿದ್ದೀರಿ?

ಆಗ ಪ್ರಗತಿಪರ ಸಾಹಿತ್ಯ ಚೆನ್ನಾಗಿತ್ತು. ರಾಬರ್ಟ್ ಫ್ರಾಸ್ಟ್ ಅವರ ಪುಸ್ತಕಗಳಿದ್ದವು. ಅಮೇರಿಕಾದಲ್ಲಿ ಕಾರ್ಮಿಕ ಚಳುವಳಿಯ ಉದಯದ ಕುರಿತ ಸ್ಪಾರ್ಟಕಸ್ (Spartacus) ಅವರ  ಪುಸ್ತಕಗಳು ಬಂದಿದ್ದವು. ಅವುಗಳನ್ನು ಓದಿದೆ. ಮಾರ್ಕ್ಸ್‌ವಾದಿ ಸಾಹಿತ್ಯವನ್ನು ಮುಖ್ಯವಾಗಿ ಓದಲು ಪ್ರಾರಂಭಿಸಿದ್ದು ನಾನು ಅರ್ಥಶಾಸ್ತ್ರ ಪದವಿ ಓದುತ್ತಿದ್ದಾಗ. ಅಂತಹ ಸಂದರ್ಭಗಳಲ್ಲಿ ಬಂಡವಾಳಶಾಹಿ ಎಂದರೇನು? ನಿಜವಾಗಿ ಅದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಎಂದು ತಿಳಿಯುವ ಸಲುವಾಗಿಯೇ ಮಾರ್ಕ್ಸ್‌ವಾದಿ ಸಾಹಿತ್ಯದತ್ತ ಮುಖ ಮಾಡಿದೆ. ಲೆನಿನ್ ಅವರ ‘ರಾಜ್ಯ ಮತ್ತು ಕ್ರಾಂತಿ’ ನಾನು ಆಸಕ್ತಿಯಿಂದ ಓದಿದ ಮೊದಲ ಪುಸ್ತಕ. ಅದಕ್ಕೂ ಮೊದಲು ಓದಿದ್ದ ಪುಸ್ತಕಗಳಿಗಿಂತಲೂ  ಆಸಕ್ತಿಯಿಂದ ಓದಿದ್ದು, ಪ್ರಭಾವ ಬೀರಿದ್ದು ಇದೇ ಪುಸ್ತಕ. ಅಂದೇ ಸಮಾಜವಾದಕ್ಕಾಗಿ ನಾವು ಮಾಡುವ ಹೋರಾಟ ಯಾವ ರೀತಿಯಲ್ಲಿ ಇರಬೇಕು ಎಂಬುದು ಅರ್ಥವಾಗುತ್ತದೆ. ಕಾಮ್ರೇಡ್

ಮಾರ್ಕ್ಸ್‌ವಾದಿ ಸಾಹಿತ್ಯದ ಪರಿಚಯದ ನಂತರ ಸಂಪೂರ್ಣ ಯೋಜನಾಬದ್ದವಾಗಿ ಓದುವುದು ಯಾವಾಗ ಪ್ರಾರಂಭವಾಯಿತು?

ಒಮ್ಮೆ ಆರಂಭಿಸಿದ ನಂತರ ಅದು ನಿರಂತರ ಕಾರ್ಯಕ್ರಮವಾಗಿ ಮುಂದುವರೆಯಿತು. ಪದವಿ ಓದುತ್ತಿದ್ದ ಸಮಯವೆಲ್ಲಾ ಇದೇರೀತಿ ಓದಿದ್ದರೂ, ಪ್ರಬುದ್ಧತೆಯ ಹಂತ ಮಾತ್ರ ದೆಹಲಿಯ ಜೆಎನ್‌ ಯು ನಲ್ಲಿದ್ದಾಗಲೇ. ಅಲ್ಲಿ ನಿಯಮಿತವಾಗಿ ಅಧ್ಯಯನಕ್ಕಾಗಿ ಗುಂಪು (ಸ್ಟಡಿ ಗ್ರೂಫ್)ಗಳನ್ನು ಆಯೋಜಿಸುತ್ತಾರೆ. ಒಬ್ಬರು ಅಥಿತಿಯನ್ನು ಕರೆದು ಉಪನ್ಯಾಸ, ಪುಸ್ತಕಗಳ ಮೇಲೆ ಅಧ್ಯಯನ ಗುಂಪುಗಳನ್ನು ಆಯೋಜಿಸುವ ಆರೇಳು ಮಂದಿ ಸ್ವಯಂಪ್ರೇರಣೆಯಿಂದ ಮಾಡುವವರು. ಕ್ಯಾಪಿಟಲ್  ನ ಮೂರೂ ಸಂಪುಟಗಳನ್ನು ಆಗಲೇ ಓದಿದ್ದೇವೆ. . . ಪ್ರತಿ ಶನಿವಾರ ಸಂಜೆ.  ಮಾರ್ಕ್ಸ್‌ವಾದಿ ಶ್ರೇಷ್ಠತೆಗಳನ್ನು ಅದೇ ರೀತಿ ಓದುತ್ತೇವೆ.

ವಿದ್ಯಾರ್ಥಿ ಹಂತ ಹಾಗಾಗಿ…ಅಧ್ಯಯನಕ್ಕಾಗಿ ಸ್ಟಡಿ ಗ್ರೂಪ್ ಗಳನ್ನು ಆಯೋಜಿಸುವವರಾ? ಸ್ಟಡೀ ಗ್ರೂಪ್ ಗಾಗಿಯೇ ಓದುತ್ತಿದ್ದವರಾ?  

ಎರಡೂ ಅಲ್ಲ… ಓದಿದ್ದನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ. ಓದಿದ್ದು ಒಬ್ಬೊಬ್ಬರಿಗೂ ಒಂದೊಂದು ವಿಧದಲ್ಲಿ ಅರ್ಥವಾಗುತ್ತದೆ. ಸ್ಟಡಿ ಗ್ರೂಪ್  ನಲ್ಲಿ ಇಂತಹ ಪರಸ್ಪರರ ತಿಳುವಳಿಕೆಯಿಂದ ನಿಜವಾದ ತಿಳುವಳಿಕೆಯನ್ನು ತಲುಪಲಾಗುತ್ತದೆ. ಕಾಮ್ರೇಡ್

ಮಾರ್ಕ್ಸ್‌ವಾದಿ ಸಾಹಿತ್ಯವನ್ನು ಓದುವುದಕ್ಕೆ ಮೊದಲು ಇತರ ಸಾಹಿತ್ಯವನ್ನು ಓದುವ ಅಭ್ಯಾಸವಿತ್ತೇ? ಅಥವಾ ಇವುಗಳನ್ನು ನೇರವಾಗಿ ಓದಿದಿರಾ?

ಬಾಲ್ಯದಿಂದಲೂ ಸಾಹಿತ್ಯವನ್ನು ಓದುವ ಅಭ್ಯಾಸ ಇತ್ತು. ಅದಕ್ಕೆ ಮುಖ್ಯ ಕಾರಣ ನನ್ನ ಅಜ್ಜ (ತಾಯಿಯ ತಂದೆ). ಅವರು ಹೈಕೋರ್ಟ್ ಜಡ್ಟ್  ಆಗಿದ್ದರು. ಮನೆಯೇ ದೊಡ್ಡ ಗ್ರಂಥಾಲಯವಾಗಿತ್ತು. ಅವರ ಮೂಲಕ ಬಾಲ್ಯದಿಂದಲೂ ಓದುವ ಅಭ್ಯಾಸವಿತ್ತು. ಆ ಅಭ್ಯಾಸ ನಂತರದ ಕಾಲದಲ್ಲಿ ಬಹಳ ಉಪಯೋಗಕ್ಕೆ ಬಂತು. ನಿಜವಾದ ಓದುವಿಕೆಗೆ ಒಂದು ಬೌದ್ಧಿಕ ಶಿಸ್ತು (Intellectual Discipline) ಅಗತ್ಯವಿದೆ. ಅದು ಎಷ್ಟು ಮುಖ್ಯವೆಂದು ಇಂದಿಗೂ ತಿಳಿಯುತ್ತದೆ. ಅನುಭವದಲ್ಲಿ ತಿಳಿಯುತ್ತಿರುತ್ತದೆ. ನಿರಂತರ ಪ್ರಯಾಣ ಮಾಡುತ್ತಿರುವುದರಿಂದ ಓದುವುದು ಇತ್ತೀಚೆಗೆ ಓದು ಸರಿಯಾಗಿ ನಡೆಯುತ್ತಿಲ್ಲ. ಆದರೆ ಪ್ರಯಾಣದ ಸಮಯವನ್ನು ಓದಲು ಬಳಸುತ್ತೇನೆ. ಕಾಮ್ರೇಡ್

ಆ ದಿನಗಳಲ್ಲಿ ಯಾವ ಪುಸ್ತಕಗಳನ್ನು ಓದಿದ್ದೀರಿ?

ಆ ದಿನಗಳಲ್ಲಿ ಹೊಸದಾಗಿ ಬರುತ್ತಿದ್ದ ಭಾರತೀಯ ಆಂಗ್ಲ ಬರಹಗಾರರ ಪುಸ್ತಕಗಳನ್ನು ಓದುತ್ತಿದ್ದೆ. ಆರ್.ಕೆ. ನಾರಾಯಣನ್ ಆಗಷ್ಟೇ ಜನಪ್ರಿಯರಾಗುತ್ತಿದ್ದ ಬರಹಗಾರ. ಭಾರತದ ಪರಿಸ್ಥಿತಿಯಲ್ಲಿ ವಾಸ್ತವತೆಯನ್ನು ಅವರು ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಎಂಬುದನ್ನು ತಿಳಿಯಲು ಕೂಡಾ ಓದಿದವನು ನಾನು. ಮತ್ತೊಂದೆಡೆ, ಇನ್ನೊಬ್ಬ ಅಜ್ಜನಿಗೆ (ನನ್ನ ತಂದೆಯ ತಂದೆ) ಧರ್ಮ ಸಂಬಂಧ ಪುರಾಣಗಳಲ್ಲಿ ತುಂಬಾ ಆಸಕ್ತಿ. ಅವರ ಮೂಲಕ ರಾಮಾಯಣ, ಮಹಾಭಾರತ, ಭಾಗವತಗಳನ್ನು ಓದಿದ್ದೇನೆ. ಅವರಿಂದಲೂ ಸಾಕಷ್ಟು ಕಲಿತಿದ್ದೇನೆ. ಅವುಗಳನ್ನು ನಿರಾಕರಿಸುವ ಅಗತ್ಯವಿಲ್ಲ. ಆ ಅಭೂತ ಕಲ್ಪನೆಯಿಂದ ವಾಸ್ತವವನ್ನು ಅರಿಯಲು ಹಲವು ಪ್ರಶ್ನೆಗಳು ಏಳುತ್ತವೆ. ಅವುಗಳನ್ನು ಕೇಳಿದೆನಾದರೂ ಅವರಿಗೆ ಉತ್ತರ ಹೇಳಲಾಗಲಿಲ್ಲ. ಕಾಮ್ರೇಡ್

ರಾಮಾಯಣದಲ್ಲಿ ದಕ್ಷಿಣದ ರಾಜರನ್ನು… ರಾಮನ ಮಿತ್ರರು ಮತ್ತು ಭಕ್ತರ ಸಹಿತ ಪ್ರಾಣಿಗಳಂತೆ ಚಿತ್ರಿಸುವುದರ ಒಳಾರ್ಥವೇನು? ಆ ರೀತಿ ಏಕೆ ಹಾಗೆ ಚಿತ್ರಿಸಲಾಗಿದೆ? ಎಂಬುದು ನನ್ನ ಸಂದೇಹಗಳಲ್ಲಿ ಒಂದು. ರಾಮಾಯಣ ಕಥೆ ಬಂದ ದಿನಗಳಲ್ಲಿ ದ್ರಾವಿಡರ ಮೇಲೆ ಆರ್ಯರ ಮೇಲುಗೈಯಿಂದಾಗಿ ಆ ರೀತಿ ಬರೆದಿದ್ದಾರೆ ಎಂದು ಕೆಲವು ವರ್ಷಗಳ ನಂತರ ಅರ್ಥವಾಯಿತು. ಅಂದಿನ ಸಾಮಾಜಿಕ ವಾಸ್ತವ ಆ ಕಥೆಯಲ್ಲಿ ಆ ರೀತಿ ಪ್ರತಿಬಿಂಬಿತವಾಗಿತ್ತು. ಇವುಗಳ ಅಧ್ಯಯನ ಮಾಡುವುದನ್ನು ಅಭಿವೃದ್ಧಿಗೆ ಅಡ್ಡಿ ಎಂಬಂತೆ ನೋಡಬಾರದು. ವಾಸ್ತವಿಕತೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅವುಗಳನ್ನು ಓದಬೇಕು. . . ಒಂದೆಡೆ ಸಮಕಾಲೀನ ಸಾಹಿತ್ಯ, ಮತ್ತೊಂದಡೆ ಪುರಾಣಗಳು, ‘’ಸ್ಪಾರ್ಟಕಸ್‌”ನಂತಹ ಪುಸ್ತಕಗಳಲ್ಲಿನ ದಂಗೆಗಳು. . . ಇವೆಲ್ಲವೂ ಪ್ರಗತಿಶೀಲ ಸಾಹಿತ್ಯ ಬೆಳೆದು ಬರುವುದಕ್ಕೆ ಕೊಡುಗೆ ನೀಡುತ್ತವೆ. ಕಾಮ್ರೇಡ್

ಪ್ರಗತಿಶೀಲ ಸಾಹಿತ್ಯವನ್ನು ಆಯ್ಕೆಮಾಡಿ ಓದುತ್ತಿದ್ದಿರಾ?

ಹೇಳಬೇಕೆಂದರೆ, ಓದಿದರೆ ಪ್ರಗತಿಪರ ಸಾಹಿತ್ಯ ಯಾವುದು ಎಂಬುದು ತಿಳಿಯುತ್ತದೆ. ಇದು ಪ್ರೋಗ್ರೆಸಿವ್… , ಇದು ರಿಯಾಕ್ಷನರಿ ಎಂದು ಆಯ್ಕೆ ಮಾಡಿಕೊಂಡು ಓದಬೇಕು ಅಂದುಕೊಂಡರೆ. . . ನಿಜವಾದ ಓದು ಮುಂದುವರಿಯುವುದಿಲ್ಲ. ಕಾಮ್ರೇಡ್

ರಾಜಕೀಯ ಶಾಲೆಗೆ ಹೋಗುವ ಮುನ್ನ, ಹೋದ ನಂತರ. . . ತಿಳುವಳಿಕೆ ಮತ್ತು ಅಧ್ಯಯನದ ವೇಗದಲ್ಲಿ ಏನಾದರೂ ವ್ಯತ್ಯಾಸ ಕಂಡಿದೆಯಾ?

ಮೊದಲ ರಾಜಕೀಯ ಶಾಲೆಗೆ 1978 ರಲ್ಲಿ ಹೋಗಿದ್ದೆ ಎಂದು ಅಂದುಕೊಂಡಿದ್ದೇನೆ  … ಜಲಂಧರ್ ಪಾರ್ಟಿ ಕಾಂಗ್ರೆಸ್ ನಂತರ  ಆ ಶಾಲೆ ನಡೆಯಿತು. ರಾಜಕೀಯ ಶಾಲೆಗಳಿಗೆ ಹೋಗುವುದು ಬಹಳ ಮುಖ್ಯ. ನನ್ನ ವೈಯಕ್ತಿಕ ಅನುಭವ ಏನೆಂದರೆ ಅದರ ಬಳಿ ಹೋಗುವುದರಿಂದ ಓದು ಶ್ರೇಣೀಕೃತವಾಗುತ್ತದೆ. ಸ್ಟಡಿ ಗ್ರೂಪ್ ಗಳಿಗೆ ಹೋದರೂ ಕೂಡಾ. ಯಾವ ಯಾವ ವಿಷಯಗಳಿಗಾಗಿ ಯಾವ ಪುಸ್ತಕಗಳನ್ನು ಓದಬೇಕು ಎನ್ನುವುದು ಕ್ರಮಬದ್ದವಾಗುತ್ತದೆ. ಯಾವುದನ್ನು ಆರಿಸಿ ಓದಬೇಕು ಎಂಬ ಆದ್ಯತೆಯ ಕ್ರಮ ತಿಳಿಯುತ್ತದೆ. ಕಾಮ್ರೇಡ್

ಆಸಕ್ತಿಗಾಗಿ ಓದುವವರು, ಅಗತ್ಯಗಳಿಗಾಗಿ ಓದುವವರು ಇದ್ದಾರೆ. ಅಧ್ಯಯನದಲ್ಲಿ ಇವುಗಳನ್ನು ಹೇಗೆ ಯೋಜಿಸಿಕೊಳ್ಳಬೇಕು?

ಈ ಎರಡರ ನಡುವೆ ಯಾವುದೇ ವೈರುಧ್ಯ ಇದೆ ಎಂದು ನನಗನ್ನಿಸುತ್ತಿಲ್ಲ. ಆಸಕ್ತಿಯುಳ್ಳವರಲ್ಲಿ ಕೂಡಾ ವಿಷಯಗಳು ಮತ್ತು ರಾಜಕೀಯಗಳು ಇರುತ್ತವೆ. ವಿರಾಮ ಸಮಯದಲ್ಲಿ ಪತ್ತೇದಾರಿ ಕಾದಂಬರಿಗಳನ್ನೂ ಓದುತ್ತಿದ್ದೆ.. ಬಂಡವಾಳಶಾಹಿಗಳು, ಶಸ್ತ್ರಾಸ್ತ್ರ ವ್ಯಾಪಾರಿಗಳು ಯುದ್ಧವನ್ನು ಏಕೆ ಬಯಸುತ್ತಾರೆ, ಅವರು ಯುದ್ಧದಿಂದ ಹೇಗೆ ಲಾಭ ಪಡೆಯುತ್ತಾರೆ ಎಂಬುದು ಮೊದಲ ಬಾರಿಗೆ ಪತ್ತೇದಾರಿ ಕಾದಂಬರಿಯ ಮೂಲಕ ತಿಳಿಯಿತು. ಆದ್ದರಿಂದ ಓದುವುದರಿಂದ ನಾವು ಏನನ್ನು ಗ್ರಹಿಸುತ್ತೇವೆ ಎಂಬುದರ ಮೇಲೆ ಇದು ಅವಲಂಬಿಸಿರುತ್ತದೆ. ಅಂದರೆ ನಿಮ್ಮ ಆಸಕ್ತಿಯ ವಿಷಯಗಳನ್ನು ಓದಬಾರದು ಎಂದರ್ಥವಲ್ಲ.ಆದರೆ ಮಾರ್ಕ್ಸ್‌ವಾದಿ ಮೂಲಭೂತವಾದ ಕ್ಲಾಸಿಕ್‌ಗಳನ್ನು ಓದಿದೆ, ಇವುಗಳಿಂದ ನಾವು ಎಲ್ಲವನ್ನೂ ಅರ್ಥಮಾಡಿಕೊಳ್ಳಬಹುದು, ತಿಳುವಳಿಕೆಯನ್ನು ಪಡೆಯುತ್ತೇವೆ ಎಂದು ಭಾವಿಸುವುದು ತಪ್ಪು. ಹಾಗೆಯೇ ಕ್ಲಾಸಿಕ್ ಓದಿ. . . ಎಲ್ಲವೂ ಅರ್ಥವಾಯಿತು ಎಂದುಕೊಳ್ಳುವುದೂ ಸರಿಯಲ್ಲ.

ಅನೇಕ ಪುಸ್ತಕಗಳನ್ನು ಓದುತ್ತೇವಲ್ಲವೇ! ಅದರಿಂದ ವಿಷಯಗಳನ್ನು ಸೆಳೆಯಲು ನೀವು ಹೇಗೆ ನೆನಪಿಸಿಕೊಳ್ಳುತ್ತೀರಿ? ನೆನಪಿಟ್ಟುಕೊಳ್ಳಲು ನೀವು ಏನು ಮಾಡುತ್ತೀರಿ?

ಯಾಕಾಗಿ ಓದುತ್ತಿದ್ದೇವೆ  ಎಂಬ ಅರಿವು ನಮಗಿರಬೇಕು. ನಮ್ಮ ಜೀವನದಲ್ಲಿನ ಅನುಭವಗಳನ್ನು ಮೀರಿ ಇನ್ನೂ ಅನೇಕ ಅನುಭವಗಳಿವೆ. ಅವುಗಳನ್ನು ನಾವು ಅನುಭವಿಸುವ ಅವಕಾಶ ಇಲ್ಲ. ಆ ಅನುಭವಗಳಿಂದ ಮನುಷ್ಯ ಸಂಬಂಧಗಳು, ಅನುಭವಗಳು ಹೇಗಿವೆ ಎಂಬುದನ್ನು ಓದುತ್ತಾ ತಿಳಿಯಬಹುದು. ಅಗತ್ಯವಿದ್ದರೆ ಓದುವಾಗ ಟಿಪ್ಪಣಿಗಳನ್ನು ತೆಗೆದುಕೊಳ್ಳಬೇಕು. ಮನನ ಮಾಡಿಕೊಳ್ಳುವುದನ್ನು, ಬರೆಯುವುದನ್ನು ಮಾಡಬೇಕು. ನನ್ನ ಜೇಬಿನಲ್ಲಿ ಯಾವಾಗಲೂ ಸಣ್ಣ ಕಾಗದದ ತುಂಡುಗಳು ಇರುತ್ತವೆ. ಮುಖ್ಯವಾದ ವಿಷಯಗಳನ್ನು ತಿಳಿದುಕೊಂಡರೆ, ಓದಿದರೆ, ಯಾವ ರೀತಿಯಲ್ಲಿ ಗ್ರಹಿಸಿದರೂ ಅವುಗಳನ್ನು ತಕ್ಷಣವೇ ಬರೆದುಕೊಳ್ಳುತ್ತೇನೆ.

ಆತ್ಮವಿಮರ್ಶೆಯಿಂದ ಹೇಳಬೇಕೆಂದರೆ.. . ಈ ಕೆಲಸವನ್ನು ನಾನು ಕೂಡಾ  ಮಾಡಬೇಕಾದಷ್ಟು ಮಾಡಲಾಗುತ್ತಿಲ್ಲ. ಓದುವುದು, ತಿಳಿದುಕೊಳ್ಳುವುದು ಮತ್ತು ಕಲಿತದ್ದನ್ನು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಬೇಕು. ಇದು ಕ್ರಮಬದ್ದವಾಗಿ ನಡೆಯಬೇಕು. ಆಗ ಮಾತ್ರ ಆ ಜ್ಞಾನ ಉಪಯುಕ್ತವಾಗುತ್ತದೆ. ಕೆಲವರು ತುಂಬಾ ಓದುತ್ತಾರೆ. ಚೆನ್ನಾಗಿ ಜ್ಞಾನವನ್ನು ಸಂಪಾದಿಸುತ್ತಾರೆ. ಆದರೆ ಅದು ಅವರಿಗೆ ಮಾತ್ರ ಸೀಮಿತ ಮಾಡಿಕೊಳ್ಳುತ್ತಾರೆ. ಇದರಿಂದ ಚಳವಳಿಗಳಿಗೆ ಪ್ರಯೋಜನವಾಗುತ್ತಿಲ್ಲ. ಇದಕ್ಕಾಗಿಯೇ ಮಾನಸಿಕ ಶಿಸ್ತು ಬೇಕು, ಎಷ್ಟೇ ಕಠಿಣವಾದ ವಿಷಯಗಳಾದರೂ ಸಭೆಗಳು, ತರಬೇತಿ ಶಾಲೆಗಳಿಗೆ ಹೋಗುವಾಗ ತಯ್ಯಾರಿ ಇರಬೇಕು. ತಯ್ಯಾರಿ ಇದ್ದರೆ ವಿಷಯ, ಕ್ರಮ ಮತ್ತು ವಿಧಾನ ಚೆನ್ನಾಗಿರುತ್ತದೆ. ಹೇಳಬೇಕು ಅಂದುಕೊಂಡದ್ದು ಇತರರಿಗೆ ತಲುಪುತ್ತದೆ.

ಅಷ್ಟು ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಅಧ್ಯಯನಕ್ಕಾಗಿ ಹೇಗೆ ಸಮಯ ಮಾಡಿಕೊಳ್ಳುತ್ತೀರಿ?

ಇದಕ್ಕೆ ಮಾನಸಿಕ ಶಿಸ್ತು ಬೇಕು. ಹೆಚ್ಚಿನ ಸಮಯವನ್ನು ಪ್ರಯಾಣದಲ್ಲಿ ಕಳೆಯುತ್ತೇನೆ. ಓದುವುದು, ಬರೆಯುವುದು ಕೂಡಾ ಪ್ರಯಾಣ ಮಾಡುವಾಗಲೇ ಮಾಡುತ್ತೇನೆ. ತಂತ್ರಜ್ಞಾನದ ಪ್ರಗತಿಯು ಬರೆದುದನ್ನು ಕಳುಹಿಸಲು ಸಾಧ್ಯವಾಗಿಸಿದೆ. ಪ್ರಾಥಮಿಕವಾಗಿ ಪ್ರತಿದಿನ ಸ್ವಲ್ಪ ಸಮಯವನ್ನು ಅಧ್ಯಯನಕ್ಕೆ ವಿನಿಯೋಗಿಸುವುದು ಅವಶ್ಯಕ. ಕಾಮ್ರೇಡ್ ಇ.ಎಂ.ಎಸ್. ರಿಂದ ಇದನ್ನು ಕಲಿತಿದ್ದೇನೆ. ಅವರು ದಿನವೂ ಬೆಳಗಿನ ಜಾವ ಎರಡು ಮೂರು ಗಂಟೆ ಓದುತ್ತಿದ್ದರು. ಆ ಸಮಯಕ್ಕೆ ತೊಂದರೆಯಾದರೆ, ಆ ದಿನದ ಯಾವುದೋ ಒಂದು ಸಮಯವನ್ನು ಅದಕ್ಕೆ ಹೊಂದಿಸಿಕೊಳ್ಳುತ್ತಿದ್ದರು. ನಾನೂ ಬೆಳಿಗ್ಗೆ ಅದನ್ನು ನಿಯೋಜಿಸುತ್ತೇನೆ. ಅದಕ್ಕೆ ಅಡ್ಡಿ ಉಂಟಾದರೆ, ಸರಿಹೊಂದಿಸಲು ಪ್ರಯತ್ನಿಸುತ್ತೇನೆ.

ಆರಂಭವಾದ ಪುಸ್ತಕ ಹಲವು ಕಾರಣಗಳಿಂದ ಮಧ್ಯದಲ್ಲಿಯೇ ನಿಂತು ಹೋಗುತ್ತದೆ. ಈ ಸಮಸ್ಯೆಯನ್ನು ನೀವು ಹೇಗೆ ನಿವಾರಿಸುತ್ತೀರಿ?

ಓದಲೇಬೇಕಾದ ಯಾವುದೇ ಪುಸ್ತಕವನ್ನಾದರೂ ಅದನ್ನು ಪೂರ್ತಿ ಮುಗಿಸದೇ ಇರುವುದು ವೈಯಕ್ತಿಕ ದೌರ್ಬಲ್ಯ. ಆ ಪುಸ್ತಕವನ್ನು ಪೂರ್ತಿ ಮಾಡಬೇಕೆಂದರೆ ಅದು ಮುಗಿಯುವವರೆಗೂ ನಮ್ಮೊಂದಿಗೆ ಇಟ್ಟುಕೊಳ್ಳಬೇಕು. ಅದನ್ನು ಪೂರ್ಣಗೊಳಿಸಬೇಕು ಎಂಬ ಬಯಕೆ, ಆಸಕ್ತಿ ಇದ್ದರೆ ಅದು ಸಾಧ್ಯವಾಗುತ್ತದೆ. ಭಾರತೀಯ ಲೇಖಕರಲ್ಲಿ ಮಾರ್ಕ್ಸ್‌ವಾದಿ ದಾರ್ಶನಿಕ ಎಂದು ಕರೆಸಿಕೊಳ್ಳುವ ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರ ಅಮುದ್ರಿತ ಕೃತಿಗಳನ್ನು ಇತ್ತೀಚೆಗೆ ಮುದ್ರಿಸಿ ಪ್ರಕಟಿಸಲಾಗಿದೆ. ಅವುಗಳನ್ನು ಓದಲು ಎರಡು ತಿಂಗಳ ಹಿಂದೆ ಪ್ರಾರಂಭಿಸಿದೆ. ಪೂರ್ಣಗೊಳಿಸುವುದಕ್ಕೋಸ್ಕರ ಅವುಗಳನ್ನು ನನ್ನಲ್ಲೇ ಇಟ್ಟುಕೊಂಡಿದ್ದೇನೆ. ಆಸಕ್ತಿದಾಯಕವಾಗಿರುವ ಪುಸ್ತಕವನ್ನು ಓದುವಾಗ, ಆಕಸ್ಮಿಕವಾಗಿ ಬೇರೆ ಕೆಲಸಗಳೇನಾದರೂ ಬಂದರೆ ಸ್ವಲ್ಪ ಕಿರಿಕಿರಿಯನ್ನು ಉಂಟುಮಾಡಬಹುದು. ನಿಭಾಯಿಸಿಕೊಂಡು ತಕ್ಷಣ ಅವಶ್ಯವಾದ ಕೆಲಸಕ್ಕೆ ಇಳಿಯುತ್ತೇನೆ.

ಅಧ್ಯಯನದಲ್ಲಿ ಅಂದಿಗೂ.. ಇಂದಿಗೂ ವ್ಯತ್ಯಾಸ? ಆ ದಿನಗಳೇ ಚೆನ್ನಾಗಿತ್ತು… ಈ ದಿನಗಳಲ್ಲಿ ಓದುವುದಕ್ಕೆ ಸಮಯವಿಲ್ಲ ಅನಿಸುತ್ತಿದೆಯೇ?

ವ್ಯತ್ಯಾಸವಿದೆ ಆದರೆ, ಹಾಗೆ ಅನಿಸುವುದಿಲ್ಲ. ಸಹಜವಾಗಿ ಈಗ ಸಮಯ ಉಳಿಯುತ್ತಿದೆ. ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಈಗ ಮಾಹಿತಿಗಳು ತಕ್ಷಣವೇ ತಿಳಿಯುತ್ತದೆ. ಈಗ ಟೆಕ್ನಾಲಜಿ ಮತ್ತು ಟಿವಿ ಚಾನೆಲ್‌ಗಳಿಂದಾಗಿ ಮಾಹಿತಿಗಾಗಿ ಬಹಳ ದಿನ ಕಾಯುವ ಅಗತ್ಯವಿಲ್ಲ. ಮೊದಲಿಗಿಂತ ಹೆಚ್ಚು ಓದುವುದಕ್ಕೆ ಹೆಚ್ಚು ಸಮಯ ಉಳಿದಿದೆ. ಹಿಂದಿನ ದಿನಗಳಲ್ಲಿ ಮಾಹಿತಿ ಸಂಗ್ರಹಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು.

ವಿವಿಧ ವಲಯಗಳು, ಸಾಮಾಜಿಕ ವರ್ಗಗಳಿಗೆ ಸಂಬಂಧಿಸಿ ಬರುತ್ತಿರುವ ಸಮಕಾಲೀನ ಸಾಹಿತ್ಯವನ್ನು ಓದುವುದು ಅಗತ್ಯ ಇದೆಯೇ?

ಖಂಡಿತವಾಗಿಯೂ ಇದೆ. ಆ ರೀತಿ ಬರುತ್ತಿರುವ ಉತ್ತಮ ಸಾಹಿತ್ಯದ ಜೊತೆಗೆ ಅದಕ್ಕೂ ಮೀರಿ ಕೆಲಸಕ್ಕೆ ಬಾರದವು ಕೂಡಾ ಬರುತ್ತಿವೆ. ಅವುಗಳನ್ನು ಪ್ರತ್ಯೇಕಿಸಿ ಮತ್ತು ಸಮಕಾಲೀನ ಸಾಹಿತ್ಯವನ್ನು ಓದಬೇಕು.

ವಿಷಯದ ಅಧ್ಯಯನದಲ್ಲಿ ವಿಶೇಷತೆಗಳಿಗೆ ಸಂಬಂಧಿಸಿ..?

ವಿಶೇಷತೆ (ಸ್ಪೆಷಲೈಜೇಷನ್) ಎಂದರೆ ಉಳಿದವುಗಳ ಅಧ್ಯಯನಗಳನ್ನು ಮಾಡಬಾರದು ಎಂದಲ್ಲ. ಸಾಮಾನ್ಯವಾಗಿ ಎಲ್ಲಾ ವಿಷಯಗಳ ಕುರಿತು ಪ್ರಾಥಮಿಕ ತಿಳುವಳಿಕೆಗಾಗಿ ಓದುವಿಕೆ ಅವಶ್ಯಕವಾಗಿದೆ, ಜೊತೆಗೆ ಕೆಲಸ ಮಾಡುವ ವಿಷಯಗಳ ಮೇಲೆ  ವಿಶೇಷತೆ ಮಾಡುವ ಅವಶ್ಯಕತೆ. ಒಂದು ವಿಷಯದಲ್ಲಿ ಪರಿಣತಿ ಪಡೆದು ಉಳಿದದ್ದನ್ನು ಬಿಡುವುದು ಸರಿಯಲ್ಲ. ಇದರಿಂದ ಸಮಗ್ರತೆ ಬರುವುದಿಲ್ಲ. ವಿಶೇಷತೆ ಇಲ್ಲದೆ ಎಲ್ಲ ವಿಷಯವನ್ನು ಓದುವುದರಿಂದಲೂ ಯಾವುದೇ ಪ್ರಯೋಜನವಿಲ್ಲ.

ಇಂದಿಗೂ ನಿಮಗೆ ಇನ್ನೂ ಸ್ಫೂರ್ತಿ ನೀಡುವ ಪುಸ್ತಕದ ಲೇಖಕ?

ಹೇಳಲು ಕಷ್ಟ. ಬಹಳಷ್ಟು ಮಂದಿ ಇದ್ದಾರೆ. ಬಹಳಷ್ಟು ಪುಸ್ತಕಗಳಿವೆ. ಆದಾಗ್ಯೂ, ನನ್ನ ದೃಷ್ಟಿಯಲ್ಲಿ, ಶಾಸ್ತ್ರೀಯ ಮೇರುಕೃತಿ ಮಾರ್ಕ್ಸ್ ಬರೆದ ‘Louis Bonaparte Eighteenth Brumer’. ಬೇಸರವನ್ನು ಕೊಲ್ಲಲು ಆಗಾಗ್ಗೆ ಓದುವ ಪುಸ್ತಕ ಇದು.

ಅದರಲ್ಲಿ ಒಂದು ವಾಕ್ಯ.

“Man makes history but not on the Circumstances choice by him!’ (“ಮನುಷ್ಯನು ಇತಿಹಾಸವನ್ನು ಸೃಷ್ಟಿಸುತ್ತಾನೆ ಆದರೆ ಅವನಿಂದ ಸಂದರ್ಭಗಳ ಆಯ್ಕೆಯ ಮೇಲೆ ಅಲ್ಲ!)

ಇದನ್ನೂ ನೋಡಿ: ಅಶ್ಲೀಲ ಸಿಡಿಗಳ ತಯಾರಕ ಮುನಿರತ್ನ – ವಕೀಲ ಜಗದೀಶ್‌ ಆರೋಪJanashakthi Media

Donate Janashakthi Media

Leave a Reply

Your email address will not be published. Required fields are marked *