– ಯಮುನಾ ಗಾಂವ್ಕರ್
ಅಮೇರಿಕಾ ನೀನೆಷ್ಟು ಪವಿತ್ರ!
ಕ್ಷಣಕ್ಷಣವೂ ರುದಿರ ಧಾರೆಯಲ್ಲೇ ಸ್ನಾನ
ಸಂಧ್ಯಾ ವಂದನೆ. . .. ಜಪತಪಾದಿ
ನಿನ್ನ ದಿನಚರಿಯೆಲ್ಲ ಅಪ್ಪಟ ತಪಸ್ಸು
ಅದೆಂಥ ಪ್ರಜಾಪ್ರಭುತ್ವಕೆ ನಿನ್ನ ಸಂಕಲ್ಪ! ಶಾಂತಿಧೂತೆಯ ಹೆಡಮುರಿಗೆ ಕಟ್ಟಿ
ಹಠ ಬಿಡದ ನಿನ್ನ ಪಯಣಗಳೆಲ್ಲ ಕಾರ್ಪೋರೇಟ್ಗಳಿಗೇ ತರ್ಪಣ! ಅಮೇರಿಕೆ
ಇಸ್ರೇಲಿನ ಮುಂಜಾವ ಮಂಜಿನಲಿ
ಮುಖ ಮಾರ್ಜನೆ ಮುಗಿಸಿದೆ
ಪ್ಯಾಲಿಸ್ಟೇನ್ ಗುಬ್ಬಚ್ಚಿ ಸುತ್ತ
ಹದ್ದುಗಳದ್ದೇ ಗಾಳಿಪಟ ಹಾರಿಸಿದೆ
ಹದ್ದು ಮೀರಿ ಗಾಜಾಪಟ್ಟಿಗೂ ಇಳಿದೆ ಎಣ್ಣೆ ರಾಜಕೀಯದಲಿ ಆಟವೂ ನೋಟವೂ ರಕ್ಷಣಾತ್ಮಕ ಪಾಠವೂ ಎಲ್ಲವೂ
ನೀನು ಪವಿತ್ರವಾಗಲು ಮಾತ್ರ! ಅಮೇರಿಕೆ
ಇದನ್ನೂ ಓದಿ: ಅನುಮತಿ ಇಲ್ಲದೆ ಭಾರತ ತೊರೆಯುವುದಿಲ್ಲ: ಸುಪ್ರೀಂ ಕೋರ್ಟ್ಗೆ ಅನಿಲ್ ಅಂಬಾನಿ ಮುಚ್ಚಳಿಕೆ
ಹಾಗೇ, ಇರಾಕ್ ಮುಗಿಸಿದ್ದು ಮಧ್ಯಾನ್ಹ. ಅಪರಾಹ್ನ ಅಫಘಾನಿಸ್ತಾನಿನಲ್ಲಿದ್ದೆಯಲ್ಲ…
ವೈರಿಗಳ ವೈರಿಗಳನು, ಸ್ನೇಹಿತರ ಸ್ನೇಹಿತರನು
ಬಗಲೊಳಗೆ ತುರುಕಿದೆ
ತುಫಾಕಿಯ ಆಟಕ್ಕೆಳೆದು!
ಆಗಾಗ ಕೋರಿಯಾ, ಲೀಬ್ಯಾ, ಆಫ್ರಿಕಾದತ್ತ ವಿಹಾರ ಹೊರಟು
ತಡರಾತ್ರಿ ವೆನಿಜುವೆಲಾ ದ ತೋಡುಬಾವಿಗಳಲ್ಲಿ
ಮಿಂದೆದ್ದು ನೇರ ಶಯ್ಯಾಗೃಹ ಹೊಕ್ಕು ದಂಪತಿಗಳ ಕದ್ದು ಒಯ್ದೆ!
ಸುಸ್ತಾಗಿ ವಿಶ್ರಾಂತಿಗೆ ವಿಶ್ವಬ್ಯಾಂಕಿನಲ್ಲಿದ್ದೆ ಅಲ್ಲಿಂದಲೇ ಹಾರಾಡುವ ಬಂಡವಾಳ ಬೋಧಿಸಿದೆ.
ಕುರುಡು ಕಾಂಚಾಣವು ಹೊರಳಿ
ನಿನ್ನ ಪಾದದಡಿಯೇ
ನರಳುವಂತೆ ಮಾಡಿದೆ.
ಭಸ್ಮಾಸುರ ಸೃಷ್ಟಿಯ ನೆನಪಿಸಿದೆ ಮತ್ತೆ ಮತ್ತೆ!
ನೀನು ಹೋದಲ್ಲೆಲ್ಲ ತಲೆಬಾಗಿದವರ
ಮೈಮನ ಸಂಪತ್ತ ಸೂರೆ ಹೊಡೆದೆ ವ್ಯಭಿಚಾರವೇ ಮೈವೆತ್ತ ಆಚಾರಕ್ಕೆರಗಿಸಿಕೊಂಡೆ ಸೆಡ್ಡು ಹೊಡೆದವರ ಗುದ್ದಿ ಬಾಂಬಿನಳಿಸಿದೆ ಬಂದೂಕ ನಳಿಕೆಗಳಿಗೆ ಪುರಸೊತ್ತಿಲ್ಲದ್ದಷ್ಟು ನೀನು ಪವಿತ್ರ!! ಅಮೇರಿಕಾ ನೀನು ಪವಿತ!!!
ಇದನ್ನೂ ನೋಡಿ: ದಲಿತ ನೋವಿನ ಧ್ವನಿ – ಸಂಬಳಿಗೋಲು | ಪುಸ್ತಕ ಬಿಡುಗಡೆ Janashakthi Media
