ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಅಮೆರಿಕಾ ಹೊಂದಿರುವ ಸಾಲದ ಮಿತಿ ೩೧.೪ ಟ್ರಿಲಿಯನ್‌ಡಾಲರ್.ಅದರಒಟ್ಟು ಸಾಲ ಈ ಮಿತಿಯನ್ನುಅದಾಗಲೇತಲುಪಿದೆ. ಈ ಮಿತಿಯನ್ನು ೭೯ ನೇ ಬಾರಿಏರಿಸುವ ಬಗ್ಗೆ ಅಲ್ಲಿ ಈಗ ಚರ್ಚೆ ನಡೆಯುತ್ತಿದೆ. ಇದಕ್ಕೆಬಜೆಟ್‌ನಲ್ಲಿ ಕೆಲವು ಕಡಿತಗಳನ್ನು ಮಾಡಬೇಕೆಂಬುದುಕಾಂಗ್ರೆಸ್ ನಲ್ಲಿ ಬಹುಮತದಲ್ಲಿರುವರಿಪಬ್ಲಿಕನ್ನರ ನಿಲುವು. ಶ್ರೀಮಂತರ ಮೇಲೆ ಹೆಚ್ಚು ತೆರಿಗೆ ವಿಧಿಸುವ ಪರ್ಯಾಯ ಮಾರ್ಗದ ಬಗ್ಗೆ ಆಸಕ್ತಿಯನ್ನುರಿಪಬ್ಲಿಕನ್ನರು ಮಾತ್ರವಲ್ಲ, ಬೈಡನ್ ಆಡಳಿತವೂ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ, ಗಮನ ಸೆಳೆಯುವ ವಿಷಯವೆಂದರೆ, ವಿಶ್ವದಈ ಪ್ರಮುಖ ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ “ಉದಾರವಾದಿ ಬಂಡವಾಳಶಾಹಿ” ಮತ್ತು “ಸಾಂಪ್ರದಾಯಿಕ ಬಂಡವಾಳಶಾಹಿ” ಎಂದುಕರೆಯಬಹುದಾದ ವಿಭಾಗಗಳ ನಡುವಿನ ವ್ಯತ್ಯಾಸ. “ಉದಾರವಾದಿ ಬಂಡವಾಳಶಾಹಿ” ನಿಲುವಿನ ಬೈಡನ್ ಆಡಳಿತದ ಸಮಸ್ಯೆಯೆಂದರೆ, ಈ ನಿಲುವು ಮತ್ತುತದ್ವಿರುದ್ಧವಾಗಿಅದುವಿಶ್ವದ ಮೇಲೆ ಹೇರುವ “ನವ-ಸಂಪ್ರದಾಯಶರಣ” ಸಾಮ್ರಾಜ್ಯಶಾಹಿ “ನಿರ್ಬಂಧ”ಗಳ ನಡುವಿನ ವೈರುಧ್ಯ. ಎರಡು ದೋಣಿಗಳ ಮೇಲೆ ಕಾಲಿಟ್ಟು ಹೆಚ್ಚು ಕಾಲ ಸವಾರಿ ಸಾಧ್ಯವಿಲ್ಲ.
ಜಾಗತೀಕರಣಗೊಂಡ ಹಣಕಾಸು ಬಂಡವಾಳದ ಒತ್ತಡದಿಂದಾಗಿ, ವಿಶ್ವದ ಬಹುತೇಕ ದೇಶಗಳು ತಮ್ಮ ವಿತ್ತೀಯ ಕೊರತೆಯ ಮಿತಿಯನ್ನುಜಿಡಿಪಿಯ ಅನುಪಾತದಲ್ಲಿ ನಿಗದಿಪಡಿಸುವ ಶಾಸನವನ್ನು ಜಾರಿಗೆತಂದಿವೆ. ಎಲ್ಲೆಡೆಯೂ ಈ ಮಿತಿ ಸಾಮಾನ್ಯವಾಗಿಜಿಡಿಪಿಯ ಶೇ. ೩ರ ಮಟ್ಟದಲ್ಲಿದೆ. ಭಾರತದಲ್ಲೂ, ಕೇಂದ್ರ ಸರ್ಕಾರದ ಮತ್ತುರಾಜ್ಯ ಸರ್ಕಾರಗಳು ಹೊಂದಿರುವ ಈ ಮಿತಿಯು ಅದೇ ಶೇ. ೩ರ ಮಟ್ಟದಲ್ಲೇ ಇದೆ. ಆದರೆ, ಅಮೆರಿಕಾದಲ್ಲಿ ಸಾಲ ಮತ್ತುಜಿಡಿಪಿ ಅನುಪಾತಕ್ಕೆ ಸಂಬಂಧಿಸಿದಂತೆ ಯಾವುದೇ ಶಾಸನವಿಲ್ಲ. ಬದಲಾಗಿ, ಅಮೆರಿಕದಲ್ಲಿ ಜಾರಿಯಲ್ಲಿರುವ ಶಾಸನದ ಪ್ರಕಾರ ಯಾವುದೇ ಸಮಯದಲ್ಲಿಅದರ ಒಟ್ಟು ಸಾಲವು ಒಂದು ಗೊತ್ತುಪಡಿಸಿದ ಮೊತ್ತವನ್ನು ಮೀರುವಂತಿಲ್ಲ. ಇದೊಂದು ಬಹಳ ವಿಚಿತ್ರವಾದ ಪದ್ಧತಿಯೇ ಸರಿ. ವಿಚಿತ್ರ ಏಕೆಂದರೆ, ಅರ್ಥವ್ಯವಸ್ಥೆಯು ಬೆಳೆದಂತೆಲ್ಲಾ ಈ ಮಿತಿಯನ್ನು ಪರಿಷ್ಕರಿಸುವ ಅವಶ್ಯಕತೆ ಆಗಾಗ ಉದ್ಭವಿಸುತ್ತಲೇ ಇರುತ್ತದೆ. ಸಾಂದರ್ಭಿಕವಾಗಿ ಹೇಳುವುದಾದರೆ, ಅಮೆರಿಕಾದಲ್ಲಿ ಸಾಲದ ಈ ಮಿತಿಯನ್ನು ೧೯೬೦ರಿಂದ ಈ ವರೆಗೆ ೭೮ ಬಾರಿ ಪರಿಷ್ಕರಿಸಲಾಗಿದೆ.
ಸದ್ಯದಲ್ಲಿಅಮೆರಿಕಾ ಹೊಂದಿರುವ ಸಾಲದ ಮಿತಿ೩೧.೪ ಟ್ರಿಲಿಯನ್‌ಡಾಲರ್.ಅಮೆರಿಕಾ ಈ ಮಿತಿಯನ್ನುಅದಾಗಲೇ ತಲುಪಿದೆ. ಬೈಡನ್ ಆಡಳಿತವು ಸಾಲ ಮಿತಿಯನ್ನು ಹೆಚ್ಚಿಸುವ ಪ್ರಸ್ತಾಪವನ್ನುಕಾಂಗ್ರೆಸ್ ಮುಂದೆಇಡಲಿದೆ. ಆದರೆ, ಅಮೆರಿಕಾದ ಕಾಂಗ್ರೆಸ್‌ನಲ್ಲಿ ಬಹುಮತ ಹೊಂದಿರುವ ರಿಪಬ್ಲಿಕನ್ನರು ಈ ಪ್ರಸ್ತಾಪವನ್ನು ಮಾಮೂಲು ರೀತಿಯಲ್ಲಿ ಅಂಗೀಕರಿಸಲು ನಿರಾಕರಿಸಿದ್ದಾರೆ.
ಬಜೆಟ್‌ನಲ್ಲಿ ಕೆಲವು ಕಡಿತಗಳನ್ನು ಕೈಗೊಳ್ಳಬೇಕೆಂಬುದು ಅವರ ಒತ್ತಾಯ. ಸಾಲ ಮಿತಿಯ ಏರಿಕೆಗೆ ಕಾಂಗ್ರೆಸ್‌ನಲ್ಲಿ ಅನುಮೋದನೆ ದೊರೆತ ನಂತರ ಬಜೆಟ್‌ನಲ್ಲಿ ಕಡಿತದ ಬಗ್ಗೆ ಚರ್ಚೆ ಮಾಡೋಣ ಎಂಬುದು ಬೈಡನ್ ಅವರ ಸೂಚನೆ. ಬಜೆಟ್ ಕಡಿತವೇ ಮೊದಲು, ಆ ನಂತರವೇ ಅನುಮೋದನೆ ಎಂಬುದು ರಿಪಬ್ಲಿಕನ್ನರ ನಿಲುವು. ಇದುವೇ ಪ್ರಸ್ತುತ ಬಿಕ್ಕಟ್ಟಿನ ಕಾರಣ. ಈ ಇಕ್ಕಟ್ಟಿನಿಂದ ಹೊರಬರದಿದ್ದರೆ, ಹಿಂದಿನ ಸಾಲಗಳ ಮೇಲಿನ ಬಡ್ಡಿ ಪಾವತಿಸುವಲ್ಲಿ ಮತ್ತು ಸರ್ಕಾರದ ನೌಕರರ ಸಂಬಳ ಪಾವತಿಸುವಲ್ಲಿ ಕರ್ತವ್ಯಲೋಪದ ಅಪಾಯವು ಬೈಡನ್ ಆಡಳಿತಕ್ಕೆ ಎದುರಾಗಿದೆ.
ತೆರಿಗೆಯೋ – ಸಾಲವೋ
ಇಲ್ಲಿ ಬೇರೆ ಬೇರೆಯಾದ ಎರಡು ವಿಷಯಗಳಿವೆ. ಮೊದಲನೆಯದು, ಸರ್ಕಾರ ಸಾಲ ಮಾಡಬೇಕೆ? ಬೇಡವೇ? ಎಂಬ ತಾರ್ಕಿಕ ವಿವೇಚನೆಗೆ ಸಂಬಂಧಿಸಿದೆ. ಒಂದು ಸರ್ಕಾರವು ತನ್ನಖರ್ಚು-ವೆಚ್ಚಗಳಿಗೆ ಹಣ ಒದಗಿಸಿಕೊಳ್ಳಲು ತೆರಿಗೆಆದಾಯವನ್ನು ಹೆಚ್ಚಿಸುವ ಬದಲು ಸಾಲ ಪಡೆಯಲು ಮುಂದಾದಾಗ ಅದು ಶ್ರೀಮಂತರ ಮೇಲೆ ತೆರಿಗೆ ವಿಧಿಸಲು ಬಯಸುವುದಿಲ್ಲ ಎಂಬ ಅದರ ಇಂಗಿತ ವ್ಯಕ್ತಗೊಳ್ಳುತ್ತದೆ. ಶ್ರೀಮಂತರ ಮೇಲೆ ತೆರಿಗೆಗಳನ್ನು ಹೆಚ್ಚಿಸದ ಕಾರಣದಿಂದಾಗಿ ನವ ಉದಾರವಾದಿ ಬಂಡವಾಳಶಾಹಿ ಆಳ್ವಿಕೆಯ ಅವಧಿಯಲ್ಲಿ ವಿಶ್ವದ ಇತರೆಡೆಗಳಂತೆ ಅಮೇರಿಕಾದಲ್ಲೂಆದಾಯ ಮತ್ತು ಸಂಪತ್ತಿನ ಅಸಮಾನತೆಗಳು ಗಣನೀಯವಾಗಿ ಹೆಚ್ಚಿವೆ. ಆದ್ದರಿಂದ, ಸರ್ಕಾರವು ಕಾರ್ಪೊರೇಟ್‌ಗಳ ಲಾಭಗಳ ಮೇಲೆ ತೆರಿಗೆ ಹೇರುವ ಮೂಲಕವಾಗಲಿ ಅಥವಾ ಶ್ರೀಮಂತರ ಸಂಪತ್ತಿನ ಮೇಲೆ ತೆರಿಗೆ ಹೇರುವ ಮೂಲಕವಾಗಲಿ, ಹೆಚ್ಚು ತೆರಿಗೆ ಸಂಪನ್ಮೂಲಗಳನ್ನು ಸಂಗ್ರಹಿಸುವ ಮಾರ್ಗವನ್ನು ಅನುಸರಿಸುವ ಅಗತ್ಯವಿದೆ ಎಂಬುದು ಸ್ಪಷ್ಟವಾಗುತ್ತದೆ.
ಸರ್ಕಾರವು ತನ್ನ ಖರ್ಚು ವೆಚ್ಚಗಳಿಗೆ ಸರಿಸಮನಾಗಿ ತೆರಿಗೆಗಳನ್ನು ವಿಧಿಸಿದಾಗ, ಶ್ರೀಮಂತರ ಮೇಲೆ ಒಂದು ವೇಳೆ ಹೆಚ್ಚು ತೆರಿಗೆಗಳನ್ನು ವಿಧಿಸಿದರೂ ಸಹ, ಸಂಪತ್ತಿನ ಅಸಮಾನತೆಗಳು ಕಡಿಮೆಯಾಗುವುದಿಲ್ಲ. ಏಕೆಂದರೆ, ದುಡಿಯುವಜನರು ತಮ್ಮ ಇಡೀ ಆದಾಯವನ್ನು ಅನಿವಾರ್ಯವಾಗಿ ಬಳಕೆ ಮಾಡುತ್ತಾರೆ. ಅವರಿಗೆ ಉಳಿತಾಯ ಸಾಧ್ಯವಾಗುವುದಿಲ್ಲ. ಆದ್ದರಿಂದ, ಯಾವುದೇ ಅರ್ಥವ್ಯವಸ್ಥೆಯಲ್ಲಿ ಹೆಚ್ಚಿನ ಉಳಿತಾಯವನ್ನು ಶ್ರೀಮಂತರೇ ನಿರ್ವಹಿಸುತ್ತಾರೆ. ಉದಾಹರಣೆಗೆ, ಸರ್ಕಾರವು $೧೦೦ ಖರ್ಚು ಮಾಡಿದಾಗ, ಆ ಹಣವನ್ನುಒಂದು ವೇಳೆ ಸಾಲದ ಮೂಲಕ ಒದಗಿಸಿಕೊಂಡಿದ್ದರೆ, ಶ್ರೀಮಂತರ ಕೈಯಲ್ಲಿಅಧಿಕವಾಗಿ $೧೦೦ ಉಳಿತಾಯವಾಗುತ್ತವೆ. ಅವರುಏನನ್ನೂ ಮಾಡದೇ ಈ $೧೦೦ ಗಳಿಸಿರುತ್ತಾರೆ. ನಂತರ ಸರ್ಕಾರವುಅದನ್ನು ಸಾಲ ಪಡೆಯುತ್ತದೆ. ಹಾಗಾಗಿ, ಸಾಲದ ಮೂಲಕ ಒದಗಿಸಿಕೊಂಡ ಹಣವನ್ನು ಸರ್ಕಾರವುತನ್ನಖರ್ಚು-ವೆಚ್ಚಗಳಿಗಾಗಿ ಬಳಸಿಕೊಂಡಾಗ ಅದು ಸಂಪತ್ತಿನ ಅಸಮಾನತೆಗಳನ್ನು ಹೆಚ್ಚಿಸುತ್ತದೆ. ಆದರೆ. ತೆರಿಗೆಗಳ ಮೂಲಕ ಒದಗಿಸಿಕೊಂಡ ಹಣವನ್ನುಖರ್ಚು-ವೆಚ್ಚಗಳಿಗಾಗಿ ಬಳಸಿಕೊಂಡಾಗ ಅದು ಸಂಪತ್ತಿನಅಸಮಾನತೆಯನ್ನು ಹೆಚ್ಚಿಸುವುದಿಲ್ಲ. ಅಂದರೆ, ಸರ್ಕಾದಖರ್ಚು ವೆಚ್ಚಗಳಿಗೆ ಸರಿಸಮನಾಗಿ ವಿಧಿಸಿದ ತೆರಿಗೆಗಳು ಸಂಪತ್ತಿನ ಅಸಮಾನತೆಗಳನ್ನು ಬದಲಿಸುವುದಿಲ್ಲ. ಸಂಪತ್ತಿನ ಅಸಮಾನತೆಗಳು ಮೊದಲಿದ್ದ ಮಟ್ಟದಲ್ಲೇ ಉಳಿಯುತ್ತವೆ.
ಬೈಡನ್ ಆಡಳಿತವಾಗಲಿ ಅಥವಾ ರಿಪಬ್ಲಿಕನ್ ಬಹುಮತದ ಕಾಂಗ್ರೆಸ್ಸಾಗಲಿ ಶ್ರೀಮಂತರ ಮೇಲೆ ಹೆಚ್ಚು ತೆರಿಗೆ ವಿಧಿಸುವ ಆಸಕ್ತಿ ಹೊಂದಿಲ್ಲ ಎಂಬ ಅಂಶವು ಅಮೆರಿಕಾದರಾಜಕಾರಣದ ಮೇಲೆ ಬೂರ್ಷ್ವಾಗಳು ಹೊಂದಿರುವ ಬಲವಾದ ಹಿಡಿತದ ಸಂಕೇತವಾಗಿದೆ. ಅವರಿಬ್ಬರೂ ಶ್ರೀಮಂತರ ಮೇಲೆ ಹೆಚ್ಚು ತೆರಿಗೆ ವಿಧಿಸುವ ಈ ಅನ್ಯ ಮಾರ್ಗವನ್ನು ಬಿಟ್ಟು ಬೇರೆ ಅಂಶವನ್ನೇಚರ್ಚೆ ಮಾಡುತ್ತಾರೆ. ಸರ್ಕಾರಿ ನೌಕರರು ಸಂಬಳವಿಲ್ಲದೆ ಬರಿಗೈಯಲ್ಲಿ ಮನೆಗೆ ಹೋಗಬೇಕಾಗುತ್ತದೆ ಎಂಬುದನ್ನೇ ಮುಂದುಮಾಡಿ ಬೈಡನ್ ರಿಪಬ್ಲಿಕರನ್ನು ಹೆದರಿಸುತ್ತಾರೆ. ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸುವ ಸಾಧ್ಯತೆಯನ್ನು ಬೈಡನ್ ಅಪ್ಪಿತಪ್ಪಿಯೂ ಒಮ್ಮೆಯೂ ಬಾಯಿಬಿಡುವುದಿಲ್ಲ. ತಮ್ಮ ಹಠವನ್ನು ಸಮರ್ಥಿಸಿಕೊಳ್ಳುವ ಸಲುವಾಗಿಯಾದರೂ ರಿಪಬ್ಲಿಕನ್ನರೂ ಸಹ, ಶ್ರೀಮಂತರ ಮೇಲೆ ತೆರಿಗೆಗಳನ್ನು ಹೆಚ್ಚಿಸಬೇಕು ಎಂದು ಅಪ್ಪಿತಪ್ಪಿಯೂ ಒಮ್ಮೆಯೂ ಸೂಚಿಸುವುದಿಲ್ಲ.
ಎರಡುವಿಭಿನ್ನ ಬಂಡವಾಳಶಾಹಿ ಮಾರ್ಗಗಳು
ವಿಶ್ವದ ಪ್ರಮುಖ ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ನಡೆಯುತ್ತಿರುವ ಈ ವಿದ್ಯಮಾನವು ಆಶ್ಚರ್ಯಕರವೇನಲ್ಲ. ಆದರೆ, ಗಮನ ಸೆಳೆಯುವ ಇನ್ನೊಂದು ವಿಷಯ ಇಲ್ಲಿದೆ. ಬೈಡನ್ ಆಡಳಿತ ಮತ್ತುರಿಪಬ್ಲಿಕನ್ನರ ನಡುವಿನ ತಕ್ಷಣದ ಭಿನ್ನಾಭಿಪ್ರಾಯದ ಆಚೆಗೂ, ಆರ್ಥಿಕ ತಿಳುವಳಿಕೆ ಮತ್ತುಆರ್ಥಿಕ ಕಾರ್ಯತಂತ್ರಗಳ ಬಗ್ಗೆ ಅವರಿಬ್ಬರ ನಡುವೆ ಬಹಳ ವ್ಯತ್ಯಾಸಗಳಿವೆ. ಅವರುಅನುಸರಿಸುವಎರಡು ಮಾರ್ಗ-ವಿಧಾನಗಳನ್ನು ಅನುಕ್ರಮವಾಗಿ “ಉದಾರ ಬಂಡವಾಳಶಾಹಿ” ಮತ್ತು “ಸಾಂಪ್ರದಾಯಿಕ ಬಂಡವಾಳಶಾಹಿ” ಎಂದುಕರೆಯಬಹುದು.
ಡೆಮೊಕ್ರಾಟರಿಗೆ (ಉದಾರ ಬಂಡವಾಳಶಾಹಿಗಳಿಗೆ) ನವ ಉದಾರವಾದಿ ಬಂಡವಾಳಶಾಹಿಯು ಒಂದು ದೀರ್ಘಾವಧಿಯ ಬಿಕ್ಕಟ್ಟಿಗೆ ಒಳಗಾಗಿದೆ ಎಂಬುದರಅರಿವಿದೆ. ಆದ್ದರಿಂದ ಅಮೆರಿಕಾದ ಇಂದಿನ ಸಂದರ್ಭದಲ್ಲಿಕೀನ್ಸ್ ಪ್ರತಿಪಾದಿಸಿದ ಆರ್ಥಿಕ ನೀತಿಗಳನ್ನು ಮತ್ತೊಮ್ಮೆ ಅಳವಡಿಸಿಕೊಳ್ಳಲು ಡೆಮೊಕ್ರಾಟರು ಬಯಸುತ್ತಾರೆ. ವಿತ್ತೀಯಕೊರತೆಯ ಹೆಚ್ಚಳದ ಬಗ್ಗೆ ಅವರಿಗೆ ಮುಜುಗುರವಿಲ್ಲ. ಅದಕ್ಕಾಗಿ ಸಾಲದ ಮಿತಿಯನ್ನು ಪರಿಷ್ಕರಿಸಬೇಕಾಗುತ್ತದೆ. ಸಾಲ-ಮಿತಿಯನ್ನು ಹೆಚ್ಚಿಸಬೇಕೆಂಬ ಅವರಅಪೇಕ್ಷೆಯು ನೇರವಾಗಿಅಥವಾತಕ್ಷಣವೇ ವಿಸ್ತರಣಾ ನೀತಿಗಳನ್ನು ಅಳವಡಿಸಿಕೊಳ್ಳುವ ಬಯಕೆಯಿಂದ ಪ್ರೇರಿತವಾಗಿಲ್ಲಎಂಬುದೇನೊ ಸರಿ. ಆದರೆ, ಸಾಲ ಮಿತಿಯನ್ನು ಹೆಚ್ಚಿಸುವ ಬೇಡಿಕೆಗೂ ಮತ್ತು ವಿಸ್ತರಣಾ ನೀತಿಗಳ ಅಗತ್ಯದ ಬಗ್ಗೆ ಅವರು ಹೊಂದಿರುವ ದೃಷ್ಟಿಕೋನಕ್ಕೂ ಪರಸ್ಪರ ಸಂಬಂಧವಿದೆ. ಅಮೆರಿಕಾದಲ್ಲಿ ಹಾಗೂ ಇಡೀಜಗತ್ತಿನಲ್ಲಿ ಸಂಭವಿಸಿದ ಹಣದುಬ್ಬರದ ಏರಿಕೆಯ ಕಾರಣದಿಂದಾಗಿ ಅಂತಹ ನೀತಿಗಳು ಸದ್ಯದಲ್ಲಿ ಗಮನ ಪಡೆಯುತ್ತಿಲ್ಲಎಂಬುದೂ ನಿಜವೇ.
ಉದಾರಬಂಡವಾಳಶಾಹಿಗಳು(ಡೆಮೊಕ್ರಾಟರು) ಹಣದುಬ್ಬರ ನಿಯಂತ್ರಣವನ್ನುಆರ್ಥಿಕ ನೀತಿಯ ಏಕೈಕ ಅಥವಾ ಪರಮಉದ್ದೇಶವಾಗಿ ನೋಡುವುದಿಲ್ಲ. ನಿರುದ್ಯೋಗದ ಇಳಿಕೆಯನ್ನು ಮತ್ತುಉನ್ನತ ಮಟ್ಟದ ಆರ್ಥಿಕ ಚಟುವಟಿಕೆಗಳ ಸಾಧನೆಯನ್ನು ಸಹ ಪ್ರಮುಖ ನೀತಿ ಉದ್ದೇಶಗಳೆಂದು ಅವರು ಪರಿಗಣಿಸುತ್ತಾರೆ. ಹಣದುಬ್ಬರವನ್ನು “ತಡೆದುಕೊಳ್ಳಬಹುದಾದ” ಮಟ್ಟಕ್ಕೆ ಇಳಿಸಿದ ಕೂಡಲೇ ಅವು ಮುಖ್ಯವಾಗುತ್ತವೆ. ಹಣದುಬ್ಬರ ನಿಯಂತ್ರಣವು ಅವರ ತಕ್ಷಣದ ಕಾಳಜಿಯ ವಿಷಯವಾಗಿದ್ದರೂ ಸಹ, ಅದನ್ನುಸಾಧಿಸುವುದಕ್ಕಾಗಿ, ಸರ್ಕಾರದ ಖರ್ಚು-ವೆಚ್ಚಗಳನ್ನು ತೀವ್ರವಾಗಿ ಕಡಿತಗೊಳಿಸಿ ಉಂಟುಮಾಡುವತೀವ್ರ ಸ್ವರೂಪದ ಆರ್ಥಿಕ ಹಿಂಜರಿತವನ್ನು ತಪ್ಪಿಸಲು ಪ್ರಯತ್ನಿಸಲಾಗುವುದು.
ಈ ನಿಲುವಿಗೆ ತದ್ವಿರುದ್ಧವಾಗಿ, “ಸಾಂಪ್ರದಾಯಿಕ ಬಂಡವಾಳಶಾಹಿಗಳು” (ರಿಪಬ್ಲಿಕನ್ನರು) ಹಣದುಬ್ಬರ ನಿಯಂತ್ರಣವನ್ನು ಒಂದು ಪರಮ ಉದ್ದೇಶವೆಂದು ನೋಡುತ್ತಾರೆ. ದುಡಿಯುವ ಜನರಿಗೆ ಮಾಡುವ “ವರ್ಗಾವಣೆ”ಗಳನ್ನು ಅಥವಾ ಅವರಿಗಾಗಿಯೇ ರೂಪಿಸಿದ ಕಲ್ಯಾಣ ಯೋಜನೆಗಳ ಮೇಲೆ ಮಾಡುವ ಸರ್ಕಾರದ ವೆಚ್ಚವನ್ನು ಕಡಿತಗೊಳಿಸುವಲ್ಲಿ ಅವರಿಗೆ ಒಲವಿದೆ. ಈ ಕಡಿತಗಳನ್ನು, ಹಣದುಬ್ಬರದ ಮೇಲೆ ನಿಯಂತ್ರಣವನ್ನು ಸಾಧಿಸಲು ಅಗತ್ಯವೆಂದು ಮಾತ್ರವಲ್ಲ, ಎಲ್ಲ ಕಾಲಕ್ಕೂ ಸಲ್ಲುವ ಆರ್ಥಿಕ ನೀತಿಯ ಲಕ್ಷಣವೆಂದು ಅವರು ಭಾವಿಸುತ್ತಾರೆ.
ಕೀನ್ಸ್ ಅವರ ಕಾಲದಲ್ಲಿ, ಬ್ರಿಟನ್ನಿನ ಆರ್ಥಿಕ ಕೇಂದ್ರವಾದ ಲಂಡನ್ ನಗರವು ವ್ಯಕ್ತಪಡಿಸುತ್ತಿದ್ದ ಈ “ಸಾಂಪ್ರದಾಯಿಕ ಬಂಡವಾಳಶಾಹಿ” ನಿಲುವಿನ ವಿರುದ್ಧ ಸ್ವತಃಕೀನ್ಸ್ಕೂಡ ಸೆಣಸಬೇಕಾಯಿತು. ವಾಸ್ತವವಾಗಿ, ನಿರುದ್ಯೋಗ ಮತ್ತು ಉತ್ಪಾದನಾ ಸಾಮರ್ಥ್ಯವು ಬಳಕೆಯಾಗದ ಪರಿಸ್ಥಿತಿಯಲ್ಲಿ, ಅಂದರೆ ಬೇಡಿಕೆಯು ಕುಗ್ಗಿದ ಪರಿಸ್ಥಿತಿಯಲ್ಲಿ, ಪಾವತಿ ಶೇಷದ ಸಂಭಾವ್ಯ ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ, ವಿತ್ತೀಯ ಕೊರತೆಯು ಯಾವುದೇ ಹಾನಿಯನ್ನು (ಮೇಲೆ ಗಮನಿಸಿದಂತೆ, ತೆರಿಗೆಗಳಿಂದಲೇ ಒದಗಿಸಿಕೊಂಡ ಖರ್ಚು-ವೆಚ್ಚಗಳ ಪರಿಸ್ಥಿತಿಗೆ ಹೋಲಿಸಿದರೆ, ಸಂಪತ್ತಿನ ಅಸಮಾನತೆಯನ್ನು ಹೆಚ್ಚಿಸುವುದನ್ನು ಹೊರತುಪಡಿಸಿದರೆ) ಉಂಟುಮಾಡುವುದಿಲ್ಲ ಎಂಬುದನ್ನು ಮತ್ತುಇಂತಹ ಒಂದು ವಿತ್ತೀಯಕೊರತೆಯು ಲಂಡನ್ ನಗರ ಮತ್ತುಅದದಿಂದ ಪ್ರಭಾವಿಸಲ್ಪಟ್ಟ ಬ್ರಿಟಿಷ್‌ಖಜಾನೆಯು ಭಾವಿಸಿದಂತೆ ಖಾಸಗಿ ಹೂಡಿಕೆಯನ್ನುಖಂಡಿತವಾಗಿಯೂ “ಹೊರದಬ್ಬುವುದಿಲ್ಲ”ಎಂಬುದನ್ನುತೋರಿಸುವುದುಅವರ ಸಿದ್ಧಾಂತದ ಉದ್ದೇಶವಾಗಿತ್ತು.
ಕೀನ್ಸ್ ಸ್ವತಃ ಬಂಡವಾಳಶಾಹಿ ವ್ಯವಸ್ಥೆಯರಕ್ಷಕರಾಗಿದ್ದರು. ಅವರುತಮ್ಮ ಸಿದ್ದಾಂತವನ್ನು ಬೋಲ್ಷೆವಿಕ್‌ಕ್ರಾಂತಿಯಛಾಯೆಯಲ್ಲಿ ನಿರೂಪಿಸಿದರು. ವ್ಯವಸ್ಥೆಯು ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸದಿದ್ದರೆ, ಸೋವಿಯತ್ ಮಾದರಿಯಿಂದ ಪ್ರೇರಿತರಾದಅತೃಪ್ತಕಾರ್ಮಿಕರು ವ್ಯವಸ್ಥೆಯನ್ನು ಉರುಳಿಸುತ್ತಾರೆ ಎಂದುಅವರು ನಂಬಿದ್ದರು. ವಾಸ್ತವವಾಗಿ, “ಸಾಂಪ್ರದಾಯಿಕ ಬಂಡವಾಳಶಾಹಿ” ನಿಲುವು (ಈ ನಿಲುವನ್ನು ೧೯೩೦ರ ದಶಕದಲ್ಲಿ ಲಂಡನ್ ನಗರವು ವ್ಯಕ್ತಪಡಿಸಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು) ಮತ್ತುಉದಾರಬಂಡವಾಳಶಾಹಿಗಳ ನಿಲುವುಗಳ ನಡುವಿನ ಮುಖ್ಯ ವ್ಯತ್ಯಾಸವು ನಿಖರವಾಗಿ ಈ ಅಂಶದಲ್ಲಿದೆ: ಮೊದಲನೆಯದು, ವ್ಯವಸ್ಥೆಯ ಸಂರಕ್ಷಣೆಗಾಗಿ ಕಾರ್ಮಿಕರ ಬೃಹತ್ ಮೀಸಲು ಪಡೆಯೂ ಸೇರಿದಂತೆಕಾರ್ಮಿಕರು ಈ ಸಂರಕ್ಷಣೆಯನ್ನು ಮೌನವಾಗಿ ಸಮ್ಮತಿಸುವಂತೆ ಅವರನ್ನು ಮಣಿಸುವಲ್ಲಿ ಬಲ ಪ್ರಯೋಗಿಸುವ ಮಾರ್ಗದ ಮೇಲೆ ನಂಬಿಕೆ ಇಡುತ್ತದೆ. ಎರಡನೆಯದು, ವ್ಯವಸ್ಥೆಯ ಸಂರಕ್ಷಣೆಗಾಗಿ ಬೃಹತ್ ನಿರುದ್ಯೋಗವನ್ನು ತಪ್ಪಿಸುವ ಮೂಲಕ ಮತ್ತುಅವರಿಗೆ ಸೂಕ್ತ “ವರ್ಗಾವಣೆ” ಗಳನ್ನು ಮಾಡುವ ಮೂಲಕ ಕಾರ್ಮಿಕರ ಬೆಂಬಲ ಪಡೆಯುವ ಮಾರ್ಗದ ಮೇಲೆ ನಂಬಿಕೆ ಇಡುತ್ತದೆ.
ಭಾರೀ ವೈರುಧ್ಯ
ಈ ಎರಡೂ ವಿಭಿನ್ನ ದೃಷ್ಟಿಕೋನಗಳೂ, ಸಾಲ ಮಿತಿಯನ್ನುಏರಿಸುವ ಬಗ್ಗೆ ಅಮೆರಿಕದಲ್ಲಿ ಈಗ ನಡೆಯುತ್ತಿರುವಚರ್ಚೆಯಲ್ಲಿಅಂತರ್ಗತವಾಗಿವೆ. ಒಂದು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸರ್ಕಾರದಅರ್ಥಪೂರ್ಣ ಹಸ್ತಕ್ಷೇಪವನ್ನು ಬಯಸುವ “ಉದಾರವಾದಿ ಬಂಡವಾಳಶಾಹಿ”ಗಳ ನಿಲುವು, ಬಂಡವಾಳಶಾಹಿಯ ಸಹಜ ಪ್ರವೃತ್ತಿಗಳಿಗೆ ವಿರುದ್ಧವಾಗಿದೆ. ಈ ಸಹಜ ಪ್ರವೃತ್ತಿಯಕಾರಣದಿಂದಾಗಿಯೇ, ನವ ಉದಾರವಾದಿ ಆಳ್ವಿಕೆಯು ತನಗೆ ಸಿಕ್ಕಿದ ಮೊಟ್ಟಮೊದಲ ಅವಕಾಶದಲ್ಲೇ ಕೀನ್ಸ್ ಸಿದ್ದಾಂತವನ್ನು ಕಿತ್ತೊಗೆಯಿತು. ಆದರೆ, ನವ ಉದಾರವಾದವು ದಾರಿಕಾಣದಂತಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಕೀನ್ಸ್ ನೀತಿಗಳನ್ನು ಮತ್ತೊಮ್ಮೆ ಅಳವಡಿಸಿಕೊಳ್ಳುವ ಪ್ರಯತ್ನವು ಭಾರೀ ವೈರುಧ್ಯಗಳನ್ನು ಎದುರಿಸಬೇಕಾಗುತ್ತದೆ ಮತ್ತು ಆ ಪ್ರಯತ್ನವು ಹೊಟ್ಟೆಯಲ್ಲೇ ಸತ್ತು ಹುಟ್ಟಿದ ಮಗುವಾಗುತ್ತದೆ.
ಕೇವಲ ಒಂದು ನಿರ್ದಿಷ್ಟ ವೈರುಧ್ಯವನ್ನು ನಾನು ಇಲ್ಲಿಉಲ್ಲೇಖಿಸುತ್ತೇನೆ. ವಿತ್ತೀಯಕೊರತೆಯ ಪರಿಣಾಮವಾಗಿ ಉಂಟಾಗುವ ಪಾವತಿ ಶೇಷದ ಸಮಸ್ಯೆಯನ್ನು ಈ ಹಿಂದೆ ಪ್ರಾಸಂಗಿಕವಾಗಿ ಉಲ್ಲೇಖಿಸಲಾಗಿತ್ತು. ಬೃಹತ್ ಸಾಲದ ಮೂಲಕ ಒದಗಿಸಿಕೊಂಡ ಹಣದಿಂದ ಅಮೆರಿಕಾ ಕೈಗೊಳ್ಳುವ ಬೃಹತ್ ವೆಚ್ಚಗಳು ಉಂಟುಮಾಡುವ ಬೇಡಿಕೆಯಒಂದಿಷ್ಟು ಭಾಗವುಆಮದುರೂಪದಲ್ಲಿರುತ್ತದೆ. ಅದು ವಿದೇಶಗಳಿಗೆ “ಸೋರಿಕೆ”ಯಾಗುತ್ತದೆ. ಎಷ್ಟರಮಟ್ಟಿಗೆ ಬೇಡಿಕೆ “ಸೋರಿಕೆ”ಯಾಗುತ್ತದೆಯೊ, ಪಾವತಿ ಶೇಷದಕೊರತೆಯೂ ಸಹ ಅಷ್ಟರಮಟ್ಟಿಗೆ ಹೆಚ್ಚುತ್ತದೆ. ಆದ್ದರಿಂದ, ಅಮೆರಿಕದ ಈ ಅಧಿಕಆಮದು ಬೇಡಿಕೆಯ ಪೂರೈಕೆಗಾಗಿತಾವು ಮಾರುವಅಧಿಕ ಸರಕುಗಳ ವಿರುದ್ಧಅಮೆರಿಕದ ಸರ್ಕಾರವು ನೀಡುವ ಬಾಂಡ್‌ಗಳನ್ನು ವಿದೇಶಿಯರು ಸ್ವೀಕರಿಸುವರು ಎಂಬುದನ್ನು ಆಮದುಗಳನ್ನು (ವೆಚ್ಚಗಳನ್ನು) ಕೈಗೊಳ್ಳುವಾಗ ಊಹಿಸಿಕೊಳ್ಳಲಾಗಿರುತ್ತದೆ.
“ಚಿನ್ನಕ್ಕೆ ಸಮ” ಎಂದು ಸಾರ್ವತ್ರಿಕವಾಗಿ ಪರಿಗಣಿಸಲಾಗುವ ಡಾಲರ್ ಕರೆನ್ಸಿಯು ವಿಶ್ವದ ಮೀಸಲು ಕರೆನ್ಸಿಯಾಗಿಇರುವವರೆಗೂ ಈ ಪೂರ್ವಗ್ರಹಿಕೆಯು (ಅಂದರೆ, ಅಮೆರಿಕದ ಬಾಂಡ್‌ಗಳನ್ನು ವಿದೇಶಿಯರು ಸ್ವೀಕರಿಸುತ್ತಾರೆ ಎಂಬ ನಂಬಿಕೆ) ಒಂದು ಮಾನ್ಯತೆಯನ್ನು ಹೊಂದಿರುತ್ತದೆ. ಆದರೆ, ಅಮೆರಿಕವುತಾನು “ಶತ್ರು” ಎಂದು ಭಾವಿಸುವ ದೇಶದ ವಿರುದ್ಧ ಮಾತ್ರವಲ್ಲ, ಹಲವಾರು ದೇಶಗಳ ವಿರುದ್ಧವೂ ನಿರ್ಬಂಧಗಳನ್ನು ಹೇರಿದರೆ, ಈ ನಿರ್ಬಂಧಗಳ ಪರಿಣಾಮವುಕಡಿಮೆಯಾಗುತ್ತಾ ಹೋಗುತ್ತದೆ. ವಾಸ್ತವವಾಗಿ, ಈ ನಿಟ್ಟಿನಲ್ಲಿ ಮೂರು ವಿದ್ಯಮಾನಗಳು ಸಂಭವಿಸುತ್ತವೆ: ಮೊದಲನೆಯದು, ಈ ದೇಶಗಳಿಂದ ಆಮದುಗಳನ್ನು ಅಮೆರಿಕಾತ್ಯಜಿಸುತ್ತದೆ. ಅಂದರೆ, ದೇಶೀಯ ಉತ್ಪಾದನಾ ವೆಚ್ಚಗಳು ಹೆಚ್ಚುತ್ತವೆ ಮತ್ತು ಹಣದುಬ್ಬರದ ಒತ್ತಡಗಳೂ ಮುಂದುವರಿಯುತ್ತವೆ. ಎರಡನೆಯದು, “ನಿರ್ಬಂಧಿತ” ಮತ್ತು “ನಿರ್ಬಂಧಿತವಲ್ಲದ” ದೇಶಗಳು ಗುಂಪು ಕಟ್ಟಿಕೊಳ್ಳುತ್ತವೆ. ಅವು ದ್ವಿಪಕ್ಷೀಯ ವ್ಯಾಪಾರ ಏರ್ಪಾಟುಗಳನ್ನು ರೂಪಿಸಿಕೊಳ್ಳುತ್ತವೆ. ಈ ಏರ್ಪಾಟಿನಲ್ಲಿಡಾಲರ್, ಚಲಾವಣೆಯ ಮಾಧ್ಯಮವಾಗಿರುವುದಿಲ್ಲ. ಹಾಗಾಗಿ ಈ ದೇಶಗಳು ಡಾಲರ್‌ಗಳಲ್ಲಿ ಪರಿಗಣಿಸುವ ಆಸ್ತಿಗಳನ್ನು ಹೊಂದುವ ಆಯ್ಕೆಯನ್ನು ಸೂಕ್ತವಾಗಿ ಬದಲಾವಣೆ ಮಾಡಿಕೊಳ್ಳುತ್ತವೆ. ಮೂರನೆಯದು, ಇಂತಹ ಆಸ್ತಿಗಳನ್ನು ಹೊಂದಿರುವಯಾವುದೇದೇಶವೂ ಸಹ, ಇದ್ದಕ್ಕಿದ್ದಂತೆಯೇ ನಿರ್ಬಂಧಗಳಿಗೆ ಒಳಪಡಬಹುದು. ಆಗ ಆ ದೇಶವು ಹೊಂದಿದ್ದಡಾಲರ್‌ಸ್ವರೂಪದ ಆಸ್ತಿಗಳಿಗೆ “ಬೀಗ” ಬೀಳುತ್ತದೆ ಮತ್ತು ಅವುಗಳ ಬಳಕೆ ನಿಲ್ಲುತ್ತದೆ. ಆದ್ದರಿಂದ, ಆಸ್ತಿಗಳನ್ನು ಹಿಡಿದಿಟ್ಟುಕೊಳ್ಳಲು ಡಾಲರ್‌ಆಕರ್ಷಕವಲ್ಲದಕರೆನ್ಸಿಯಾಗಿಬಿಡುತ್ತದೆ.
ನಿಸ್ಸಂದೇಹವಾಗಿಯೂ, “ಉದಾರವಾದಿ ಬಂಡವಾಳಶಾಹಿ” ನಿಲುವಿನ ಬೈಡನ್ ಆಡಳಿತದ ಸಮಸ್ಯೆಯೆಂದರೆ, ಕೀನ್ಸ್ಆರ್ಥಿಕ ನೀತಿಗಳನ್ನು ಅಳವಡಿಕೊಳ್ಳಬಯಸುವ ಅದರ “ಉದಾರವಾದಿ ಬಂಡವಾಳಶಾಹಿ” ಮನೋಭಾವ ಮತ್ತು ವಿಶ್ವದ ಹೆಚ್ಚಿನ ಭಾಗದ ಮೇಲೆ ಅದು ಹೇರುವ “ನವ-ಸಂಪ್ರದಾಯಶರಣ” (ಟಿeo-ಛಿoಟಿ) ಸಾಮ್ರಾಜ್ಯಶಾಹಿ ಆಕ್ರಮಣಶೀಲತೆಯು ಹುಟ್ಟುಹಾಕಿದ “ನಿರ್ಬಂಧ”ಗಳು, ಇವುಗಳ ನಡುವೆಒಂದುಕಂದಕವಿದೆ. ಕೀನ್ಸ್ ಸಿದ್ದಾಂತ ಮತ್ತು “ನಿಯೋ-ಕಾನ್” (ನಿರ್ಬಂಧಗಳು) ಇವೆರಡೂ ಬೇರೆ ಬೇರೆ ದೋಣಿಗಳೇ. ಇಂದಿನ ಜಗತ್ತಿನಲ್ಲಿಏಕಕಾಲದಲ್ಲಿಎರಡೂ ದೋಣಿಗಳ ಮೇಲೆ ಕಾಲಿಟ್ಟು ಹೆಚ್ಚು ಕಾಲ ಅಮೆರಿಕಾ ಸವಾರಿ ಮಾಡುವುದು ಸಾಧ್ಯವಿಲ್ಲ.