ಜಾಲಹಳ್ಳಿ: ಅಸ್ಪೃಶ್ಯ ನಿವಾರಣೆಗೆ ತಮ್ಮ ಇಡೀ ಜೀವನವೇ ಮುಡಿಪಾಗಿಟ್ಟ ಮಹಾನ್ ನಾಯಕ ಅಂಬೇಡ್ಕರ್ ಎಂದು ಕೃಷಿ ಕೂಲಿಕಾರರ ಸಂಘಟನೆ ತಾಲ್ಲೂಕು ಅಧ್ಯಕ್ಷ ಲಿಂಗಣ್ಣ ಮಕಾಶಿ ಹೇಳಿದರು.
ಸೂಲದಗುಡ್ಡ ಗ್ರಾಮದಲ್ಲಿ ಕೂಲಿಕಾರರು ಆಯೋಜಿಸಿದ ಅಂಬೇಡ್ಕರ್ ಅವರ 68ನೇ ಮಹಾ ಪರಿ ನಿರ್ವಾಣ ದಿನಾಚರಣೆಯನ್ನು ಉದ್ದೇಶಿ ಮಾತನಾಡಿದರು.
ಇದನ್ನೂ ಓದಿ : ಭಾರತೀಯ ಸಂಸ್ಕೃತಿ ಉತ್ಸವ ಎಂಬ ಧತ್ತೂರಿ ಮರ
ಅವರು, ಕಾರ್ಮಿಕ ವರ್ಗದ ಧ್ವನಿಯಾಗಿ, ಶೋಷಿತ ವರ್ಗದ ಬೆಳಕಾಗಿ ದೇಶಕ್ಕೆ ಬಹುದೊಡ್ಡ ಸಂವಿಧಾನ ಕೊಟ್ಟ ಮಹಾನ್ ಶ್ರೇಷ್ಠ ನಾಯಕ ಅಂಬೇಡ್ಕರ್ ,ಅವರು ಕಂಡ ಸಮಸಮಾಜದ ಕನಸು ನನಸು ಮಾಡಬೇಕಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಸಂಗಮೇಶ ಮೂಲಿಮನಿ,ಶಿವರಾಜ ಪರಾಪೂರ ಮಾತನಾಡಿದರು. ಇದೇ ಸಂದರ್ಭದಲ್ಲಿ ಮುಖಂಡರಾದ ರೂಕೇಶ್ ಜಾದವ್,ಈರಮ್ಮ,ತಿಪ್ಪಮ್ಮ,ಲಕ್ಷ್ಮೀ, ಡಾಕಮ್ಮ,ದೇವಪ್ಪ,ಛತ್ರಪ್ಪ ,ಬಾಲಮ್ಮ,ರಂಗಪ್ಪ ಸೇರಿದಂತೆ ಇತರರು ಇದ್ದರು.
ಇದನ್ನೂ ನೋಡಿ : ಸೇಡಂ ಸನಾತನಿ ಉತ್ಸವ : ಸಂವಿಧಾನ ವಿರೋಧ ಉತ್ಸವ – ಚಿಂತಕರ ಅಭಿಮತ Janashakthi Media