ತೋರಣಗಲ್ಲು: ಗ್ರಾಮದ ಪ್ರದೇಶದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಭವನವನ್ನು ನಿರ್ಮಿಸಲು ಪ್ರಾರಂಭಿಸಿ, ಅದು ಅರ್ಧಕ್ಕೆ ನಿಂತಿದೆ. ತೋರಣಗಲ್ಲು ಗ್ರಾಮ ಅಂಚೆ ಕಚೇರಿ ಮೂಲಕ ಕೋಟೆ ಬಳ್ಳಾರಿಯ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಕಚೇರಿಗೆ ಪತ್ರ ಬರೆದು ಸಾಮೂಹಿಕ ಚಳವಳಿ ಹಮ್ಮಿಕೊಳ್ಳಲಾಗಿತ್ತು.
ಇಂದು (ಆಗಸ್ಟ್ 13) ಗ್ರಾಮದ 1 ಮತ್ತು 4ನೇ ವಾರ್ಡಿನ ದಲಿತ ಜನ ಸಮುದಾಯ ಮತ್ತು ವಿದ್ಯಾರ್ಥಿಗಳು ಹಾಗೂ ಯುವಜನ ಮಿತ್ರರು ಸೇರಿ ಭವನವನ್ನು ಪೂರ್ಣಗೊಳಿಸಬೇಕೆಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಗ್ರಾಮದಲ್ಲಿ ಸುಸಜ್ಜಿತವಾದ ಭವನ ಇಲ್ಲದಿರುವುದರಿಂದಾಗಿ ಯಾವುದೇ ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಅರ್ಧಕ್ಕೆ ನಿಂತ ಕಾಮಗಾರಿಯಿಂದಾಗಿ ಅನೈತಿಕ ಚಟುವಟಿಕೆಗಳು ಮತ್ತು ಪುಂಡ ಪೋಕರಿಗಳು ಹಾಗೂ ಕುಡಕರ ಸಂತೆಯಾಗಿದ್ದು ವಿಷಾದನೀಯ. ಹಾಗಾಗಿ ಸಮಾಜ ಕಲ್ಯಾಣ ಇಲಾಖೆ ಮತ್ತು ಸಂಬಂದಪಟ್ಟ ಅಧಿಕಾರಿಗಳು ತಕ್ಷಣವೇ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಆಗ್ರಹಿಸಿದರು. ಒಂದು ವೇಳೆ ವಿಳಂಬವಾದಲ್ಲಿ ತಮ್ಮ ಕಚೇರಿಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಮುಂದೆ ಪ್ರತಿಭಟನೆ ಅನಿವಾರ್ಯ ಎಂದರು.
ಪತ್ರ ಚಳುವಳಿಯಲ್ಲಿ ದಲಿತ ನಾಯಕರಾದ ಚೆನ್ನಬಸಪ್ಪ, ತಿಪ್ಪೇಸ್ವಾಮಿ, ಅಂಜಿನಪ್ಪ, ಹನುಮಂತ, ಅಂಬರೇಶ, ಕೃಷ್ಣ, ನಾಗಭೂಷಣ, ಸ್ವಾಮಿ ಲೋಕೇಶ್, ಅಕ್ಷಯ್, ಪ್ರಪಂಚ, ಮಾಂತೇಶ, ಹನುಮೇಶ, ರಮೇಶ, ರುಜು, ಅಮರ್, ರುದ್ರಮನಿ, ಚಿರು, ಬಸವ, ಉಮೇಶ್, ಮೋಹನ್, ಹುಲಿ, ಶ್ರೀಕಾಂತ, ಪುರೋಷತ್ತಮ, ದೇವರಾಜ್, ಪವನ್, ಚಂದ್ರಮ್ಮ ಸುಭಾಶ್, ಇತರರು ಭಾಗವಹಿಸಿದ್ದರು.