ಬೆಂಗಳೂರು: ಅಲ್ಪಸಂಖ್ಯಾತರು ಜೆಡಿಎಸ್ ಪಕ್ಷವನ್ನು ನಂಬುವುದಿಲ್ಲ ಎನ್ನುವುದಕ್ಕೆ ಉಪಚುನಾವಣೆ ಫಲಿತಾಂಶವೇ ಸಾಕ್ಷಿಯಾಗಿದೆ. ಎರಡೂ ಜೆಡಿಎಸ್ ಕಡೆ ಠೇವಣಿಗಳಲ್ಲಿ ಕಳೆದುಕೊಂಡಿದೆ. ಹಾನಗಲ್ ನಲ್ಲಿ ಪಕ್ಷೇತರ ಅಭ್ಯರ್ಥಿಗಿಂತ ಕಡಿಮೆ ಮತ ಜೆಡಿಎಸ್ಗೆ ಬಂದಿದೆ. ಎಂದು ಕಾಂಗ್ರೆಸ್ ನಾಯಕ ಜಮೀರ್ ಅಹಮದ್ ಖಾನ್ ಹೇಳಿದರು.
ಉಪ ಚುನಾವಣೆ ಫಲಿತಾಂಶದ ಕುರಿತಾಗಿ ಮಾತನಾಡಿದ ಅವರು, ಹಾನಗಲ್ ನಲ್ಲಿ ಕಾಂಗ್ರೆಸ್ ಒಗ್ಗಟ್ಟಿನ ಹೋರಾಟ ನಡೆಸಿತ್ತು. ಸಿದ್ದರಾಮಯ್ಯ, ಡಿ. ಕೆ.ಶಿವಕುಮಾರ್ ಸೇರಿ ಎಲ್ಲ ನಾಯಕರೂ ಶ್ರಮ ಹಾಕಿದರು ಎಂದರು.
ಇದನ್ನು ಓದಿ: ಉಪ ಚುನಾವಣೆ ಫಲಿತಾಂಶ : ʻಕೈʼ ತೆಕ್ಕೆಗೆ ಹಾನಗಲ್, ತವರು ಜಿಲ್ಲೆಯಲ್ಲೇ ಸಿಎಂಗೆ ಮುಖಭಂಗ
ಹಾನಗಲ್ನಲ್ಲಿ ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ಮುಖಂಡನನ್ನು ಕರೆದುಕೊಂಡು ಹೋಗಿ ಅಭ್ಯರ್ಥಿಯಾಗಿ ನಿಲ್ಲಿಸಿದ ಜೆಡಿಎಸ್ ಪಕ್ಷ ಆತನ ನಾಯಕತ್ವವನ್ನು ಹಾಳು ಮಾಡಿದೆ ಎಂದು ಜಮೀರ್ ಅಹಮದ್ ಖಾನ್ ತಿಳಿಸಿದರು.
ಸಿಂದಗಿಯಲ್ಲಿ ಕಾಂಗ್ರೆಸ್ ಕಳೆದ ಚುನಾವಣೆಗಿಂತ 40 ಸಾವಿರ ಮತ ಹೆಚ್ಚು ಪಡೆದಿದೆ. ಜೆಡಿಎಸ್ ಅಲ್ಲೂ ಅಲ್ಪಸಂಖ್ಯಾತ ಮಹಿಳೆಯನ್ನು ಬಲಿಪಶು ಮಾಡಿದೆ. ಜೆಡಿಎಸ್ ನಂಬಿದರೆ ಕಷ್ಟ ಎನ್ನುವುದು ಅರ್ಥವಾಗಿದೆ. ಅಲ್ಪಸಂಖ್ಯಾತ ಸಮುದಾಯ ಈ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.