ಭಯೋತ್ಪಾದನೆಯನ್ನು ಎದುರಿಸುವಲ್ಲಿ ಸರಕಾರಕ್ಕೆ ಬೆಂಬಲ- ಆದರೆ ಅದರಲ್ಲಿ ಸಂಕುಚಿತತೆ ಇರಬಾರದು :ಸರ್ವ ಪಕ್ಷ ಸಭೆಯಲ್ಲಿ ಸಿಪಿಐ(ಎಂ) ಆಗ್ರಹ

ಭಯೋತ್ಪಾದನೆಯನ್ನು ಎದುರಿಸಲು ಕ್ರಮ ಕೈಗೊಳ್ಳುವಲ್ಲಿ ಸಿಪಿಐ(ಎಂ) ಸರ್ಕಾರವನ್ನು ಬೆಂಬಲಿಸುತ್ತದೆ ಆದರೆ ಇದರಲ್ಲಿ ಯಾವುದೇ ಸಂಕುಚಿತ ಅಬ್ಬರ ಇರಬಾರದು ಎಂದು ಒಕ್ಕೂಟ ಸರಕಾರ ಕರೆದ ಸರ್ವಪಕ್ಷ ಸಭೆಯಲ್ಲಿ ಮಾತಾಡುತ್ತ ಸಂಸತ್ತಿನಲ್ಲಿ ಸಿಪಿಐ(ಎಂ) ಗುಂಪಿನ ಮುಖ್ಯಸ್ಥರಾಗಿರುವ ರಾಜ್ಯಸಭಾ ಸದಸ್ಯ ಬಿಕಾಶ್‍ ರಂಜನ್ ಭಟ್ಟಾಚಾರ್ಯ ಹೇಳಿದರು.

ಭಯೋತ್ಪಾದಕ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ಮೃತರ ಕುಟುಂಬಗಳಿಗೆ ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಎಂದು ಆರಂಭಿಸಿದ ಅವರು ಭಯೋತ್ಪಾದನಾ ದಾಳಿಯನ್ನು ಖಂಡಿಸಲು ಕಾಶ್ಮೀರಿ ಜನರು ಒಗ್ಗಟ್ಟಾಗಿದ್ದಾರೆ ಮತ್ತು ಬರ್ಬರ ದಾಳಿಯಿಂದ ಹಾನಿಗೊಳಗಾದವರಿಗೆ ಎಲ್ಲಾ ಸಹಾಯವನ್ನು ನೀಡಿದ್ದಾರೆ ಎನ್ನುತ್ತ  ಧರ್ಮ ಮತ್ತು ನಂಬಿಕೆಯ ಮೇಲೆ ದುರುದ್ದೇಶಪೂರಿತ ಪ್ರಚಾರಗಳನ್ನು ನಿಲ್ಲಿಸಲು ಜಂಟಿ ಮನವಿ ಮಾಡಬೇಕು ಎಂದು ಕೇಳಿದರು.

ಇದನ್ನೂ ಓದಿ : ವಿಭಜನಕಾರೀ ನಡೆಗಳನ್ನು ತಡೆಗಟ್ಟಬೇಕು – ಸಿಪಿಐ(ಎಂ) ಆಗ್ರಹ

ಭದ್ರತಾ ಲೋಪದ ವಿಷಯವನ್ನು ಎತ್ತುತ್ತ,  ಪುಲ್ವಾಮಾ ಘಟನೆಯ ನಂತರ, ಆ ಘಟನೆಯ ತನಿಖೆಯ ಫಲಿತಾಂಶದ ಬಗ್ಗೆ ಸಾರ್ವಜನಿಕರಿಗೆ ಏನೂ ತಿಳಿಸಲಾಗಿಲ್ಲ ,ಉಗ್ರರ ಈ ಹೇಯ ದಾಳಿಯ ವಿಷಯದಲ್ಲಿ ಹೀಗಾಗಬಾರದು,  ಅಪರಾಧಿಗಳನ್ನು ಕಟಕಟೆಗೆ ತರುವುದನ್ನು ಖಚಿತಪಡಿಸಲು  ನಾವೆಲ್ಲರೂ ಒಗ್ಗಟ್ಟಾಗಿ ನಿಂತಿದ್ದೇವೆ ಎಂದು ಅವರು ಹೇಳಿದರು.

ಇದನ್ನೂ ನೋಡಿ : ಶಾಂತಿ ಸ್ಥಾಪಿಸುವ ಬದಲು ಪ್ರಚೋದಿಸುತ್ತಿರುವ ಗೋಧಿ ಮೀಡಿಯಾ ಬಗ್ಗೆ ಕಾಶ್ಮೀರಿ ಜನರ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *