ಬರೀಯ ಸಾಂಕೇತಿಕ ಆಚರಣೆಯಲ್ಲ, ಜೀವನೋಪಾಯ, ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ಬೆದರಿಕೆ ಹಾಕುವ ನೀತಿಗಳನ್ನು ಹಿಮ್ಮೆಟ್ಟಿಸುವ ಗುರಿಯನ್ನು ಹೊಂದಿರುವ ರಾಷ್ಟ್ರವ್ಯಾಪಿ ಚಳುವಳಿಯ ಮುಂದುವರಿಕೆ – ಸಂಯುಕ್ತ ಕಿಸಾನ್ ಮೋರ್ಚಾ ಧೋರಣೆ
ನವದೆಹಲಿ: ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ದಲ್ಲಿ ಇರುವ ರೈತ ಸಂಘಟನೆಗಳು ಜನವರಿ 16, 2026 ರಂದು ಅಖಿಲ ಭಾರತ ಪ್ರತಿರೋಧ ದಿನವನ್ನು ಘೋಷಿಸಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಕಾರ್ಪೊರೇಟ್-ಚಾಲಿತ, ಸರ್ವಾಧಿಕಾರಶಾಹಿ ಮತ್ತು ಒಕ್ಕೂಟ ತತ್ವ-ವಿರೋಧಿ ನೀತಿಗಳ ವಿರುದ್ಧ ಹೋರಾಟಗಳನ್ನು ತೀವ್ರಗೊಳಿಸುವಂತೆ ರೈತರು, ಕಾರ್ಮಿಕರು ಮತ್ತು ಇತರ ವರ್ಗದ ದುಡಿಯುವ ಜನರನ್ನು ಆಗ್ರಹಿಸಿದೆ.
ಈ ಘೋಷಣೆಯನ್ನು ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ಮಾಡಲಾಯಿತು, ಅಲ್ಲಿ ಎಸ್‌ಕೆಎಂ ನಾಯಕರು ಗ್ರಾಮ ಮಟ್ಟದ ಸಭೆಗಳು, ಮಹಾಪಂಚಾಯತ್‌ಗಳು ಮತ್ತು ರಾಷ್ಟ್ರವ್ಯಾಪಿ ಪ್ರತಿಭಟನೆಯ ಸಾಮೂಹಿಕ ಅಭಿಯಾನಗಳು ಸೇರಿದಂತೆ ಭವಿಷ್ಯzಲ್ಲಿ ರೈತರನ್ನು ಅಣಿನೆರೆಸುವÀ ಮಾರ್ಗಸೂಚಿಯನ್ನು ವಿವರಿಸಿದರು. ಇತ್ತೀಚಿನ ಸರ್ಕಾರಿ ಶಾಸನವು ಕೃಷಿ ಸಂಕಟವನ್ನು ಹೆಚ್ಚಿಸಿದೆ, ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಿದೆ ಮತ್ತು ಗ್ರಾಮೀಣ ಕಾರ್ಮಿಕರ ದೀರ್ಘಕಾಲೀನ ಕಾನೂನು ಹಕ್ಕುಗಳನ್ನು ಸವೆಸಿದೆ ಎಂದು ಎಸ್‌ಕೆಎಂ ಹೇಳಿದೆ.
ಜನವರಿ 16 ರಂದು ಗ್ರಾಮೀಣ ಭಾರತದಾದ್ಯಂತ ಪ್ರತಿಜ್ಞೆ ತೆಗೆದುಕೊಳ್ಳುವ ಸಮಾರಂಭಗಳು, ಸಾರ್ವಜನಿಕ ಸಭೆಗಳು ಮತ್ತು ಮಹಾಪಂಚಾಯತ್‌ಗಳು ನಡೆಯಲಿವೆ ಎಂದು ಎಸ್‌ಕೆಎಂ ಹೇಳಿದೆ. ರೈತರು ಮತ್ತು ಕಾರ್ಮಿಕರು ಬೀಜ ಮಸೂದೆ 2025, ವಿದ್ಯುತ್ ಮಸೂದೆ 2025, ವಿಬಿ-ಜಿ ರಾಮ್ ಜಿ ಕಾಯ್ದೆ 2025 ಮತ್ತು ನಾಲ್ಕು ಕಾರ್ಮಿಕ ಸಂಹಿತೆಗಳು ಸೇರಿದಂತೆ “ಜನ ವಿರೋಧಿ” ಎಂದು ತಾವು ಪರಿಗಣಿಸುವ ಕಾನೂನುಗಳನ್ನು ರದ್ದುಗೊಳಿಸುವವರೆಗೆ ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡುವ ನಿರೀಕ್ಷೆಯಿದೆ.
ಇದನ್ನೂ ಓದಿ: ಬಳ್ಳಾರಿ | ಜಿಂದಾಲ್‌ನಲ್ಲಿ ಖಾಸಗಿ ವಾಸ್ತವ್ಯ : ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕ್ಕೆ ಸಿಪಿಐಎಂ ಆಗ್ರಹ
ಈ ವೇದಿಕೆಯು ಎಲ್ಲಾ ಬೆಳೆಗಳಿಗೆ ಖಚಿತವಾದ ಸಂಗ್ರಹಣೆಯೊAದಿಗೆ ಸಿ2+50% ನಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಗೆ ಕಾನೂನುಬದ್ಧ ಖಾತರಿಯನ್ನು ಕೋರುತ್ತಿದೆ, ಜೊತೆಗೆ ಸಂಕಷ್ಟದಿಂದ ಉಂಟಾಗುವ ವಲಸೆ ಮತ್ತು ರೈತರ ಆತ್ಮಹತ್ಯೆಗಳನ್ನು ಪರಿಹರಿಸಲು ಸಮಗ್ರ ಸಾಲ ಮನ್ನಾವನ್ನು ಕೋರುತ್ತಿದೆ. ಆಳುವ ವರ್ಗದ ತೀವ್ರ ದಾಳಿಗಳನ್ನು ಎದುರಿಸಲು ರೈತರು, ಕಾರ್ಮಿಕರು ಮತ್ತು ಗ್ರಾಮೀಣ ಕಾರ್ಮಿಕರಲ್ಲಿ ಒಗ್ಗಟ್ಟು ನಿರ್ಣಾಯಕವಾಗಿದೆ ಎಂದು ಎಸ್‌ಕೆಎಂ ಒತ್ತಿ ಹೇಳಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಮನರೇಗ) ಯ ಸ್ಥಾನದಲ್ಲಿ ವಿಕಾಸ್ ಭಾರತ್ – ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ ಗ್ರಾಮೀಣ (ವಿಬಿ-ಜಿ ರಾಮ್ ಜಿ) ಕಾಯ್ದೆ ವಿವಾದದ ಕೇಂದ್ರ ಅಂಶವಾಗಿದೆ. ಮನರೇಗ ಅಡಿಯಲ್ಲಿ, ಉದ್ಯೋಗವು ಕಾನೂನುಬದ್ಧ ಹಕ್ಕು, ಪ್ರಭುತ್ವವು ಬೇಡಿಕೆಯ ಮೇರೆಗೆ ಕೆಲಸವನ್ನು ಒದಗಿಸಲು ಬದ್ಧವಾಗಿದೆ. ಹೊಸ ಶಾಸನವು ವಿವೇಚನಾ ನಿಯಂತ್ರಣವನ್ನು ಹಾಕುತ್ತಿದೆ, ಸರ್ಕಾರವು ಕೆಲಸದ ಸಮಯ, ಸ್ಥಳ ಮತ್ತು ಪ್ರಮಾಣವನ್ನು ನಿರ್ಧರಿಸಲು ಅನುವು ಮಾಡಿಕೊಡುತ್ತದೆ.
ವಿಬಿ-ಜಿ ರಾಮ್ ಜಿ ಕಾಯ್ದೆಯ ಸೆಕ್ಷನ್ 5(1) ಒಂದು ನಿಗದಿತ ಬಜೆಟ್ ಎಂಬುದನ್ನು ಹೇಳುತ್ತದೆ, ಮತ್ತು ಇದನ್ನು ಕೇಂದ್ರ ಸರಕಾರ ನಿರ್ಧರಿಸುತ್ತದೆ. ಅಂದರೆ ಉದ್ಯೋಗ ಬೇಡಿಕೆ ಈ ಹಂಚಿಕೆಯನ್ನು ಮೀರಿದರೆ ರಾಜ್ಯಗಳು ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯನ್ನು ಭರಿಸಬೇಕು. ಈ ನಿಬಂಧನೆಯು ರಾಜ್ಯಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಉದ್ಯೋಗ ಅವಕಾಶಗಳ ವಿಸ್ತರಣೆಯನ್ನು ನಿರುತ್ಸಾಹಗೊಳಿಸುತ್ತದೆ ಎಂದು ಎಸ್‌ಕೆಎಂ ಎಚ್ಚರಿಸಿದೆ, ಇದು ಆಡಳಿತದ ಒಕ್ಕೂಟ ರಚನೆಗೆ ಹಾಕಿರುವ ಏಟು. ಹೊಡೆಯುತ್ತದೆ.
ಹೊಸ ಕಾನೂನಿನಡಿಯಲ್ಲಿ 60 ದಿನಗಳ “ಬ್ಲಾಕ್ ಔಟ್ ಅವಧಿ” ಎಂಬುದನ್ನು ಸೇರಿಸಿದೆ ಎಂದು ಎಸ್‌ಕೆಎಂ ಟೀಕಿಸಿದೆ, ಇದು ಕಾರ್ಮಿಕರ, ವಿಶೇಷವಾಗಿ ಆದಿವಾಸಿಗಳು, ದಲಿತರು ಮತ್ತು ಮಹಿಳೆಯರಲ್ಲಿ ಮಾತುಕತೆ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಮನರೇಗ ಒಂದು ಉದ್ಯೋಗ ಯೋಜನೆಗಿಂತ ಹೆಚ್ಚಿನದಾಗಿತ್ತು , ಘನತೆ ಮತ್ತು ಜೀವನೋಪಾಯದ ರಕ್ಷಣೆಯಾಗಿತ್ತು, ಇದನ್ನು ಕಳಚಿ ಹಾಕುವ ಬೆದರಿಕೆಯನ್ನು ಹೊಸ ಕಾನೂನು ಹಾಕುತ್ತದೆ.
ವಿಬಿ- ಜಿ ರಾಮ್ ಜಿ ಕಾಯ್ದೆಯು 73 ನೇ ಸಂವಿಧಾನ ತಿದ್ದುಪಡಿಯಲ್ಲಿ ಪ್ರತಿಪಾದಿಸಲಾದ ಸ್ಥಳೀಯ ಸ್ವಯಮಾಡಳಿತವನ್ನು ಬದಿಗೊತ್ತಿ, ಗ್ರಾಮ ಸಭೆ ನೇತೃತ್ವದ ಯೋಜನೆಯನ್ನು, ಕೆಳಗಿನಿಂದ ಮೇಲಕ್ಕೆ ಹೋಗುವ ಯೋಜನೆಯನ್ನು ಮೇಲಿನಿಂದ ಕೆಳಕ್ಕೆ ಬರುವ ಯೋಜನೆಯಾಗಿ ಬದಲಿಸುತ್ತದೆ.ಎಂದು ಆತಂಕ ವ್ಯಕ್ತಪಡಿಸಿರುವ ಎಸ್‌ಕೆಎಂ ನಾಯಕರು ಬಯೋ-ಮೆಟ್ರಿಕ್ ಹಾಜರಾತಿ ಮತ್ತು ಆಧಾರ್ ಆಧಾರಿತ ಪಾವತಿಗ¼ಳು ಲಕ್ಷಾಂತರ ಗ್ರಾಮೀಣ ಕಾರ್ಮಿಕರನ್ನು ಹೊರಗಿಡುವ ಅಪಾಯಗಳಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
100% ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡುವ ವಿಮಾ ಮಸೂದೆ 2025, ಪರಮಾಣು ಶಕ್ತಿಯಲ್ಲಿ ಖಾಸಗಿ ಮತ್ತು ವಿದೇಶಿ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುವ ‘ಶಾಂತಿ’ ಮಸೂದೆ 2025 ಮತ್ತು ಅಮೆರಿಕದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದಗಳು ಸೇರಿದಂತೆ ಇತರ ಇತ್ತೀಚಿನ ಸರ್ಕಾರಿ ನೀತಿಗಳನ್ನು ಎಸ್‌ಕೆಎಂ ಟೀಕಿಸಿತು, ಈ ಕ್ರಮಗಳು ರೈತರು ಮತ್ತು ದೇಶೀಯ ಉತ್ಪಾದಕರಿಗೆ ಹಾನಿ ಮಾಡುತ್ತವೆ ಮತ್ತು ಅಸಮಾನತೆಯನ್ನು ಹೆಚ್ಚಿಸುತ್ತವೆ ಎಂದು ಅದು ಹೇಳಿದೆ.
ಜನವರಿ 9-15 ರ ನಡುವೆ ಪಾದಯಾತ್ರೆಗಳು, ಸೈಕಲ್ ರ‍್ಯಾಲಿಗಳು ಮತ್ತು ಮನೆ-ಮನೆಗೆ ಅಭಿಯಾನಗಳಂತಹ ಸಾಮೂಹಿಕ ಸಂಪರ್ಕ ಕಾರ್ಯಕ್ರಮಗಳನ್ನು ರಾಜ್ಯ ಮತ್ತು ಜಿಲ್ಲಾ ಮಟ್ಟದ ಎಸ್‌ಕೆಎಂ ಸಮಿತಿಗಳು ಯೋಜಿಸುತ್ತಿದ್ದು, ಪ್ರತಿರೋಧ ದಿನಾಚರಣೆಯ ಕಾರ್ಯತಂತ್ರಗಳನ್ನು ಅಂತಿಮಗೊಳಿಸಲು ಜನವರಿ 11, 2026 ರಂದು ನವದೆಹಲಿಯಲ್ಲಿ ಎಸ್‌ಕೆಎಂರಾಷ್ಟ್ರೀಯ ಮಂಡಳಿ ಸಭೆ ನಡೆಯಲಿದೆ.
ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ಕರೆ ನೀಡಿರುವ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಮತ್ತು ಮನರೇಗದ ಅಡಿಯಲ್ಲಿ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ ಸಂಬಂಧಿಸಿದ 200 ದಿನಗಳ ಕೆಲಸವನ್ನು 700 ರೂ. ದೈನಂದಿನ ಕೂಲಿಯಲ್ಲಿ ಕೊಡಬೇಕು ಎಂಬ ಬೇಡಿಕೆಯನ್ನು ಎಸ್‌ಕೆಎಂ ನಾಯಕರು ಬೆಂಬಲಿಸಿದ್ದಾರೆ.
ರಾಜ್ಯಗಳ ಆರ್ಥಿಕತೆಗಳನ್ನು ಬಲಪಡಿಸಲು ಮತ್ತು ಗ್ರಾಮೀಣ ನಿರುದ್ಯೋಗ ಮತ್ತು ಕೃಷಿ ಬಿಕ್ಕಟ್ಟನ್ನು ಪರಿಹರಿಸಲು ಅಗತ್ಯ ಕ್ರಮಗಳಾಗಿ ರಾಜ್ಯಗಳ ಹಕ್ಕುಗಳ ರಕ್ಷಣೆ, ಜಿಎಸ್‌ಟಿ ಅಡಿಯಲ್ಲಿ ತೆರಿಗೆ ಅಧಿಕಾರಗಳನ್ನು ಮರುಸ್ಥಾಪಿಸುವುದು ಮತ್ತು ಸೆಸ್ ಮತ್ತು ಸರ್‌ಚಾರ್ಜ್ಗಳೂ ಸೇರಿದಂತೆ ವಿಭಜಿಸಬಹುದಾದ ಪೂಲ್‌ನಲ್ಲಿ ರಾಜ್ಯಗಳ ಪಾಲನ್ನು 60% ಕ್ಕೆ ಹೆಚ್ಚಿಸುವ ಬೇಡಿಕೆಗಳನ್ನು ಎಸ್‌ಕೆಎಂ ಪುನರುಚ್ಚರಿಸಿದೆ. ರೈತ ಕಾರ್ಯಕರ್ತರನ್ನು ಬೆದರಿಸಲು ಪೊಲೀಸ್ ಮತ್ತು ದಂಡ ಸಂಹಿತೆಗಳ ಸರ್ವಾಧಿಕಾರಶಾಹಿ ದುರುಪಯೋಗವನ್ನು ಎಸ್‌ಕೆಎಂ ಖಂಡಿಸಿದೆ.
ಜನವರಿ 16 ರ ಪ್ರತಿರೋಧ ದಿನವು ಸಾಂಕೇತಿಕವಲ್ಲ, ಬದಲಿಗೆ ಆದರೆ ಜೀವನೋಪಾಯ, ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ಬೆದರಿಕೆ ಹಾಕುವ ನೀತಿಗಳನ್ನು ಹಿಮ್ಮೆಟ್ಟಿಸುವ ಗುರಿಯನ್ನು ಹೊಂದಿರುವ ರಾಷ್ಟ್ರವ್ಯಾಪಿ ಚಳುವಳಿಯ ಮುಂದುವರಿಕೆ ಎಂದು ಎಸ್‌ಕೆಎಂ ನಾಯಕರು ಒತ್ತಿ ಹೇಳಿದ್ದಾರೆ.
ಇದನ್ನೂ ನೋಡಿ: ಮಕ್ಕಳ ಸಾಹಿತ್ಯದ ಕೋಲ್ಮಿಂಚು ತಮ್ಮಣ್ಣ ಬೀಗಾರ ಜೊತೆ ಮಾತುಕತೆ Janashakthi Media
