ಅಕಾಡೆಮಿಗಳಿಗೆ ಹಣ ಕಡಿತ ಸಾಂಸ್ಕೃತಿಕ ಚಿಂತಕರ ಆಕ್ರೋಶ

  • ಅಕಾಡೆಮಿಗಳ ಅನುದಾನ ಕಡಿತ
  • 39 ಮಠಗಳಿಗೆ ತಲಾ ಒಂದು ಕೋಟಿರೂ ಹಣ ನೀಡಲು ಮುಂದಾಗಿರುವ ರಾಜ್ಯ ಸರಕಾರ

ಅಕಾಡೆಮಿಗಳ ಅನುದಾನವನ್ನು ಕೊರೊನಾ ಸಂಕಷ್ಟಕ್ಕೆ ಸಿಲುಕಿದ್ದ ಕಲಾವಿದರಿಗೆ  ಹಾಗೂ ಸಾಹಿತಿಗಳಿಗೆ ಬಳಸಿಕೊಂಡಿರುವ ಕಾರಣವನ್ನು ಮುಂದೆ ಮಾಡಿ, ಈ ಬಾರಿಯ ವಾರ್ಷಿಕ ಅನುದಾನವನ್ನು ರಾಜ್ಯ ಸರಕಾರ ಕಡಿತ ಮಾಡಿದೆ. ಇದೇ ವೇಳೆ 39 ಮಠಗಳಿಗೆ ತಲಾ ಒಂದು ಕೋಟಿರೂ ಹಣ ನೀಡಲು ರಾಜ್ಯ ಸರಕಾರ ಮುಂದೆ ಬಂದಿದೆ. ಹಣದ ಕೊರೆತೆಯ ನೆಪ  ಒಡ್ಡಿ ಅಕಾಡೆಮಿಗಳಿಗೆ ಹಣ ಕಡಿತ ಮಾಡಿರುವ ಸರಕಾರ ಮಠಗಳಿಗೆ ಹಣ ಕೊಡಲು ಮುಂದಾಗಿರುವ ಕ್ರಮ ಎಷ್ಟು ಸರಿ?

ಅಕಾಡೆಮಿಯಲ್ಲಿದ್ದ ಹಣವನ್ನು  ಕೊರೊನಾ ಸಂಕಷ್ಟಕ್ಕೆ ಬಳಸಿಕೊಂಡಿದ್ದ ಸರಕಾರ ಅದನ್ನು ವಾಪಸ್ಸು ನೀಡದೆ ಅಕಾಡೆಮಿಗೆ ದೋಖಾ ಮಾಡಿತ್ತು. ಈಗ ಅನುದಾನಕ್ಕೆ ಕತ್ತರಿ ಹಾಕಿದೆ. ಸರಕಾರದ ಈ ನಡೆಗೆ ಸಾಂಸ್ಕೃತಿಕ ವಲಯದ ಚಿಂತಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪ್ರತಿ ವರ್ಷ ಕ್ರೀಯಾಯೋಜನೆ ರೂಪಿಸುವಾಗ ಹಿಂದೆ ನೀಡಿದ್ದ ಅನುದಾನಕ್ಕೆ 5% ಅಥವಾ 10% ಏರಿಕೆಯನ್ನು ಮಾಡಲಾಗುತ್ತದೆ. ಆದರೆ ಈಗ ಕತ್ತರಿ ಹಾಕಿದ್ದಕ್ಕೆ ಹಲವು ಅನುಮಾನಗಳು ಕಾರಣವಾಗಿದೆ. 2018 ರಲ್ಲಿ ಅಕಾಡೆಮಿಗಳಿಗೆ 1 ಕೋಟಿ ರೂ ಅನುದಾನ ಕೊಡುತ್ತಿದ್ದರು, ನಂತರ  ಅಂದರೆ 2018-19 ರಲ್ಲಿ ಚಿಂತಕರ ಪ್ರಯತ್ನದಿಂದಾಗಿ ಅದು 1 ಕೋಟಿ 10 ಲಕ್ಷ ರೂ ಗೆ ಏರಿಕೆಯಾಯಿತು. ಈಗ ಅದನ್ನು 80 ಲಕ್ಷಕ್ಕೆ ಇಳಿಕೆ ಮಾಡಲಾಗಿದೆ.  ಈ ಮೊದಲು ಸಿಬ್ಬಂದಿಗಳಿಗೆ ವೇತನವನ್ನು ಪ್ರತ್ಯೇಕ ಶಿರ್ಷಿಕೆಯಲ್ಲಿ ಕೊಡುತ್ತಿದ್ದರು. ಈಗ ಆ ಶೀರ್ಷಿಕೆಯನ್ನೆ ತೆಗೆದು ಹಾಕಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಇದು ನಿಜವೆ ಆದರೆ ಕೊಟ್ಟಿರುವ 80 ಲಕ್ಷದಲ್ಲಿ 30% ಹಣವನ್ನು ಸಿಬ್ಬಂದಿಗಳ ವೇತನಕ್ಕೆ ಇಟ್ಟು ಉಳಿದ 50 ಲಕ್ಷ ರೂ ಗಳಲ್ಲಿ ಕಾರ್ಯಕ್ರಮ ನಡೆಸುವುದು ಸಾಧ್ಯವೆ? ಎಂದು  ಸಾಂಸ್ಕೃತಿಕ ವಲಯದ ಚಿಂತಕರು ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ.

ಈ ಕುರಿತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಅರವಿಂದ ಮಾಲಗತ್ತಿಯವರು ಪ್ರತಿಕ್ರಿಯಿಸಿದ್ದು ಮಠಗಳಿಗೆ 1 ಕೋಟಿ ಹಣದಂತೆ 39 ಮಠಗಳಿಗೆ ಹಣಕೊಡುವುದಾಗಿ ತಿಳಿಸಿದೆ. ಆದರೆ ಅದೇ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದಂತ ಅಕಾಡೆಮಿಗಳ ಅನುದಾನ ಕಡಿತ ಸೂಕ್ತವಾದುದಲ್ಲ. ಹಿಂದಿನ ಯೋಜನೆಗಳಿಗೆ ಮೀಸಲಿಟ್ಟ ಹಣದಲ್ಲಿ ಸಾಕಷ್ಟು ಹಣ ಉಳಿದಿದೆ. ಅದನ್ನು ಬಳಸಿಕೊಳ್ಳಬೇಕು. ಸಾಹಿತ್ಯ ಅಕಾಡೆಮಿ ಸಾಕಷ್ಟು ಕೆಲಸವನ್ನು ಮಾಡಿ, ತಾನೇ ತೋಡಿಕೊಂಡಿರುವ ಹಳ್ಳಕ್ಕೆ ಬೀಳಬಾರದು ಎಂದು ಅರವಿಂದ ಮಾಲಗತ್ತಿಯವರು ತಿಳಿಸಿದ್ದಾರೆ.

ಜನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್  ಪ್ರತಿಕ್ರೀಯೆ ನೀಡಿದ್ದು, ಅನುದಾನ ಕಡಿತಗೊಂಡರೆ ಕಾರ್ಯಕ್ರಮ ನಡೆಸಲು ಸಾಕಷ್ಟು ಸಮಸ್ಯೆ ಉದ್ಭವವಾಗಲಿದೆ. ಇದು  ಸೃಜನಶೀಲ ಸಾಹಿತ್ಯ  ಹಾಗೂ ಕಲಾವಿದರ ಕಲೆಯನ್ನು ಕೊಲ್ಲುವಂತಹ ಕೆಲಸವಾಗುತ್ತಿದೆ. ಸರಕಾರದ ನಡೆಯನ್ನು ಪ್ರಶ್ನಿಸಿದವರ ಧ್ವನಿಯನ್ನು ಅಡಗಿಸುವ ಕೆಲಸ ನಡೆಯುತ್ತಿದೆ. ಕಲೆ, ಸಾಹಿತ್ಯ, ಸಂಸ್ಕೃತಿಕ ವಿಚಾರದಲ್ಲಿ ಜನಪರವಾದ ವಿಚಾರಗಳನ್ನು ಈಗಿನ ಸಚಿವರು ಒಪ್ಪುತ್ತಿಲ್ಲ, ಇಂತವರಿಂದ ಅಕಾಡೆಗಳು ಬಲಗೊಳ್ಳಲು ಸಾಧ್ಯವಿಲ್ಲ, ಈಗ ಅದು ಕ್ರೀಯಾಶೀಲತೆಯನ್ನು ಕಳೆದುಕೊಂಡಿದೆ, ನಾಮಕಾವಸ್ತೆ ಕೆಲಸ ನಡೆಯುತ್ತಿವೆ ಎಂದು ಪಿಚ್ಚಳ್ಳಿ ಶ್ರೀನಿವಾಸ  ಆರೋಪಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸಮುದಾಯ ಕರ್ನಾಟಕ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಟಿ.ಸುರೇಂದ್ರರಾವ್ ಪ್ರತಿಕ್ರಿಯಸಿದ್ದು, ಅಕಾಡೆಮಿಗಳು ಸಾಂಸ್ಕೃತಿಕ ಸಂಸ್ಥೆಗಳು, ಪ್ರಜಾಸತ್ತಾತ್ಮಕ ಸಂಸ್ಥೆಗಳು, ಸಂವಿಧಾನಿಕ ಸಂಸ್ಥೆಗಳು ಇವುಗಳಿಗೆ ಅನುದಾನ ಕಡಿತ ಮಾಡುವುದರಲ್ಲಿ ಸಾಂಸ್ಕೃತಿ ರಾಜಕೀಯ ಅಡಗಿದೆ. ಆಶ್ಚರ್ಯವೆಂಬಂತೆ ರಾಜ್ಯಸರ್ಕಾರ ಮಠಗಳಿಗೆ 1 ಕೋಟಿ ಹಣ ನೀಡುವುದಾಗಿ ಹೇಳಿದೆ. ಮಠಗಳು ಪಾಳಿಗಾರಿಕೆ ಸಂಸ್ಥೆಗಳ ಭಾಗ, ಪ್ರಜಾಪ್ರಭುತ್ವ ನಾಶಮಾಡಿ ಪಾಳ್ಯಗಾರಿಕೆ ಜಾರಿಮಾಡುವುದು ಬಿಜೆಪಿ, ಆರ್‍ಎಸ್‍ಎಸ್‍ ಹುನ್ನಾರ. ನಮ್ಮ ದೇಶ ವೈವಿದ್ಯಮಯದಿಂದ ಕೂಡಿದೆ, ಸಾಹಾರ್ದ ಪರಂಪರೆಯನ್ನು ಪಾಲಿಸುತ್ತಾ ಬಂದಿದೆ. ಬಹು ಸಂಸ್ಕೃತಿಯ ನಾಡಿನಲ್ಲಿ ಏಕ ಸಂಸ್ಕೃತಿ ತರುವುದು ಬಿಜೆಪಿ ಸರ್ಕಾರ ಉದ್ದೇಶ ಹೀಗಾಗಿ ಅಕಾಡೆಮಿಗಳ ಅನುದಾವನ್ನು  ಕಡಿತ ಮಾಡಿ, ಅವುಗಳನ್ನು ದುರ್ಭಲಗೊಳಿಸುವುದು ಇದರ  ಉದ್ದೇಶವಾಗಿದೆ ಎಂದು ಸುರೆಂದ್ರರವರು ಕಿಡಿಕಾರಿದ್ದಾರೆ.

ನಾಡಿನ ಸಾಹಿತ್ಯ, ಸಾಂಸ್ಕೃತಿಯನ್ನು, ಕನ್ನಡದ ಗರಿಮೆಯನ್ನು ಎಲ್ಲೆಡೆ ಪಸರಿಸಲು ಪ್ರಯತ್ನ ಮಾಡುತ್ತಿರುವ ಅಕಾಡೆಮಿಗಳಿಗೆ ಬಲ ನೀಡುವ ಕೆಲಸ ಹೆಚ್ಚಾಗಬೇಕಿದೆ. ಹಣವನ್ನು ಕಡಿತ ಮಾಡುವ ಬದಲು ಇನ್ನಷ್ಟು ಅನುದಾನವನ್ನು ಹೆಚ್ಚಿಸಲು ರಾಜ್ಯ ಸರಕಾರ ಮುಂದೆ ಬರೇಕಿದೆ.

 

Donate Janashakthi Media

Leave a Reply

Your email address will not be published. Required fields are marked *