ವಾಯು ಮಾಲಿನ್ಯದಿಂದ ಭಾರತದಲ್ಲಿ ಸತ್ತವರ ಸಂಖ್ಯೆ ಎಷ್ಟು ಗೊತ್ತೆ? ವರದಿ ಏನು ಹೇಳುತ್ತದೆ

  • 5 ಲಕ್ಷಕ್ಕೂ ವಾಯು ಮಾಲಿನ್ಯದಿಂದ ಸಾವು
  • ಗೃಹ ಮಾಲಿನ್ಯದಿಂದ 6.1 ಲಕ್ಷ ಜನರ ಮರಣ
  • 8 ಲಕ್ಷ ಮಂದಿಯು ಗಾಳಿಯಲ್ಲಿ ಹರಡುವ ಮೈಕ್ರಾನ್ ಗಳಿಂದ ಸಾವು

ನವದೆಹಲಿ : ಭಾರತದಲ್ಲಿ ಒಂದಲ್ಲ ಒಂದು ಸಮಸ್ಯೆ ಹೆಚ್ಚಾಗುತ್ತಿದೆ. ಅಭಿವೃದ್ಧಿ ಎಂಬ ಹೆಸರಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಕಾರ್ಖಾನೆಗಳಿಂದ ಹೊರಹೊಮ್ಮುವ ರಾಸಾಯನಿಕ ಹೊಗೆಯು ಜೀವಕ್ಕೆ ಹಾನಿಯನ್ನುಂಟು ಮಾಡುತ್ತಿದೆ.

2019ರಲ್ಲಿ ವಾಯುಮಾಲಿನ್ಯದಿಂದಾಗಿ ಸಂಭವಿಸಿದ ಸಾವುಗಳು ಸೇರಿದಂತೆ ಭಾರತದಲ್ಲಿ ಎಲ್ಲ ವಿಧಗಳ ಮಾಲಿನ್ಯಗಳಿಂದಾಗಿ 23.5 ಲಕ್ಷಕ್ಕೂ ಅಧಿಕ ಜನರು ಮೃತಪಟ್ಟಿದ್ದು, ಇದು ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನದಾಗಿದೆ ಎಂದು ‘ದಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಜರ್ನಲ್’ ಪ್ರಕಟಿಸಿರುವ ನೂತನ ಅಧ್ಯಯನವು ಹೇಳಿದೆ.

2019 ರಲ್ಲಿ 90 ಲಕ್ಷ ಸಾವುಗಳು ಸಂಭವಿಸಿವೆ. ಅಂದರೆ ವಿಶ್ವದಲ್ಲಿಯ ಪ್ರತಿ ಆರು ಸಾವುಗಳಲ್ಲಿ ಒಂದಕ್ಕೆ ಮಾಲಿನ್ಯ ಕಾರಣವಾಗಿತ್ತು. ಈ ಪೈಕಿ 66.7 ಲಕ್ಷ ಸಾವುಗಳು ಮನೆಗಳಲ್ಲಿಯ ಮತ್ತು ವಾತಾವರಣದಲ್ಲಿಯ ವಾಯು ಮಾಲಿನ್ಯದಿಂದ ಸಂಭವಿಸಿದ್ದವು. ಅಂತರಾಷ್ಟ್ರೀಯ ಅಭಿವೃದ್ಧಿ ಕಾರ್ಯಸೂಚಿಯಲ್ಲಿ ಮಾಲಿನ್ಯವನ್ನು ತಡೆಗಟ್ಟುವ ಜಾಗೃತಿಯನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಆತಂಕವನ್ನು ಈ ವರದಿ ಬಯಲು ಮಾಡಿದೆ.

ಅಧ್ಯಯನ ವರದಿಯಂತೆ ಮನೆಗಳಲ್ಲಿ ಉರುವಲಾಗಿ ಕಟ್ಟಿಗೆಯ ಬಳಕೆಯು ಭಾರತದಲ್ಲಿ ವಾಯುಮಾಲಿನ್ಯ ಸಾವುಗಳಿಗೆ ಪ್ರಮುಖ ಕಾರಣವಾಗಿದ್ದು, ಕಲ್ಲಿದ್ದಲು ದಹನ ಮತ್ತು ಕೃಷಿತ್ಯಾಜ್ಯ ಸುಡುವಿಕೆ ನಂತರದ ಸ್ಥಾನದಲ್ಲಿವೆ.

ವಾತಾವರಣದಲ್ಲಿಯ ಮಾಲಿನ್ಯಕ್ಕೆ ಜನಸಂಖ್ಯಾ ಆಧಾರಿತ ಸರಾಸರಿ ಒಡ್ಡುವಿಕೆಯು 2014ರಲ್ಲಿ ರಾಷ್ಟ್ರಮಟ್ಟದಲ್ಲಿ ಉತ್ತುಂಗಕ್ಕೇರಿದ್ದು, ಪ್ರತೀ ಘನ ಮೀಟರ್‌ಗೆ 95 ಮಿ.ಗ್ರಾಂ ಆಗಿತ್ತು. ಇದು 2017ರಲ್ಲಿ ಪ್ರತೀ ಘನ ಮೀಟರ್‌ಗೆ 82 ಮಿ.ಗ್ರಾಂ ಗೆ ಇಳಿದಿತ್ತು. ಆದರೆ ಇತ್ತೀಚೆಗೆ ಮತ್ತೆ ನಿಧಾನವಾಗಿ ಏರುತ್ತಿದೆ ಎಂದು ವರದಿಯು ಹೇಳಿದೆ.

ಉತ್ತರ ಭಾರತದಲ್ಲಿ ಗಂಗಾ ನದಿ ಬಯಲಿನಲ್ಲಿ ವಾಯುಮಾಲಿನ್ಯ ಭೀಕರ ಪ್ರಮಾಣದಲ್ಲಿದೆ. ಇಲ್ಲಿ ಇಂಧನ, ಜನಸಂಚಾರ, ಕೈಗಾರಿಕೆ, ಕೃಷಿ ಮತ್ತು ಇತರ ಚಟುವಟಿಕೆಗಳಿಂದಾಗಿ ಸ್ಥಳ ವಿನ್ಯಾಸ ಮತ್ತು ಹವಾಮಾನ ಸಾಂದ್ರಿತ ಮಾಲಿನ್ಯ ಇರುತ್ತದೆ. ಮನೆಗಳಲ್ಲಿ ಬೆರಣಿಯಂಥ ಜೈವಿಕವಸ್ತುಗಳನ್ನು ಒಲೆಗಳಲ್ಲಿ ಬಳಸುವುದು ಭಾರತದಲ್ಲಿ ವಾಯುಮಾಲಿನ್ಯ ಸಾವಿನ ಅತಿ ದೊಡ್ಡ ಮೂಲವಾಗಿದೆ. ಕಲ್ಲಿದ್ದಲು ಉರಿಯುವಿಕೆ ಹಾಗೂ ಬೆಳೆ ಸುಡುವುದು ನಂತರದ ಎರಡು ಪ್ರಮುಖ ಕಾರಣಗಳಾಗಿವೆ ಎಂದು ವರದಿ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *