ನವದೆಹಲಿ | ತಾಂತ್ರಿಕ ದೋಷದಿಂದ 228 ಪ್ರಯಾಣಿಕರನ್ನು ದೆಹಲಿಗೆಕರೆತಂದ ಏರ್ ಇಂಡಿಯಾ

ನವದೆಹಲಿ: ಸೋಮವಾರ ಸ್ಯಾನ್ ಫ್ರಾನ್ಸಿಸ್ಕೊದಿಂದ ದೆಹಲಿಗೆ ಹೊರಟಿದ್ದ ವಿಮಾನವನ್ನು ತಾಂತ್ರಿಕ ದೋಷದಿಂದ ಮಂಗೋಲಿಯಾ ರಾಜಧಾನಿ ಉಲಾನ್‌ಬಾತರ್‌ನಲ್ಲಿ ಸಿಲುಕಿಕೊಂಡಿದ್ದ 228 ಪ್ರಯಾಣಿಕರನ್ನು ಏರ್ ಇಂಡಿಯಾ ಬುಧವಾರ ಬೆಳಿಗ್ಗೆ ದೆಹಲಿಗೆ ಕರೆತಂದಿದೆ.  ನವದೆಹಲಿ

ಇದನ್ನೂ ಓದಿ : ಗ್ರಾಮಗಳಿಗೆ ಪ್ರವೇಶ ನಿರಾಕರಿಸುವ ಫಲಕ ಹಾಕುವುದು ಸಂವಿಧಾನಬಾಹಿರವಲ್ಲ: ಹೈಕೋರ್ಟ್‌

ಉಲಾನ್‌ಬಾತರ್‌ನಿಂದ ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾದ ಪರಿಹಾರ ವಿಮಾನ ಬೋಯಿಂಗ್ 787 ಡ್ರೀಮ್‌ಲೈನರ್‌ ಬುಧವಾರ ಬೆಳಿಗ್ಗೆ 8:24ರ ಸುಮಾರಿಗೆ ರಾಷ್ಟ್ರ ರಾಜಧಾನಿಯಲ್ಲಿ ಇಳಿಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರ್ಗಬದಲಿಸಲಾಗಿದ್ದ ಬೋಯಿಂಗ್ 777 ವಿಮಾನದಲ್ಲಿ 228 ಮಂದಿ ಪ್ರಯಾಣಿಕರು, 17 ಸಿಬ್ಬಂದಿ ಸೇರಿ 245 ಮಂದಿ ಇದ್ದರು ಎಂದು ಮೂಲಗಳು ತಿಳಿಸಿವೆ.

ಸ್ಯಾನ್ ಫ್ರಾನ್ಸಿಸ್ಕೊದಿಂದ ಕೋಲ್ಕತ್ತ ಮೂಲಕ ದೆಹಲಿಗೆ ಕಾರ್ಯನಿರ್ವಹಿಸುತ್ತಿದ್ದ ಏರ್ ಇಂಡಿಯಾದ ಎಐ174, ವಿಮಾನದ ಸಿಬ್ಬಂದಿಗೆ ಮಾರ್ಗ ಮಧ್ಯೆ ತಾಂತ್ರಿಕ ಸಮಸ್ಯೆ ಇದೆ ಎಂದು ಅನುಮಾನ ಬಂದಿದೆ.

ನಂತರ, ಅವರು ಉಲಾನ್‌ಬತಾರ್‌ನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನದ ತುರ್ತು ಭೂಸ್ಪರ್ಶ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ನೋಡಿ : ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ನಡೆಸಿದ್ದು ಯಾಕೆ? ಬಲಾಢ್ಯ ಜಾತಿಗಳು ವಿರೋಧಿಸಿದ್ದು ಯಾಕೆ? ರಾಜೇಂದ್ರ ಚೆನ್ನಿ ವಿಶ್ಲೇಷಣೆ

Donate Janashakthi Media

Leave a Reply

Your email address will not be published. Required fields are marked *