ನವದೆಹಲಿ : ‘ವಕೀಲರಗಂಪೊಂದು’ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಇತ್ತೀಚೆಗೆ ಬರೆದ ಪತ್ರವನ್ನು ಅಖಿಲ ಭಾರತ ವಕೀಲರ ಸಂಘ ಖಂಡಿಸಿದೆ.
ಎಐಎಲ್‌ಯು ರಾಷ್ಟ್ರಾಧ್ಯಕ್ಷ ಬಿಕಾಸ್‌ರಂಜನ್ ಭಟ್ಟಾಚಾರ್ಯ, ಪ್ರಧಾನ ಕಾರ್ಯದರ್ಶಿ ಪಿ.ವಿ.ಸುರೇಂದ್ರನಾಥ್ ಜಂಟಿ ಹೇಳಿಕೆ ನೀಡಿದ್ದು, ಪತ್ರಿಕಾ ಹೇಳಿಕೆಯ ವಿವರಣೆ ಈ ಕೆಳಗಿನಂತಿದೆ.
ನ್ಯಾಯಾಂಗದ ಸಂರಕ್ಷಣೆಯ ಹೆಸರಲ್ಲಿಅದು ಮೊಸಳೆ ಕಣ್ಣೀರು ಸುರಿಸಿದ್ದಷ್ಟೆ. ಚುನಾವಣಾ ಬಾಂಡುಗಳ ಹೆಸರಿನಲ್ಲಿ ನಡೆದರಾಜಕೀಯ ಭ್ರಷ್ಟಾಚಾರ ಮತ್ತು ಕೊಡು-ಕೊಳ್ಳುವಿಕೆಯನ್ನು ಬಯಲು ಮಾಡಿದ ಸುಪ್ರೀಂಕೋರ್ಟು ತೀರ್ಪಿನ ನೇರ ಪರಿಣಾಮವಲ್ಲದೇ ಮತ್ತೇನೂ ಅಲ್ಲ.
ನ್ಯಾಯಾಂಗದ ಸಂರಕ್ಷಣೆಯ ನೆಪದಲ್ಲಿ ‘ವಕೀಲರಗುಂಪೊಂದು’ ಇತ್ತೀಚೆಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಬರೆದ ಪತ್ರವು ಜವಾಬ್ದಾರಿಯುತ ವಕೀಲರು ಹಾಗೂ ವಕೀಲರ ವೇದಿಕೆಯ ವಿರುದ್ಧದ ಅಪಪ್ರಚಾರವಷ್ಟೆ. ಆ ವಕೀಲರು ಹಾಗೂ ವಕೀಲರ ವೇದಿಕೆಯು ನ್ಯಾಯಾಂಗದ ಸ್ವಾತಂತ್ರ್ಯ ರಕ್ಷಣೆಗಾಗಿ ಹಾಗೂ ಸಂವಿಧಾನದ ಮೂಲ ಸಂರಚನೆ ಮತ್ತು ಸಾಂವಿಧಾನಿಕ ಹಕ್ಕುಗಳ ಪರವಾಗಿ; ಮೂಲಭೂತ ಹಕ್ಕುಗಳು ಹಾಗೂ ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ನಿಷ್ಠೆಯಿಂದ ಹಾಗೂ ನಿರಂತರವಾಗಿ ಹೋರಾಟ ಮಾಡುತ್ತಾ ಬರುತ್ತಿದ್ದಾರೆ.
ನ್ಯಾಯ ಸ್ಥಾನದ ಮರುಪರಿಶೀಲನೆಯ ಅಧಿಕಾರ ಹಾಗೂ ನ್ಯಾಯಾಂಗದ ಸ್ವಾತಂತ್ರ್ಯ ಇವು ನಮ್ಮ ಸಂವಿಧಾನದ ಮೂಲ ಸಂರಚನೆಯ ಭಾಗ ಮತ್ತು ಪ್ರಜಾಪ್ರಭುತ್ವದ ಬೆನ್ನೆಲುಬು. ನ್ಯಾಯಾಂಗದ ಸ್ವಾತಂತ್ರ್ಯವನ್ನೂ ಒಳಗೊಂಡಂತೆ ಸಂವಿಧಾನದ ಮೂಲ ಸಂರಚನೆಯ ವಿರುದ್ಧ ಈಗಿನ ಪ್ರಭುತ್ವವು ನೇರ ಆಕ್ರಮಣ ಹಾಗೂ ಕುಟಿಲ ತಂತ್ರಗಳನ್ನು ಮಾಡುತ್ತಿದೆ. ಅದೂ ಸಾಲದೆಂಬಂತೆ, ಶಾಸನಗಳ ಕುರಿತು ನ್ಯಾಯಸ್ಥಾನದ ಮರುಪರಿಶೀಲನೆ ಅಧಿಕಾರದ ಬಳಕೆಗಾಗಿ ನ್ಯಾಯಾಂಗವನ್ನು ಅಪಹಾಸ್ಯಕ್ಕೆ ಗುರಿಮಾಡುತ್ತಿದೆ. ಸಂಸತ್ತಿನ ಪರಮಾಧಿಕಾರದ ಹೆಸರಿನಲ್ಲಿ‘ನ್ಯಾಯ ಸ್ಥಾನದ ಮರುಪರಿಶೀಲನೆ’ ಹಾಗೂ ‘ಮೂಲ ಸಂರಚನೆ’ಯ ವಿರುದ್ಧ ಭಾರತದ ಉಪರಾಷ್ಟ್ರಪತಿಗಳಂಥವರೇ ಹಾಗೂ ಕಾನೂನು ಸಚಿವರು ಕಟುವಾದಟೀಕೆ ಹಾಗೂ ದಾಳಿಯನ್ನು ಮಾಡುತ್ತಿದ್ದಾರೆ; ಅವು ತಮ್ಮ ಸಾರ್ವಭೌಮ ಅಧಿಕಾರ ಎಂದು ಸಾಧಿಸುತ್ತಿದ್ದಾರೆ.ನ್ಯಾಯಾಧೀಶರ ಆಯ್ಕೆಯಲ್ಲಿನ ನಿರ್ಣಾಯಕ ಪಾತ್ರ ಹಾಗೂ ಅಧಿಕಾರವು ಕಾನೂನು ಜಾರಿ ಮಾಡುವ ಸರ್ಕಾರದ್ದುಎಂದು ಸಮರ್ಥಿಸುತ್ತಿದ್ದಾರೆ.ಇವೆಲ್ಲವೂ ಅವರ ಸುವ್ಯವಸ್ಥಿತ ಯೋಜನೆಯ ಭಾಗವಾಗಿದೆ.
ಹೈಕೋರ್ಟುಗಳ ನ್ಯಾಯಾಧೀಶರ ವರ್ಗಾವಣೆಯ ವಿಷಯದಲ್ಲಿ ಸರ್ಕಾರವು ನೇರ ಹಸ್ತಕ್ಷೇಪ ಮಾಡುತ್ತಿದೆ. ನ್ಯಾಯಮೂರ್ತಿ ಕುರೇಶಿ ಮತ್ತು ನ್ಯಾಯಮೂರ್ತಿ ಡಾ.ಎಸ್.ಮುರಳೀಧರ್ ಅವರ ವರ್ಗಾವಣೆಯಲ್ಲಿ ಕಾರ್ಯಕಾರಿ ಸರ್ಕಾರವು ನ್ಯಾಯಾಂಗದ ಹೊರಗಿನ–ಅನಗತ್ಯರಾಜಕೀಯ ಕಾರಣಗಳಿಗಾಗಿ ಹಸ್ತಕ್ಷೇಪ ಮಾಡಿದೆ.
ಇದನ್ನೂ ಓದಿ : ಹದಿನೈದು ವರ್ಷಗಳ ಸಂಸದ, ಈಗ ‘ಮಾಜಿ’, ವರುಣ್ ಗಾಂಧಿ ದೀರ್ಘ ಕಾಯುವಿಕೆ ದೀರ್ಘವಾಗುತ್ತದೆ
ನ್ಯಾಯಾಧೀಶರ ನಿವೃತ್ತಿ ನಂತರ ನೇಮಕಾತಿ ಮಾಡುವ ಮೂಲಕ ಮೋದಿ ಸರ್ಕಾರವುನ್ಯಾಯಾಂಗದ ಸ್ವಾತಂತ್ರ್ಯದಲ್ಲಿ ನಿರ್ಲಜ್ಜವಾಗಿ ಹಸ್ತಕ್ಷೇಪ ಮಾಡುತಿದೆ. ಸುಪ್ರೀಂಕೋರ್ಟು ಮುಖ್ಯ ನ್ಯಾಯಾಧೀಶ ರಂಜನ್‌ಗೊಗೋಯ್ ಅವರ ನಿವೃತ್ತಿ ನಂತರ ಅವರನ್ನು ಮೋದಿ ಸರ್ಕಾರರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡಿತು.ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ಸುಪ್ರೀಂಕೋರ್ಟಿನಿಂದ ನಿವೃತ್ತರಾದ ಆರು ತಿಂಗಳೊಳಗೇ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ಮಾಡಲಾಯಿತು.
ಹಲವಾರು ಹೈಕೋರ್ಟುಗಳ ಮುಖ್ಯ ನ್ಯಾಯಾಧೀಶರ ವರ್ಗಾವಣೆ/ನೇಮಕಾತಿ ಕುರಿತು ಸುಪ್ರೀಂಕೋರ್ಟ್ಕೊಲಿಜಿಯಮ್‌ನ ನಿರ್ಣಯಗಳನ್ನು ತಮಗೆ ಬೇಕಾದಂತೆ ವಿಭಜಿಸುವ ಮೂಲಕ ಒಕ್ಕೂಟ ಸರ್ಕಾರವು ಕೊಲಿಜಿಯಂಗೆ ಅಗೌರವ ತೋರಿದೆ. ಅದೇ ರೀತಿಯಲ್ಲಿ ಹೈಕೋರ್ಟುಗಳಿಗೆ ಹೊಸ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯ ಕುರಿತ ಕೊಲಿಜಿಯಂನ ಅಭ್ಯರ್ಥಿಗಳ ಶಿಫಾರಸುಗಳಿಗೂ ಅದೇ ಗತಿಯಾಗಿದೆ.ಅಭ್ಯರ್ಥಿಗಳ ಬಗ್ಗೆ ತಮ್ಮ ಶಿಫಾರಸುಗಳನ್ನು ಪುನರುಚ್ಚರಿಸಿದ ನಂತರವೂ ಸರ್ಕಾರವು ಲಂಬಿಸುತ್ತಾ (ಕಾಲ ಕಳೆಯುತ್ತಾ) ಅಂತಿಮವಾಗಿ ಆ ಅಭ್ಯರ್ಥಿಗಳ ನೇಮಕಾತಿಯನ್ನೇ ನಿರಾಕರಿಸಿದ ಉದಾಹರಣೆಗಳೂ ಇವೆ.ಇವೆಲ್ಲವೂ ನ್ಯಾಯಾಂಗದ ಸ್ವಾತಂತ್ರ್ಯದ ಗಂಭೀರ ಉಲ್ಲಂಘನೆಯ ಉದಾಹರಣೆಗಳು. ಇಂತಹ ಉಲ್ಲಂಘನೆಗಳು ನಡೆದಾಗ ನ್ಯಾಯಾಂಗದ ರಕ್ಷಣೆಗೆ ಈ ‘ವಕೀಲರ ಗುಂಪು’ ಯಾವತ್ತೂಸೊಲ್ಲೆತ್ತಲಿಲ್ಲ. ಇಂತಹ ಅಪ್ರಜಾಸತ್ತಾತ್ಮಕ, ಸಂವಿಧಾನ-ವಿರೋಧಿ, ನ್ಯಾಯಾಂಗದ ಸ್ವಾತಂತ್ರ್ಯದ ವಿರುದ್ಧದ ಧೋರಣೆಗಳನ್ನು ಈ ‘ವಕೀಲರ ಗುಂಪು’ ಆಗ್ರಹಪೂರ್ವಕವಾಗಿ ಬೆಂಬಲಿಸುತ್ತಾ ಇತ್ತು.
ಇತ್ತೀಚಿನ ಅತ್ಯಂತ ಪ್ರಸಿದ್ಧ ಹಾಗೂ ಪ್ರಭಾವಪೂರ್ಣವಾದ ಸುಪ್ರೀಂಕೋರ್ಟ್ತೀರ್ಪು–ಚುನಾವಣಾ ಬಾಂಡ್‌ತೀರ್ಪು – ಬಂದಾಗ ಅದನ್ನು ಹೇಗಾದರೂ ಮಾಡಿ ಹಾಳುಗೆಡಹುವ, ಆ ಮೂಲಕ ಚುನಾವಣಾ ಬಾಂಡ್ ಕೊಡು-ಕೊಳ್ಳುವ ವ್ಯವಹಾರದಲ್ಲಿ ನಿರತರಾದ ಮತ್ತುರಾಜಕೀಯ ಭ್ರಷ್ಟಾಚಾರದಲ್ಲಿತೊಡಗಿಕೊಂಡಕಾರ್ಪೊರೇಟ್ ಏಕಚಕ್ರಾಧಿಪತಿಗಳು ಹಾಗೂ ಇತರ ಪಟ್ಟಭದ್ರ ಹಿತಾಸಕ್ತಿಗಳ ಪರವಾಗಿಇದೇ ವಕೀಲರ ಗುಂಪು ತೆರೆಮರೆಯ ಪ್ರಯತ್ನಗಳನ್ನು ಮಾಡಿತ್ತು.ಆ ತೀರ್ಪಿನ ಜಾರಿಯನ್ನು ತಡೆಹಿಡಿಯಬೇಕೆಂದು ಮಾನ್ಯ ಭಾರತದ ರಾಷ್ರ್ಟಾಧ್ಯಕ್ಷರಿಗೆ ಪತ್ರ ಬರೆಯುವುದು ಮಾತ್ರವಲ್ಲ, ಮುಖ್ಯ ನ್ಯಾಯಾಧೀಶರಿಗೂ ಪತ್ರ ಬರೆದು ಆ ತೀರ್ಪನ್ನು ಸ್ವಯಂಪರಾಮರ್ಶೆಗೆ ಒಳಪಡಿಸಿ ಎಂದುಕೂಡಇದೇ ಗುಂಪು ಪ್ರಯತ್ಮ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಅಂತಿಮವಾಗಿ, ನ್ಯಾಯಾಲಯದ ಮುಂದೆ ಅವರಬಣ್ಣ ಬಯಲಾಯಿತು; ಸಂವಿಧಾನ ಪೀಠದಅಧ್ಯಕ್ಷತೆ ವಹಿಸಿದ್ದ ಮುಖ್ಯ ನ್ಯಾಯಾಧೀಶರು ಆ ಪತ್ರದ ಲೇಖಕರಿಗೆ ಕಟುವಾದ ಮಾತುಗಳಲ್ಲಿ ತಮ್ಮಅಸಮ್ಮತಿಯನ್ನು ವ್ಯಕ್ತಪಡಿಸಿದರು.
ಮೋದಿ ಸರ್ಕಾರದ ಸರ್ವಾಧಿಕಾರಿ ಅಪ್ರಜಾಸತ್ತಾತ್ಮಕ ಧೋರಣೆಯ ಮಾಹಿತಿ ತಂತ್ರಜ್ಞಾನ ತಿದ್ದುಪಡಿ ನಿಯಮಗಳು, 2023 (ಐಟಿ ಅಮೆಂಡ್ ಮೆಂಟ್‌ರೂಲ್ಸ್, 2023) ಅಡಿಯಲ್ಲಿ ಫ್ಯಾಕ್ಟ್ಚೆಕ್‌ಯೂನಿಟ್ (ಎಫ್‌ಸಿಯು) ಪ್ರಕಟಣೆಯನ್ನು ಸುಪ್ರೀಂಕೋರ್ಟ್ ತಡೆ ಹಿಡಿದಿರುವ ಅಂಶ ಕೂಡ ಈ ಅಸಂತುಷ್ಟ ಪಟ್ಟಭದ್ರ ಹಿತಾಸಕ್ತಿ “ಗುಂಪಿನವರಿಗೆ” ಕಿರಿಕಿರಿ ಉಂಟುಮಾಡಿದೆ.
ಆ ಪತ್ರದಲ್ಲಿರುವ ತಲೆಬುಡವಿಲ್ಲದ ಒರಟು ಆಪಾದನೆಗಳು –ಸುಳ್ಳುವದಂತಿಗಳು ಭಾರತದಯಾವ ನ್ಯಾಯವಾದಿಗಳು ಹಾಗೂ ನ್ಯಾಯವಾದಿ ಸೋದರ ಸಮುದಾಯದ ಅಭಿಪ್ರಾಯವಂತೂ ಖಂಡಿತಾ ಅಲ್ಲ. ಆ ‘ವಕೀಲರ ಗುಂಪು’ ಭಾರತದನ್ಯಾಯವಾದಿಗಳು ಹಾಗೂ ನ್ಯಾಯವಾದಿ ಸೋದರ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ. ನ್ಯಾಯಾಂಗದ ಸ್ವಾತಂತ್ರ್ಯ ಹಾಗೂ ಉತ್ತರದಾಯಿತ್ವವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ನ್ಯಾಯಾಂಗವು ನ್ಯಾಯಸ್ಥಾನದ ಮರುಪರಿಶೀಲನೆಯ ಅಧಿಕಾರವನ್ನು ಬಳಸುವುದರ ವಿರುದ್ಧಕಣ್ಣಿಗೆ ಮಣ್ಣೆರೆಚುವ ಮತ್ತು ಮುಸುಕಿನೊಳಗಿನ ಬೆದರಿಸುವ ಪ್ರಯತ್ನವನ್ನು ನ್ಯಾಯಾಂಗದ ಸಂರಕ್ಷರಣೆಯ ಹೆಸರಿನಲ್ಲಿ ಈ “ಗುಂಪು” ಮಾಡಿದೆಯಷ್ಟೆ. ನ್ಯಾಯಾಂಗದ ರಕ್ಷಕರು ತಾವು ಎಂಬ ಸೋಗಿನಡಿಯಲ್ಲಿ ತಮ್ಮನ್ನು ಬಿಂಬಿಸಿಕೊಳ್ಳುವ ಮೂಲಕ ಜನರನ್ನು ದಾರಿತಪ್ಪಿಸುವ ಪ್ರಯತ್ನ ಕೂಡ ಇದಾಗಿದೆ.
ಅಖಿಲ ಭಾರತ ವಕೀಲರ ಸಂಘವು (ಆಲ್‌ಇಂಡಿಯಾ ಲಾರ‍್ಸ್ಯೂನಿಯನ್) ಅವರ ಈ ಪ್ರಯತ್ನವನ್ನು ಕಟುವಾದ ಮಾತುಗಳಲ್ಲಿ ಖಂಡಿಸುತ್ತದೆ ಮತ್ತು ನ್ಯಾಯಾಂಗದ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪಮಾಡುವ ಇಂತಹ ಅನಾರೋಗ್ಯಕರ ನಡವಳಿಕೆಗಳ ವಿರುದ್ಧ ನಾವು ಒಗ್ಗಟ್ಟಾಗಿದನಿ ಎತ್ತೋಣ ಎಂದು ಮತ್ತು ನಮ್ಮ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳೋಣ ಎಂದು ನಮ್ಮ ಎಲ್ಲಾ ನ್ಯಾಯವಾದಿ ಸೋದರ ಸಮುದಾಯದವರಿಗೆ ಹಾಗೂ ಬಾರತದ ಸಾರ್ವಜನಿಕರಲ್ಲಿ ವಿನಂತಿ ಮಾಡಕೊಳ್ಳುತ್ತೇವೆ ಎಂದು ಎಐಎಲ್ಯು ಮನವಿ ಮಾಡಿದೆ.