ಚೆನ್ನೈ: ಕೃಷಿ ವಿಜ್ಞಾನಿ ಹಾಗೂ ಹಸಿರುಕ್ರಾಂತಿಯ ರೂವಾರಿ, ಮಾಜಿ ರಾಜ್ಯಸಭಾ ಸದಸ್ಯ ಎಂ.ಎಸ್. ಸ್ವಾಮಿನಾಥನ್ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.ಹಸಿರು
ಅಧಿಕ ಇಳುವರಿಯ ಭತ್ತ ಹಾಗೂ ಗೋಧಿ ತಳಿಯ ಅಭಿವೃದ್ಧಿಗಾಗಿ ಶ್ರಮ ಹಾಕಿದರು. ಇದು ಭಾರತದಲ್ಲಿ ಕಡಿಮೆ ಆದಾಯವನ್ನು ಹೊಂದಿರುವ ರೈತರು ಹೆಚ್ಚಿನ ಇಳುವರಿಯನ್ನು ಉತ್ಪಾದಿಸಲು ಸಹಾಯ ಮಾಡಿತು. ಸ್ವಾಮಿನಾಥನ್ ಅವರು ರೈತರ ಆದಾಯ ದ್ವಿಗುಣ,ಬೇಸಾಯದತ್ತ ಯುವಕರನ್ನು ಸೆಳೆಯುವುದು, ಶೂನ್ಯ ಬಂಡವಾಳ ಕೃಷಿ, ಭವಿಷ್ಯದ ಬೇಸಾಯದ ಪದ್ದತಿ ಅಳವಡಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ:“ಮೋದಿ-ಅದಾನಿ-ನೀತಿ ಆಯೋಗದ ಕೃಷಿಯ ಕಾರ್ಪೊರೇಟೀಕರಣದ ಕುತಂತ್ರ ಬಯಲು”
2004ರಲ್ಲಿ, ಸ್ವಾಮಿನಾಥನ್ ಅವರನ್ನು ರೈತರ ಕುರಿತ ರಾಷ್ಟ್ರೀಯ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ರೈತರ ಆತ್ಮಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ಅವರ ಸಂಕಷ್ಟಗಳನ್ನು ಪರಿಶೀಲಿಸಲು ಆಯೋಗವನ್ನು ಸ್ಥಾಪಿಸಲಾಗಿತ್ತು. ಆಯೋಗವು 2006ರಲ್ಲಿ ವರದಿಯನ್ನು ಸಲ್ಲಿಸಿತು. ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 50 ಪ್ರತಿಶತದಷ್ಟು ಹೆಚ್ಚಿರಬೇಕು ಎಂದು ವರದಿ ಸೂಚಿಸಿತು.
ಈ ವರದಿ ಜಾರಿ ಮಾಡುವಂತೆ ರೈತರು ಆಗ್ರಹವನ್ನು ಮಾಡುತ್ತಾ ಬಂದಿದ್ದಾರೆ. ಎಂ.ಎಸ್.ಸ್ವಾಮಿನಾಥನ್ ಅವರ ಕೂಡ ಅನೇಕ ಕೃಷಿ ಹೋರಾಟಗಳಲ್ಲಿ ಭಾಗವಹಿಸಿದ್ದರು.
ಚೆನ್ನೈನಲ್ಲಿ ವಾಸವಿದ್ದ ಅವರು ವಯೋಸಹಜವಾಗಿ ಸೆ-28 ಶುಕ್ರವಾರ ನಿಧನರಾಗಿದ್ದಾರೆ. ಎಂಎಸ್ ಸ್ವಾಮಿನಾಥನ್ ಅವರ ಪತ್ನಿ ಮೀನಾ ಸ್ವಾಮಿನಾಥನ್ ಅವರು ಕಳೆದ ವರ್ಷ ನಿಧನರಾಗಿದ್ದರು. ಈಗ ಮೂವರು ಪುತ್ರಿಯರಾದ ಸೌಮ್ಯ ಸ್ವಾಮಿನಾಥನ್, ಮಥುರಾ ಸ್ವಾಮಿನಾಥನ್ ಮತ್ತು ನಿತ್ಯ ಸ್ವಾಮಿನಾಥನ್ ಅವರನ್ನು ಅಗಲಿದ್ದಾರೆ.
ಆಗಸ್ಟ್-7-1925 ರಂದು ಕುಂಭಕೋಣಂ ಜಿಲ್ಲೆಯಲ್ಲಿ ಜನಿಸಿದ ಸ್ವಾಮಿನಾಥನ್ ಅವರು ತಮ್ಮ ಸ್ವಂತ ಊರಿನಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ವೈದ್ಯರಾಗಲು ಬಯಸಿದ್ದರು. ಆದರೆ 1943 ರಲ್ಲಿ ಬಂಗಾಳದಲ್ಲಿ ಕ್ಷಾಮವು ಅವರ ಜೀವನದ ಗುರಿಯನ್ನು ಬದಲಿಸಿತು. ಸುಮಾರು 30 ಲಕ್ಷ ಜನ ಹಸಿವಿನಿಂದ ಸಾವನ್ನಪ್ಪಿದ್ದನ್ನು ಕಂಡು ಕೃಷಿ ಸಂಶೋಧನೆಯಲ್ಲಿ ತೊಡಗಲು ತಮ್ಮ ಹಾದಿಯನ್ನು ಬದಲಾಯಿಸಿದರು.
ಇದನ್ನೂ ಓದಿ:ಬಿಜೆಪಿ ಸರಕಾರ ಎಂಎಸ್‍ಪಿ ಯಲ್ಲಿ ರೈತರಿಗೆ ಮೋಸ ಮಾಡುವುದನ್ನು ನಿಲ್ಲಿಸಬೇಕು : ಎಐಕೆಎಸ್
ಅವರು ಕೇರಳದ ತಿರುವನಂತಪುರಂನ ಮಹಾರಾಜ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆದು ಮತ್ತು ಮದ್ರಾಸ್ ನಲ್ಲಿ ಕೃಷಿ ಕಾಲೇಜಿನಲ್ಲಿ ಕೃಷಿ ವಿಜ್ಞಾನವನ್ನು ಪೂರ್ಣಗೊಳಿಸಿದರು. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ನಂತರ ಸಿಕ್ಕಿದ್ದ ಐಪಿಎಸ್ ಅವಕಾಶವನ್ನು ತಿರಸ್ಕರಿಸಿ ಯುಎನ್‌ಇಎಸ್‌ಸಿಓ ದಿಂದ ಸ್ಕಾಲರ್‌ಶಿಫ್ ಪಡೆದು ಕೃಷಿ ಸಂಶೋಧನೆಯಲ್ಲಿ ತೊಡಗಿದರು.ಭತ್ತ,ಗೋಧಿ ಮತ್ತು ಗೆಣಸಿನ ಮೇಲೆ ಪ್ರಮುಖ ಸಂಶೋಧನೆಗಳನ್ನು ನಡೆಸಿದ್ದಾರೆ.
ಎಂಎಸ್ ಸ್ವಾಮಿನಾಥನ್ ಅವರು ನಮ್ಮ ಪರಿಸರಕ್ಕೆ ಸೂಕ್ತವಾದ ಹೆಚ್ಚಿನ ಇಳುವರಿ ನೀಡುವ ಬೀಜಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮತ್ತು ರೈತರಲ್ಲಿ ಅವುಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಹಸಿರು ಕ್ರಾಂತಿಗೆ ಕಾರಣರಾದರು. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅವರು 1979 ರಲ್ಲಿ ಕೇಂದ್ರ ಕೃಷಿ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಎಂಎಸ್ ಸ್ವಾಮಿನಾಥನ್ ಅವರು 1988 ರಿಂದ ಪ್ರಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಅಂತರಾಷ್ಟ್ರೀಯ ಕೇಂದ್ರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮತ್ತು ರಾಷ್ಟ್ರೀಯ ರೈತ ಆಯೋಗದ ಅಧ್ಯಕ್ಷರು, ಭಾರತೀಯ ಕೃಷಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿ, ಅಂತರಾಷ್ಟ್ರೀಯ ಅಕ್ಕಿ ಸಂಶೋಧನಾ ಕೇಂದ್ರದ ಮಹಾನಿರ್ದೇಶಕ ಸೇರಿದಂತೆ ಮುಂತಾದ ದೇಶ ಮತ್ತು ವಿದೇಶಗಳಲ್ಲಿ ಅನೇಕ ಹುದ್ದೆಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ್ದಾರೆ.ಹಸಿರು
ಲಾಕ್‌ಡೌನ್ ಸಮಯದಲ್ಲಿ ಸರ್ಕಾರಕ್ಕೆ ಸಲಹೆ:
ಲಾಕ್‌ಡೌನ್ ಸಮಯದಲ್ಲಿ ಸ್ವಾಮಿನಾಥನ್ ಅವರು ರೈತರ ಪರವಾಗಿ ದನಿಯೆತ್ತಿದ್ದರು. ಲಾಕ್‌ಡೌನ್‌ನಿಂದ ದೇಶಾದ್ಯಾಂತ ಉಂಟಾಗಿರುವ ನಿರ್ಬಂಧಗಳಿಂದ ತೊಂದರೆಗೆ ಸಿಲುಕಿರುವ ರೈತರ ನೆರವಿಗೆ ತಕ್ಷಣ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಬೇಕೆಂದು ಪ್ರಮುಖ ಕೃಷಿ-ಆರ್ಥಿಕ ತಜ್ಞ ಹಾಗೂ ಪ್ರಾಧ್ಯಪಕ ಎಂ.ಎಸ್.ಸ್ವಾಮಿನಾಥನ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.ಅಷ್ಟೇ ಅಲ್ಲದೇ ಆ ಸಮಯದಲ್ಲಿ ಕೇಂದ್ರ ಸರ್ಕಾರಕ್ಕೆ ಕೆಲವೊಂದು ಸಲಹೆಗಳನ್ನು ನೀಡಿದ್ದರು.
ವಿಡಿಯೋ ನೋಡಿ:ಅಕ್ರಮವಾಗಿ ರೈತರ ಕೃಷಿ ಭೂಮಿ ವಶಪಡಿಸಿಕೊಳ್ಳುತ್ತಿರುವ ನೈಸ್ ಕಂಪನಿವಿರುದ್ಧ ಗುಡುಗಿದ ರೈತರು Janashakthi Media