ಹೈದರಾಬಾದ್: ಅದಾನಿ ಗ್ರೂಪ್ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ನಡುವಿನ ಸಂಬಂಧಗಳ ಬಗ್ಗೆ ಕಾಂಗ್ರೆಸ್ ಪಕ್ಷವು ವ್ಯಾಪಕ ಟೀಕೆ ಮಾಡುತ್ತಿರುವ ನಡುವೆಯೆ, ಅದಾನಿ ಗ್ರೂಪ್ ಕಾಂಗ್ರೆಸ್ ಆಡಳಿತದ ತೆಲಂಗಾಣದತ್ತ ತನ್ನ ದೃಷ್ಟಿಯನ್ನು ಮತ್ತಷ್ಟು ವಿಸ್ತರಿಸಿದೆ. ಗ್ರೂಪ್‌ನ ತಂಡವು ಜನವರಿ 3 ರಂದು ರಾಜ್ಯದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿ ಹೂಡಿಕೆಯ ಸಂಭಾವ್ಯ ಕ್ಷೇತ್ರಗಳ ಕುರಿತು ಚರ್ಚಿಸಿದೆ. ಅದಾನಿ ಪೋರ್ಟ್ಸ್ & ಎಸ್‌ಇಝೆಡ್ ಲಿಮಿಟೆಡ್‌ನ ಸಿಇಒ ಹಾಗೂ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಹಿರಿಯ ಮಗನೂ ಆಗಿರುವ ಕರಣ್ ಅದಾನಿ ಈ ತಂಡದ ನೇತೃತ್ವ ವಹಿಸಿದ್ದರು ಎಂದು ವರದಿಯಾಗಿದೆ.
ಕರಣ್ ಅದಾನಿ ನೇತೃತ್ವದ ತಂಡವು ರಾಜ್ಯದಲ್ಲಿ ಕ್ಷಿಪಣಿಗಳು ಮತ್ತು ಕೌಂಟರ್ ಡ್ರೋನ್ ಸಿಸ್ಟಮ್‌ಗಳ ಉತ್ಪಾದನೆ ಜೊತೆಗೆ ಪಂಪ್ಡ್ ಸ್ಟೋರೇಜ್ ಪವರ್ ಸೌಲಭ್ಯ, ಪವನ ಶಕ್ತಿ ಯೋಜನೆಯ ಅಭಿವೃದ್ಧಿಯನ್ನು ಪ್ರಸ್ತಾಪಿಸಿದೆ ಎಂದು ವರದಿಯಾಗಿದೆ. ಅಷ್ಟೆ ಅಲ್ಲದೆ, ತೆಲಂಗಾಣದಲ್ಲಿ ಏರೋಸ್ಪೇಸ್ ಪಾರ್ಕ್ ಜೊತೆಗೆ ಡೇಟಾ ಸೆಂಟರ್ ಯೋಜನೆಯನ್ನು ಸ್ಥಾಪಿಸಲು ಆಸಕ್ತಿಯನ್ನು ತೋರಿಸಿದ್ದು, ಜೊತೆಗೆ ಅವರು ಈಗಾಗಲೇ ಪ್ರಾರಂಭಿಸಿದ ಹಳೆಯ ಯೋಜನೆಗಳನ್ನು ಮುಂದುವರೆಸಿದೆ.
ಇದನ್ನೂ ಓದಿ: ಪ್ರತಿಭಟನೆ ಹತ್ತಿಕ್ಕುತ್ತಿರುವ ರಾಜ್ಯ ಸರ್ಕಾರ – ಹೋರಾಟಗಾರರ ಮೇಲಿನ ಕೇಸ್ ಹಿಂಪಡೆಯಲು ಆಗ್ರಹ
ಹೊಸ ಉಪಕ್ರಮಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ಅವರು ಸರ್ಕಾರದಿಂದ ಸಹಾಯವನ್ನು ಕೋರಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ರೇವಂತ್, ತೆಲಂಗಾಣದಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಹೊಸದಾಗಿ ಸ್ಥಾಪಿಸಲಾದ ಕೈಗಾರಿಕೆಗಳಿಗೆ ಸಾಕಷ್ಟು ಸೌಲಭ್ಯಗಳು ಮತ್ತು ಸಬ್ಸಿಡಿಗಳನ್ನು ನೀಡಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಕೈಗಾರಿಕಾ ಸಚಿವ ಡಿ ಶ್ರೀಧರ್ ಬಾಬು ಮತ್ತು ಅದಾನಿ ರಕ್ಷಣಾ ಮತ್ತು ಏರೋಸ್ಪೇಸ್ ಸಿಇಒ ಆಶಿಶ್ ರಾಜವಂಶಿ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. ಇದು ಕೈಗಾರಿಕಾ ಕ್ಲಸ್ಟರ್‌ಗಳ ಸಾಧ್ಯತೆ ಮತ್ತು ರಾಜ್ಯ ದತ್ತಾಂಶ ಕೇಂದ್ರಗಳಲ್ಲಿ 300 ಮೆಗಾವ್ಯಾಟ್ ಸಾಮರ್ಥ್ಯದ ಹೆಚ್ಚಳದ ಬಗ್ಗೆ ಚರ್ಚಿಸಿದೆ ಎಂದು ವರದಿಗಳು ಉಲ್ಲೇಖಿಸಿದೆ.
ಇದನ್ನೂ ಓದಿ: ತುಳುನಾಡಿನ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಅಮೃತ ಸೋಮೇಶ್ವರ(88) ಇನ್ನಿಲ್ಲ
ಅದಾನಿ ಗ್ರೂಪ್ ಪ್ರಸ್ತುತ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಅದಾನಿ ಏರೋಸ್ಪೇಸ್ ಪಾರ್ಕ್‌ನಲ್ಲಿ ಇಸ್ರೇಲಿ ಮಿಲಿಟರಿ ತಯಾರಕ ಎಲ್ಬಿಟ್ ಸಿಸ್ಟಮ್ಸ್ ಸಹಯೋಗದೊಂದಿಗೆ ಮಾನವರಹಿತ ವೈಮಾನಿಕ ವಾಹನ ತಯಾರಿಕಾ ಘಟಕವನ್ನು ನಿರ್ವಹಿಸುತ್ತಿದೆ.
ಕೇಂದ್ರವು ಅದಾನಿ ಗ್ರೂಪ್‌ಗೆ ವಿಶೇಷ ಕೊಡುಗೆ ನೀಡಿದೆ ಎಂದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ಬಿಜೆಪಿ ಸರ್ಕಾರವನ್ನು ಪ್ರಶ್ನಿಸುತ್ತಿರುವ ವೇಳೆಯಲ್ಲೆ, ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಈ ಸಭೆ ನಡೆದಿದ್ದು ವಿಶೇಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅದಾನಿಯನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ಅದಾನಿ ಚಟುವಟಿಕೆಗಳ ಮೇಲೆ ಸರಿಯಾದ ನಿಗಾ ವಹಿಸದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ವಿಡಿಯೊ ನೋಡಿ: ಹಿಟ್ & ರನ್ ಪ್ರಕರಣಗಳ ಹೊಸ ಕಾನೂನಿಗೇಕೆ ಇಷ್ಟು ವಿರೋಧ? ಚಾಲಕರಿಗೆ ಇದು ತೂಗುಕತ್ತಿಯೇ? Janashakthi Media