ಅದಾನಿ ಪ್ರಕರಣದಲ್ಲಿ, ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸುವ ಸುಪ್ರೀಂ ಕೋರ್ಟ್ ತೀರ್ಪು ನಿರಾಶಾದಾಯಕ ಮತ್ತು ಹಲವಾರು ಕಾರಣಗಳಿಗಾಗಿ ದುರದೃಷ್ಟಕರ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಟಿಪ್ಪಣಿ ಮಾಡಿದೆ. ಈ ತೀರ್ಪಿನಿಂದ ಸುಪ್ರೀಂ ಕೋರ್ಟ್ ತನ್ನ ವಿಶ್ವಾಸಾರ್ಹತೆಯನ್ನೇನೂ ಹೆಚ್ಚಿಸಿಕೊಂಡಿಲ್ಲ ಎಂದು ಅದು ಹೇಳಿದೆ. ಅದಾನಿ
ಸೆಬಿಯಂತಹ ಶಾಸನಬದ್ಧ ಸಂಸ್ಥೆಯು ಅದಾನಿ ಸಮೂಹದ ವಿರುದ್ಧದ ಆರೋಪಗಳ ಬಗ್ಗೆ ತ್ವರಿತವಾಗಿ ತನಿಖೆ ಮಾಡುವ ಆದೇಶವನ್ನು ಪಾಲಿಸುತ್ತಿಲ್ಲ. 2014ರಲ್ಲಿ ಡಿಆರ್‌ಐ (ಡೈರೆಕ್ಟರೆಟ್ ಆಫ್ ರೆವಿನ್ನೂ ಇಂಟೆಲಿಜೆನ್ಸ್) ಅದಾನಿ ವಿರುದ್ಧ ಒಂದು ನೇರ ಆರೋಪವನ್ನು ಸೆಬಿಗೆ ಉಲ್ಲೇಖಿಸಿತ್ತು. 2021 ರಲ್ಲಿ, ಅದಾನಿ ವಿರುದ್ಧದ ಆರೋಪಗಳನ್ನು ಸೆಬಿ ತನಿಖೆ ನಡೆಸುತ್ತಿದೆ ಎಂದು ಸಂಸತ್ತಿಗೆ ತಿಳಿಸಲಾಗಿತ್ತು. ಆದರೆ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸೆಬಿ ಅಂತಹ ತನಿಖೆ ನಡೆಸಿರುವುದನ್ನು ನಿರಾಕರಿಸಿತು. ದೂರುಗಳ ಬಗ್ಗೆ ಸೆಬಿ ಏಕೆ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸದೆ, ಇಂತಹ ಒಂದು ನಿರಾಕರಣೆಯನ್ನು ಸುಪ್ರಿಂ ಕೋರ್ಟ್ ಮರುಮಾತಿಲ್ಲದೆ ಸ್ವೀಕರಿಸಿರುವ ಬಗ್ಗೆ ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಶ್ಚರ್ಯ ವ್ಯಕ್ತಪಡಿಸಿದೆ.
ಇದನ್ನೂ ಓದಿ : ಅದಾನಿ ಹಿಂಡೆನ್‌ಬರ್ಗ್ ಪ್ರಕರಣದ ತನಿಖೆ ಎಸ್‌ಐಟಿಗೆ ವರ್ಗಾಯಿಸಲ್ಲ ಎಂದ ಸುಪ್ರೀಂಕೋರ್ಟ್!
ಎರಡನೆಯದಾಗಿ, ಸೆಬಿ ತನ್ನದೇ ನಿಯಮಗಳನ್ನು ಹೆಚ್ಚು ಅಪಾರದರ್ಶಕವಾಗಿಸಲು, ಮತ್ತು ಅಂತಿಮ ಫಲಾನುಭವಿ ಯಾರು ಎಂಬುದನ್ನು ಮರೆಮಾಚಲು ಬದಲಾಯಿಸಿತ್ತು. “ಸೆಬಿ ತನಿಖೆಗಳನ್ನು ಕೈಗೊಂಡಿರುವುದು ಅದು ‘ಕಾನೂನಿನ ಭಾವ’ವನ್ನು ಅನುಸರಿಸುತ್ತಿದೆ ಎಂಬುದನ್ನು ಆಧರಿಸಿ, ಇದು ಶಾಸನದ ಕಡೆಯಿಂದ ಸೆಬಿಯು ಮಾಡಿರುವ ಮುಂದೂಡಿದ ಪರಿಣಾಮಗಳ ಸಂಭಾವ್ಯ ತಿದ್ದುಪಡಿಗಳಿಗೆ ತದ್ವಿರುದ್ಧವಾಗಿದೆ” ಎಂದು ಸ್ವತಃ ಸುಪ್ರೀಂ ಕೋರ್ಟ್ ರಚಿಸಿರುವ ಪರಿಣಿತರ ಸಮಿತಿಯೇ ಹೇಳಿದೆ. ಆದಾಗ್ಯೂ, “ಅಂತಿಮ ಫಲಾನುಭವಿ”ಯೊಂದಿಗೆ ವಿದೇಶಿ ಹೂಡಿಕೆದಾರರ ಕೊಂಡಿಗಳ ಗುರುತುಗಳನ್ನು ಮರೆಮಾಚುವ ಗೋಡೆಯಂತೆ ಕಾರ್ಯನಿರ್ವಹಿಸುವಂತಹ ಈ ತಿದ್ದುಪಡಿಗಳಿಗೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ ಎಂದು ಪೊಲಿಟ್‍ಬ್ಯುರೊ ಹೇಳಿದೆ.
ಮೂರನೆಯದಾಗಿ, ಈ ತೀರ್ಪು ಹಿಂಡೆನ್‌ಬರ್ಗ್ ರಿಸರ್ಚ್‌ನ ಆರೋಪಗಳು “ನಿಯಮಗಳನ್ನು ನಿರ್ಲಕ್ಷಿಸಿವೆ”ಯೇ ಎಂದು ತನಿಖೆ ಮಾಡಲು ಮತ್ತು ಅದಕ್ಕೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಮುಕ್ತ ಪರವಾನಗಿಯನ್ನು ನೀಡಿರುವುದು, ಬೇರೆ ಮಾತುಗಳಲ್ಲಿ ಹೇಳುವುದಾದರೆ, ಸಂದೇಶ ಒದಗಿಸಿದವರನ್ನೇ ಹೊಡೆದುರುಳಿಸಲು ಅನುಮತಿ ನೀಡಿರುವುದು ಅತ್ಯಂತ ದುರದೃಷ್ಟಕರವಾಗಿದೆ, ಇದು ಹಿಂಡೆನ್‌ಬರ್ಗ್ ವರದಿಯನ್ನು ಪ್ರಕಟಿಸಿರುವ ಎಲ್ಲಾ ಮಾಧ್ಯಮಗಳಿಗೆ ಗಂಡಾಂತರಕಾರಿಯಾಗುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಈ ತೀರ್ಪಿನಿಂದ ಸುಪ್ರೀಂ ಕೋರ್ಟ್ ತನ್ನ ವಿಶ್ವಾಸಾರ್ಹತೆಯನ್ನೇನೂ ಹೆಚ್ಚಿಸಿಕೊಂಡಿಲ್ಲ ಎಂದಿದೆ. ಅದಾನಿ
ಈ ವಿಡಿಯೋ ನೋಡಿ : ಅದಾನಿ ಹಗರಣದ ತನಿಖೆಗೆ ಪ್ರೊ,ಬಿ.ಕೆ ಚಂದ್ರಶೇಖರ್ ಒತ್ತಾಯ