ತೆಲಂಗಾಣ ಪತ್ರಿಕೆಗಳಲ್ಲಿ ಕರ್ನಾಟಕ ಸರ್ಕಾರದ ಜಾಹೀರಾತು | ನಿಲ್ಲಿಸುವಂತೆ ನಿರ್ದೇಶಿಸಿದ ಚುನಾವಣಾ ಆಯೋಗ

ಹೈದರಾಬಾದ್: ತೆಲಂಗಾಣದ ಪತ್ರಿಕೆಗಳಲ್ಲಿ ತನ್ನ ಕಲ್ಯಾಣ ಯೋಜನೆಗಳು ಮತ್ತು ಸಾಧನೆಗಳ ಜಾಹೀರಾತುಗಳನ್ನು ಪ್ರಕಟಿಸುವುದನ್ನು ತಕ್ಷಣವೇ ನಿಲ್ಲಿಸುವಂತೆ ಚುನಾವಣಾ ಆಯೋಗವು ಸೋಮವಾರ ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಹೇಳಿದೆ. ಕರ್ನಾಟಕ ಸರ್ಕಾರದ ಈ ಜಾಹಿರಾತು ಚುಣಾವಣಾ ನೀತಿ ಸಂಹಿತೆಯ ಒಟ್ಟಾರೆ ಉಲ್ಲಂಘನೆ ಎಂದು ಅದು ಹೇಳಿದೆ. ನವೆಂಬರ್ 30 ರಂದು ತೆಲಂಗಾಣ ವಿಧಾನಸಭೆಗೆ ಮತದಾನ ನಡೆಯಲಿದೆ.

ನವೆಂಬರ್ 24 ರಿಂದ 27 ರವರೆಗೆ ಕೆಲವು ಪತ್ರಿಕೆಗಳ ಹೈದರಾಬಾದ್ ಆವೃತ್ತಿಗಳಲ್ಲಿ ಕರ್ನಾಟಕದ ಜಾಹೀರಾತುಗಳು ಕಾಣಿಸಿಕೊಂಡಿವೆ ಎಂದು ಆರೋಪಿಸಲಾಗಿತ್ತು. ಇದರ ನಂತರ ಬಿಜೆಪಿ ಮತ್ತು ಬಿಆರ್‌ಎಸ್ ಪಕ್ಷಗಳು ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದು, ಈ ಜಾಹೀರಾತುಗಳು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಅವು ಹೇಳಿವೆ.

ಇದನ್ನೂ ಓದಿ: ಸಕಲೇಶಪುರ| ದಲಿತ ಕುಟುಂಬ ಬೆಳೆದಿದ್ದ ಕಾಫಿ, ಬಾಳೆ ಗಿಡಗಳನ್ನು ನಾಶ ಮಾಡಿ ಜಾತಿ ನಿಂದನೆ; ಆರೋಪ

ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಬೇರೆ ರಾಜ್ಯ ಸರ್ಕಾರಗಳು ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಪತ್ರಿಕೆಗಳಿಗೆ ಜಾಹೀರಾತುಗಳನ್ನು ನೀಡುವ ಮೊದಲು ಅದರ ಅನುಮೋದನೆಗಾಗಿ ಚುನಾವಣಾ ಆಯೋಗಕ್ಕೆ ಜಾಹೀರಾತುಗಳನ್ನು ರವಾನಿಸಬೇಕು ಎಂದು ಅಕ್ಟೋಬರ್‌ನಲ್ಲಿ ಆದೇಶಿಸಿದೆ ಎಂದು ಆಯೋಗವು ಹೇಳಿದೆ.

“ಆಯೋಗವು ತನ್ನದೇ ಆದ ದಾಖಲೆಗಳನ್ನು ಪರಿಶೀಲಿಸಿದೆ,ಆದರೆ ಆಯೋಗವು ಅಂತಹ ಯಾವುದೆ ಅನುಮೋದನೆಯನ್ನು ನೀಡಿಲ್ಲ … ಅಥವಾ ಕರ್ನಾಟಕ ರಾಜ್ಯದಿಂದ ಅಂತಹ ಯಾವುದೇ ಅರ್ಜಿಯು ಬಾಕಿ ಉಳಿದಿಲ್ಲ” ಎಂದು ಪತ್ರದಲ್ಲಿ ತಿಳಿಸಲಾಗಿದೆ. ಕರ್ನಾಟಕ ಸರ್ಕಾರದ ಜಾಹೀರಾತುಗಳು ಆಯೋಗದ ನಿರ್ದೇಶನಗಳ “ಸಂಪೂರ್ಣ ಉಲ್ಲಂಘನೆ”ಯಾಗಿದೆ ಎಂದು ಹೇಳಿರುವ ಚುನಾವಣಾ ಆಯೋಗ, “ಈ ಉಲ್ಲಂಘನೆಗಾಗಿ ಗಂಭೀರ ಕ್ರಮವನ್ನು ಕೈಗೊಳ್ಳಲಾಗುವುದು” ಎಂದು ಅದು ಹೇಳಿದೆ.

ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಗೆ ಕಾರಣವಾದ “ಸಂದರ್ಭಗಳನ್ನು ವಿವರಿಸಲು” ಮತ್ತು ರಾಜ್ಯದ ಡಿಐಪಿಆರ್ ವಿರುದ್ಧ “ಶಿಸ್ತಿನ ಕ್ರಮವನ್ನು ಏಕೆ ಪ್ರಾರಂಭಿಸಬಾರದು” ಎಂದು ವಿವರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಆಯೋಗವು ನಿರ್ದೇಶಿಸಿದೆ. “ತೆಲಂಗಾಣದಲ್ಲಿ ಕರ್ನಾಟಕ ಸರ್ಕಾರವು ಇಂತಹ ಯಾವುದೇ ಜಾಹೀರಾತುಗಳ ಪ್ರಕಟಣೆಗೆ ಅನುಮೋದನೆ ಪಡೆಯುವವರೆಗೆ ತಕ್ಷಣವೇ ಜಾರಿಗೆ ಬರುವಂತೆ ತಕ್ಷಣವೇ ಈ ಜಾಹಿರಾತುಗಳನ್ನು ನಿಲ್ಲಿಸಲಾಗುವುದು” ಎಂದು ಆಯೋಗ ಹೇಳಿದೆ.

ವಿಡಿಯೊ ನೋಡಿ: ದುಡಿಯುವ ಜನರ ಐಕ್ಯ ಹೋರಾಟ ರೂಪಗೊಂಡಿದ್ದು ಹೇಗೆ? – ಎಚ್.ಆರ್. ನವೀನ್ ಕುಮಾರ್ ಜೊತೆ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *