ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ರೈತರು ಕಳೆದ ಕೆಲ ತಿಂಗಳಿನಿಂದ ಧರಣಿ ನಡೆಸುತ್ತಿದ್ದಾರೆ. ಈ ರೈತರಿಗೆ ಸ್ಯಾಂಡಲ್ ವುಡ್ ನಟಿ ರಮ್ಯಾ ಬೆಂಬಲಿಸಿದ್ದಾರೆ.
ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಕೆಐಡಿಬಿಗೆ ರೈತರು ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ರೈತರು ಧರಣಿ ನಡೆಸುತ್ತಿದ್ದಾರೆ. ಈ ಧರಣಿಗೆ ತಾನು ಬೆಂಬಲ ನೀಡುವುದಾಗಿ ಸಿಎಂ ಸಿದ್ಧರಾಮಯ್ಯಗೆ ಟ್ಯಾಗ್ ಮಾಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಕಮಿಷನರ್ ರತ್ನಾಕರ್ ಸಾಹು ಮೇಲೆ ಕಚೇರಿಯೊಳಗೆ ನುಗ್ಗಿ ಹಲ್ಲೆ ಮಾಡಿದ ಬಿಜೆಪಿ ಕಾರ್ಯಕರ್ತರು
ಇನ್ನೂ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ರೈತರ ಹೋರಾಟಕ್ಕೆ ಸ್ಪಂದಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ರನ್ನು ಮನವಿ ಮಾಡಿದ್ದಾರೆ.
ಅಂದಹಾಗೇ 1780ಕ್ಕೂ ಹೆಚ್ಚು ದಿನಗಳಿಂದ ಚನ್ನರಾಯಪಟ್ಟಣ ಹೋಬಳಿಯ ರೈತರು ಕೆಐಡಿಎಬಿಗೆ ಭೂಮಿ ಕೊಡುವುದಿಲ್ಲ ಎಂಬುದಾಗಿ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಸರ್ಕಾರ ಸ್ಪಂದಿಸದ ಹಿನ್ನಲೆಯಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಧರಣಿಯನ್ನು ರೈತರು ಮುಂದುವರೆಸಿದ್ದಾರೆ. ರೈತರ ಸಮಸ್ಯೆಗೆ ಸ್ಪಂದಿಸಿ ಅವರ ಬಗ್ಗೆ ಕರುಣೆತೋರಿ ಎಂಬುದಾಗಿ ನಟಿ ರಮ್ಯಾ ಟ್ವಿಟ್ಟರ್ ಟ್ಯಾಗ್ ನಲ್ಲಿ ಒತ್ತಾಯಿಸಿದ್ದಾರೆ.
ಇದನ್ನೂ ನೋಡಿ: ಒತ್ತಡ ನಿವಾರಿಸಿ, ಹೃದಯದ ಆರೋಗ್ಯ ಹೆಚ್ಚಿಸಿ – ಡಾ ಭಾನು ಪ್ರಕಾಶ್ | Janashakthi Media
