ಹಾವೇರಿ: ಮುಖ್ಯೋಪಾಧ್ಯಾಯರ ಮೋಸದಿಂದಾಗಿ ಮೊದಲ ಬಾರಿ ಪರೀಕ್ಷೆ ಬರೆಯಲು ವಂಚಿತನಾಗಿದ್ದ ಅಭಿಷೇಕ್ ಜರಮಲ್ಲ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ರಾಣೇಬೆನ್ನೂರ ತಾಲ್ಲೂಕಿನ ಹರನಗಿರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ವಂಚಿತ ವಿದ್ಯಾರ್ಥಿ ಅಭಿಷೇಕ್ ವಿಜಯಕುಮಾರ್ ಜರಮಲ್ಲ ಮುಖ್ಯೋಪಾಧ್ಯಾಯರ ಮೋಸದ ವಂಚನೆಯಿಂದ ಪ್ರವೇಶ ಪತ್ರ ಬಂದಿಲ್ಲವೆಂದು ಆರೋಪಿಸಿ ಪೂರಕ ಪರೀಕ್ಷೆಯಲ್ಲಾದರೂ ಅವಕಾಶಕ್ಕಾಗಿ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಬೆಂಬಲದೊಂದಿಗೆ ಅಣಕು ಪರೀಕ್ಷೆ ಬರೆಯುವ ಮೂಲಕ ತನ್ನ ಪೋಷಕರೊಂದಿಗೆ ಮಾರ್ಚ್ 26- 2024 ರಂದು ಜಿಲ್ಲಾಧಿಕಾರಿ ಕಛೇರಿ ಎದುರು ಧರಣಿ ನಡೆಸಿದರು.
ಪರೀಕ್ಷೆ ವಂಚಿತ ವಿದ್ಯಾರ್ಥಿ ಅಭಿಷೇಕ್ ಜರಮಲ್ಲ ದ್ವೀತಿಯ ಬಾರಿ ಪರೀಕ್ಷೆಯಲ್ಲಿ ಅವಕಾಶ ದೊರಕಿದ್ದು ಗೊಂದಲದ ಮದ್ಯ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಯ ಫಲಿತಾಂಶವು ಬಿಡುಗಡೆಯಾಗಿದೆ 625ಕ್ಕೆ ಯಾವುದೇ ಆಂತರಿಕ ಅಂಕಗಳಿಲ್ಲದೆ 350 ಅಂಕ ತೆಗೆದುಕೊಂಡು ಉತ್ತೀರ್ಣರಾಗಿದ್ದಾನೆ. ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ನೇತೃತ್ವದಲ್ಲಿ ನಡೆಸಿದ ಅಣಕು ಪರೀಕ್ಷೆ ಧರಣಿ ಹೋರಾಟಕ್ಕೆ ಜಯಸಿಕ್ಕಿದೆ ಆದರೆ ವಿದ್ಯಾರ್ಥಿ ಭವಿಷ್ಯ ಹಾಳಮಾಡಲು ಹೊರಟಿದ್ದ ಮುಖ್ಯೋಪಾಧ್ಯಾಯರ ವಂಚಕತನ ಬಯಲಾಗಿದೆ. ಹಾಜರಾತಿ ಕೊರತೆ ನೆಪ ಹೇಳಿ ಪ್ರವೇಶ ಪತ್ರ ಬಾರದಂತೆ ನೋಡಿಕೊಂಡು, ಒಂದೇ ಒಂದು ಆಂತರಿಕ ಅಂಕಗಳನ್ನು ನೀಡಿಲ್ಲ. ಇದು ವಿದ್ಯಾರ್ಥಿ ಶಿಕ್ಷಣ ಭವಿಷ್ಯವನ್ನು ಸಂಪೂರ್ಣ ಹಾಳುಮಾಡಬೇಕೆಂಬ ಷಡ್ಯಂತ್ರ ಸಾಬೀತಾಗಿದೆ ಎಂದು ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನು ಓದಿ : ಸಿರವಾರ : ಹಾಸ್ಟೇಲ್ ಮಕ್ಕಳಿಗೆ ಸಿಗಬೇಕಾದ ಸೌಲಭ್ಯ ಜನರಿಗೆ ಮಾರಾಟ
ದ್ವೀತಿಯ ಬಾರಿ ಪರೀಕ್ಷೆಯಲ್ಲಿ ಬರೆಯಲು ಅವಕಾಶ ಸಿಕ್ಕಿದೆ ಬಾ ಎಂದು ವಿದ್ಯಾರ್ಥಿ ಕರೆಸಿಕೊಂಡು ಎಲ್ಲಾ ದಾಖಲೆಗಳನ್ನು ನೀಡಿ ಪ್ರವೇಶ ಪತ್ರಕ್ಕಾಗಿ ಮಾಹಿತಿ ನೀಡಿದ್ದಾರೆ ಆದರೆ ವಿದ್ಯಾರ್ಥಿಗೆ ಸರಿಯಾಗಿ ಮಾಹಿತಿ ನೀಡದೆ ಖಾಸಗಿ ಅಭ್ಯರ್ಥಿ ಎಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾನೆ. ಈ ರೀತಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ಹದಗೆಡಿಸುವುದು ಸರಿಯಲ್ಲ ಶಿಕ್ಷಣ ಅಧಿಕಾರಿಗಳು ಕೂಡಲೇ ಸಭೆ ಕರೆದು ಶೈಕ್ಷಣಿಕ ವರ್ಷದ ಯಾವುದೇ ಸಮಸ್ಯೆಗಳಿಗೆ ಅವಕಾಶಗಳನ್ನು ನೀಡಬಾರದು ಹಾಗೂ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಸ್ತುತ ಹಾಸ್ಟೆಲ್, ಸ್ಕಾಲರ್ಶಿಪ್, ಉದ್ಯೋಗದ ಸೌಲಭ್ಯಗಳು ಸಿಗುತ್ತಿಲ್ಲ ಹೀಗಿರುವಾಗ ಆಂತರಿಕ ಅಂಕಗಳಿಂದ ಕಡಿಮೆ ಅಂಕಗಳನ್ನು ಗಳಿಸಿದ ವಿದ್ಯಾರ್ಥಿ ಅಭಿಷೇಕ ಜರಲಮಲ್ಲನಿಗೆ ಶಿಕ್ಷಣ ಇಲಾಖೆಯೇ ಹಾಸ್ಟೆಲ್ ಸೌಲಭ್ಯ ಸೇರಿದಂತೆ ಮುಂದಿನ ಉನ್ನತ ಶಿಕ್ಷಣ ಮುಂದುವರೆಸಲು ಸಹಕಾರಿಸಬೇಕೆಂದು ಎಂದು ತಿಳಿಸಿದರು.
ಇದನ್ನು ನೋಡಿ : ಸರ್ಕಾರಿ ಶಾಲೆ | ಹೊಸ ಕೊಠಡಿಯ ಮೇಲ್ಛಾವಣಿ ಕುಸಿತ – ವಿದ್ಯಾರ್ಥಿ ತಲೆಗೆ ಗಂಭೀರ ಏಟುJanashakthi Media