ಕಲಬುರಗಿ: ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ ಬಹಳ ಹೆಚ್ಚಾಗುತ್ತಿದ್ದೂ, ಅನೇಕ ಪ್ರಕರಣಗಳೂ ಸಹ ವರದಿಯಾಗುತ್ತಿದೆ. ಅದೇ ರೀತಿಯ ಒಂದು ಪ್ರಕರಣ ಕಲಬುರಗಿಯಲ್ಲಿ ಜೂನ್ 25 ಬುಧವಾರ ಮಧ್ಯಾಹ್ನ 2 ಗಂಟೆಗೆ ನಡೆದಿದೆ. ಅನ್ಯಕೋಮಿನ ಯುವತಿಯೊಬ್ಬಳು ಆಟೋ ಸಿಗುತ್ತಿಲ್ಲ ಎಂದು ಬೈಕ್ನಲ್ಲಿ ಡ್ರಾಪ್ ಕೇಳಿದ್ದೂ, ಆಕೆಯನ್ನು ಬೈಕ್ನಲ್ಲಿ ಕೂರಿಸಿಕೊಂಡು ಹೋಗುವಾಗ ಗಲಾಟೆ ನಡೆದಿದೆ. ಯುವತಿಗೆ
ಯುವಕನ ಮೇಲೆ ಹಲ್ಲೆ ನಡೆಸಿದ ಗುಂಪು ಸಹಾಯ ಕೇಳಿದ ಯುವತಿಗೆ ಯುವಕ ಡ್ರಾಪ್ ಕೊಡಲು ಹೋಗುವಾಗ ಅನ್ಯಕೋಮಿನ ಗುಂಪೊಂದು ಬೈಕ್ ತಡೆದಿದೆ. ನಂತರ ಯುವಕನ ಮೇಲೆ ಹಲ್ಲೆ ಮಾಡಿದ್ದು, ಗಾಯಗೊಂಡಿರುವ ಯುವಕನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಕನಗರದ ಸಂತ್ರಾಸ್ವಾಡಿ ಬಳಿ ಘಟನೆ ನಡೆದಿದ್ದು, ಬೈಲಪ್ಪ (21) ಹಲ್ಲೆಗೊಳಗಾದ ಯುವಕ ಎಂದು ಗುರುತಿಸಲಾಗಿದೆ. ಈ ಘಟನೆಯು ಯುವಕ ಮನೆಗೆ ತೆರಳುವಾಗ ನಡೆದಿದೆ.
ಇದನ್ನೂ ಓದಿ: ಮಾದಕ ದ್ರವ್ಯ ಸೇವನೆ: ತಮಿಳು ನಟ ಕೃಷ್ಣ ಬಂಧನ
ಒಂದೇ ಜಾಗದಲ್ಲಿ ಕೆಲಸ ಮಾಡುತ್ತಿದ್ದ ಯುವಕ-ಯುವತಿ ಈ ಗಲಾಟೆಯ ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಹಲ್ಲೆಗೊಳಗಾದ ಯುವಕ ಹಾಗೂ ಡ್ರಾಪ್ ಕೇಳಿದ ಯುವತಿ ಇಬ್ಬರು ಕೂಡ ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸಿಂಗ್ ಸ್ಟಾಪ್ ಆಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಆಟೋ ಸಿಗದೇ ಡ್ರಾಫ್ ಕೇಳಿದ್ದು ಈ ಅವಾಂತರಕ್ಕೆ ಕಾರಣವಾಗಿದೆ
ಯುವತಿ ಮುಸ್ಲಿಂ ಆಗಿದ್ದು, ಆ ಹುಡುಗಿಯನ್ನ ಯಾಕೆ ಬೈಕ್ ಮೇಲೆ ಕರೆದುಕೊಂಡು ಹೋಗ್ತಾ ಇದ್ದೀಯಾ ಎಂದು 10 ರಿಂದ 15 ಜನರ ಗುಂಪು ದೊಣ್ಣೆಯಿಂದ ಹಲ್ಲೆ ಮಾಡಿದೆ ಎಂದು ಹಲ್ಲೆಗೊಳಗಾದ ಯುವಕ ಆರೋಪಿಸಿದ್ದಾನೆ.
ಇದಿಷ್ಟೇ ಅಲ್ಲದೇ, ಯುವಕನ ಮೇಲೆ ಹಲ್ಲೆ ಮಾಡಿ ಬೈಕ್, ಬೆಳ್ಳಿ ಚೈನ್, ಬೈಕ್ ಕೀ, 3500 ರೂಪಾಯಿ ಕಸಿದುಕೊಂಡು ಹೋಗಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ನೋಡಿ: ಚನ್ನರಾಯಪಟ್ಟಣ ರೈತರ ಮೇಲೆ ಪೊಲೀಸ್ ದೌರ್ಜನ್ಯ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಪಿಐ(ಎಂ) ಪ್ರತಿಭಟನೆ
