ಮುಂಬೈ| ಬಸ್‌ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ; 7 ಮಂದಿ ಸಾವು

ಮುಂಬೈ: ಬಸ್‌ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಬಸ್‌ನಲ್ಲಿದ್ದ 7 ಮಂದಿ ಸಾವನ್ನಪ್ಪಿ 49 ಜನರು ಗಾಯಗೊಂಡಿರುವ ಘಟನೆ ಮುಂಬೈನ ಕುರ್ಲಾ ಪಶ್ಚಿಮ ರೈಲ್ವೆ ನಿಲ್ದಾಣದ ಅಂಬೇಡ್ಕರ್ ನಗರದಲ್ಲಿ ಸೋಮವಾರ (ಡಿಸೆಂಬರ್ 9) ರಾತ್ರಿ ನಡೆದಿದೆ.

ಬೃಹನ್ಮುಂಬೈ ಎಲೆಕ್ನಿಕ್ ಸ ಅಂಡ್ ಟ್ರಾನ್ಸ್‌ಪೋರ್ಟ್‌ (BEST) ಬಸ್ ಭೀಕರ ರಸ್ತೆ ಅಪಘಾತಕ್ಕೆ ಗುರಿಯಾಗಿದೆ. ಇಲ್ಲಿಯವರೆಗಿನ ಮಾಹಿತಿ ಪುಕಾರ, ಈ ಅಪಘಾತದಲ್ಲಿ ಒಟ್ಟು 49 ಜನರು ಗಾಯಗೊಂಡಿದ್ದು, ಈ ಪೈಕಿ 7 ಮಂದಿ ಸಾವನ್ನಪ್ಪಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಚಾಲಕನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಮೂಲಗಳ ಪ್ರಕಾರ, ಈ ಘಟನೆ ಸಂಭವಿಸಿದಾಗ ಬಸ್‌ನಲ್ಲಿ ಸುಮಾರು 60 ಪ್ರಯಾಣಿಕರಿದ್ದರು. ಈ ಘಟನೆಯಲ್ಲಿ ಮೂವರು ಪೊಲೀಸರು ಮತ್ತು ಒಬ್ಬ ಎಂಎಸ್‌ಎಫ್ (ಮಹಾರಾಷ್ಟ್ರ ಭದ್ರತಾ ಪಡೆ) ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಶಾಂತ್ ಚವಾಣ್ ಕೂಡ ಗಾಯಗೊಂಡಿದ್ದು, 20-25 ವಾಹನಗಳಿಗೆ ಹಾನಿಯಾಗಿದೆ.

ಇದನ್ನೂ ಓದಿ: “ಪೂಜಾಸ್ಥಳಗಳ ಕಾಯ್ದೆ ಕೋಮು ಸೌಹಾರ್ದವನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕ”

ಮಾಹಿತಿ ಪಕಾರ, ಆರೋಪಿ ಚಾಲಕ ಸಂಜಯ್ ಮೋರೆ (54 ವರ್ಷ) ಕಳೆದ ಡಿಸೆಂಬರ್ 1 ರಂದು ಮಾತ್ರ ನೇಮಕಗೊಂಡಿದ್ದರು. ಚಾಲಕನನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿತ್ತು. ಆರೋಪಿ ಚಾಲಕನಿಗೆ ಈ ಹಿಂದೆ ಬಸ್ ಓಡಿಸಿದ ಅನುಭವ ಇರಲಿಲ್ಲ ಎಂದು ಹೇಳಲಾಗಿದೆ.

ಅಪಘಾತ ಸಂಭವಿಸಿದ್ದು ಹೇಗೆ?

ಸೋಮವಾರ ರಾತ್ರಿ 21:45 ರ ಸುಮಾರಿಗೆ ಬಸ್‌ ಕುರ್ಲಾ ರೈಲ್ವೆ ನಿಲ್ದಾಣದಿಂದ (ಪಶ್ಚಿಮ) ಸಕಿನಾಕಾಗೆ ಹೋಗುತ್ತಿತ್ತು. ಈ ವೇಳೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ವೇಗ ಹೆಚ್ಚಿದ್ದ ಕಾರಣ ಈ ದಾರುಣ ಘಟನೆ ನಡೆದಿದೆ. ಘಟನೆಯ ಬಳಿಕ ಸ್ಥಳೀಯರು ಸೇರಿ ಗಾಯಾಳುಗಳನ್ನು ಸಮೀಪದ ಬಾಬಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡಗಳು ಕೂಡ ಸ್ಥಳಕ್ಕೆ ಆಗಮಿಸಿದವು.

ಪೊಲೀಸರ ಪಕಾರ, ಗಾಯಾಳುಗಳು ಬಾಬಾ ಆಸ್ಪತ್ರೆ, ಕೊಹಿನೂರ್ ಆಸ್ಪತ್ರೆ, ಸೆವೆನ್ ಹಿಲ್ಸ್ ಆಸ್ಪತ್ರೆ, ಸಿಟಿ ಆಸ್ಪತ್ರೆ ಮತ್ತು ಹಬೀಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಂತರ ಶಾಸಕ ಮಹೇಶ ಕುಡಾಯ್ಕ‌ ಕೂಡ ಸ್ಥಳಕ್ಕೆ ಆಗಮಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

ಇದನ್ನೂ ನೋಡಿ: Karnataka legislative assembly Day 01 Live. 16ನೇ ವಿಧಾನಸಭೆಯ ಚಳಿಗಾಲದ ಅಧಿವೇಶನದ ನೇರ ಪ್ರಸಾರ

Donate Janashakthi Media

Leave a Reply

Your email address will not be published. Required fields are marked *