ರಾಮನಗರ: ಹೋಂ ಸ್ಟೇ ನಲ್ಲಿ ತಂಗಿದ್ದ ಯುವತಿಯರ ಫೋಟೋಗಳನ್ನು ತೆಗೆದಿದ್ದನ್ನು ಪ್ರಶ್ನಿಸಿದಕ್ಕೆ ಅನೈತಿಕ ಪೊಲೀಸ್ ಗಿರಿ ನಡೆಸಿ ವಿದ್ಯಾರ್ಥಿಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆರಾಮನಗರ ತಾಲೂಕಿನ ಚಿಕ್ಕೇನಹಳ್ಳಿಯಲ್ಲಿ ನಡೆದಿದೆ.
ಯುವತಿಯರ ಫೋಟೋ ತೆಗೆದಿದ್ದನ್ನ ಪ್ರಶ್ನಿಸಿದಕ್ಕೆ ವಿದ್ಯಾರ್ಥಿಯ ಭೀಕರ ಕೊಲೆ ಚಿಕ್ಕನಹಳ್ಳಿ ಹೋಂ ಸ್ಟೇ ಒಂದರಲ್ಲಿ ನಡೆದಿದೆ. ರಾಮನಗರ ತಾಲೂಕಿನ ಚಿಕ್ಕನಹಳ್ಳಿ ಫಾರಂ ಹೌಸ್ ನಲ್ಲಿ ಈ ಒಂದು ಘಟನೆ ನಡೆದಿದೆ. ಬೆಂಗಳೂರು ಮೂಲದ ಪುನೀತ್ (21) ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯು ಕಳೆದ ಅಕ್ಟೋಬರ್ 26ರಂದು ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ. ಬಿಕಾಂ ಪದವಿ ಮುಗಿದ ಹಿನ್ನೆಲೆಯಲ್ಲಿ ಯುವತಿಯರು ಹಾಗೂ ಹಲವರು ವಿದ್ಯಾರ್ಥಿಗಳು ಈ ಒಂದು ಹೋಂ ಸ್ಟೇಗೆ ಬೀಳ್ಕೊಡುಗೆ ಸಮಾರಂಭ ಮುಗಿದ ಬಳಿಕ ವಿದ್ಯಾರ್ಥಿಗಳೆಲ್ಲರೂ ಸೇರಿ ಪಾರ್ಟಿ ಮಾಡಲು ಆಗಮಿಸಿದ್ದರು.
ಇದನ್ನೂ ಓದಿ: ಕನ್ನಡ ವಿಶ್ವ ವಿದ್ಯಾಲಯಕ್ಕೆ ಅಗತ್ಯ ನೆರವು ಒದಗಿಸಲು ಒತ್ತಾಯ
ಈ ವೇಳೆ ಅಲ್ಲಿದ್ದ ಚಂದು ಮತ್ತು ನಾಗೇಶ್ ಹೋಂ ಸ್ಟೇ ನಲ್ಲಿ ತಂಗಿದ್ದ ಯುವತಿಯರ ಫೋಟೋ ತೆಗೆದಿದ್ದಾರೆ ಇದಕ್ಕೆ ವಿದ್ಯಾರ್ಥಿಯಾದ ಪುನೀತ್ ಯುವತಿಯರೇ ಫೋಟೋ ಯಾಕೆ ತೆಗೆದಿದ್ದೀರಾ ಎಂದು ಪ್ರಶ್ನಿಸಿದ್ದಾನೆ.
ಈ ವೇಳೆ ಚಂದು ಮತ್ತು ನಾಗೇಶ್ ದೊಣ್ಣೆಯನ್ನು ತೆಗೆದುಕೊಂಡು ಬಂದು ವಿದ್ಯಾರ್ಥಿ ಪುನೀತ್ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಪುನೀತ್ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹಲ್ಲೆ ಮಾಡಿದ ತಕ್ಷಣ ಪುನೀತ್ ಪೂರ್ತಿ ಕೋಮಾ ಸ್ಥಿತಿಗೆ ತಲುಪಿದ್ದ ಬೆಂಗಳೂರಿನ ಕೆಂಗೇರಿ ಆಸ್ಪತ್ರೆಗೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಪುನೀತ್ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ನೋಡಿ: ಕರ್ನಾಟಕ ರಾಜ್ಯೋತ್ಸವ| ಕನ್ನಡ ಭಾಷೆಗೆ ಒದಗಿರುವ ಸಮಸ್ಯೆ ಸವಾಲುಗಳು- ಚಿಂತಕ ಪಾರ್ವತೀಶ ಬಿಳಿದಾಳೆ ಮಾತುಗಳು