ಸಮಾನತೆಯೆಡೆಗೆ ‘ಉರುಳುವ ಕಲ್ಲಿನ ನೆನಪಿನ ಸುರುಳಿ’

                                                                                                                                                                                                                                                             – ಕೆ.ಎಸ್.ವಿಮಲ

ವೀಣಾ ಮಜುಂದಾರ್ ಆತ್ಮಕತೆ ಈಗ ಕನ್ನಡದಲ್ಲಿ

 

ಮಹಿಳಾ ಅಭಿವೃದ್ದಿ ಅಧ್ಯಯನ ಸಂಸ್ಥೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು ಅದರ ಸಂಸ್ಥಾಪಕ ನಿರ್ದೇಶಕಿಯೂ ಆಗಿದ್ದರು. ಹಾಗೆಯೇ ದೆಹಲಿಯ ಸೆಂಟರ್ ಫಾರ್ ವಿಮೆನ್ ಡೆವಲೆಪ್ಮೆಂಟ್ ಸ್ಟಡೀಸ್ ನ ನ್ಯಾಷನಲ್ ರಿಸರ್ಚ್ ಪ್ರೊಫೆಸರ್ ಆಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. ಮಹಿಳಾ ಅಧ್ಯಯನದ ಕುರಿತು ಅವರು ಹೊಂದಿದ್ದ ಅಪಾರ ಆಸಕ್ತಿ ಮತ್ತು ಬದ್ಧತೆ ಅವರ ಈ ಎಲ್ಲ ಕೆಲಸಗಳಿಗೆ ಇಂಬು ನೀಡಿತ್ತು. ಅವರ ಈ ಆತ್ಮಕಥೆಯಲ್ಲಿ ಇದನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು. ಬಹುಶಃ ಇದರಲ್ಲಿ ರೋಚಕ ಸಂಗತಿಗಳು ಹೆಚ್ಚು ಸಿಗದಿರಬಹುದು. ಆದರೆ ಚಳವಳಿಯ ಭಾಗವಾಗಿ ಅರ್ಥ ಮಾಡಿಕೊಳ್ಳಬೇಕಾದವರಿಗೆ ಅತ್ಯಂತ ಉಪಯುಕ್ತವಾದ ಮಾಹಿತಿಗಳನ್ನು ಕೊಡುವ ಒಂದು ಕೃತಿ ಇದು. ಮಹಿಳಾ ಅಧ್ಯಯನದ ಆಸಕ್ತಿ ಇರುವವರು ಇದನ್ನು ಓದಲೇಬೇಕು.

ಯಾವುದೇ ಅಧ್ಯಯನಕ್ಕೆ ಬೇಕಾದ ಸೂಕ್ಷ್ಮ ಒಳನೋಟಗಳನ್ನು ಹೊಂದಿದ್ದ ವೀಣಾದಿ (ಬಹಳ ಪ್ರೀತಿಯಿಂದ ಮಹಿಳಾ ಸಂಘಟನೆಗಳ ಒಳಗೆ ಆಕೆಯನ್ನು ಕರೆಯುತ್ತಿದ್ದ ರೀತಿ) ಭಾರತದ ಮಹಿಳಾ ಚಳವಳಿಗೆ ಕೊಟ್ಟ ಕೊಡುಗೆ ಅಪಾರ. ಕ್ರಿಯಾಶೀಲತೆ ಮತ್ತು ಅಧ್ಯಯನಶೀಲತೆ ಎರಡನ್ನೂ ಒಳಗಿಳಿಸಿಕೊಂಡು ಅದನ್ನು ಮಹಿಳಾ ಅಧ್ಯಯನಕ್ಕೆ ಅನ್ವಯಿಸಿ ಒಂದು ಜೀವ ಚೈತನ್ಯದ ಸೆಲೆಯಂತೆ ಕೆಲಸ ಮಾಡಿದವರು. ಮಹಿಳಾ ಸಮಾನತೆಯ ಕುರಿತ ಬರಹಗಳು, ಹೇಳಿಕೆಗಳು, ಕವನಗಳು ಈಗ ಹೇರಳವಾಗಿ ಸಿಗುತ್ತಿವೆ. ಸಾಕೆನಿಸುವಷ್ಟು ಬಾರಿ ಯಾವುದೇ ಸಮಾಜದ ನಿಜ ಅಭಿವೃದ್ದಿಯನ್ನು ಅಲ್ಲಿನ ಮಹಿಳೆಯರ ಸ್ಥಿತಿಗತಿಯ ಮೇಲೆ ನಿರ್ಧಾರಿತವಾಗುತ್ತದೆ ಎಂಬಿತ್ಯಾದಿ ಮಾತುಗಳನ್ನೂ ಕೇಳಿದ್ದೇವೆ, ಕೇಳುತ್ತಲೇ ಇದ್ದೇವೆ.

ಭಾರತದಲ್ಲಿ ಆ ಸ್ಥಿತಿಗತಿಯ ಕೂಲಂಕುಷ ಅಧ್ಯಯನ, ಕಾರಣ ಮತ್ತು ಪರಿಹಾರಗಳತ್ತ ಒಂದು ಕಿರುನೋಟವನ್ನು ಸ್ಪಷ್ಟತೆಯೊಂದಿಗೆ ಕಟ್ಟಿ ಕೊಟ್ಟಿದ್ದು `ಸಮಾನತೆಯೆಡೆಗೆ…’ ಎಂಬ ಅಧ್ಯಯನ ವರದಿ. 1971ರಲ್ಲಿ ಮಹಿಳೆಯರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲೆಂದೇ ರಚನೆಯಾದ ಮೊದಲ ಸಮಿತಿ 1974 ರಲ್ಲಿ ಕೊಟ್ಟ ವರದಿಯದು.

ಆ ಸಮಿತಿಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದವರು ಡಾ.ವೀಣಾ ಮಜುಂದಾರ್ ರವರು. ಕೃಷಿ ಪ್ರಾಧಾನ್ಯ ದೇಶವೊಂದು ಕೈಗಾರಿಕೀಕರಣಕ್ಕೆ ತೆರೆದುಕೊಂಡ ಹಂತದಲ್ಲಿ ಪ್ರಾರಂಭವಾದ ಬದಲಾವಣೆಗಳು, ಬಡತನದ ಬೇಗೆ ಮಹಿಳೆಯರನ್ನು ಬಾಧಿಸುವ ಪರಿ, ಪಿತೃಪ್ರಾಧಾನ್ಯ ಮೌಲ್ಯಗಳು ಹೇಗೆ ಸಮಾಜವನ್ನು ಆಕ್ರಮಿಸಿಕೊಳ್ಳುವುದರ ಒಂದೊಂದು ಮಾದರಿಯ ಭಾಗವಾಗಿ ಕುಸಿಯುತ್ತಿದ್ದ ಲಿಂಗಾನುಪಾತ ಹೀಗೆ ಮಹಿಳೆಯರ ಸ್ಥಿತಿಗತಿಯ ಅಧ್ಯಯನಕ್ಕಿರುವ ಹಲವು ಆಯಾಮಗಳನ್ನು ಈ ವರದಿಯ ಮೂಲಕ ತೆರೆದಿಟ್ಟಿತ್ತು. ಈ ವರದಿಯು ಮಹಿಳಾ ಅಧ್ಯಯನಕ್ಕೆ ಮತ್ತು ಮಹಿಳಾ ಚಳವಳಿಗೆ ಅತ್ಯಂತ ಸೂಕ್ತ ಆಕರಗಳನ್ನು ಒದಗಿಸಿತು ಎಂದರೆ ಉತ್ಪ್ರೇಕ್ಷೆಯಲ್ಲ.

ಯಾವುದೇ ಅಧ್ಯಯನಕ್ಕೆ ಬೇಕಾದ ಸೂಕ್ಷ್ಮ ಒಳನೋಟಗಳನ್ನು ಹೊಂದಿದ್ದ ವೀಣಾದಿ (ಬಹಳ ಪ್ರೀತಿಯಿಂದ ಮಹಿಳಾ ಸಂಘಟನೆಗಳ ಒಳಗೆ ಆಕೆಯನ್ನು ಕರೆಯುತ್ತಿದ್ದ ರೀತಿ) ಭಾರತದ ಮಹಿಳಾ ಚಳವಳಿಗೆ ಕೊಟ್ಟ ಕೊಡುಗೆ ಅಪಾರ. ಕ್ರಿಯಾಶೀಲತೆ ಮತ್ತು ಅಧ್ಯಯನಶೀಲತೆ ಎರಡನ್ನೂ ಒಳಗಿಳಿಸಿಕೊಂಡು ಅದನ್ನು ಮಹಿಳಾ ಅಧ್ಯಯನಕ್ಕೆ ಅನ್ವಯಿಸಿ ಒಂದು ಜೀವ ಚೈತನ್ಯದ ಸೆಲೆಯಂತೆ ಕೆಲಸ ಮಾಡಿದವರು.

ಅವರ ಆತ್ಮಕಥೆ ಇಂಗ್ಲಿಷಿನಲ್ಲಿ ‘ಮೆಮೊರೀಸ್ ಆಫ್ ಏ ರೋಲಿಂಗ್ ಸ್ಟೋನ್’2010 ರಲ್ಲಿ ಪ್ರಕಟವಾಗಿದೆ. ಅದರ ಕನ್ನಡ ಅನುವಾದ ‘ಉರುಳುವ ಕಲ್ಲಿನ ನೆನಪಿನ ಸುರುಳಿ. ಎಂದಿನಂತೆ ಭಾಷಾಂತರವಿದು ಎನಿಸದಂತೆ ಸರಳ ಕನ್ನಡೀಕರಣಗೊಳಿಸಿರುವವರು ವೀಣಾ ಅವರಂತೆ ಕ್ರಿಯಾಶೀಲತೆ ಮತ್ತು ಅಧ್ಯಯನಶೀಲತೆ ಎರಡನ್ನೂ ಒಳಗಿಳಿಸಿಕೊಂಡ ಡಾ.ಎನ್.ಗಾಯತ್ರಿ. ಈ ಪುಸ್ತಕವನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದ್ದು ಸದ್ಯದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಈ ಆತ್ಮಕಥೆ ವೀಣಾದೀ ಯವರ ಬದುಕಿನ ಹಲವು ಸಂಗತಿಗಳನ್ನು ಚಳವಳಿಯ ಜೊತೆ ಜೊತೆಯೇ ಹೆಣೆದುಕೊಳ್ಳುತ್ತ ಒಬ್ಬ ಮಹಿಳೆ ಉದ್ಯೋಗಸ್ಥಳಾಗಿ, ಕುಟುಂಬದಲ್ಲಿ ಹಲವು ಪಾತ್ರಗಳ ಏಕಾಪಾತ್ರಾಭಿನಯ ಮಾಡುವ ಕುಟುಂಬದ ಹೆಣ್ಣು ಮಗಳಾಗಿಯೂ ನಮ್ಮೆದುರು ತೆರೆದುಕೊಳ್ಳುತ್ತಾರೆ.

ಇದನ್ನೂ ಓದಿ: ಸಮಾಜವಾದಿ ದೇಶಗಳಲ್ಲಿದ್ದ ಸಮಾನತೆ ಮತ್ತು ಅಭಾವ

ಹೆಣ್ಣೊಬ್ಬಳಿಗೆ ಮದುವೆ, ಕುಟುಂಬ, ಉದ್ಯೋಗ ಆಸಕ್ತ ಕ್ಷೇತ್ರಗಳು, ಸಾಧನೆಗಳು ಇವೆಲ್ಲವೂ ತುಂಬ ಸುಲಭವಲ್ಲ ಎಂಬುದನ್ನು ಕಟ್ಟಿ ಕೊಡುತ್ತಲೇ ತನ್ನ ಸಾಮರ್ಥ್ಯವನ್ನು ಸರಿಯಾಗಿ ಅರ್ಥೈಸಿಕೊಂಡರೆ, ಮತ್ತು ಗುರಿ ಗಂತವ್ಯಗಳನ್ನು ನಿರ್ದಿಷ್ಟಗೊಳಿಸಿಕೊಂಡರೆ ಅಸಾಧ್ಯವಾದುದನ್ನೂ ಸಾಧಿಸಬಹುದೆಂಬ ಕಥಾನಕವಿದೆ ಇದರಲ್ಲಿ. ಶಿಕ್ಷಣವೆಂಬುದೇ ಮರೀಚಿಕೆ ಎಂದಿದ್ದ ಹೊತ್ತಿನಲ್ಲಿ ಉನ್ನತ ಶಿಕ್ಷಣ, ಮತ್ತು ಉದ್ಯೋಗ ಅದರ ಅಗತ್ಯಗಳಾಗಿ ವಿದೇಶವೂ ಸೇರಿದಂತೆ ಬೇರೆ ಬೇರೆ ಸ್ಥಳಗಳಿಗೆ ವಲಸೆ, ಜೊತೆಗೆ ಚಿಕ್ಕ ಚಿಕ್ಕ ಮಕ್ಕಳು..ಹೀಗೆ ಭಾರತದ ಮಧ್ಯಮ ವರ್ಗದ ಕುಟುಂಬದ ಒಂದು ಸಹಜ ಬೆನ್ನಿಗಂಟಿದ ಅಂಶಗಳನ್ನು ಕೇವಲ ವೈಯಕ್ತಿಕ ಕಥಾನಕವಾಗಿಯಲ್ಲದೇ ಚಳವಳಿಯ ಕಥಾನಕವಾಗಿ ಕಟ್ಟಿದೆ ಈ ಆತ್ಮ ಕಥನ. ಅದಕ್ಕೆಂದೇ ಅವರದನ್ನು ‘ಉರುಳುವ ಕಲ್ಲಿನ ನೆನಪಿನ ಸುರುಳಿ’ ಎಂದು ಹೆಸರಿಸಿದ್ದಾರೆ ಎಂದು ಊಹಿಸಬಹುದು.

ಸಮಾಜವಿಂದು ಜಾರುದಾರಿಯಲ್ಲಿ ಚಲಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಾನೇ ತಾನಾಗಿ ದಕ್ಕಬೇಕಿದ್ದ ಸಮಾನ ಅಧಿಕಾರ,ಅವಕಾಶಗಳು ಸಿಗದೇ, ದಶಕಗಳ ಕಾಲದ ಪ್ರಯತ್ನದ ನಂತರ ಪಡೆದ ಅಷ್ಟಿಷ್ಟು ಕೂಡಾ ಕಿತ್ತುಕೊಳ್ಳುತ್ತಿರುವ ಹೊತ್ತಿದು. ಈ ಹಂತದಲ್ಲಿ ಪಡೆದುಕೊಂಡಿದ್ದನ್ನು ಉಳಿಸಿಕೊಳ್ಳಲು ಮತ್ತು ಬಾಕಿ ಉಳಿದಿದ್ದನ್ನು ಗಳಿಸಿಕೊಳ್ಳಲು ವೀಣಾ ಮಜುಂದಾರರಂತವರ ಬದುಕಿನ ಪುಟಗಳತ್ತ ಹಾಕುವ ಹಾಯಿನೋಟ ದಾರಿ ತೋರಿಸುತ್ತದೆ. ಅವರು ಅವರ ಸಾರ್ವಜನಿಕ ಬದುಕಿಗೆ ತೆರೆದುಕೊಂಡಿದ್ದು 1951ರಲ್ಲಿ ಪಾಟ್ನಾ ಯುನಿವರ್ಸಿಟಿಯಲ್ಲಿ ರಾಜಕೀಯ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ. ನಂತರ ಅಲ್ಲಿಯ ಅಧ್ಯಾಪಕರ ಸಂಘದ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿಭಾಯಿಸಿದವರು. ನಂತರ ಒರಿಸ್ಸಾದ ಭೆಹ್ರಾಂಪುರ ಯುನಿವರ್ಸಿಟಿಯಲ್ಲಿ ಕಾರ್ಯ ನಿರ್ವಹಿಸಿದರು.

ನವದೆಹಲಿಯ ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ ಸೆಕ್ರೆಟಾರಿಯೆಟ್ ನಲ್ಲಿ ಶಿಕ್ಷಣಾಧಿಕಾರಿಯಾಗಿ, ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ ಶಿಮ್ಲಾದಲ್ಲಿ ರಿಸರ್ಚ್ ಫೆಲೋ ಆಗಿ ಕೆಲಸ ಮಾಡಿದವರು. ಇದೆಲ್ಲದರ ಜೊತೆಗೆ ಅವರನ್ನು ನಾವು ನೋಡುವುದು ಮಹಿಳಾ ಅಧ್ಯಯನದ ಮೂಲಸೆಲೆಯಾಗಿ. ಸ್ವಾತಂತ್ರ ಪೂರ್ವದಲ್ಲಿಯೇ ಹುಟ್ಟಿದ ಅವರಿಗೆ ಸ್ವಾತಂತ್ರ‍್ಯ ಹೋರಾಟದ ಮತ್ತು ಸ್ವಾತಂತ್ರ‍್ಯಾನಂತರದ ಘಟನೆಗಳನ್ನು ಒಳಗಿಟ್ಟುಕೊಂಡೇ ಬದುಕಿದವರು. ನಾನು ಹುಟ್ಟಿದ್ದು 1927 ರಲ್ಲಿ. ಎಂದರೆ ೨೦ನೇ ಶತಮಾನದ ಮುಕ್ಕಾಲು ಭಾಗ ಮತ್ತು ಇಪ್ಪತ್ತೊಂದನೇ ಶತಮಾನದ ಒಂದು ದಶಕ ಕಳೆದಿದ್ದೇನೆ. ಸ್ವಾತಂತ್ರ ಹೋರಾಟದ ನಂತರದ ದಟ್ಟವಾದ ನೆನಪುಗಳೂ ನನ್ನಲ್ಲಿವೆ, ಜೊತೆಗೆ ಭಾರತದ ಮಹಿಳಾ ಚಳವಳಿಯ ಎರಡನೇಯ ಅಲೆಯೊಂದಿಗೆ ವೈಯಕ್ತಿಕವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಅವರೇ ಬರೆದುಕೊಂಡಿದ್ದಾರೆ.

ಮಹಿಳಾ ಅಭಿವೃದ್ದಿ ಅಧ್ಯಯನ ಸಂಸ್ಥೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು ಅದರ ಸಂಸ್ಥಾಪಕ ನಿರ್ದೇಶಕಿಯೂ ಆಗಿದ್ದರು. ಹಾಗೆಯೇ ದೆಹಲಿಯ ಸೆಂಟರ್ ಫಾರ್ ವಿಮೆನ್ ಡೆವಲೆಪ್ಮೆಂಟ್ ಸ್ಟಡೀಸ್ ನ ನ್ಯಾಷನಲ್ ರಿಸರ್ಚ್ ಪ್ರೊಫೆಸರ್ ಆಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. ಮಹಿಳಾ ಅಧ್ಯಯನದ ಕುರಿತು ಅವರು ಹೊಂದಿದ್ದ ಅಪಾರ ಆಸಕ್ತಿ ಮತ್ತು ಬದ್ಧತೆ ಅವರ ಈ ಎಲ್ಲ ಕೆಲಸಗಳಿಗೆ ಇಂಬು ನೀಡಿತ್ತು. ಅವರ ಈ ಆತ್ಮಕಥೆಯಲ್ಲಿ ಇದನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು. ಬಹುಶಃ ಇದರಲ್ಲಿ ರೋಚಕ ಸಂಗತಿಗಳು ಹೆಚ್ಚು ಸಿಗದಿರಬಹುದು. ಆದರೆ ಚಳವಳಿಯ ಭಾಗವಾಗಿ ಅರ್ಥ ಮಾಡಿಕೊಳ್ಳಬೇಕಾದವರಿಗೆ ಅತ್ಯಂತ ಉಪಯುಕ್ತವಾದ ಮಾಹಿತಿಗಳನ್ನು ಕೊಡುವ ಒಂದು ಕೃತಿ ಇದು. ಮಹಿಳಾ ಅಧ್ಯಯನದ ಆಸಕ್ತಿ ಇರುವವರು ಇದನ್ನು ಓದಲೇಬೇಕು.

 

********ಪುಸ್ತಕದ ಬ್ರ‍್ಬಿನಿಂದ ********

 

ನನ್ನ ಪಾಸ್‌ಪೋರ್ಟಿನಲ್ಲಿ ನನ್ನನ್ನು ಸಮಾಜ ವಿಜ್ಞಾನಿಯೆಂದು ಪರಿಚಯಿಸಲಾಗಿದೆ. ನನ್ನನ್ನು ಬಲ್ಲ ಕೆಲವರಿಗೆ ಮಾತ್ರ ನಾನು ಹಾಗೆಂದು ಗೊತ್ತು. ಆದರೆ ಅನಿರ್ದಿಷ್ಟ ವಲಯಗಳಲ್ಲಿ ನಾನು ಹೆಚ್ಚು ಪರಿಚಿತಳಾಗಿರುವುದು ‘ಮಹಿಳಾ ಕಾರ್ಯಕರ್ತೆ ಸ್ತ್ರೀವಾದಿ’,‘ಸಮಸ್ಯೆಗಳನ್ನು ಸೃಷ್ಟಿಸುವವಳು’ ಮತ್ತು ‘ಜೆಂಡರ್ ಪರಿಣತಳು’ಎಂಬುದಾಗಿ.

ನನಗೆ ಅಂಟಿಕೊಂಡಿರುವ ಈ ಎಲ್ಲಾ ವಿವರಣೆಗಳಲ್ಲಿ ನನಗೆ ಹೆಚ್ಚು ಪ್ರಿಯವಾಗುವುದು ‘ಭಾರತದ ಮಹಿಳಾ ಚಳುವಳಿಯ ದಾಖಲಾತಿದಾರಳು’ ಮತ್ತು ‘ದಕ್ಷಿಣ ಏಷ್ಯಾದಲ್ಲಿ ಮಹಿಳಾ ಅಧ್ಯಯನದ ಅಜ್ಜಿ’ ಎಂಬುವು. …… ಚರಿತ್ರೆ ಯಾವಾಗಲೂ ನನ್ನ ಮೊದಲ ಪ್ರೀತಿಪಾತ್ರ ವಿಷಯ. ಚರಿತ್ರೆಯ ಇತರ ಪ್ರೇಮಿಗಳೂ ಕೂಡ ನನ್ನ ಈ ನೆನಪುಗಳ ಕಥನದಲ್ಲಿ ಸ್ವಲ್ಪವಾದರೂ ಆಸಕ್ತಿಯನ್ನು ತೋರಿಸುತ್ತಾರೆಂದು ಆಶಿಸುವೆ.

ಮೂಲಭೂತವಾಗಿ ಈ ಪುಸ್ತಕವು ನನ್ನ ಜೀವನವನ್ನು ಮತ್ತು ನನ್ನ ಕಾಲವನ್ನು ಪ್ರಭಾವಿಸಿದ ವ್ಯಕ್ತಿಗಳಿಗೆ ನಾನು ನೀಡುವ ಕಾಣಿಕೆ. … … 10,000ಕ್ಕಿಂತಲೂ ಹೆಚ್ಚು ಮಹಿಳೆಯರು ನನಗೆ 1970 ರ ನಂತರ ಗುರುಗಳಾಗಿದ್ದಾರೆ. ಭಾರತವು ಮರೆತ ಬಹುಸಂಖ್ಯಾತರಿವರು. ಮಹಿಳೆಯರ ಹೋರಾಟ ಮತ್ತು ಮಹಿಳಾ ಅಧ್ಯಯನವೆಂಬ ಎರಡು ಚಳುವಳಿಗಳ ಮೂಲಕ ನಾನು ಅವರ ಹೋರಾಟವನ್ನು ಕೈಗೆತ್ತಿಕೊಂಡಿದ್ದೇನೆ.

-ವೀಣಾ ಮಜುಂದಾರ್ 

ಭಾರತದಲ್ಲಿ ಮಹಿಳಾ ಅಧ್ಯಯನ ಮತ್ತು ಮಹಿಳಾ ಚಳುವಳಿಯ ಪರಿಚಯವಿರುವವರಿಗೆಲ್ಲಾ ವೀಣಾ ಮಜುಂದಾರ್ ಚಿರಪರಿಚಿತವಾದ ಹೆಸರು. ಈ ಎರಡೂ ಅವಳಿ ಚಳುವಳಿಗಳಿಗೆ ಮಹತ್ವದ ಕಾಣಿಕೆಯನ್ನು ನೀಡಿರುವ ಮತ್ತು ಭಾರತದ ಮಹಿಳಾ ಚಳುವಳಿಯ ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿರುವುದು ಮಾತ್ರವಲ್ಲದೆ ಸುಮಾರು ಆರು ದಶಕಗಳಿಗೂ, ಹೆಚ್ಚು ಕಾಲ ಭಾರತದ ಮಹಿಳಾ ಚಳುವಳಿಯೊಂದಿಗೆ ಪಯಣಿಸಿರುವ ವೀಣಾ ಈ ದೇಶದ ಮಹಿಳಾ ಸಮುದಾಯದ ಸಾಕ್ಷಿಪ್ರಜ್ಞೆಯಾಗಿದ್ದಾರೆ.

-ಎನ್. ಗಾಯತ್ರಿ

‘ಉರುಳುವ ಕಲ್ಲಿನ ನೆನಪಿನ ಸುರುಳಿ’ : ಮೂಲ – ಡಾ.ವೀಣಾ ಮಜುಂದಾರ್;

ಅನುವಾದ : ಡಾ.ಎನ್.ಗಾಯತ್ರಿ; ಪ್ರಕಾಶಕರು : ಕ್ರಿಯಾ ಮಾಧ್ಯಮ; ಬೆಲೆ

: ರೂ320 ಪ್ರತಿಗಳಿಗೆ ಸಂರ್ಪಕಿಸಿ : 9606- 16471/2/3/4.

Donate Janashakthi Media

Leave a Reply

Your email address will not be published. Required fields are marked *