ತಮಿಳುನಾಡು ಚುನಾವಣೆ : ಎ ರಾಜಾಗೆ 48 ತಾಸು ಚುನಾವಣಾ ಪ್ರಚಾರ ನಿಷೇಧ

ಚೆನ್ನೈ: ನೀತಿ ಸಂಹಿತೆ ಉಲ್ಲಂಘನೆಗಾಗಿ ಡಿಎಂಕೆ ಮುಖಂಡ ಎ ರಾಜಾಗೆ 48 ತಾಸು ಚುನಾವಣಾ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿಷೇಧಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.

ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಅವರ ತಾಯಿ ಕುರಿತು ಆಕ್ಷೇಪಾರ್ಹ ಹೇಳಿಕೆಗೆ ಸರಿಯಾದ ಪ್ರತಿಕ್ರಿಯೆ ನೀಡಿದ ಹಿನ್ನೆಲೆಯಲ್ಲಿ ಆಯೋಗ, ಕೂಡಲೇ ಜಾರಿಗೆ ಬರುವಂತೆ ಎರಡು ದಿನ ಪ್ರಚಾರದಿಂದ ನಿರ್ಬಂಧಿಸಲಾಗಿದೆ.ಮಹಿಳೆಯರು ಮತ್ತು ತಾಯಿಯ ಘನತೆಯನ್ನು ಕುಂದಿಸುವಂತಹ ಅಥವಾ ಅಶ್ಲೀಲ ರೀತಿಯ ಮಾತುಗಳನ್ನು ಆಡಿಲ್ಲ ಎಂದು ಮಾಜಿ ಕೇಂದ್ರ ಸಚಿವರು ತನ್ನ ಮಧ್ಯಂತರ ವಿವರಣೆಯಲ್ಲಿ ಹೇಳಿದ್ದಾರೆ.

ಡಿಎಂಪಿ ಮುಖ್ಯಸ್ಥ ಎಂ. ಕೆ. ಸ್ಟಾಲಿನ್ ಮತ್ತು ಪಳನಿಸ್ವಾಮಿ ಅವರನ್ನು ಹೋಲಿಸಿ ನೋಡುವ ಮೂಲಕ ರಾಜಕೀಯ ಮೌಲ್ಯಮಾಪನ ಮಾಡಲಾಗಿದೆ. ಇಂತಹ ಹೋಲಿಕೆಯನ್ನು ತಮಿಳು ಭಾಷಣದಲ್ಲಿ ಸ್ವೀಕರಿಸಲಾಗಿದೆ ಎಂದು ರಾಜಾ ಚುನಾವಣಾ ಆಯೋಗಕ್ಕೆ ಪ್ರತಿಕ್ರಿಯಿಸಿದ್ದಾರೆ.

ಸ್ಟಾಲಿನ್ ಯಾವುದೇ ಕೆಲಸ ಮಾಡದೆ ಡಿಎಂಕೆಯ ಮುಖ್ಯಸ್ಥರಾಗಿದ್ದಾರೆ ಎಂಬ ಪಳನಿಸ್ವಾಮಿ ಅವರ ಆರೋಪವನ್ನು ತಿರಸ್ಕರಿಸುವಂತೆ ಸಾಮಾನ್ಯ ಜನರಲ್ಲಿ ಸುಲಭವಾಗಿ ಅರ್ಥ ಮಾಡಿಸಲು ಇಬ್ಬರು ನಾಯಕರನ್ನು ಹೋಲಿಕೆ ಮಾಡಿರುವುದಾಗಿ ಅವರು ಹೇಳಿದ್ದರು.

ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 153 (ಪ್ರಚೋದನೆ) 294-ಬಿ ( ಅಶ್ಲೀಲ ಮಾತುಗಳು) ಜನಪ್ರತಿನಿಧಿ ಕಾಯ್ದೆ (ಸೆಕ್ಷನ್ 127ರಡಿ ಅಸಮಂಜಸ ವರ್ತನೆ, ಅಡಚಣೆ) ಮತ್ತಿತರ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *