ಬೆಂಗಳೂರು: ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗೊಲ್ಲರಹಳ್ಳಿ ಪುರದಮ್ಮ ದೇವಸ್ಥಾನವೊಂದರ ಪೂಜಾರಿಯೊಬ್ಬ ದೋಷ ಪರಿಹಾರ ಮಾಡುತ್ತೇನೆ ಎಂದು ಹೇಳಿ 26 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ದೇವಾಲಯದ ಅರ್ಚಕ ದಯಾನಂದ ಎಂಬಾತನೇ ಅತ್ಯಾಚಾರ ಎಸಗಿರುವ ಆರೋಪಿ. ದೋಷ
ಆರೋಪಿ ದಯಾನಂದನನ್ನು ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಂಧಿಸಿ ಕರೆತಂದಿದ್ದಾರೆ.
ಪ್ರಮುಖ ಕಂಪನಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಯುವತಿ ಅರಸೀಕೆರೆ ಮೂಲದವರೇ ಆಗಿದ್ದು, ಬೆಂಗಳೂರಿನ ಬಾಗಲಗುಂಟೆಯಲ್ಲಿ ನೆಲೆಸಿದ್ದಾರೆ. ಈಕೆ ಏಪ್ರಿಲ್ ನಲ್ಲಿ ದಯಾನಂದನ ಬಳಿ ಶಾಸ್ತ್ರ ಕೇಳಲು ಸ್ನೇಹಿತೆಯರ ಜೊತೆ ಹೋಗಿದ್ದರು. ಈ ವೇಳೆ ದಯಾನಂದ ಪರಿಚಯವಾಗಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ದಲಿತ ಯುವಕ ಮೇಲಿನ ಹಲ್ಲೆ ಖಂಡಿಸಿ ಡಿಹೆಚ್‌ಎಸ್ ರಾಜ್ಯದ್ಯಾಂತ ಪ್ರತಿಭಟನೆ
ಇದಾದ ಮೇಲೆ ಜುಲೈ 6ರಂದು ಆರೋಪಿ ದಯಾನಂದ್ ಬೆಂಗಳೂರಿಗೆ ಭೇಟಿ ಕೊಟ್ಟಿದ್ದಾನೆ.. ವಿಶೇಷ ಪೂಜೆ ಮಾಡಿಸುವುದಾಗಿ ಹೇಳಿಕೊಂಡು ಆಕೆಯನ್ನು ಉಪ್ಪಾರಪೇಟೆ ಬಳಿಯ ಲಾಡ್ಜ್‌ಗೆ ಕರೆಸಿಕೊಂಡು ಅಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದೇ ವೇಳೆ ಖಾಸಗಿ ಕ್ಷಣಗಳ ದೃಶ್ಯಗಳನ್ನು ಚಿತ್ರೀಕರಣ ಮಾಡಿಕೊಂಡಿದ್ದಾನೆ. ಅನಂತರ ಅವುಗಳನ್ನು ಸಂತ್ರಸ್ತೆಗೆ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಿ 1.20 ಲಕ್ಷ ರೂಪಾಯಿ ಪಡೆದಿದ್ದಾನೆ. ಜೊತೆಗೆ ಮದುವೆಯಾಗುವಂತೆ ಪೀಡಿಸಿರುವ ಆರೋಪಿ, ಮದುವೆಯಾಗದಿದ್ದರೆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡೋದಾಗಿ ಬೆದರಿಸಿದ್ದಾನೆ ಎನ್ನಲಾಗಿದೆ.
ಇದನ್ನೂ ನೋಡಿ: ರಾಜ್ಯಗಳು ಭಾಷಾ ಅಭಿವೃದ್ಧಿಗೆ ನೀತಿ ರೂಪಿಸಬೇಕು – ಡಾ.ಎಂ.ವೀರಪ್ಪ ಮೊಯಿಲಿ Janashakthi Media