ನವದೆಹಲಿ: ಝಾರ್ಖಂಡಿನ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಆಗಸ್ಟ್ 4, 2025 ರಂದು ನಿಧನರಾದರು. ಆದಿವಾಸಿ ದನಿಗಳನ್ನು ಒಗ್ಗೂಡಿಸುವಲ್ಲಿ ಮತ್ತು ಅವರ ಸಬಲೀಕರಣ ಮತ್ತು ನ್ಯಾಯಕ್ಕಾಗಿ ಚಳವಳಿಯ ಮುಂಚೂಣಿಯಲ್ಲಿ ನಿಂತಿದ್ದವರು ಎಂದು ಅವರನ್ನು ಸದಾ ಸ್ಮರಿಸಿಕೊಳ್ಳಲಾಗುವುದು ಎಂದು ಅವರ ನಿಧನದ ಬಗ್ಗೆ ಸಿಪಿಐ(ಎಂ) ಕೇಂದ್ರ ಸಮಿತಿಯ ಪರವಾಗಿ ಹಾರ್ದಿಕ ಸಂತಾಪ ವನ್ನು ಸೂಚಿಸುತ್ತ ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿಯವರು ಜಾರ್ಖಂಡ್ ಮುಖ್ಯಮಂತ್ರಿ ಶ್ರೀ. ಹೇಮಂತ್ ಸೊರೆನ್ ಅವರಿಗೆ ಪತ್ರ ಬರೆದಿದ್ದಾರೆ.
ತಮ್ಮ ಲಕ್ಷಾಂತರ ಅಭಿಮಾನಿಗಳಿಗೆ ಗುರೂಜಿ ಎಂದು ಪರಿಚಿತರಾಗಿರುವ ಶಿಬು ಸೊರೆನ್ ರ ಜೀವನವು ತಾಳಿಕೆ, ಧೈರ್ಯ ಮತ್ತು ಜಾರ್ಖಂಡ್ನ ಬುಡಕಟ್ಟು ಸಮುದಾಯಗಳ ಹಕ್ಕುಗಳು ಮತ್ತು ಘನತೆಗೆ ಅಚಲವಾದ ಬದ್ಧತೆಗೆ ಪ್ರಬಲ ಸಾಕ್ಷಿಯಾಗಿದೆ ಎಂದು ಬೇಬಿಯವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶ
ಅವರು ಕಾರ್ಮಿಕ ವರ್ಗದ ಹಕ್ಕುಗಳ ಪರವಾಗಿಯೂ ನಿಂತವರು ಮತ್ತು ಕಾರ್ಮಿಕ ಚಳುವಳಿಯೊಂದಿಗೆ ಸಹಯೋಗ ಹೊಂದಿದ್ದರು. ಅವರ ಕೆಲಸವು ಅಸಂಖ್ಯಾತ ಜೀವಗಳನ್ನು ಮುಟ್ಟಿದೆ ಎನ್ನುತ್ತ ಇದು ಅವರನ್ನು ಕಳೆದು ಕೊಂಡಿರುವ ದು:ಖವನ್ನು ಸಹಿಸಿಕೊಳ್ಳುವ ಶಕ್ತಿ ಮತ್ತು ಸ್ಥೈರ್ಯವನ್ನು ನೀಡಲಿ ಎಂದು ಆಶಿಸಿದ್ದಾರೆ.
ಇದನ್ನೂ ನೋಡಿ: ಧರ್ಮಸ್ಥಳ: ಮೃತದೇಹಗಳ ಹೂತಿಟ್ಟ ಜಾಗವನ್ನು ತೋರಿಸಿದ ಸಾಕ್ಷಿ ದೂರುದಾರ Janashakthi Media
