ಬೀದರ್: ನೆನ್ನೆ ಶುಕ್ರವಾರ ಮಧ್ಯಾಹ್ನ, ಅನ್ಯ ಜಾತಿ ಹುಡಗನನ್ನು ಪ್ರೀತಿಸುತಿದ್ದ ಮಗಳನ್ನು ತಂದೆಯೇ ಹತ್ಯೆಗೈದ ಘಟನೆ ಔರಾದ್ ತಾಲ್ಲೂಕಿನ ಬಾರ್ಗೇನ್ ತಾಂಡಾದಲ್ಲಿ ನಡೆದಿದೆ.
ಯುವತಿಯು ಪಕ್ಕದ ಹಳ್ಳಿಯ ಅನ್ಯಜಾತಿ ಹುಡುಗನನ್ನು ಕಳೆದ ಕೆಲ ದಿನಗಳಿಂದ ಪ್ರೀತಿಸುತಿದ್ದಳು ಎನ್ನಲಾಗಿದ್ದು, ಈ ವಿಷಯವು ಅವಳ ತಂದೆಗೆ ಗೊತ್ತಾಗಿತ್ತು. ಇದರಿಂದ ಸಿಟ್ಟಾಗಿದ್ದ ಆತನು ಪ್ರೀತಿಸುತ್ತಿರುವ ಯುವಕನಿಂದ ದೂರವಿರಲು ತನ್ನ ಮಗಳಿಗೆ ಹೇಳಿದ್ದನು.
ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಂಡಕ್ಟರ್‌ನಿಂದಲೇ ಲೈಂಗಿಕ ಕಿರುಕುಳ : ದೂರು ಹಿಂಪಡೆಯುವಂತೆ ಮಹಿಳೆಗೆ ಬೆದರಿಕೆ
ಇಷ್ಟಾದರೂ ಕೂಡ ಯುವತಿಯು ಪ್ರೀತಿಸುವುದನ್ನು ಮುಂದುವರಿಸಿದ್ದಳು. ಇದರಿಂದ ಮತ್ತಷ್ಟು ಕೋಪಗೊಂಡ ತಂದೆಯು, ಮನೆಯಲ್ಲೆ ಹಗ್ಗದಿಂದ ಕುತ್ತಿಗೆ ಬಿಗಿದು ನಂತರ ಕಟ್ಟಿಗೆಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ ಎಂದು ಮಾಹಿತಿ ಸಿಕ್ಕಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸಂತಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ನೋಡಿ: ಬಹುರೂಪಿ | ಆದಿವಾಸಿ ಸಮುದಾಯದ ವರ್ತಮಾನದ ತಲ್ಲಣಗಳು Janashakthi Media